ತಿಳಿಯಲು ತೀರ ಎಳೆಯರಲ್ಲ
ತಿಳಿಯಲು ತೀರ ಎಳೆಯರಲ್ಲ
ಇದು ಯು.ಎಸ್.ಎ. ಕ್ಯಾಲಿಫೋರ್ನಿಯದ ತಾಯಿಯೊಬ್ಬಳು ಬರೆದ ಪತ್ರದ ಸಾರಾಂಶ. ಮಹಾ ಬೋಧಕನಿಂದ ಕಲಿಯೋಣ ಎಂಬ ಪುಸ್ತಕದಲ್ಲಿ ಚರ್ಚಿಸಲಾಗಿರುವ ಒಂದು ವಿಷಯಕ್ಕೆ ಆಕೆ ಸೂಚಿಸುತ್ತಿದ್ದಳು. ಆಕೆ ವಿವರಿಸಿದ್ದು: “ಕಳೆದ ವಾರವೇ, 3 ವರ್ಷದ ನಮ್ಮ ಮಗ ಜೇವನ್‌ನನ್ನು ಅವನ ಡಾಕ್ಟರ್ ಬಳಿ ಕರಕೊಂಡು ಹೋಗಿದ್ದೆವು. ನಾವು ಅವನೊಂದಿಗೆ ಗುಪ್ತಾಂಗಗಳ ಸುರಕ್ಷೆಯ ಬಗ್ಗೆ ಮಾತಾಡಿದ್ದೇವೊ ಎಂದು ಡಾಕ್ಟರ್ ನಮ್ಮನ್ನು ಕೇಳಿದರು. ಅದನ್ನು ಬೋಧಕ ಪುಸ್ತಕದ ಸಹಾಯದಿಂದ ತಿಳಿಸಿದ್ದೇವೆಂದು ಹೇಳಿದೆ. ಬೇರಾರೂ ತನ್ನ ಗುಪ್ತಾಂಗಗಳೊಡನೆ ಆಡುವಂತೆ ಮಗು ಬಿಡಬಾರದು, ಅದು ತಪ್ಪು ಎಂದು ಆ ಪುಸ್ತಕ ವಿವರಿಸುತ್ತದೆಂದು ತಿಳಿಸಿದೆ. ಈ ವಿಷಯವನ್ನು ನಮ್ಮ ಮಗನೊಂದಿಗೆ ಚರ್ಚಿಸಿದ್ದೇವೆಂದು ಕೇಳಿ ಡಾಕ್ಟರ್‌ಗೆ ತುಂಬ ಸಂತೋಷವಾಯಿತು.”
ಈ ತಾಯಿ ಮುಂದುವರಿಸಿ ಹೇಳಿದ್ದು: “ಈ ಪುಸ್ತಕದಲ್ಲಿ ವಿಷಯಗಳನ್ನು ಸರಿಯಾಗಿ, ಸವಿವರವಾಗಿ ವಿವರಿಸಲಾಗಿದೆ.” ಆಕೆ ಸೂಚಿಸುತ್ತಿದ್ದ ಅಧ್ಯಾಯದ ಶೀರ್ಷಿಕೆ “ದೇವರ ಸಂರಕ್ಷಣೆಯಲ್ಲಿ ಪುಟ್ಟ ಯೇಸು” ಎಂದಾಗಿದೆ. ಈ ಅಧ್ಯಾಯದಲ್ಲಿ, ಸ್ವರ್ಗದಲ್ಲಿದ್ದ ಯೇಸುವಿನ ತಂದೆಯಾದ ದೇವರು ಅವನನ್ನು ಹೇಗೆ ಸಂರಕ್ಷಿಸಿದನು ಎಂದು ವರ್ಣಿಸಲಾಗಿದೆ. ಯೇಸು ತನ್ನನ್ನು ಸಂರಕ್ಷಿಸಿಕೊಳ್ಳಲು ಆಗದಷ್ಟು ಪುಟ್ಟ ಮಗುವಾಗಿದ್ದಾಗ ರಾಜ ಹೆರೋದನು ಅವನಿಗೆ ಹಾನಿಮಾಡದಂತೆ ದೇವರು ಹೇಗೆ ಕಾಪಾಡಿದ್ದ ಎಂದು ಅದು ತಿಳಿಸುತ್ತದೆ. (ಮತ್ತಾಯ 2:7-23) ಲೈಂಗಿಕವಾಗಿ ಪೀಡಿಸಲು ಪ್ರಯತ್ನಿಸುವವರಿಂದ ತಮ್ಮನ್ನು ಕಾಪಾಡಿಕೊಳ್ಳಲು ಎಳೆಯ ಮಕ್ಕಳಿಗೂ ಹೇಗೆ ಕಲಿಸಬಹುದೆಂದು ಈ ಪುಸ್ತಕ ತೋರಿಸುತ್ತದೆ.
256 ಪುಟಗಳ, ಸುಂದರ ಚಿತ್ರಗಳುಳ್ಳ ಮತ್ತು ಈ ಪತ್ರಿಕೆಯ ಪುಟದಷ್ಟೇ ದೊಡ್ಡದಾದ ಈ ಪುಸ್ತಕವನ್ನು ನೀವು ವಿನಂತಿಸಿಕೊಳ್ಳಬಹುದು. ಭರ್ತಿಮಾಡಿದ ಈ ಕೂಪನನ್ನು ಈ ಪತ್ರಿಕೆಯ 5ನೇ ಪುಟದಲ್ಲಿರುವ ಸೂಕ್ತ ವಿಳಾಸವೊಂದಕ್ಕೆ ಕಳುಹಿಸಿ. (g11-E 02)
□ ಮಹಾ ಬೋಧಕನಿಂದ ಕಲಿಯೋಣ
□ ಇಲ್ಲಿ ತೋರಿಸಲಾದ ಪುಸ್ತಕವನ್ನು ಪಡೆದುಕೊಳ್ಳಲು ನೀವು ಇಷ್ಟಪಡುವಲ್ಲಿ ಚೌಕದಲ್ಲಿ ✔ ಹಾಕಿ. □
□ ಬೈಬಲಿನ ಉಚಿತ ಅಧ್ಯಯನವನ್ನು ಇಷ್ಟಪಡುವಲ್ಲಿ ಚೌಕದಲ್ಲಿ ✔ ಹಾಕಿ. □