ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಧುತ್ತೆಂದು ದುರಂತಗಳು ಸಂಭವಿಸಿದಾಗ . . .

ಧುತ್ತೆಂದು ದುರಂತಗಳು ಸಂಭವಿಸಿದಾಗ. . .

ಧುತ್ತೆಂದು ದುರಂತಗಳು ಸಂಭವಿಸಿದಾಗ. . .

ನಮ್ಮಲ್ಲಿ ಹೆಚ್ಚಿನವರ ಜೀವನಗಳಲ್ಲಿ ಒಂದಲ್ಲ ಒಂದು ಸಮಯದಲ್ಲಿ ದುರಂತಗಳು ಖಂಡಿತವಾಗಿ ಸಂಭವಿಸಿರುತ್ತವೆ. ಯಾರ ಜೀವನ ಚೆನ್ನಾಗಿದೆ ಅಂತ ಅಂದುಕೊಳ್ಳುತ್ತೇವೋ ಅವರು ಸಹ ಇದಕ್ಕೆ ಹೊರತೇನಲ್ಲ.

ಬೈಬಲ್ ಹೀಗೆ ಹೇಳುತ್ತದೆ:

“ಅತಿವೇಗದ ಓಟಗಾರನಿಗೆ ಓಟದಲ್ಲಿ ಯಾವಾಗಲೂ ಗೆಲುವಾಗದು, ಬಲಿಷ್ಠವಾದ ಸೈನ್ಯಕ್ಕೆ ಯುದ್ಧದಲ್ಲಿ ಯಾವಾಗಲೂ ಜಯವಾಗದು, ಜ್ಞಾನಿಗೆ ಯಾವಾಗಲೂ ಆಹಾರ ದೊರಕದು, ಜಾಣನಿಗೆ ಯಾವಾಗಲೂ ಐಶ್ವರ್ಯ ದೊರೆಯದು, ಪ್ರವೀಣರಿಗೆ ಯಾವಾಗಲೂ ಹೊಗಳಿಕೆ ಬಾರದು, ಸಮಯ ಬಂದಾಗ ಪ್ರತಿಯೊಬ್ಬರಿಗೂ ಕೇಡುಗಳಾಗುತ್ತವೆ.”—ಪ್ರಸಂಗಿ 9:11. (ಪರಿಶುದ್ಧ ಬೈಬಲ್‌ ಭಾಷಾಂತರ)

ನಿಮ್ಮ ಜೀವನದಲ್ಲಿಯೂ ದುರಂತಗಳು ಬರುತ್ತಾ ಬರಲ್ವಾ ಅನ್ನೋದು ಮುಖ್ಯ ಅಲ್ಲ. ಒಂದುವೇಳೆ ಅವುಗಳು ಬರುವುದಾದರೆ ಹೇಗೆ ನಿಭಾಯಿಸಬಹುದು ಅನ್ನೋದೇ ಮುಖ್ಯ. ಉದಾಹರಣೆಗೆ, ಈ ಕೆಳಗಿನ ಸನ್ನಿವೇಶಗಳು ಎದುರಾದರೆ ಏನು ಮಾಡಬಹುದು?

  • ನೈಸರ್ಗಿಕ ವಿಪತ್ತು ಸಂಭವಿಸಿ ಎಲ್ಲವನ್ನೂ ಕಳೆದುಕೊಂಡಾಗ . . .?

  • ಜೀವಕ್ಕೇ ಕುತ್ತು ತರುವಂಥ ಕಾಯಿಲೆ ಬಂದಾಗ . . .?

  • ತುಂಬಾ ಪ್ರೀತಿಸುವ ಯಾರಾದರೊಬ್ಬರು ತೀರಿಕೊಂಡಾಗ . . .?

ದುರಂತಗಳು ಸಂಭವಿಸಿದಾಗ ಅವನ್ನು ನಿಭಾಯಿಸಲು ಬೈಬಲ್‌ ಸಹಾಯ ಮಾಡುತ್ತದೆ, ಮಾತ್ರವಲ್ಲದೆ ಒಳ್ಳೇ ವಿಷಯಗಳು ಸಂಭವಿಸಲಿವೆ ಎಂಬ ನಿರೀಕ್ಷೆಯನ್ನು ಸಹ ಕೊಡುತ್ತದೆ ಎನ್ನುವುದನ್ನು ಈ ಪತ್ರಿಕೆಯ ಪ್ರಕಾಶಕರಾದ ಯೆಹೋವನ ಸಾಕ್ಷಿಗಳು ಕಂಡುಕೊಂಡಿದ್ದಾರೆ. (ರೋಮನ್ನರಿಗೆ 15:4) ದುರಂತ ಸಂಭವಿಸಿದಾಗ ಅದನ್ನು ಎದುರಿಸಲು ಬೈಬಲ್‌ ಹೇಗೆ ಸಹಾಯ ಮಾಡಿತೆಂದು ತೋರಿಸುವ ಮೂವರ ಅನುಭವಗಳನ್ನು ಮುಂದೆ ಓದಿ. (g14-E 07)