ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ವಿಶೇಷ ಕಾರ್ಯಕ್ರಮ ನೀವು ಸಹ ಹಾಜರಿರುವಿರೊ?

ಒಂದು ವಿಶೇಷ ಕಾರ್ಯಕ್ರಮ ನೀವು ಸಹ ಹಾಜರಿರುವಿರೊ?

ಒಂದು ವಿಶೇಷ ಕಾರ್ಯಕ್ರಮ ನೀವು ಸಹ ಹಾಜರಿರುವಿರೊ?

ಸುಮಾರು 3,500 ವರ್ಷಗಳ ಹಿಂದೆ ಚಿರಸ್ಮರಣೀಯವಾದ ದಿನದಂದು, ಯೆಹೋವನು ಐಗುಪ್ತದಲ್ಲಿ ದಾಸತ್ವದಲ್ಲಿದ್ದ ಇಸ್ರಾಯೇಲ್ಯರ ಪ್ರತಿಯೊಂದು ಮನೆವಾರ್ತೆಗೆ ಒಂದು ಆಜ್ಞೆಯನ್ನು ಕೊಟ್ಟನು. ಅದೇನೆಂದರೆ, ಇಸ್ರಾಯೇಲ್ಯರು ಒಂದು ಕುರಿಯನ್ನು ಅಥವಾ ಒಂದು ಆಡನ್ನು ವಧಿಸಿ, ತಮ್ಮ ಮನೆಗಳ ನಿಲುವು ಪಟ್ಟಿಗಳ ಮೇಲೆ ಮತ್ತು ನಿಲುವು ಕಂಬಗಳ ಮೇಲೆ ಅದರ ರಕ್ತವನ್ನು ಚಿಮುಕಿಸಬೇಕಾಗಿತ್ತು. ಅದೇ ರಾತ್ರಿಯಂದು, ದೇವದೂತನು ಈ ರೀತಿಯಲ್ಲಿ ಗುರುತು ಹಾಕಲ್ಪಟ್ಟಿದ್ದ ಮನೆಗಳನ್ನು ದಾಟಿ ಮುಂದಕ್ಕೆ ಹೋದನು. ಆದರೆ ಐಗುಪ್ತ್ಯರ ಪ್ರತಿಯೊಂದು ಮನೆಯಲ್ಲಿದ್ದ ಚೊಚ್ಚಲು ಪುತ್ರರನ್ನು ವಧಿಸಿಬಿಟ್ಟನು. ತದನಂತರ ಇಸ್ರಾಯೇಲ್ಯರು ಬಿಡುಗಡೆಗೊಳಿಸಲ್ಪಟ್ಟರು. ಆ ಘಟನೆಯ ವಾರ್ಷಿಕೋತ್ಸವದಂದು ಯೆಹೂದ್ಯರು ಪಸ್ಕಹಬ್ಬವನ್ನು ಆಚರಿಸುತ್ತಿದ್ದಾರೆ.

ಯೇಸು ಕ್ರಿಸ್ತನು ತನ್ನ ಅಪೊಸ್ತಲರೊಂದಿಗೆ ಕೊನೆಯ ಪಸ್ಕಹಬ್ಬವನ್ನು ಆಚರಿಸಿ ಮುಗಿಸಿದ ಕೂಡಲೆ, ತನ್ನ ಯಜ್ಞಾರ್ಪಿತ ಮರಣವನ್ನು ಜ್ಞಾಪಕದಲ್ಲಿಡುವಂತೆ ಮಾಡುವ ಒಂದು ಭೋಜನವನ್ನು ಆರಂಭಿಸಿದನು. ಅವನು ತನ್ನ ಅಪೊಸ್ತಲರಿಗೆ ಹುಳಿಯಿಲ್ಲದ ರೊಟ್ಟಿಯನ್ನು ಕೊಡುತ್ತಾ, “ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಅಂದನು. ಆ ಬಳಿಕ ಅವನು ಅವರಿಗೆ ದ್ರಾಕ್ಷಾರಸವನ್ನು ಕೊಡುತ್ತಾ, “ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ; ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ” ಎಂದು ಹೇಳಿದನು. ಯೇಸು ಮತ್ತೂ ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” (ಮತ್ತಾಯ 26:26-28; ಲೂಕ 22:19, 20) ಹೀಗೆ, ತನ್ನ ಮರಣದ ಈ ಜ್ಞಾಪಕಾಚರಣೆಯನ್ನು ಆಚರಿಸುವಂತೆ ಯೇಸು ತನ್ನ ಹಿಂಬಾಲಕರಿಗೆ ಆಜ್ಞೆಯನ್ನಿತ್ತನು.

ಈ ವರ್ಷ ಯೇಸುವಿನ ಮರಣದ ವಾರ್ಷಿಕೋತ್ಸವವು, ಏಪ್ರಿಲ್‌ 19ರ ಬುಧವಾರದಂದು, ಸೂರ್ಯಾಸ್ತಮಾನದ ಬಳಿಕ ನಡೆಯುವುದು. ಯೇಸು ಕೇಳಿಕೊಂಡಂಥ ರೀತಿಯಲ್ಲಿ ಈ ಜ್ಞಾಪಕಾಚರಣೆಯನ್ನು ಆಚರಿಸಲಿಕ್ಕಾಗಿ, ಈ ವಿಶೇಷ ರಾತ್ರಿಯಂದು ಲೋಕದಾದ್ಯಂತ ಇರುವ ಯೆಹೋವನ ಸಾಕ್ಷಿಗಳು ಒಟ್ಟಾಗಿ ಕೂಡಿಬರುವರು. ಈ ಕಾರ್ಯಕ್ರಮದಲ್ಲಿ ನೀವು ಸಹ ನಮ್ಮೊಂದಿಗೆ ಭಾಗಿಯಾಗುವಂತೆ ನಾವು ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ನಿರ್ದಿಷ್ಟ ಸಮಯ ಹಾಗೂ ಕೂಡಿಬರುವ ಸ್ಥಳದ ಬಗ್ಗೆ ದಯವಿಟ್ಟು ಸ್ಥಳಿಕ ಯೆಹೋವನ ಸಾಕ್ಷಿಗಳ ಬಳಿ ವಿಚಾರಿಸಿರಿ.