ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶೀಘ್ರದಲ್ಲೇ ಸರ್ವರಿಗೂ ಆರೋಗ್ಯಕರ ಆಹಾರ

ಶೀಘ್ರದಲ್ಲೇ ಸರ್ವರಿಗೂ ಆರೋಗ್ಯಕರ ಆಹಾರ

ಶೀಘ್ರದಲ್ಲೇ ಸರ್ವರಿಗೂ ಆರೋಗ್ಯಕರ ಆಹಾರ

ಅಗತ್ಯ ಹೆಜ್ಜೆಗಳನ್ನು ತೆಗೆದುಕೊಂಡರೆ ನೀವು ಸೇವಿಸುವ ಆಹಾರ ಸುರಕ್ಷಿತವಾಗಿರಲು ಸಾಧ್ಯ. ಹಾಗಿದ್ದರೂ ಕೆಲವೊಂದು ವಿಷ್ಯ ನಮ್ಮ ಹತೋಟಿ ಮೀರಿದ್ದಾಗಿದೆ. ಉದಾ: ಪ್ರತಿಯೊಂದು ಆಹಾರಪದಾರ್ಥವನ್ನು ವೈಯಕ್ತಿಕವಾಗಿ ಪರೀಕ್ಷಿಸಲು ಸಾಧ್ಯವಿಲ್ಲ. ಕೆಲವು ಆಹಾರ ಎಷ್ಟೋ ದೂರದಿಂದ ರಫ್ತಾಗಿ ಬಂದಿರುತ್ತದೆ. ಕೆಲವು ಆಹಾರ ಗಾಳಿ, ನೀರು, ಮಣ್ಣಿನಲ್ಲಿರುವ ರಾಸಾಯನಿಕದಿಂದಾಗಿ ಮಲಿನಗೊಂಡಿರುತ್ತವೆ.

ಆಹಾರ ಸುರಕ್ಷೆಗೆ ಸಂಬಂಧಿಸಿದ ಸಮಸ್ಯೆಯನ್ನು “ಯಾವುದೇ ಒಂದು ರಾಷ್ಟ್ರ ತನ್ನಿಂದ ತಾನೇ ನಿವಾರಿಸಲು ಸಾಧ್ಯವಿಲ್ಲ. ಈ ಪಿಡುಗನ್ನು ನಿವಾರಿಸಲು ಅಂತಾರಾಷ್ಟ್ರೀಯ ಸಹಕಾರ ಅಗತ್ಯ” ಎಂದು ವಿಶ್ವ ಆರೋಗ್ಯ ಸಂಸ್ಥೆ “ಆಹಾರ ಸಂಬಂಧಿತ ರೋಗ ನಿಯಂತ್ರಣ: ಅಂತಾರಾಷ್ಟ್ರೀಯ ಪಿಡುಗು” ಎಂಬ ಶೀರ್ಷಿಕೆಯಿದ್ದ ತನ್ನ ವರದಿಯಲ್ಲಿ ತಿಳಿಸಿದೆ. ಆಹಾರ ಸಂಬಂಧಿತ ಕಾಯಿಲೆಗಳು ಒಂದು ಭೌಗೋಳಿಕ ಸಮಸ್ಯೆ.

ಹಾಗಾಗಿ ಶೀಘ್ರದಲ್ಲೇ ಸರ್ವರಿಗೂ ಆರೋಗ್ಯಕರ ಆಹಾರ ಸಿಗುತ್ತದೆ ಎಂದು ಹೇಳುವಾಗ ಜನರಿಗೆ ನಂಬಲು ಅಸಾಧ್ಯ ಅನಿಸುತ್ತದೆ. ಆದರೆ ನಂಬಬಹುದು. ಹೇಗೆ? ಮಾತು ಕೊಟ್ಟಿರುವಾತ ಬೇರಾರೂ ಅಲ್ಲ “ಸರ್ವಲೋಕದ ಒಡೆಯನಾದ ಯೆಹೋವ.” (ಯೆಹೋಶುವ 3:13) ‘ಹಾನಿಕಾರಕ ಆಹಾರವೇ ಈಗ ಹೆಚ್ಚಾಗಿದೆ. ಹಾಗಿರುವಲ್ಲಿ ದೇವರು ಆರೋಗ್ಯಕರ ಆಹಾರವನ್ನು ಕೊಡುತ್ತಾನೆಂದು ಭರವಸವಿಡುವುದಾದರೂ ಹೇಗೆ?’ ಎಂದು ಕೆಲವರು ಹೇಳಬಹುದು. ಇದನ್ನು ಯೋಚಿಸಿ: ಹೋಟೆಲಿನ ಸಪ್ಲಾಯರ್‌ ಆಹಾರವನ್ನು ಎಲ್ಲಿಯೋ ಇಟ್ಟು ಅದು ಕೆಟ್ಟು ಹೋದರೆ. ಅದಕ್ಕಾಗಿ ಆಹಾರ ತಯಾರಿಸಿದವನನ್ನು ದೂರುವುದು ನ್ಯಾಯವಾ?

ಅಂತೆಯೇ ಇಂದು ಸಿಗುವ ಆಹಾರ ಮಲಿನಗೊಂಡಿರಲು ಕಾರಣ ಸೃಷ್ಟಿಕರ್ತನಲ್ಲ ಮನುಷ್ಯರೇ. ಆಹಾರ ಅಸುರಕ್ಷಿತವಾಗಿರಲು ಜನರೇ ಕಾರಣ. ಆದರೆ ದೇವರು ‘ಭೂಮಿಯನ್ನು ನಾಶಮಾಡುತ್ತಿರುವವರನ್ನು ನಾಶಗೊಳಿಸುವುದಾಗಿ’ ಮಾತುಕೊಟ್ಟಿದ್ದಾನೆ.—ಪ್ರಕಟನೆ 11:18.

ಆಹಾರ ಗುಣಮಟ್ಟದ ಬಗ್ಗೆ ದೇವರಿಗೆ ಚಿಂತೆ ಇದೆ ಎಂಬದನ್ನು ಆತನು ಈಗಾಗಲೇ ತೋರಿಸಿಕೊಟ್ಟಿದ್ದಾನೆ. ಈ ಭೂಮಿಯನ್ನು ಸೃಷ್ಟಿಸಿದವನು ಆತನೇ. ವಿಧವಿಧವಾದ ಹಣ್ಣಿನ ಮರಗಳನ್ನು “ನೋಟಕ್ಕೆ ರಮ್ಯವಾಗಿ” ಮಾತ್ರವಲ್ಲ “ಊಟಕ್ಕೆ ಅನುಕೂಲವಾಗಿ” ಇರುವ ಹಣ್ಣುಹಂಪಲಿನ ಮರಗಳನ್ನು ಸೃಷ್ಟಿಸಿದವನು ಆತನೇ. (ಆದಿಕಾಂಡ 2:9) ಮೊದಲ ಮಾನವರು ಪಾಪ ಮಾಡಿ ಅಪರಿಪೂರ್ಣತೆ ಹಾಗೂ ರೋಗಗಳನ್ನು ತಮ್ಮ ಸಂತತಿಗೆ ದಾಟಿಸಿದರು. ಅದರ ನಂತರವೂ ದೇವರು ತನ್ನ ಜನರ ಸುರಕ್ಷೆಗಾಗಿ ಅವರು ಆಹಾರವನ್ನೂ ತಮ್ಮ ಶರೀರವನ್ನೂ ಹೇಗೆ ಶುಚಿಯಾಗಿಡಬೇಕೆಂಬ ಅನೇಕ ಮಾರ್ಗದರ್ಶನವನ್ನು ಕೊಟ್ಟನು.—“ಆರೋಗ್ಯ ಸಂಬಂಧಿತ ನಿಯಮಗಳು” ಎಂಬ ಚೌಕ ನೋಡಿ.

ನಾವು ಯಾವ ರೀತಿಯ ಆಹಾರ ಸವಿದು ಆನಂದಿಸಬೇಕೆಂದು ದೇವರು ಬಯಸುತ್ತಾನೆ? ಬೈಬಲ್‌ ತಿಳಿಸುವುದು: “ಪಶುಗಳಿಗೋಸ್ಕರ ಹುಲ್ಲನ್ನು ಮೊಳಿಸುತ್ತೀ; ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತೀ; ಅವರು ಭೂವ್ಯವಸಾಯಮಾಡಿ ಆಹಾರವನ್ನೂ ಹೃದಯಾನಂದಕರವಾದ ದ್ರಾಕ್ಷಾರಸವನ್ನೂ ಮುಖಕ್ಕೆ ಕಾಂತಿಯನ್ನುಂಟುಮಾಡುವ ಎಣ್ಣೆಯನ್ನೂ ಪ್ರಾಣಾಧಾರವಾದ ರೊಟ್ಟಿಯನ್ನೂ ಸಂಪಾದಿಸಿಕೊಳ್ಳುತ್ತಾರೆ.” (ಕೀರ್ತನೆ 104:14, 15) “ಭೂಮಿಯ ಮೇಲೆ ತಿರುಗುವ ಎಲ್ಲಾ ಜೀವಜಂತುಗಳೂ ನಿಮಗೆ ಆಹಾರವಾಗಿರುವವು” ಎಂದು ಸಹ ಬೈಬಲ್‌ ತಿಳಿಸುತ್ತೆ.—ಆದಿಕಾಂಡ 9:3.

ನಮ್ಮ ಭವಿಷ್ಯದ ಬಗ್ಗೆ ಮಾತಾಡುತ್ತಾ ದೇವರ ವಾಕ್ಯ ಹೀಗೆ ಹೇಳುತ್ತದೆ: “ನೀವು ಹೊಲದಲ್ಲಿ ಬೀಜಬಿತ್ತುವದಕ್ಕೆ ಆತನು ಬಿತ್ತನೆಯ ಮಳೆಯನ್ನು ದಯಪಾಲಿಸುವನು; ನೆಲದ ಬೆಳೆಯಿಂದ ಸಾರವಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವನು; ಆ ದಿನದಲ್ಲಿ ನಿಮ್ಮ ಮಂದೆಗಳು ದೊಡ್ಡದೊಡ್ಡ ಕಾವಲುಗಳಲ್ಲಿ ಮೇಯುವವು.” (ಯೆಶಾಯ 30:23) ಹೌದು ಇಂದು ನಾವು ಎಲ್ಲೆಡೆ ಕೇಳುತ್ತಿರುವ ಸುದ್ದಿಗೆ ತದ್ವಿರುದ್ಧವಾಗಿ “ಸರ್ವರಿಗೂ ಆರೋಗ್ಯಕರ ಆಹಾರ!” ಎಂಬ ಸಿಹಿ ಸುದ್ದಿಯನ್ನು ಶೀಘ್ರದಲ್ಲೇ ಕೇಳುವೆವು. (g12-E 06)

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

ಒಳ್ಳೇ ಆಹಾರ ಸಮೃದ್ಧವಾಗಿ ಸಿಗುವ ಅತ್ಯುತ್ತಮ ಭವಿಷ್ಯತ್ತಿನ ಬಗ್ಗೆ ಸೃಷ್ಟಿಕರ್ತನು ಮಾತುಕೊಟ್ಟಿದ್ದಾನೆ

[ಪುಟ 8ರಲ್ಲಿರುವ ಚೌಕ]

“ಆರೋಗ್ಯ ಸಂಬಂಧಿತ ನಿಯಮಗಳು”

ಸುಮಾರು 3,500 ವರ್ಷಗಳ ಹಿಂದೆ ಇಸ್ರಾಯೇಲ್ಯರಿಗೆ ಮೋಶೆಯ ಧರ್ಮಶಾಸ್ತ್ರ ದೊರೆಯಿತು. ಆ ಧರ್ಮಶಾಸ್ತ್ರ ಅವರನ್ನು ಆಹಾರ ಸಂಬಂಧಿತ ಅನೇಕ ರೋಗಗಳಿಂದ ಕಾಪಾಡಿತು. ಈ ಕೆಳಗಿನ ಸಲಹೆಗಳನ್ನು ಪರಿಗಣಿಸಿ:

● ಹೆಣಕ್ಕೆ ತಗಲಿದ ಪಾತ್ರೆಗಳನ್ನು ಉಪಯೋಗಿಸಬಾರದು: ಅಂಥ ಪಾತ್ರೆ “ಯಾವ ಕೆಲಸಕ್ಕೆ ಉಪಯೋಗವಾಗಿದ್ದರೂ ಅದನ್ನು ನೀರಿನಲ್ಲಿ ನೆನಸಬೇಕು; ಅದು ಆ ಸಾಯಂಕಾಲದ ವರೆಗೂ ಅಶುದ್ಧವಾಗಿರುವದು; ತರುವಾಯ ಶುದ್ಧಿಯಾಗುವುದು.”—ಯಾಜಕಕಾಂಡ 11:31-34.

● ತನ್ನಿಂದ ತಾನೇ ಸತ್ತುಬಿದ್ದಿರುವ ಪ್ರಾಣಿಯನ್ನು ತಿನ್ನಬಾರದು: “ಸತ್ತುಬಿದ್ದದ್ದನ್ನು ನೀವು ತಿನ್ನಕೂಡದು.”—ಧರ್ಮೋಪದೇಶಕಾಂಡ 14:21.

● ಮಿಕ್ಕಿರುವ ಆಹಾರವನ್ನು ಹೆಚ್ಚು ದಿನ ಇಡಬಾರದು: “ಮಿಕ್ಕದ್ದನ್ನು ಮರುದಿನದಲ್ಲಿ ತಿನ್ನಬಹುದು. ಮೂರನೆಯ ದಿನದ ವರೆಗೆ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು.”—ಯಾಜಕಕಾಂಡ 7:16-18.

ಅಂದಿನ ಕಾಲದಲ್ಲಿ ಸುತ್ತುಮುತ್ತಲಿನ ಜನಾಂಗಗಳಿಗೆ ಇದ್ದ ನಿಯಮಕ್ಕೆ ಹೋಲಿಸುವಾಗ ಮೋಶೆಯ ನಿಯಮ ನಿಜಕ್ಕೂ “ಅತಿ ಶ್ರೇಷ್ಠವೂ ಪ್ರಾಯೋಗಿಕವೂ” ಆಗಿತ್ತು ಎಂಬದಾಗಿ ಮೆಡಿಕಲ್‌ ಡೈರೆಕ್ಟರರಾದ ರೆನ್ಡೆಲ್‌ ಶಾರ್ಟ್‌ ಹೇಳುತ್ತಾರೆ.