ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಾಡಿಹೋಗದ ಒಂದು ಸೌಂದರ್ಯ

ಬಾಡಿಹೋಗದ ಒಂದು ಸೌಂದರ್ಯ

ಬಾಡಿಹೋಗದ ಒಂದು ಸೌಂದರ್ಯ

 “ಸೌಂದರ್ಯ ಮಾಯವಾಗುತ್ತದೆ; ಸೌಂದರ್ಯ ದಾಟಿಹೋಗುತ್ತದೆ,” ಎಂದು ಅವಲೋಕಿಸಿದನು ಕವಿ ವಾಲರ್ಟ್‌ ಡಿ ಲ ಮೇರ್‌. ಇಲ್ಲಿ ಚಿತ್ರಿಸಿದ ಶೋಭಾಯಮಾನ ಕಳ್ಳಿ ಗಿಡದ ಹೂವುಗಳ ವಿಷಯದಲ್ಲಿ ಅದು ಖಂಡಿತವಾಗಿಯೂ ಸತ್ಯ. ಅವುಗಳ ಶೋಭೆಯು ಬೇಗನೆ ಬಾಡಿಹೋಗುತ್ತದೆ.

ಕ್ರೈಸ್ತ ಶಿಷ್ಯನಾದ ಯಾಕೋಬನು ಬರೆದದ್ದು: “ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸಿಹೋಗುವನು. ಸೂರ್ಯನು ಉದಯಿಸಿ ಉಷ್ಣವಾದ ಗಾಳಿ ಬೀಸಿ ಆ ಹುಲ್ಲನ್ನು ಬಾಡಿಸಲು ಆ ಹುಲ್ಲಿನ ಹೂವು ಉದುರಿ ಅದರ ರೂಪದ ಸೊಗಸು ಕೆಡುವದಷ್ಟೆ. ಹೀಗೆ ಐಶ್ಚರ್ಯವಂತನು ತನ್ನ ವ್ಯವಹಾರಗಳಲ್ಲಿಯೇ ಕುಂದಿಹೋಗುವನು.”—ಯಾಕೋಬ 1:10, 11.

ಈ ಅಸ್ಥಿರ ಲೋಕದಲ್ಲಿ, ಐಶ್ಚರ್ಯವು ನಿಶ್ಚಯವಾಗಿಯೂ ಒಂದೇ ರಾತ್ರಿಯೊಳಗೆ ಮಾಯವಾಗಿ ಹೋಗಬಲ್ಲದು. ಅದಲ್ಲದೆ, ಐಶ್ವರ್ಯವಂತನು—ಬೇರೆ ಪ್ರತಿಯೊಬ್ಬನಂತೆ—‘ಹೂವಿನ ಹಾಗೆ ಅಲ್ಪಾಯುಷ್ಯನಾಗಿ’ ಇರುವನು. (ಯೋಬ 14:1, 2) ವಿಶ್ರಾಮವಾಗಿ ಮತ್ತು ನಿಶ್ಚಿಂತೆಯಿಂದ ಕೂತು ಜೀವನ ನಡಿಸಲಾಗುವಂತೆ ಐಶ್ವರ್ಯವನ್ನು ಒಟ್ಟುಗೂಡಿಸುವುದರಲ್ಲಿ ಕಾರ್ಯತತ್ಪರನಾಗಿದ್ದ ಒಬ್ಬ ಮನುಷ್ಯನ ಸಾಮ್ಯವನ್ನು ಯೇಸು ಕೊಟ್ಟನು. ಆದರೆ ಸುಖಭೋಗಕ್ಕೆ ಬೇಕಾದ ಎಲ್ಲವೂ ತನಗಿದೆ ಎಂದು ಅವನು ನೆನಸಿದಾಗ, ಅವನು ಸತ್ತನು. ಯೇಸು ಎಚ್ಚರಿಸಿದ್ದು: “ತನಗಾಗಿ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.”—ಲೂಕ 12:16-21.

“ದೇವರ ವಿಷಯಗಳಲ್ಲಿ ಐಶ್ವರ್ಯವಂತ” ನು. ಅದರಿಂದ ಯೇಸು ಅರ್ಥೈಸಿದ್ದೇನು? ಈ ರೀತಿಯಲ್ಲಿ ಐಶ್ವರ್ಯವಂತನಾದ ಮನುಷ್ಯನಿಗೆ “ಪರಲೋಕದಲ್ಲಿ ಗಂಟು [ನಿಕ್ಷೇಪ, NW]”—ದೇವರೊಂದಿಗೆ ಒಳ್ಳೇ ಹೆಸರು ಇರುತ್ತದೆ. ಅಂಥವನ ನಿಕ್ಷೇಪ ಎಂದೂ ಬಾಡಿಹೋಗುವ ಅಗತ್ಯವಿಲ್ಲ. (ಮತ್ತಾಯ 6:20; ಇಬ್ರಿಯ 6:10) ಬಾಡಿಹೋಗುವ ಹೂವಿನಂತೆ ಇರುವ ಬದಲಾಗಿ, ಅಂಥ ಮನುಷ್ಯನು ಬೈಬಲಿನಲ್ಲಿ ಬಾಡಿಹೋಗದ ಎಲೆಗಳಿರುವ ಒಂದು ಮರಕ್ಕೆ ಹೋಲಿಸಲ್ಪಟ್ಟಿದ್ದಾನೆ. ಮತ್ತು “ಅವನ ಕಾರ್ಯವೆಲ್ಲವು ಸಫಲವಾಗುವದು” ಎಂಬ ಆಶ್ವಾಸನೆಯು ನಮಗೆ ಕೊಡಲ್ಪಟ್ಟಿದೆ.—ಕೀರ್ತನೆ 1:1-3, 6.  (w93 7/1)