ವಿಶ್ವ-ವೀಕ್ಷಣೆ
ವಿಶ್ವ-ವೀಕ್ಷಣೆ
ಪ್ರಪಂಚ
ಆಹಾರದ ಅಭಾವ ಹೆಚ್ಚಾಗುತ್ತಿರುವುದು ಉತ್ಪಾದನೆ ಕಡಿಮೆಯಾಗಿ ಅಲ್ಲ. ಏಕೆಂದರೆ ರೈತರು ಬೆಳೆಯುತ್ತಿರುವ ಬೆಳೆ 1,200 ಕೋಟಿ ಜನರಿಗೆ ಸಾಕಾಗುವಷ್ಟಿದೆ ಅಂದರೆ 500 ಕೋಟಿ ಜನರ ಆಹಾರ ಹೆಚ್ಚುವರಿ ಉತ್ಪಾದನೆಯಾಗುತ್ತಿದೆ. ಹಾಗಾದರೆ ಆಹಾರಕ್ಕೆ ಏನೂ ಕೊರತೆ ಇಲ್ಲ. ಸಮಸ್ಯೆ ಏನೆಂದರೆ ಜನರಲ್ಲಿರುವ ಲಾಭದ ಮನೋಭಾವ, ಆಹಾರ ವಿತರಣೆ ಸರಿಯಾಗಿ ಆಗುತ್ತಿಲ್ಲ ಮತ್ತು ತುಂಬ ಪೋಲಾಗುತ್ತಿದೆ.
ಅರ್ಜೆಂಟೀನ
ಅರ್ಜೆಂಟೀನದಲ್ಲಿ ಐದರಲ್ಲಿ ಮೂವರು ಶಿಕ್ಷಕರು ರಜೆ ಹಾಕಲು ಕಾರಣ ಕೆಲಸದ ಸ್ಥಳದಲ್ಲಿರುವ ಒತ್ತಡ, ಶೋಷಣೆ.
ಚೀನಾ
ಚೀನಾದಲ್ಲಿ 2016ರಿಂದ ಗಾಳಿಯ ಹೊಸ ಗುಣಮಟ್ಟ ಜಾರಿಗೆ ಬರಲಿದೆ. ಆ ಗುಣಮಟ್ಟವನ್ನು ಅಲ್ಲಿನ ಮೂರರಲ್ಲಿ ಎರಡು ಭಾಗದಷ್ಟು ನಗರಗಳು ಮುಟ್ಟುವುದಿಲ್ಲ ಎಂದು ಶಂಕಿಸಲಾಗಿದೆ. ಅಲ್ಲದೆ ಈಗ ಅಲ್ಲಿ ಸಿಗುತ್ತಿರುವ ನೀರನ್ನು “ಅತೀ ಕೆಟ್ಟ ನೀರು” ಎಂದು ವರ್ಗೀಕರಿಸಲಾಗಿದೆ. (g13-E 03)
ಬ್ರಿಟನ್ ಮತ್ತು ಅಮೆರಿಕ
ಹಣಕಾಸಿನ ಸಂಸ್ಥೆಗಳಲ್ಲಿ ಕೆಲಸಮಾಡುತ್ತಿರುವವರನ್ನು ಸಮೀಕ್ಷೆ ಮಾಡಿದ್ದರಲ್ಲಿ ಹೆಚ್ಚುಕಡಿಮೆ 24% ವ್ಯಕ್ತಿಗಳು “ಅನ್ಯಾಯವಾಗಿ ಅಥವಾ ಅಕ್ರಮವಾಗಿ ಜೀವಿಸಿದರೆ ಮಾತ್ರ ಬದುಕಲ್ಲಿ ಯಶಸ್ವಿಯಾಗೋದು” ಎಂದಿದ್ದಾರೆ. “ತಪ್ಪಿಸಿಕೊಳ್ಳುವ ಮಾರ್ಗ ಇರೋದಾದರೆ” ಅಪರಾಧ ಕೃತ್ಯವೆಸಗಲು ಸಿದ್ಧರಿದ್ದಾರೆಂದು 16% ಜನರು ಹೇಳಿಕೊಂಡಿದ್ದಾರೆ.
ದಕ್ಷಿಣ ಕೊರಿಯ
ದಕ್ಷಿಣ ಕೊರಿಯದಲ್ಲಿ ಒಟ್ಟಿಗೆ ಒಂದೇ ಮನೆಯಲ್ಲಿ ಇರುವ ಪದ್ಧತಿ ಹೋಗಿ ಒಂಟಿಯಾಗಿ ಜೀವಿಸುವ ಪರಿಪಾಠ ರಾರಾಜಿಸಲಿದೆ.
[ಪುಟ 3ರಲ್ಲಿರುವ ಚಿತ್ರ]
[ಕೃಪೆ]
© Fernando Moleres/Panos Pictures
[ಪುಟ 3ರಲ್ಲಿರುವ ಚಿತ್ರ]
[ಕೃಪೆ]
© Natalie Behring/Panos Pictures
[ಪುಟ 3ರಲ್ಲಿರುವ ಭೂಪಟ]