ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮೋಸ-ವಂಚನೆ ನಡೆಯದ ಸ್ಥಳವಿಲ್ಲ!

ಮೋಸ-ವಂಚನೆ ನಡೆಯದ ಸ್ಥಳವಿಲ್ಲ!

ಮೋಸ-ವಂಚನೆ ನಡೆಯದ ಸ್ಥಳವಿಲ್ಲ!

ಹಾಂಗ್‌ ಕಾಂಗ್‌ನ ಒಂದು ದೊಡ್ಡ ಕಂಪನಿಯಲ್ಲಿ ಡ್ಯಾನಿ * ಕೆಲಸಮಾಡುತ್ತಾನೆ. ತನ್ನ ಕಂಪನಿಗೆ ಸಾಮಾನುಗಳನ್ನು ತಯಾರಿಸಿ ಕೊಡಬೇಕಾಗಿದ್ದ ಫ್ಯಾಕ್ಟರಿಯನ್ನು ಪರೀಕ್ಷಿಸಿ ನೋಡಲು ಅವನ್ನೊಮ್ಮೆ ಹೋದನು. ಆದರೆ ಈ ಫ್ಯಾಕ್ಟರಿಯವರು ಗುಣಮಟ್ಟದ ವಸ್ತುಗಳನ್ನು ಉತ್ಪಾದಿಸುವ ಬಗ್ಗೆ ಅವನಲ್ಲಿ ಶಂಕೆ ಎದ್ದಿತು. ಅದರ ಕುರಿತು ಅಲ್ಲಿನ ಮ್ಯಾನೇಜರನ್ನು ಪ್ರಶ್ನಿಸಿದಾಗ ಆ ಮ್ಯಾನೇಜರ್‌ ಡ್ಯಾನಿಯನ್ನು ರಾತ್ರಿಯೂಟಕ್ಕೆ ಕರೆದು ಒಂದು ಕವರನ್ನು ಕೈಗಿತ್ತನು. ತೆರೆದು ನೋಡಿದಾಗ ಅದರೊಳಗೆ ಸಾವಿರಾರು ಡಾಲರುಗಳು! ಡ್ಯಾನಿಯ ಬಾಯಿಮುಚ್ಚಿಸಲು ಕೊಡಲಾದ ಈ ಲಂಚ ಅವನ ಇಡೀ ವರ್ಷದ ಸಂಬಳದಷ್ಟಿತ್ತು.

● ದಿನನಿತ್ಯ ಇಂಥ ಎಷ್ಟೋ ಪ್ರಕರಣಗಳು ನಡೆಯುತ್ತವೆ. ಪ್ರಪಂಚದ ಮೂಲೆ ಮೂಲೆಯಲ್ಲೂ ಹರಡಿರುವ ಅಪ್ರಾಮಾಣಿಕತೆ ಬೆಚ್ಚಿಬೀಳಿಸುವಂತಿದೆ. ಜರ್ಮನಿಯ ಒಂದು ದೊಡ್ಡ ಕೈಗಾರಿಕಾ ಕಂಪನಿಯನ್ನು ತೆಗೆದುಕೊಳ್ಳಿ. 2001-2007ರಲ್ಲಿ ಗುತ್ತಿಗೆಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಉದ್ದೇಶದಿಂದ ಅದು 140 ಕೋಟಿ ರೂಪಾಯಿಗಳನ್ನು ಲಂಚವಾಗಿ ಕೊಟ್ಟಿದೆ ಎಂದು ಕೋರ್ಟ್‌ ದಾಖಲೆಗಳು ತೋರಿಸುತ್ತವೆ.

ಹೆಸರಾಂತ ವ್ಯಾಪಾರ ಸಂಸ್ಥೆಗಳ ಇತ್ತೀಚಿನ ಹಗರಣಗಳು ಬೆಳಕಿಗೆ ಬಂದಿರುವುದರಿಂದ ಕೆಲವು ತಿದ್ದುಪಡಿಗಳು ಜಾರಿಗೆ ಬಂದಿವೆ. ಆದರೂ ಇಡೀ ಪ್ರಪಂಚವನ್ನು ತೆಗೆದುಕೊಂಡರೆ ಅಪ್ರಾಮಾಣಿಕತೆ ಕಮ್ಮಿಯಾಗಿಲ್ಲ. ಜಗತ್ತಿನಾದ್ಯಂತ “ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರದ ಪ್ರಮಾಣ ತುಂಬ ಹೆಚ್ಚಾಗಿದೆ” ಎಂದು ಟ್ರಾನ್‌ಸ್ಪರೆನ್ಸಿ ಇಂಟರ್‌ನ್ಯಾಷನಲ್‌ ಸಂಸ್ಥೆ 2010ರಲ್ಲಿ ನಡೆಸಿದ ಸಮೀಕ್ಷೆ ತೋರಿಸುತ್ತದೆ.

ಇಷ್ಟೊಂದು ಮೋಸ-ವಂಚನೆ ಯಾಕಿದೆ? ಈ ಲೋಕದಲ್ಲಿ ಪ್ರಾಮಾಣಿಕತೆ ತೋರಿಸುವುದು ಪ್ರಾಯೋಗಿಕವೇ? ನಾವು ಹೇಗೆ ಪ್ರಾಮಾಣಿಕರಾಗಿರಬಲ್ಲೆವು? ಬೈಬಲ್‌ನಿಂದ ನಮಗೆ ಸಹಾಯ ಸಿಗಬಲ್ಲದೇ? (g12-E 01)

[ಪಾದಟಿಪ್ಪಣಿ]

^ ಈ ಲೇಖನಮಾಲೆಯಲ್ಲಿ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.