ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ಉಂಗುರಗಳನ್ನು ಪುನಃ ಧರಿಸಿಕೊಳ್ಳುವಂತೆ ಅದು ಸಾಧ್ಯಮಾಡಿತು

ಅವರು ಉಂಗುರಗಳನ್ನು ಪುನಃ ಧರಿಸಿಕೊಳ್ಳುವಂತೆ ಅದು ಸಾಧ್ಯಮಾಡಿತು

ಅವರು ಉಂಗುರಗಳನ್ನು ಪುನಃ ಧರಿಸಿಕೊಳ್ಳುವಂತೆ ಅದು ಸಾಧ್ಯಮಾಡಿತು

“ನನ್ನ ಬೆರಳುಗಳನ್ನು ನೋಡಿ. ನಿಮಗೆ ಏನಾದರೂ ವ್ಯತ್ಯಾಸವಿರುವುದು ಕಾಣುತ್ತದೋ?” ಹೀಗೆಂದು ಒಬ್ಬ ವ್ಯಕ್ತಿಯು, ಯೆಹೋವನ ಸಾಕ್ಷಿಯಾಗಿದ್ದ ಒಬ್ಬ ಸ್ತ್ರೀಗೆ ತನ್ನ ಕೈಯನ್ನು ತೋರಿಸುತ್ತಾ ಕೇಳಿದನು. ಅವಳು ಅದನ್ನು ನೋಡುತ್ತಲೇ ಅವನ ಮದುವೆಯ ಉಂಗುರವು ಬೆರಳಿನಲ್ಲಿ ಇಲ್ಲದಿರುವುದನ್ನು ತಕ್ಷಣ ಗಮನಿಸಿದಳು. ಅವನು ಮತ್ತು ಅವನ ಹೆಂಡತಿಯು ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗಲು ಸಾಧ್ಯವಾಗದೇ ಇದ್ದ ಕಾರಣ, ಅವರು ವಿವಾಹ ವಿಚ್ಛೇದವನ್ನು ಪಡೆಯಲು ನಿರ್ಧರಿಸಿದ್ದಾರೆಂದು ಅವನು ವಿವರಿಸಿದನು. ಸಾಕ್ಷಿಯು ಅವನಿಗೆ “ಹಾಗೆ ಮಾಡಬೇಡಿ!” ಎಂದು ಹೇಳಿದಳು. “ಈ ಪುಸ್ತಕವನ್ನು ತೆಗೆದುಕೊಂಡು ಅದನ್ನು ಓದಿರಿ. ನಿಮ್ಮ ವೈವಾಹಿಕ ಜೀವನವನ್ನು ಉತ್ತಮಗೊಳಿಸಲು ಇದು ನಿಮಗೆ ಸಹಾಯಮಾಡುವುದು” ಎಂದು ಹೇಳುತ್ತಾ, ನಿತ್ಯ ಜೀವಕ್ಕೆ ನಡೆಸುವ ಜ್ಞಾನ ಎಂಬ ಬೈಬಲ್‌ ಆಧಾರಿತ ಪುಸ್ತಕದ ಒಂದು ಪ್ರತಿಯನ್ನು ಅವನಿಗೆ ಕೊಟ್ಟಳು. *

ಕೆಲವು ದಿನಗಳ ನಂತರ, ಆ ವ್ಯಕ್ತಿಯು ಬಲು ಸಂತೋಷದಿಂದ ಸಾಕ್ಷಿಯ ಬಳಿಗೆ ಹಿಂದಿರುಗಿ ಬಂದನು. ಅವನು ತನ್ನ ಕೈಯನ್ನು ಅವಳಿಗೆ ತೋರಿಸಿದನು. ಆದರೆ, ಈ ಸಲ ಅವನು ತನ್ನ ಬೆರಳಿನಲ್ಲಿ ಮದುವೆಯ ಉಂಗುರವನ್ನು ಧರಿಸಿಕೊಂಡಿದ್ದನು. ತಾನು ಮತ್ತು ತನ್ನ ಹೆಂಡತಿಯು ಜ್ಞಾನ ಪುಸ್ತಕವನ್ನು ಓದಿದೆವೆಂದೂ ಮತ್ತು ಈಗ ತಾವಿಬ್ಬರೂ ಬಹಳ ಸಂತೋಷದಿಂದಿದ್ದೇವೆಂದು ಅವನು ಅವಳಿಗೆ ಹೇಳಿದನು. ಆ ಪುಸ್ತಕವು ಅಕ್ಷರಶಃ ತಮ್ಮ ಬೆರಳುಗಳಿಗೆ ಉಂಗುರಗಳನ್ನು ಪುನಃ ಧರಿಸಿಕೊಳ್ಳುವಂತೆ ಸಾಧ್ಯಮಾಡಿತು.

ಗಂಡ ಮತ್ತು ಹೆಂಡತಿಯು ಒಬ್ಬರಿಗೊಬ್ಬರು ನಿಜವಾದ ಪ್ರೀತಿಯನ್ನು ತೋರಿಸುವಂತೆ ಬೈಬಲ್‌ ಸಲಹೆಯು ಸಹಾಯಮಾಡಸಾಧ್ಯವಿದೆ. ಇದಕ್ಕೆ ಕಾರಣವೇನೆಂದರೆ, ಬೈಬಲಿನ ಗ್ರಂಥಕರ್ತನು ನಮ್ಮ ಸೃಷ್ಟಿಕರ್ತನೇ ಹೊರತು ಬೇರೆ ಯಾರೂ ಅಲ್ಲ. ಆತನು ಹೀಗೆ ಹೇಳುತ್ತಾನೆ: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಯೆಶಾಯ 48:17.

[ಪಾದಟಿಪ್ಪಣಿಗಳು]

^ ಪ್ಯಾರ. 2 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ.