ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

4. ಹೊರಗಡೆ ತಿನ್ನುವಾಗ ಜಾಗ್ರತೆ ವಹಿಸಿ

4. ಹೊರಗಡೆ ತಿನ್ನುವಾಗ ಜಾಗ್ರತೆ ವಹಿಸಿ

4. ಹೊರಗಡೆ ತಿನ್ನುವಾಗ ಜಾಗ್ರತೆ ವಹಿಸಿ

ಜೆಫ್‌ ಎಂಬ 38 ವರ್ಷ ಪ್ರಾಯದ ಆರೋಗ್ಯವಂತ ವ್ಯಕ್ತಿ ತನ್ನ ಕುಟುಂಬದೊಂದಿಗೆ ಅಮೆರಿಕದ ಪೆನ್ಸಿಲ್ವೇನಿಯ ಪ್ರಾಂತ್ಯದ ಪಿಟ್ಸ್‌ಬರ್ಗ್‌ನ ಹೋಟೆಲೊಂದಕ್ಕೆ ಹೋಗಿ ಊಟಮಾಡಿದ. ಒಂದು ತಿಂಗಳ ನಂತರ ಜೆಫ್‌ ಯಕೃತ್ತಿನ ತೀವ್ರ ಸಮಸ್ಯೆಗೆ ಗುರಿಯಾಗಿ ತೀರಿಕೊಂಡ. ಕಾರಣ? ಆತ ಸೇವಿಸಿದ ಆಹಾರದಲ್ಲಿದ್ದ ಎಳೇ ಈರುಳ್ಳಿಯಿಂದ ಹೆಪಟೈಟಿಸ್‌-ಎ ರೋಗ ಬಂದದ್ದೇ ಇದಕ್ಕೆ ಕಾರಣ.

ಪಾಶ್ಚಾತ್ಯ ದೇಶಗಳಲ್ಲಿ ಜನರು ತಮ್ಮ ಸಂಪಾದನೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಹೋಟೆಲ್‌ಗೆ ಖರ್ಚುಮಾಡುತ್ತಾರೆ. ಆ ದೇಶಗಳಲ್ಲಿ ಆಹಾರ ಸಂಬಂಧಿತ ರೋಗಕ್ಕೆ ಬಲಿಯಾಗುವವರಲ್ಲಿ ಅರ್ಧದಷ್ಟು ಜನರು ಹೋಟೆಲ್‌ ಆಹಾರ ತಿನ್ನುವವರು.

ಹೋಟೆಲಿನಲ್ಲಿ ಅಡಿಗೆಗೆ ಬೇಕಾದ ಸಾಮಾಗ್ರಿಗಳನ್ನು ತರುವವರು ಒಬ್ಬರು. ಅಡಿಗೆ ಕೋಣೆ ಶುಚಿಮಾಡುವವರು ಇನ್ನೊಬ್ಬರು. ಅಡಿಗೆ ತಯಾರಿಸುವವರು ಮತ್ತೊಬ್ಬರು. ಹಾಗಿದ್ದರೂ ಎಲ್ಲಿ ಊಟಮಾಡಬೇಕು, ಏನು ಊಟಮಾಡಬೇಕು ಎಂಬದನ್ನು ನೀವು ನಿರ್ಧರಿಸಬೇಕು. ಹೋಟೆಲಿನಿಂದ ಆಹಾರ ಮನೆಗೆ ತೆಗೆದುಕೊಂಡು ಹೋಗುವುದಾದರೆ ಹೇಗೆ ಪ್ಯಾಕ್‌ ಮಾಡಬೇಕೆಂದೂ ನಿರ್ಧರಿಸಿ.

ಸುತ್ತಮುತ್ತ ಕಣ್ಣಾಡಿಸಿ.

“ಮೊದ್ಲ ಬಾರಿ ಒಂದು ಹೋಟೆಲಿಗೆ ಬಂದಿರುವಲ್ಲಿ ಆ ಹೋಟೆಲಿನ ಸುತ್ತಲೂ ಕಣ್ಣಾಡಿಸುತ್ತೇನೆ. ಅಲ್ಲಿರುವ ಊಟದ ಮೇಜು ಹೇಗಿದೆ. ಮೇಜನ್ನು ಒರಸುವ ಬಟ್ಟೆ ಹೇಗಿದೆ. ತಟ್ಟೆ, ಲೋಟ, ಚಮಚಗಳು ಎಷ್ಟು ಶುಚಿಯಾಗಿವೆ. ಎಲ್ಲವನ್ನು ಗಮನಿಸಿ, ಅದು ಶುಚಿಯಾಗಿಲ್ಲದಿದ್ದರೆ ಅಲ್ಲಿಂದ ಬೇರೆ ಹೋಟೆಲಿಗೆ ಹೋಗುತ್ತೇವೆ” ಎನ್ನುತ್ತಾರೆ ಬ್ರೆಜಿಲ್‌ನ ಡೈಯಾನ್‌. ಕೆಲವು ದೇಶಗಳಲ್ಲಿ ಹೆಲ್ತ್‌ ಇನ್ಸ್‌ಪೆಕ್ಟರ್‌ ನಿಯತವಾಗಿ ಹೋಟೆಲಿಗೆ ಬಂದು ಎಲ್ಲವೂ ಶುಚಿಯಾಗಿ ಇದೆಯಾ ಎಂದು ಪರೀಕ್ಷಿಸುತ್ತಾರೆ. ಬಳಿಕ ತಮ್ಮ ಅಭಿಪ್ರಾಯವನ್ನು ಸಾರ್ವಜನಿಕರು ಓದುವಂತೆ ಅಂಟಿಸಿ ಹೋಗುತ್ತಾರೆ.

ಉಳಿದ ಆಹಾರ ಮನೆಗೆ ತೆಗೆದುಕೊಂಡು ಹೋಗುವ ವಿಷ್ಯದಲ್ಲಿ ಜಾಗ್ರತೆವಹಿಸಿ.

“ನೀವು ಎರಡು ತಾಸಿನೊಳಗೆ ಮನೆಗೆ ಹೋಗದಿದ್ದರೆ ಉಳಿದ ಆಹಾರವನ್ನು ಮನೆಗೆ ತೆಗೆದುಕೊಂಡು ಹೋಗಬೇಡಿ” ಎಂದು ಅಮೆರಿಕದ ಆಹಾರ ಮತ್ತು ಔಷಧಿ ನಿಗಮ ಸಲಹೆ ನೀಡುತ್ತದೆ. ಆಹಾರ ಉಳಿದಿದ್ದು ಅದನ್ನು ಮನೆಗೆ ತೆಗೆದುಕೊಂಡು ಹೋಗ ಬಯಸುವಲ್ಲಿ ಕೂಡಲೆ ಮನೆಗೆ ಹೋಗಿ ಅದನ್ನು ಫ್ರಿಜ್‌ನಲ್ಲಿಡಿ.

ಈ ಲೇಖನಮಾಲೆಯಲ್ಲಿ ತಿಳಿಸಿದ ನಾಲ್ಕು ವಿಷಯಗಳನ್ನು ನೀವು ಮಾಡುವುದಾದರೆ ನಿಮ್ಮ ಆಹಾರ ಸುರಕ್ಷಿತವಾಗಿರುವುದು. (g12-E 06)

[ಪುಟ 7ರಲ್ಲಿರುವ ಚೌಕ]

ಮಕ್ಕಳಿಗೆ ತರಬೇತು ನೀಡಿ: “ಸುರಕ್ಷಿತವಲ್ಲದ ಆಹಾರ ಸೇವಿಸಬಾರದು ಎಂದು ನಮ್ಮ ಮಕ್ಕಳಿಗೆ ಕಲಿಸುತ್ತೇವೆ.”—ನೋಯಿಮಿ, ಫಿಲಿಪ್ಪೀನ್ಸ್‌