ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವಿಬ್ರು ಬರೀ ಸ್ನೇಹಿತರು ಮಾತ್ರನಾ—ಅಥವಾ . . . ? ಭಾಗ 1

ನಾವಿಬ್ರು ಬರೀ ಸ್ನೇಹಿತರು ಮಾತ್ರನಾ—ಅಥವಾ . . . ? ಭಾಗ 1

ಯುವಜನರ ಪ್ರಶ್ನೆ

ನಾವಿಬ್ರು ಬರೀ ಸ್ನೇಹಿತರು ಮಾತ್ರನಾ—ಅಥವಾ . . . ? ಭಾಗ 1

ಇದನ್ನು ಓದಿದ ತಕ್ಷಣ ಯಾರಾದ್ರೂ ನಿಮ್ಮ ಮನಸ್ಸಿಗೆ ಬಂದ್ರಾ?

ಹೌದು ಇಲ್ಲ

ಈಗಲೇ ಈ ಲೇಖನ ಓದಿ. ಪರವಾಗಿಲ್ಲ ಓದಿ.

ನಿಮಗೆ ಇದರ ವಿರುದ್ಧ ಲಿಂಗದವರೊಂದಿಗೆ

ಅವಶ್ಯಕತೆ ಇದೆ. ಹೇಗೆ ಸ್ನೇಹವನ್ನು ನಿಭಾಯಿಸಬೇಕು

ಎನ್ನುವುದಕ್ಕೆ ಸಹಾಯವಾಗುತ್ತೆ.

ಕೆಳಗಿರುವ ವಾಕ್ಯ ಸರಿಯಾ ತಪ್ಪಾ ಎಂದು ಗುರುತಿಸಿ:

ನಾನು ನನ್ನ ಮದುವೆ ಬಗ್ಗೆ ಗಂಭೀರವಾಗಿ ಯೋಚಿಸುವ ವರೆಗೂ ವಿರುದ್ಧ ಲಿಂಗದ ವ್ಯಕ್ತಿಯೊಟ್ಟಿಗೆ ಸ್ನೇಹನೇ ಮಾಡಬಾರದು.

___ ಸರಿ ___ ತಪ್ಪು

ಇದನ್ನು ಪರಿಗಣಿಸಿ: ಯೇಸು ಮದುವೆಯಾಗ್ಲಿಲ್ಲ. ಅವನ ಸ್ನೇಹಿತರಲ್ಲಿ ಸ್ತ್ರೀಯರು ಸಹ ಇದ್ದರು. (ಮತ್ತಾಯ 12:46-50; ಲೂಕ 8:1-3) ಯುವಕನಾದ ತಿಮೊಥೆಯನಿಗೆ ಸಹ ಸ್ನೇಹಿತೆಯರಿದ್ದರು. ಅದರಿಂದಲೇ ‘ಯೌವನಸ್ಥೆಯರನ್ನು ಸಹೋದರಿಯರಂತೆ ಪರಿಗಣಿಸಬೇಕೆಂದು’ ಪೌಲನು ಅವನಿಗೆ ಉತ್ತೇಜಿಸಿದನು.—1 ತಿಮೊಥೆಯ 5:1, 2.

ತಿಮೊಥೆಯನು ಕ್ರೈಸ್ತ ಸಭೆಗಳನ್ನು ಭೇಟಿಯಾಗುವಾಗ ಅನೇಕ ತರುಣಿಯರು ಖಂಡಿತ ಅಲ್ಲಿರುತ್ತಿದ್ದರೆಂದು ಪೌಲನಿಗೆ ತಿಳಿದಿತ್ತು. (ಮಾರ್ಕ 10:29, 30) ತಿಮೊಥೆಯನು ಅವರೊಂದಿಗೆ ಬೆರೆಯುವುದು ತಪ್ಪಾಗಿತ್ತಾ? ಇಲ್ಲ. ಅವನಿಗೆ ಮದುವೆಯಾಗುವ ಉದ್ದೇಶ ಇಲ್ಲದಿದ್ದ ಕಾರಣ ಅವರೊಂದಿಗೆ ಬೆರೆಯುವಾಗ ಮೇರೆಯನ್ನಿಡುವ ಅಗತ್ಯವಿತ್ತು. ಪ್ರೀತಿ, ಪ್ರಣಯ ಚಿಗುರದಂತೆ ಎಚ್ಚರವಹಿಸಬೇಕಿತ್ತು. ಅವರ ಭಾವನೆಗಳೊಂದಿಗೆ ಆಟ ಆಡುವುದಾಗಲಿ ಅವರೊಂದಿಗೆ ಚೆಲ್ಲಾಟವಾಡುವುದಾಗಲಿ ಮಾಡಲೇ ಬಾರದ ವಿಷ್ಯವಾಗಿತ್ತು.—ಲೂಕ 6:31.

ನಿಮ್ಮ ಬಗ್ಗೆ ಏನು? ನೀವು ಮದುವೆ ಜವಾಬ್ದಾರಿಯನ್ನು ಹೊರುವ ವಯಸ್ಸಿನಲ್ಲಿದ್ದೀರ?

ಹೌದಾದರೆ ⇨ ನಿಮ್ಮ ಸ್ನೇಹಿತರಲ್ಲಿ ವಿರುದ್ಧ ಲಿಂಗದವರೂ ಇರುವಲ್ಲಿ ಮುಂದೆ ನಿಮ್ಮ ಬಾಳಸಂಗಾತಿಯನ್ನು ಆರಿಸಿಕೊಳ್ಳಲು ಸಹಾಯವಾಗುವುದು.—ಜ್ಞಾನೋಕ್ತಿ 18:22; 31:10.

ಇಲ್ಲವಾದರೆ ⇨ ನೀವು ಮಿತಿಮೇರೆಗಳನ್ನು ಇಟ್ಟುಕೊಳ್ಳಬೇಕು. (ಯೆರೆಮೀಯ 17:9) ಇದನ್ನು ಮಾಡುವುದು ಅಷ್ಟು ಸುಲಭವೇನಲ್ಲ. “ಪ್ರೀತಿ ಪ್ರೇಮ ಅನ್ನೋ ಭಾವನೆಗಳಿಲ್ಲದೆ ಕೇವಲ ಸ್ನೇಹಿತರಾಗಿರೋದು ತುಂಬಾನೆ ಕಷ್ಟ. ಎಲ್ಲಿ ಮಿತಿಮೇರೆಗಳನ್ನು ಹಾಕಿಕೊಳ್ಳೋದು ಅಂತಾನೆ ಗೊತ್ತಾಗಲ್ಲ” ಅಂತ ಹೇಳ್ತಾಳೆ 18 ವರ್ಷದ ನೇಹಾ.  *

ಮಿತಿಮೇರೆಗಳನ್ನು ಇಡಲೇಬೇಕು ಏಕೆ? ಒಂದುವೇಳೆ ನೀವು ಹೀಗೆ ಮಾಡಲಿಲ್ಲ ಅಂದ್ರೆ, ಇದರಿಂದ ನಿಮಗೂ ಬೇರೆಯವರಿಗೂ ನೋವು ಖಂಡಿತ. ಯಾಕೆ ಅಂತ ನೋಡಿ.

ಜೀವನದ ಸತ್ಯಾಂಶ: ಮದುವೆಯಾಗೋ ಯೋಚನೆ ಇಲ್ಲದೆ ಸುಮ್ಮನೆ ಭಾವನೆಗಳನ್ನು ಬೆಳೆಸಿಕೊಂಡರೆ ಅದರಿಂದ ಇಬ್ಬರಲ್ಲಿ ಒಬ್ಬರಿಗಾದರೂ ನೋವಾಗುವುದು ಖಂಡಿತ. “ನನ್ನ ಜೀವನದಲ್ಲಿ ಈ ರೀತಿ ಎರಡು ಸಲ ಆಗಿದೆ, ಒಂದ್ಸಲ ನಾನು ಒಬ್ಬ ಹುಡುಗನ ಮೇಲೆ ಭಾವನೆಗಳನ್ನು ಬೆಳೆಸಿಕೊಂಡೆ, ಮತ್ತೊಂದು ಸಲ ಒಬ್ಬ ಹುಡುಗ ನನ್ನನ್ನು ಇಷ್ಟಪಟ್ಟ. ಎರಡು ಸಲನೂ ಇಬ್ಬರಲ್ಲಿ ಒಬ್ಬರಿಗಾದರೂ ತುಂಬ ನೋವಾಯಿತು. ಅಂದು ನನ್ನ ಮನಸ್ಸಿನಲ್ಲಾದ ನೋವಿನ ಗೆರೆ ಇಂದಿನ ವರೆಗೂ ಮಾಸದೆ ಹಾಗೆ ಉಳಿದಿದೆ” ಅಂತ ಹೇಳ್ತಾಳೆ 19 ವರ್ಷದ ಖುಷಿ.

ಇದರ ಬಗ್ಗೆ ಯೋಚಿಸಿ:

ಯಾವಾಗ ನೀವು ಒಬ್ಬ ಹುಡುಗ/ಹುಡುಗಿಯೊಂದಿಗೆ ಸಮಯ ಕಳೆಯುವುದು ಸರಿ ಎಂದೆನಿಸುತ್ತೆ? ಯಾವಾಗ ಅಲ್ಲ?

ಒಬ್ಬನೇ ವ್ಯಕ್ತಿಯ ಜೊತೆ ಯಾವಾಗಲೂ ಇರುವುದು, ಅವರ ಜೊತೆನೇ ಸಮಯ ಕಳೆಯುವುದು ಸರಿಯಲ್ಲ ಏಕೆ? ಆ ವ್ಯಕ್ತಿಯ ಮನಸ್ಸಿನಲ್ಲಿ ಯಾವ ಭಾವನೆ ಮೂಡಬಹುದು? ನಿಮ್ಮ ಮನಸ್ಸಿನಲ್ಲಿ . . . ?

“‘ಹೇ, ನಾವಿಬ್ರು ಒಳ್ಳೇ ಸ್ನೇಹಿತರು. ಅವನು ನನಗೆ ಅಣ್ಣಂತರ’ ಅಂತ ಅನ್ಕೊಂಡು ಕೆಲವು ಸಲ ನನಗೆ ನಾನೇ ಮೋಸ ಮಾಡಿಕೊಳ್ತಿದ್ದೆ. ಆದರೆ ಯಾವಾಗ ಅವನು ಬೇರೆ ಹುಡುಗಿಯರ ಜೊತೆ ಬೆರಿತಿದ್ದನೊ ಆಗ ನನ್ನಿಂದ ಸಹಿಸಕ್ಕಾಗ್ತಾ ಇರ್ಲಿಲ್ಲ. ಅವನು ಯಾವಾಗಲೂ ನನ್ನ ಜೊತೆನೇ ಇರ್ಬೇಕು ಅಂತ ಅನ್ಸ್‌ತಿತ್ತು.”—ಧೃತಿ

ಬೈಬಲ್‌ ಹೇಳುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.ಜ್ಞಾನೋಕ್ತಿ 22:3

ಜೀವನದ ಸತ್ಯಾಂಶ: ನಿಮಗೆ ಮದುವೆಯಾಗುವ ಯೋಚನೆ ಇಲ್ಲದೆ, ಇಲ್ಲ-ಸಲ್ಲದ ಭಾವನೆಗಳನ್ನು ಬೆಳೆಸಿಕೊಂಡರೆ, ಈಗಿರುವ ಒಳ್ಳೇ ಸ್ನೇಹವನ್ನೂ ಕಳೆದುಕೊಳ್ಳುತ್ತೀರ. 16 ವರ್ಷದ ಕಾವ್ಯ ಹೇಳುತ್ತಾಳೆ: “ನಾನು ಮತ್ತು ಒಬ್ಬ ಹುಡುಗ ಯಾವಾಗಲೂ ಮೆಸೆಜ್‌ ಮಾಡ್ತಾ ಇರುತ್ತಿದ್ದೆವು. ದಿನ ಕಳೆದಂತೆ ಒಂದಿನನೂ ಬಿಡದೆ ಮೆಸೆಜ್‌ ಮಾಡಕ್ಕೆ ಶುರು ಮಾಡಿದ್ವಿ. ಕ್ರಮೇಣ ಅವನು ಚೆಲ್ಲಾಟವಾಡಕ್ಕೆ ಶುರುಮಾಡಿದ. ಒಂದಿನ ಅಂತೂ ಅವನು ನನ್ನನ್ನು ತುಂಬ ಇಷ್ಟ ಪಡ್ತಿದ್ದಾನೆ ಅಂತ ಹೇಳ್ದ. ಆದರೆ ನಾನವನನ್ನು ಆ ದೃಷ್ಟಿಯಿಂದ ನೋಡ್ತಾನೆ ಇರ್ಲಿಲ್ಲ. ಇದನ್ನು ನಾನವನಿಗೆ ಹೇಳಿದೆ. ಆ ದಿನದಿಂದ ನಾವಿಬ್ರು ಮಾತಾಡಿದ್ದೆ ತುಂಬ ಕಮ್ಮಿ. ನಮ್ಮ ಸ್ನೇಹ ಅಲ್ಲಿಗೆ ಮುಗಿದು ಹೋಯ್ತು.”

ಇದರ ಬಗ್ಗೆ ಯೋಚಿಸಿ:

ಕಾವ್ಯಳ ವಿಷ್ಯದಲ್ಲಿ ಯಾರಿಗೆ ನೋವಾಯ್ತು? ಯಾಕೆ? ಇವರಿಬ್ಬರ ಗೆಳೆತನ ಮುರಿದು ಹೋಗದಿರಲು ಏನಾದರೂ ಮಾಡಬಹುದಿತ್ತಾ? ಹೌದಾದ್ರೆ ಹೇಗೆ?

ಮೆಸೆಜ್‌ ಮಾಡ್ವಾಗ ಆ ವ್ಯಕ್ತಿ ನಿಮ್ಮಿಂದ ಗೆಳೆತನಕ್ಕಿಂತ ಇನ್ನೂ ಹೆಚ್ಚನ್ನು ಬಯಸುತ್ತಿದ್ದಾನ ಅಂತ ಹೇಗೆ ಗೊತ್ತಾಗುತ್ತೆ?

“ಒಬ್ಬ ಹುಡುಗನೊಂದಿಗೆ ಸಮಯ ಕಳೆಯುವುದನ್ನು ಕೆಲವೊಮ್ಮೆ ನಾನು ನಿಲ್ಲಿಸಬೇಕಾಗ್ತಿತ್ತು. ಹುಡುಗರು ನಿಜ್ವಾಗಲು ತುಂಬ ಆತ್ಮೀಯ ಸ್ನೇಹಿತರಾಗಿರ್ತಾರೆ. ಆದರೆ ಪ್ರೀತಿ ಪ್ರೇಮ ಅಂತ ತಲೆ ಕೆಡಿಸಿಕೊಂಡು ಈಗ ಇರೊ ಒಳ್ಳೆ ಸಂಬಂಧನ ಹಾಳು ಮಾಡಿಕೊಳ್ಳಲು ನನಗೆ ಇಷ್ಟ ಇಲ್ಲ.”—ಲಹರಿ.

ಬೈಬಲ್‌ ಹೇಳುವುದು: “ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.”—ಜ್ಞಾನೋಕ್ತಿ 14:15.

ಸಾರಾಂಶ: ವಿರುದ್ಧ ಲಿಂಗದವರೊಂದಿಗೆ ಬೆರೆಯುವುದರಲ್ಲಿ ತಪ್ಪೇನಿಲ್ಲ. ಆದರೆ ಮದುವೆ ಬಗ್ಗೆ ಯಾವ ಯೋಚನೆಯೂ ಇಲ್ಲದಿರುವಾಗ ಇಲ್ಲ-ಸಲ್ಲದ ಭಾವನೆಗಳು ಬರದಿರಲು ಮಿತಿಮೇರೆಗಳನ್ನು ಹಾಕಿಕೊಳ್ಳಬೇಕು.

ಮುಂದಿನ ಲೇಖನದಲ್ಲಿ . . .

ಮದುವೆಯಾಗುವ ಯೋಚನೆ ಇಲ್ಲದಿರುವಾಗ ಸುಮ್ಮನೆ ಅನಾವಶ್ಯಕ ಭಾವನೆಗಳನ್ನು ಬೆಳೆಸಿಕೊಳ್ಳುವುದು ನಮ್ಮ ಹೆಸರನ್ನು ಸಹ ಹಾಳುಮಾಡಿಬಿಡುತ್ತೆ. ಹೇಗೆಂದು ಓದಿ ತಿಳಿಯಿರಿ. . . (g12-E 06)

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.pr418.com ವೆಬ್‌ ಸೈಟ್‌ನಲ್ಲಿವೆ

[ಪಾದಟಿಪ್ಪಣಿ]

^ ಈ ಲೇಖನದಲ್ಲಿ ಹೆಸರುಗಳನ್ನು ಬದಲಿಸಲಾಗಿದೆ.

[ಪುಟ 22ರಲ್ಲಿರುವ ಚೌಕ/ಚಿತ್ರ]

ನೀವೇನು ಮಾಡ್ತಿದ್ರಿ?

ನಿಜ ಕಥೆ: “ತುಂಬ ದೂರದಲ್ಲಿರೋ (ಹೆಚ್ಚುಕಡಿಮೆ 1,500 ಕಿ.ಮೀ.) ನನ್ನ ಸ್ನೇಹಿತನಿಗೆ ನಾನು ಮೆಸೆಜ್‌ ಮಾಡ್ತಾಯಿದ್ದೆ. ವಾರಕ್ಕೆ ಒಂದ್ಸಲ ಆದರೂ ಮಾಡ್ತಿದ್ವಿ. ಪ್ರೀತಿ ಪ್ರೇಮ ಅಂತ ನನಿಗೇನು ಅವನ ಮೇಲೆ ಆಸಕ್ತಿ ಇರ್ಲಿಲ್ಲ. ಅವನಿಗೂ ಹಾಗೆ ಅಂತ ಅಂದುಕೊಂಡಿದ್ದೆ. ಒಂದಿನ, ದಿಢೀರಂತ ‘ಹಾಯ್‌ ಸ್ವೀಟ್‌ಹಾರ್ಟ್‌. ಏನ್‌ ಮಾಡ್ತಿದಿಯಾ? ನಿನ್ನ ನೋಡ್ಬೇಕಂತ ಅನಿಸ್ತಾಯಿದೆ’ ಅಂತ ಮೆಸೆಜ್‌ ಮಾಡಿದ. ನನಗೆ ಸಿಡಿಲು ಬಡಿದ ಹಾಗಾಯಿತು! ನಾನವನಿಗೆ, ‘ನಾವಿಬ್ರೂ ಒಳ್ಳೇ ಸ್ನೇಹಿತರು ಅಷ್ಟೇ. ಅದಕ್ಕಿಂತ ಹೆಚ್ಚೇನು ಇಲ್ಲ’ ಅಂತ ಮೆಸೆಜ್‌ ಮಾಡ್ದೆ. ಅದಕ್ಕವನು, ಕೋಪದಿಂದ ‘ಹೋಗೆ, ನೀನಲ್ಲದಿದ್ರೆ ಇನ್ನೊಬ್ಳು’ ಅಂತ ರಿಪ್ಲೈ ಮಾಡ್ದ. ಅದಾದ್ಮೇಲೆ ಇವತ್ತಿನ ತನಕ ಅವನ ಸುದ್ದಿನೇ ಇಲ್ಲ.”—ಜ್ಯಾನೆಟ್‌.

● ನಿಮಗೆ ಮದುವೆಯಾಗುವ ಯೋಚನೆ ಇಲ್ಲದಿದ್ದರೆ ಜ್ಯಾನೆಟ್‌ಗೆ ಬಂದಂಥ ಮೆಸೆಜ್‌ ನಿಮಗೆ ಬಂದ್ರೆ ನೀವು ಏನು ಮಾಡ್ತಿದ್ರಿ?

● ನೀವೊಬ್ಬ ಹುಡುಗ ಆಗಿದ್ರೆ ಜ್ಯಾನೆಟ್‌ಗೆ ಬಂದ ಮೆಸೆಜ್‌ ಸರಿ ಅಂತಿರಾ? ಯಾಕೆ ಸರಿ, ಅಥವಾ ಯಾಕೆ ಸರಿಯಲ್ಲ?

● ಮುಖಮುಖಿಯಾಗಿ ಮಾತಾಡೋದಕ್ಕಿಂತ ಮೆಸೆಜ್‌ ಮಾಡೋದರಿಂದ ಬೇಗನೆ ಆಪ್ತರಾಗಲು ಸಾಧ್ಯ. ನಿಮ್ಮ ಅಭಿಪ್ರಾಯ ಏನು?

[ಪುಟ 23ರಲ್ಲಿರುವ ಚೌಕ]

ನಿಮ್ಮ ಹೆತ್ತವರನ್ನು ಕೇಳಿನೋಡಿ

ಈ ಲೇಖನದಲ್ಲಿ ಕೊಟ್ಟಿರುವ ಗುಂಡು ಚಿಹ್ನೆ ಮುಂದಿರುವ ಪ್ರಶ್ನೆಗಳ ಬಗ್ಗೆ ನಿಮ್ಮ ಹೆತ್ತವರ ಅನಿಸಿಕೆಗಳನ್ನು ಕೇಳಿ. ಅವರ ಅಭಿಪ್ರಾಯ ನಿಮ್ಮದಕ್ಕಿಂತ ಬೇರೆ ಇದೆಯಾ? ಹೌದಾದರೆ, ಹೇಗೆ? ಅವರ ಅನಿಸಿಕೆಗಳಲ್ಲಿ ಯಾವ ಒಳಿತನ್ನು ನೀವು ಗ್ರಹಿಸಿದ್ರಿ?—ಜ್ಞಾನೋಕ್ತಿ 11:14.

[ಪುಟ 23ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?

ಜೋಶುವಾ​—ನೀವು ಒಂದೇ ವ್ಯಕ್ತಿಯೊಂದಿಗೆ ಹೆಚ್ಚು ಸಮಯ ಕಳೆದರೆ ಅವರೊಂದಿಗೆ ಭಾವನೆಗಳು ಬೆಸೆಯುತ್ತವೆ.

ನಟಾಶ​—ನಿಮ್ಮ ಉದ್ದೇಶ ನೀವಿಬ್ಬರು ಸ್ನೇಹಿತರಾಗೇ ಇರ್ಬೇಕು ಅಂತ ಇರಬಹುದು. ಆದರೆ ಅವರೊಟ್ಟಿಗೇ ತುಂಬ ಸಮಯ ಕಳೆಯುವುದರಿಂದ ಪ್ರಣಯದಂತ ಭಾವನೆ ಬೆಳೆಯುವ ಸಾಧ್ಯತೆ ಇದೆ. ಅದು ಯಾರಾದರೊಬ್ಬರಲ್ಲಿ ಅಥವಾ ಇಬ್ಬರಲ್ಲೂ ಚಿಗುರೊಡೆಯಬಹುದು.

ಕೆಲ್ಸಿ​—ನೀವಿಬ್ಬರು ಸ್ನೇಹಿತರೇ ಇರಬಹುದು. ಆದರೆ ಒಟ್ಟಿಗೆ ತುಂಬ ಸಮಯ ಕಳೆದ್ರೆ ನಿಮ್ಮ ಭಾವನೆಗಳು ಬಲವಾಗಬಹುದು ಮತ್ತು ಇಂಥ ಸಮಯದಲ್ಲಿ ಕೇವಲ ಸ್ನೇಹಿತರಾಗಿರೋದು ಅಷ್ಟು ಸುಲಭವಲ್ಲ. ಹಾಗಿರಲು ತುಂಬ ಪ್ರೌಢತೆ ಮತ್ತು ವಿವೇಚನೆ ಬೇಕು.

[ಪುಟ 22ರಲ್ಲಿರುವ ಚಿತ್ರ]

ಮದುವೆಯಾಗುವ ಯೋಚನೆ ಇಲ್ಲದೆ ಇಲ್ಲ-ಸಲ್ಲದ ಭಾವನೆಗಳನ್ನು ಬೆಳೆಸಿಕೊಳ್ಳುವುದು ದುರಂತಕ್ಕೆ ನಡೆಸುತ್ತೆ