ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನ್ಯೂ ಯಾರ್ಕ್‌ ಸಿಟಿಯಲ್ಲಿ ವಾಸಿಸದಿರುವುದರಿಂದ ಅವಳು ಏನನ್ನು ನೋಡಲು ಹಾತೊರೆಯುತ್ತಾಳೆ?

ನ್ಯೂ ಯಾರ್ಕ್‌ ಸಿಟಿಯಲ್ಲಿ ವಾಸಿಸದಿರುವುದರಿಂದ ಅವಳು ಏನನ್ನು ನೋಡಲು ಹಾತೊರೆಯುತ್ತಾಳೆ?

ನ್ಯೂ ಯಾರ್ಕ್‌ ಸಿಟಿಯಲ್ಲಿ ವಾಸಿಸದಿರುವುದರಿಂದ ಅವಳು ಏನನ್ನು ನೋಡಲು ಹಾತೊರೆಯುತ್ತಾಳೆ?

ಈ ಮೇಲಿನ ಸೂಚನಾಫಲಕವು, ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ವಾಚ್‌ಟವರ್‌ ಸೊಸೈಟಿಯ ಫ್ಯಾಕ್ಟರಿ ಕಟ್ಟಡಗಳಲ್ಲೊಂದರ ಮೇಲೆ, 1950ಗಳಿಂದ ಎದ್ದುಕಾಣುವ ರೀತಿಯಲ್ಲಿ ಪ್ರದರ್ಶಿಸಲ್ಪಟ್ಟಿದೆ. ಆ ಮಾರ್ಗದಿಂದ ಹಾದುಹೋಗುವ ಪ್ರಯಾಣಿಕರು, ಪ್ರವಾಸಿಗರು ಮತ್ತು ಇತರರು, ಪ್ರತಿದಿನವೂ ಬೈಬಲನ್ನು ಓದುವಂತೆ ಜ್ಞಾಪಿಸಲ್ಪಡುತ್ತಾರೆ. ಈ ಮರುಜ್ಞಾಪನವು ಎಷ್ಟು ಪ್ರಭಾವಕಾರಿಯಾಗಿದೆ ಎಂಬುದನ್ನು ಸಾಕ್ಷಿ ಹುಡುಗಿಯೊಬ್ಬಳಿಂದ ಬಂದ ಈ ಕೆಳಗಿನ ಪತ್ರವು ತೋರಿಸುತ್ತದೆ.

“ಪ್ರೌಢ ಶಾಲೆಯಿಂದ ಉತ್ತೀರ್ಣಳಾದ ಬಳಿಕ ನಾನು ಏನು ಮಾಡಲಿಚ್ಛಿಸುತ್ತೇನೆಂಬುದರ ಬಗ್ಗೆ ನನ್ನ ಸಹಪಾಠಿಯೊಬ್ಬಳೊಂದಿಗೆ ಮಾತಾಡುತ್ತಿದ್ದೆ. ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದ ಬಗ್ಗೆ, ಅಂದರೆ ಬೆತೆಲಿನ ಬಗ್ಗೆ ನಾನು ಮಾತಾಡಲಾರಂಭಿಸಿದಾಗ, ನನ್ನ ಸಹಪಾಠಿಯು ಉಲ್ಲಾಸಿತಳಾದಳು. ಹುಟ್ಟಿದಂದಿನಿಂದಲೂ ತಾನು ನ್ಯೂ ಯಾರ್ಕ್‌ ನಗರದಲ್ಲೇ ವಾಸಿಸುತ್ತಿದ್ದೆನೆಂದು ಅವಳು ನನಗೆ ಹೇಳಿದಳು. ಅವಳ ಕುಟುಂಬದವರು ಅಷ್ಟೇನೂ ಧಾರ್ಮಿಕ ಜನರಾಗಿರದಿದ್ದರೂ, ಪ್ರತಿದಿನ ಬೆಳಗ್ಗೆ ಅವಳು ಕಿಟಕಿಯಿಂದ ಹೊರಗೆ ನೋಡುತ್ತಿದ್ದಾಗ, ‘ದೇವರ ವಾಕ್ಯವಾದ ಪವಿತ್ರ ಬೈಬಲನ್ನು ಪ್ರತಿದಿನವೂ ಓದಿರಿ’ ಎಂಬ ಸೂಚನಾಫಲಕವು ಅವಳ ಕಣ್ಣಿಗೆ ಬೀಳುತ್ತಿತ್ತು. ಆದುದರಿಂದ ಅವಳು ಪ್ರತಿದಿನ ಸ್ಕೂಲಿಗೆ ಹೋಗುವ ಮೊದಲು ಬೈಬಲಿನ ಒಂದು ಭಾಗವನ್ನು ಓದುತ್ತಿದ್ದಳು.

“ನ್ಯೂ ಯಾರ್ಕ್‌ ಸಿಟಿಯಿಂದ ಈಗ ಅವಳು ಬೇರೆ ಕಡೆಗೆ ಸ್ಥಳಾಂತರಿಸಿದ್ದಾಳೆ. ಅವಳು ಅಲ್ಲಿ ವಾಸಿಸದಿರುವುದರಿಂದ, ತಾನು ಬೆಳಗ್ಗೆ ಎದ್ದ ತಕ್ಷಣ ತನ್ನ ಬೈಬಲನ್ನು ಓದುವ ಮರುಜ್ಞಾಪನವನ್ನೇ ನೋಡಲು ಹಾತೊರೆಯುತ್ತೇನೆಂದು ಪರಿತಪಿಸುತ್ತಾಳೆ. ಆದರೆ, ವಾಚ್‌ಟವರ್‌ ಕಟ್ಟಡದ ಮೇಲಿರುವ ಆ ಮರುಜ್ಞಾಪನವನ್ನು ಪದೇ ಪದೇ ನೋಡಿ, ಬೈಬಲ್‌ ಓದುವುದು ಅವಳಿಗೆ ರೂಢಿಯಾಗಿಬಿಟ್ಟಿದೆ. ಆದುದರಿಂದ, ಅವಳು ಈಗಲೂ ಬೈಬಲನ್ನು ಪ್ರತಿದಿನವೂ ಓದುತ್ತಾಳೆ!”

ದೇವರ ವಾಕ್ಯವನ್ನು ಓದುವ ಮೂಲಕ ದಿನವನ್ನು ಆರಂಭಿಸುವುದಕ್ಕಿಂತಲೂ ಉತ್ತಮವಾದ ಮಾರ್ಗ ಬೇರೊಂದು ಇರಸಾಧ್ಯವಿಲ್ಲ! ಹೀಗೆ ಮಾಡುವ ಮೂಲಕ, ಪವಿತ್ರ “ಗ್ರಂಥಗಳು ಕ್ರಿಸ್ತ ಯೇಸುವಿನಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಹೊಂದಿಸುವ ಜ್ಞಾನವನ್ನು ಕೊಡುವದಕ್ಕೆ ಶಕ್ತವಾಗಿವೆ” ಎಂಬ ಅಪೊಸ್ತಲ ಪೌಲನ ಮಾತುಗಳನ್ನು ನೀವು ಗಣ್ಯಮಾಡಲಾರಂಭಿಸುವಿರಿ ಎಂಬುದರಲ್ಲಿ ಸಂದೇಹವೇ ಇಲ್ಲ.—2 ತಿಮೊಥೆಯ 3:15-17.