ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಆಹಾರ ಎಷ್ಟು ಸುರಕ್ಷಿತ?

ನಿಮ್ಮ ಆಹಾರ ಎಷ್ಟು ಸುರಕ್ಷಿತ?

ನಿಮ್ಮ ಆಹಾರ ಎಷ್ಟು ಸುರಕ್ಷಿತ?

“ಇ. ಕೋಲೈ ರೋಗದ ಭಯಕ್ಕೆ ಜರ್ಮನಿಯಲ್ಲಿ ಶಾಲೆಗೆ ರಜೆ.”—ರೋಯ್ಟರ್‌ ವಾರ್ತಾಪತ್ರಿಕೆ, ಜರ್ಮನ್‌.

“ಐದು ರಾಷ್ಟ್ರಗಳಲ್ಲಿ ಕಾಣಿಸಿಕೊಂಡ ಸ್ಯಾಲ್ಮೋನೆಲ ರೋಗಕ್ಕೆ ಆಹಾರವೇ ಮೂಲ ಕಾರಣ ಅಂತ ಪತ್ತೆ.”—ಯುಎಸ್‌ಎ ಟುಡೆ ವಾರ್ತಾಪತ್ರಿಕೆ.

“ಇಡ್ಲಿಯಲ್ಲಿ ಇ. ಕೋಲೈ ರೋಗಾಣು ಪತ್ತೆ.” —ದಿ ಟೈಮ್ಸ್‌ ಆಫ್‌ ಇಂಡಿಯಾ, ಪುಣೆ, ಭಾರತ.

ಲೋಕದ ಸುತ್ತ ಅನೇಕರು ಆಹಾರ ಸಂಬಂಧಿತ ರೋಗಗಳಿಂದ ಬಳಲುತ್ತಾರೆ ಎಂದು ವರದಿಗಳು ತಿಳಿಸುತ್ತೆ. ಪ್ರಗತಿಪರ ದೇಶಗಳಲ್ಲೇ ಪ್ರತಿವರ್ಷ ಶೇಕಡ 30ರಷ್ಟು ಜನ ಇಂಥ ರೋಗಕ್ಕೆ ತುತ್ತಾಗುತ್ತಿದ್ದಾರೆ ಎನ್ನುತ್ತೆ ಸಂಶೋಧನೆಗಳು.

ಇಂಥ ವರದಿ ಓದಿದಾಗ ನಿಮ್ಗೆ ಏನನಿಸುತ್ತೆ? ಹಾಂಗ್‌ ಕಾಂಗ್‌ನಲ್ಲಿರುವ ಇಬ್ರು ಮಕ್ಕಳ ತಂದೆ ಹೋಯಿ ಅನ್ನುವುದು, “ನನ್ಗೆ ಚಿಂತೆ ಆಗ್ತದೆ. ಕೋಪನೂ ಬರ್ತದೆ. ನನ್ನ ಮಕ್ಕಳ ಬಗ್ಗೆ ಯೋಚಿಸ್ತೇನೆ. ಅವ್ರು ತಿನ್ನೋ ಆಹಾರ ಹೇಗಿದೆಯೋ ಅದನ್ನ ಎಲ್ಲಿ ತಯಾರಿಸ್ತಾರೋ ಅಂತ ಭಯ ಆಗ್ತದೆ.”

ಬಡ ದೇಶಗಳಲ್ಲಿ ಆಹಾರ, ನೀರು ಸಂಬಂಧಿತ ರೋಗದಿಂದಾಗಿ ಲಕ್ಷಾಂತರ ಜನರು, ಅದರಲ್ಲೂ ಹೆಚ್ಚಾಗಿ ಮಕ್ಕಳು ಪ್ರತಿ ವರ್ಷ ಸಾಯುತ್ತಿದ್ದಾರೆ. “ಇಲ್ಲಿನ ಮಾರುಕಟ್ಟೆಯಲ್ಲಿ ಆಹಾರವನ್ನು ತೆರ್ದೇ ಇಡ್ತಾರೆ. ಗಾಳಿ, ಮಳೆಗೂ ಅದು ಹಾಗೆಯೇ ಇರ್ತದೆ. ಅದ್ರ ಮೇಲೆ ನೊಣ, ಧೂಳು ಕೂತಿರುತ್ತೆ. ಆಹಾರ ಸಂಬಂಧಿತ ರೋಗಗಳ ಬಗ್ಗೆ ಓದುವಾಗ ಇಲ್ಲವೆ ಕೇಳುವಾಗ ನನ್ಗೆ ತುಂಬ ಭಯ ಆಗ್ತದೆ. ನನ್ನ ಕುಟುಂಬಕ್ಕೆ ಯಾವುದೇ ತೊಂದರೆ ಆಗದಂತೆ ಹೇಗೆ ನೋಡಿಕೊಳ್ಳೋದು ಎನ್ನೋದೆ ಚಿಂತೆ” ಎನ್ನುತ್ತಾರೆ ನೈಜೀರಿಯದ ಬೋಲಾ.

ನಿಮ್ಮ ಕುಟುಂಬಕ್ಕೆ ಶುದ್ಧ, ಹಾನಿರಹಿತ ಆಹಾರ ಸಿಗುವಂತೆ ನೋಡಿಕೊಳ್ಳೋದು ಹೇಗೆ? ಕೆನಡದ ಆಹಾರ ಸುರಕ್ಷಾ ಸಂಸ್ಥೆ ಹೇಳುವುದು: “ಯಾವುದೇ ಹಾನಿಕಾರಕ ಆಹಾರ ಪದಾರ್ಥ ಅಂಗಡಿಗಳಿಗೆ ಬಂದ್ರೆ ನಮ್ಗೆ ಕೂಡಲೆ ಗೊತ್ತಾಗ್ತದೆ. ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಖರೀದಿಸಿದ ಆಹಾರವನ್ನು ನೀವು ಹೇಗೆ ಇಡ್ತೀರಿ, ಹೇಗೆ ಅಡಿಗೆ ಮಾಡ್ತೀರಿ ಎನ್ನುವುದರ ಮೇಲೆ ಆರೋಗ್ಯದ ಸುರಕ್ಷೆ ಅವಲಂಬಿತ.”

ಹಾಗಾದ್ರೆ ಆಹಾರದಿಂದ ಬರುವ ರೋಗದಿಂದ ಕುಟುಂಬವನ್ನು ಸಂರಕ್ಷಿಸಲು ನೀವೇನು ಮಾಡ್ಬಹುದು? ಆಹಾರವನ್ನು ಸುರಕ್ಷಿತವಾಗಿ ಇಡುವ ನಾಲ್ಕು ವಿಧಗಳನ್ನು ನಾವೀಗ ನೋಡೋಣ. (g12-E 06)

[ಪುಟ 3ರಲ್ಲಿರುವ ಚೌಕ]

ರೋಗಕ್ಕೆ ತಟ್ಟನೆ ತುತ್ತಾಗುವವರು

ಆಹಾರ ಸಂಬಂಧಿತ ರೋಗಕ್ಕೆ ತಟ್ಟನೆ ತುತ್ತಾಗುವವರಲ್ಲಿ ಕೆಲವರು:

● ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು

● ಗರ್ಭಿಣಿಯರು

● ಎಪ್ಪತ್ತು ವರ್ಷಕ್ಕೆ ಮೇಲಿನವರು

● ರೋಗ ನಿರೋಧಕ ಶಕ್ತಿ ಕುಂಠಿತವಿರುವ ಜನರು

ನೀವಾಗಲಿ ನಿಮಗೆ ತಿಳಿದಿರುವ ಯಾರೇ ಆಗಲಿ ಮೇಲಿನ ಪಟ್ಟಿಗೆ ಸೇರಿರುವಲ್ಲಿ ಆಹಾರ ತಯಾರಿಸುವ, ಬಡಿಸುವ ಹಾಗೂ ಸೇವಿಸುವ ವಿಷ್ಯದಲ್ಲಿ ಬಹು ಜಾಗ್ರತೆವಹಿಸಬೇಕು.

[ಕೃಪೆ]

ಮೂಲ: New South Wales Food Authority, Australia.