ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ವಿತರಣೆಯ ಒಂದು ಅದ್ವಿತೀಯ ವರ್ಷ

ಬೈಬಲ್‌ ವಿತರಣೆಯ ಒಂದು ಅದ್ವಿತೀಯ ವರ್ಷ

ಬೈಬಲ್‌ ವಿತರಣೆಯ ಒಂದು ಅದ್ವಿತೀಯ ವರ್ಷ

ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಅಧಿಕಾಂಶ ಜನರ ಬಳಿ ಬೈಬಲ್‌ ಇದೆ. ಹೀಗೆಂದು ಯುನೈಟೆಡ್‌ ಬೈಬಲ್‌ ಸೊಸೈಟಿಗಳಿಂದ ಬಂದ ವರದಿಯು ತಿಳಿಸುತ್ತದೆ. ಏಕೆಂದರೆ, 1997ಕ್ಕೆ ಹೋಲಿಸುವಾಗ 1998ರಲ್ಲಿನ ಬೈಬಲ್‌ ವಿತರಣೆಯು ಐದು ಲಕ್ಷಕ್ಕಿಂತಲೂ ಹೆಚ್ಚಾಗಿತ್ತು. ಅಷ್ಟುಮಾತ್ರವಲ್ಲದೆ, 58,50,00,000 ಬೈಬಲುಗಳು—ಇಡೀ ಅಥವಾ ಅದರ ಭಾಗವು—ಭೂಮ್ಯಾದ್ಯಂತ ವಿತರಿಸಲ್ಪಟ್ಟವು. “ಇದು ಒಂದು ರೀತಿಯಲ್ಲಿ ಉತ್ತೇಜನವನ್ನು ನೀಡುವಂತಹದ್ದಾಗಿದೆ. ಏಕೆಂದರೆ ಇಂದು ದೇವರ ವಾಕ್ಯವು ಅನೇಕ ಜನರನ್ನು ತಲಪುತ್ತಿದೆ” ಎಂದು ಆ ವರದಿಯು ತಿಳಿಸಿತು.

ಬೈಬಲನ್ನು ಹೊಂದಿರುವುದು ಮತ್ತು ಅದನ್ನು ಓದುವುದರ ನಡುವೆ ಬಹಳಷ್ಟು ಅಂತರವಿದೆ ಎಂಬುದು ಸತ್ಯವೇ. ಉದಾಹರಣೆಗೆ, ಅಮೆರಿಕನರಲ್ಲಿ 90 ಪ್ರತಿಶತಕ್ಕಿಂತಲೂ ಹೆಚ್ಚಿನ ಜನರು ಕಡಿಮೆ ಪಕ್ಷ ಒಂದು ಬೈಬಲನ್ನು ಹೊಂದಿದ್ದಾರೆ ಮತ್ತು ಇದು ನೈತಿಕ ಶಿಕ್ಷಣದ ಒಂದು ಒಳ್ಳೆಯ ಮೂಲವಾಗಿದೆ ಎಂದು ಇಷ್ಟೇ ಪ್ರತಿಶತವು ನಂಬುತ್ತದೆ ಎಂದು ಒಂದು ಸಮೀಕ್ಷೆಯು ಪ್ರಕಟಿಸಿತು. ಆದರೆ, ತಾವು ಬುದ್ಧಿವಾದಕ್ಕಾಗಿ ಬೈಬಲಿಗೆ ಮೊರೆಹೋಗುತ್ತೇವೆ ಎಂದು 59 ಪ್ರತಿಶತದಷ್ಟು ಜನರು ಮಾತ್ರ ಹೇಳಿದರು. ಮತ್ತು 29 ಪ್ರತಿಶತದಷ್ಟು ಜನರು ತಾವು ಬೈಬಲಿನೊಂದಿಗೆ “ಅಷ್ಟೇನೂ” ಪರಿಚಿತರಾಗಿಲ್ಲ ಅಥವಾ ಪರಿಚಿತರಾಗಿಯೇ “ಇಲ್ಲ” ಎಂಬುದನ್ನು ಒಪ್ಪಿಕೊಂಡರು.

ಯೆಹೋವನ ಸಾಕ್ಷಿಗಳು ಬೈಬಲುಗಳನ್ನು ಮುದ್ರಿಸಿ, ವಿತರಿಸುತ್ತಾರೆ ಮಾತ್ರವಲ್ಲ, 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಜನರೊಂದಿಗೆ ಉಚಿತ ಗೃಹ ಬೈಬಲ್‌ ಅಭ್ಯಾಸಗಳನ್ನು ನಡೆಸುತ್ತಾರೆ. ಲೋಕವ್ಯಾಪಕವಾಗಿ ಕೋಟ್ಯಂತರ ಜನರು ಈ ಬೈಬಲಿನ ಶೈಕ್ಷಣಿಕ ಕಾರ್ಯಕ್ರಮದಿಂದ ಈಗ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಹೇಗೆ ನಿಭಾಯಿಸಬಹುದು ಎಂಬುದರ ಕುರಿತಾಗಿ ಅವರಿಗೆ ಸಹಾಯವು ನೀಡಲ್ಪಡುತ್ತಿದೆ ಮತ್ತು ದೇವರ ರಾಜ್ಯದಲ್ಲಿನ ಒಂದು ಉಜ್ವಲ ಭವಿಷ್ಯತ್ತಿನ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂಬುದನ್ನು ಅವರು ಕಲಿತುಕೊಳ್ಳುತ್ತಿದ್ದಾರೆ.—ಯೆಶಾಯ 48:17, 18; ಮತ್ತಾಯ 6:9, 10.

[ಪುಟ 32ರಲ್ಲಿರುವ ಚಿತ್ರಗಳು]

ಬೊಲಿವಿಯ, ಘಾನ, ಶ್ರೀಲಂಕ, ಮತ್ತು ಇಂಗ್ಲೆಂಡ್‌ ದೇಶಗಳಲ್ಲಿ (ಮೇಲಿಂದ ಕೆಳಕ್ಕೆ ಪ್ರದಕ್ಷಿಣವಾಗಿ) ಗೃಹ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿರುವುದು