ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಕೆ ಜೀವಿತದಲ್ಲಿ ಒಂದು ಉದ್ದೇಶವನ್ನು ಕಂಡುಕೊಂಡಳು

ಆಕೆ ಜೀವಿತದಲ್ಲಿ ಒಂದು ಉದ್ದೇಶವನ್ನು ಕಂಡುಕೊಂಡಳು

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಆಕೆ ಜೀವಿತದಲ್ಲಿ ಒಂದು ಉದ್ದೇಶವನ್ನು ಕಂಡುಕೊಂಡಳು

 ತಾನು ತನ್ನ ಕುರಿಗಳನ್ನು ಬಲೆನ್ಲೆಂದು ಯೇಸು ಹೇಳುತ್ತಾನೆ. (ಯೋಹಾನ 10:14) ಒಬ್ಬ ವ್ಯಕ್ತಿಯಲ್ಲಿ ಒಂದು ಉತ್ತಮ ಹೃದಯ ಮತ್ತು ಶಾಂತಿ ಮತ್ತು ನೀತಿಗಾಗಿ ಪ್ರೇಮವಿರುವಲ್ಲಿ, ಆ ವ್ಯಕ್ತಿ ಯೇಸುವಿನ ಅನುಯಾಯಿಗಳ ಕಡೆಗೆ ಆಕರ್ಷಿಸಲ್ಪಡುತ್ತಾನೆ. ಅಂತಹ ವ್ಯಕ್ತಿ, ಬೆಲ್ಚಿಯಮಿನ ಒಬ್ಬ ಸ್ತ್ರೀಯಂತೆ, ಜೀವನದಲ್ಲಿ ಒಂದು ಉದ್ದೇಶವನ್ನು ಕಂಡುಕೊಳ್ಳುವನು. ಇದು ಆ ಸ್ತ್ರೀಯ ಕಥೆ:

“ಯೆಹೋವನ ಸಾಕ್ಷಿಗಳು ನನ್ನ ಬಾಗಲನ್ನು ತಟ್ಟಿದಾಗ, ನಾನು ತೀರಾ ಖಿನ್ನಳಾಗಿದ್ದೆ, ಮತ್ತು ನನ್ನ ಜೀವವನ್ನು ಮುಗಿಸಿ ಬಿಡಬೇಕೆಂದು ಯೋಚಿಸುತ್ತಿದ್ದೆ. ಈ ರೋಗಾವಸ್ಥೆಯಲ್ಲಿರುವ ಲೋಕದ ಸಮಸ್ಯೆಗಳ ಪರಿಹಾರದ ವಿಷಯ ಸಾಕ್ಷಿಗಳು ಹೇಳಿದ್ದು ನನಗೆ ಇಷ್ಟವಾದರೂ, ದೇವರಿಗೆ ಇದರಲ್ಲಿ ಒಂದು ಪಾತ್ರವಿದೆ ಎಂಬ ವಿಚಾರ ನನಗೆ ಇಷ್ಟವಾಗಲಿಲ್ಲ. ಚರ್ಚ್‌ನಲ್ಲಿ ನಾನು ನೋಡಿದ ಕಪಟಾಚಾರವನ್ನು ನಾನು ದ್ವೇಷಿಸಿದರ್ದಿಂದ, ಎಂಟು ವರ್ಷಗಳಿಗೆ ಹಿಂದೆ ಅಲ್ಲಿಗೆ ಹೋಗುವುದನ್ನು ನಾನು ನಿಲ್ಲಿಸಿದ್ದೆ. ಆದರೆ ಸಾಕ್ಷಿಗಳ ವಿಷಯಲ್ಲಾದರೋ, ಅವರ ಮಾತುಗಳಲ್ಲಿ ಸತ್ಯದ ನಾದವನ್ನು ನಾನು ಗುರುತಿಸಿ, ಎಷ್ಟೆಂದರೂ ದೇವರಿಲ್ಲದೆ ಜೀವಿಸುವುದು ಕಷ್ಟವೇ ಎಂದು ಗ್ರಹಿಸಿದೆ.

“ವಿಷಾದಕರವಾಗಿ, ಕೆಲವೇ ಸಂದರ್ಶನಗಳ ಬಳಿಕ ಸಾಕ್ಷಿಗಳ ಸಂಪರ್ಕ ನಷ್ಟವಾಯಿತು. ನಾನು ದುಃಖಾರ್ತಳಾದೆ. ನಾನು ದಿನಕ್ಕೆ ಎರಡು ಪ್ಯಾಕೆಟ್‌ ಸಿಗರೇಟುಗಳನ್ನು ಸೇದಿ, ಮಾದಕ ದ್ರವ್ಯಗಳ ಉಪಯೋಗವನ್ನೂ ಆರಂಭಿಸಿದೆ. ಸತ್ತು ಹೋಗಿದ್ದ ನನ್ನ ಅಜ್ಜನೊಂದಿಗೆ ಸಂಪರ್ಕ ಬೆಳೆಸಲು ಬಯಸಿ, ನಾನು ಪ್ರೇತ ವ್ಯವಹಾರದಲ್ಲಿ ಕೈ ಹಾಕಿದೆ. ಇದರ ಪರಿಣಾಮವಾಗಿ, ನಾನು ರಾತ್ರಿ ಒಬ್ಬಳಾಗಿದ್ದಾಗ ದೆವ್ವಾಕ್ರಮಣಗಳನ್ನು ಅನುಭವಿಸಿದಾಗ ನಾನೆಷ್ಟು ಭಯಭೀತಳಾದೆ! ಇದು ಅನೇಕ ತಿಂಗಳು ನಡೆಯಿತು. ಪ್ರತಿ ಸಾಯಂಕಾಲ, ನಾನು ಒಬ್ಬಂಟಿಗಳಾಗಿರುವ ವಿಚಾರವೇ ನನಗೆ ತೀರಾ ಭಯಹುಟ್ಟಿಸಿತು.

“ಬಳಿಕ ಒಂದು ದಿನ, ನಾನು ಗಾಳಿ ಸಂಚಾರಕ್ಕೆ ಹೋದೆ. ಹೋಗುವಾಗ ವಾಡಿಕೆಯ ಹಾದಿ ಬಿಟ್ಟು ಭಿನ್ನವಾದ ಹಾದಿಯಲ್ಲಿ ಹೋಗಲಾಗಿ ನಾನೊಂದು ದೊಡ್ಡ ಕಟ್ಟಡದ ನಿವೇಶನಕ್ಕೆ ಬಂದೆ. ತೀರಾ ಅನಿರೀಕ್ಷಿತವಾಗಿ ನಾನು ಅಲ್ಲಿ ಒಂದು ದೊಡ್ಡ ಸಮೂಹವನ್ನು ಕಂಡೆ. ಹತ್ತಿರ ಬರಲಾಗಿ, ಅದು ಒಂದು ರಾಜ್ಯ ಸಭಾಗೃಹವನ್ನು ಕಟ್ಟುತ್ತಲಿರುವ ಯೆಹೋವನ ಸಾಕ್ಷಿಗಳೆಂದು ನಾನು ತಿಳಿದೆ. ಸಾಕ್ಷಿಗಳು ನನ್ನ ಮನೆಗೆ ಮಾಡಿದ್ದ ಭೇಟಿಗಳನ್ನು ನಾನು ನೆನಸಿದೆ, ಮತ್ತು ಈ ಜನರು ಜೀವಿಸುವಂತೆ ಇಡೀ ಲೋಕವೇ ಜೀವಿಸುವಲ್ಲಿ ಅದೆಂಥ ಸೋಜಿಗದ ವಿಷಯವಾಗಿದ್ದೀತು ಎಂದು ಯೋಚಿಸಿದೆ.

“ಈ ಸಾಕ್ಷಿಗಳು ನನ್ನ ಮನೆಗೆ ಬರಬೇಕೆಂದು ನಾನು ನಿಜವಾಗಿಯೂ ಅಪೇಕ್ಷಿಸಿದ ಕಾರಣ ಆ ಸಭಾಗೃಹದ ಕೆಲಸ ಮಾಡುತ್ತಿದ್ದ ಕೆಲವರೊಡನೆ ಮಾತಾಡಿದೆ. ನಾನು ದೇವರನ್ನು ಪ್ರಾರ್ಥಿಸಿದೆ, ಮತ್ತು ಹತ್ತು ದಿನಗಳ ಬಳಿಕ ನನ್ನನ್ನು ಮೊದಲಾಗಿ ಸಂಪರ್ಕಿಸಿದ್ದ ಮನುಷ್ಯನು ನನ್ನ ಬಾಗಲಿಗೆ ಬಂದನು. ನಾವು ಬೈಬಲ್‌ ಅಧ್ಯಯನವನ್ನು ಮುಂದುವರಿಸುವರೆ ಅವನು ಸೂಚಿಸಲಾಗಿ, ನಾನು ಸಂತೋಷದಿಂದ ಒಪ್ಪಿದೆ. ಅವನು ತಡ ಮಾಡದೆ ನನ್ನನ್ನು ರಾಜ್ಯ ಸಭಾಗೃಹದ ಕೂಟಗಳಿಗೆ ಆಮಂತ್ರಿಸಲಾಗಿ ನಾನು ಅದನ್ನು ಅಂಗೀಕರಿಸಿದೆ. ಅಂಥ ದೃಶ್ಯವನ್ನು ನಾನೆಂದೂ ಕಂಡದ್ದಿಲ್ಲ! ಒಬ್ಬರನ್ನೊಬ್ಬರು ಪ್ರೀತಿಸುವ ಮತ್ತು ಸಂತುಷ್ಟರಾಗಿರುವ ಜನರನ್ನು ನಾನು ದೀರ್ಘಕಾಲದಿಂದ ಹುಡುಕುತ್ತಿದ್ದೆ. ಮತ್ತು ಕಟ್ಟಕಡೆಗೆ ಅವರು ಇಲ್ಲಿ ಸಿಕ್ಕಿದರು!

“ಆ ತರುವಾಯ ನಾನು ಎಲ್ಲ ಕೂಟಗಳಿಗೆ ಹೋದೆ. ಸುಮಾರು ಮೂರು ವಾರಗಳ ಬಳಿಕ, ಧೂಮಪಾನದ ಕೆಟ್ಟ ಅಭ್ಯಾಸವನ್ನು ನಾನು ನಿಲ್ಲಿಸಿದೆ. ಜ್ಯೋತಿಷ ಸಂಬಂಧವಾದ ಪುಸ್ತಕಗಳು ಮತ್ತು ಸೈತಾನಸಂಬಂಧಿತ ಗೀತದ ರೆಕಾರ್ಡುಗಳನ್ನು ನಾನು ಬಿಸಾಡಿದೆ, ಮತ್ತು ದೆವ್ವಗಳ ಬಿಗಿಮುಷ್ಟಿ ಸಡಿಲವಾಗುವ ಅನುಭವ ನನಗಾಗತೊಡಗಿತು. ನಾನು ನನ್ನ ಜೀವನವನ್ನು ಯೆಹೋವನ ಬೈಬಲ್‌ ಮಟ್ಟಕ್ಕನುಸಾರ ಕ್ರಮಪಡಿಸಿ, ಮೂರು ತಿಂಗಳುಗಳ ತರುವಾಯ ಸುವಾರ್ತೆಯನ್ನು ಸಾರಲು ತೊಡಗಿದೆ. ಆರು ತಿಂಗಳುಗಳ ಬಳಿಕ ನಾನು ದೀಕ್ಷಾಸ್ನಾನ ಹೊಂದಿದೆ. ನನ್ನ ದೀಕ್ಷಾಸ್ನಾನವಾಗಿ ಎರಡು ದಿನಗಳಾನಂತರ, ನಾನು ಆಕ್ಸಿಲಿಯರಿ ಪಯನೀಯರ್‌ ಸೇವೆಗೆ ತೊಡಗಿದೆ.

“ಯೆಹೋವನು ನನಗಾಗಿ ಮಾಡಿರುವ ಸಕಲ ಸದ್ವಿಷಯಗಳಿಗೆ ನಾನು ಆಭಾರಿ. ಕಟ್ಟಕಡೆಗೆ ನನ್ನ ಜೀವಿತದಲ್ಲಿ ಒಂದು ಉದ್ದೇಶವಿದೆ. ಹೌದು, ಯೆಹೋವನ ನಾಮವು, ನಾನು ಆಶ್ರಯವನ್ನೂ ರಕ್ಷಣೆಯನ್ನೂ ಪಡೆದಿರುವ ಒಂದು ಬಲವಾದ ಗೋಪುರ. (ಜ್ಞಾನೋಕ್ತಿ 18:10) ಕೀರ್ತನೆಗಾರನಿಗೆ ಕೀರ್ತನೆ 84:10 ನ್ನು ಬರೆದಾಗ ಅನಿಸಿದಂತೆ ನನಗೆ ನಿಜವಾಗಿಯೂ ಅನಿಸುತ್ತದೆ: “ನಿನ್ನ ಆಲಯದ ಅಂಗಳಗಳಲ್ಲಿ ಕಳೆದ ಒಂದು ದಿನವು ಬೇರೆ ಸಹಸ್ರ ದಿನಗಳಿಗಿಂತ ಉತ್ತಮವಾಗಿದೆ. ದುಷ್ಟರ ಗುಡಾರಗಳಲ್ಲಿ ವಾಸಿಸುವದಕ್ಕಿಂತ ನನ್ನ ದೇವರ ಆಲಯದ ಹೊಸ್ತಿಲಲ್ಲಿ ಬಿದ್ದುಕೊಂಡಿರುವದೇ ಲೇಸು.”

ಈ ನಮ್ರಹೃದಯಿಯಾದ ಸ್ತ್ರೀ, ಜೀವಿತದಲ್ಲಿ ಒಂದು ಉದ್ದೇಶವನ್ನು ಕಂಡುಕೊಂಡಳು. ಸಹೃದಯದಿಂದ ಯೆಹೋವನನ್ನು ಹುಡುಕುವ ಯಾವನೂ ಇದನ್ನು ಕಂಡುಕೊಳ್ಳಬಲ್ಲನು.