ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷಕರ ಕುಟುಂಬ ಜೀವನವು ಇತರರನ್ನು ದೇವರ ಕಡೆಗೆ ಆಕರ್ಷಿಸುತ್ತದೆ

ಸಂತೋಷಕರ ಕುಟುಂಬ ಜೀವನವು ಇತರರನ್ನು ದೇವರ ಕಡೆಗೆ ಆಕರ್ಷಿಸುತ್ತದೆ

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಸಂತೋಷಕರ ಕುಟುಂಬ ಜೀವನವು ಇತರರನ್ನು ದೇವರ ಕಡೆಗೆ ಆಕರ್ಷಿಸುತ್ತದೆ

ಯೆಹೋವನು ಯೋಸೇಫನಿಗೆ ದೊಡ್ಡ ಪ್ರಮಾಣದಲ್ಲಿ ವಿವೇಕವನ್ನೂ ವಿವೇಚನಾಶಕ್ತಿಯನ್ನೂ ದಯಪಾಲಿಸುವ ಮೂಲಕ ಆಶೀರ್ವದಿಸಿದನು. (ಅ. ಕೃತ್ಯಗಳು 7:10) ಈ ಕಾರಣ, ಯೋಸೇಫನ ಅಂತರ್‌ದೃಷ್ಟಿಯು “ಫರೋಹನಿಗೂ ಅವನ ಪರಿವಾರದವರಿಗೂ ಒಳ್ಳೇದಾಗಿ” ತೋರಿತು.—ಆದಿಕಾಂಡ 41:37.

ತದ್ರೀತಿಯಲ್ಲಿ ಇಂದು, ಯೆಹೋವನು ತನ್ನ ಜನರಿಗೆ ಅಂತರ್‌ದೃಷ್ಟಿಯನ್ನು ಮತ್ತು ವಿವೇಚನೆಯನ್ನು ನೀಡುತ್ತಾನೆ. ಇದು ಬೈಬಲಿನ ಅಧ್ಯಯನದ ಮೂಲಕ ಅವರಿಗೆ ಲಭ್ಯವಾಗುತ್ತದೆ. (2 ತಿಮೊಥೆಯ 3:16, 17) ಬೈಬಲ್‌ ಆಧಾರಿತ ಸಲಹೆಯನ್ನು ಅವರು ಅನ್ವಯಿಸುವಾಗ, ಈ ವಿವೇಕ ಮತ್ತು ವಿವೇಚನೆಯು ಒಳ್ಳೆಯ ಫಲಿತಾಂಶವನ್ನು ತರುತ್ತವೆ. ಅವರ ಸುನಡತೆಯು ಅನೇಕ ವೇಳೆ ‘ಅದನ್ನು ಗಮನಿಸುವವರಿಗೆ ಒಳ್ಳೇದಾಗಿ’ ತೋರಿದೆ. ಸಿಂಬಾಬ್ವೆಯಿಂದ ಬಂದಿರುವ ಈ ಮುಂದಿನ ಅನುಭವವು ಇದನ್ನೇ ದೃಷ್ಟಾಂತಿಸುತ್ತದೆ.

• ಒಬ್ಬಾಕೆ ಸ್ತ್ರೀಯ ನೆರೆಯವರು ಯೆಹೋವನ ಸಾಕ್ಷಿಗಳಾಗಿದ್ದರು. ಅವಳು ಸಾಕ್ಷಿಗಳನ್ನು ಅಷ್ಟಾಗಿ ಇಷ್ಟಪಡದಿದ್ದರೂ, ಅವರ ನಡತೆಯನ್ನು ಮತ್ತು ವಿಶೇಷವಾಗಿ ಅವರ ಕುಟುಂಬ ಜೀವನವನ್ನು ಬಹಳವಾಗಿ ಮೆಚ್ಚಿದಳು. ಪತಿಪತ್ನಿಯರ ನಡುವೆ ಒಳ್ಳೆಯ ಸಂಬಂಧವಿರುವುದನ್ನು ಮತ್ತು ಮಕ್ಕಳು ವಿಧೇಯರಾಗಿರುವುದನ್ನು ಅವಳು ಗಮನಿಸಿದಳು. ಪತಿಯು ತನ್ನ ಪತ್ನಿಯನ್ನು ಬಹಳವಾಗಿ ಪ್ರೀತಿಸುತ್ತಾನೆಂಬುದನ್ನು ಸಹ ಅವಳು ಗಮನಿಸಿದಳು.

ಗಂಡನು ತನ್ನ ಹೆಂಡತಿಯನ್ನು ಪ್ರೀತಿಸಿದರೆ, ಅವನನ್ನು “ಸಾಧು”ಗೊಳಿಸಲು ಹೆಂಡತಿಯು ಮಾಟಮಂತ್ರವನ್ನು ಬಳಸಿರಲೇಬೇಕೆಂಬ ಸಾಮಾನ್ಯ ನಂಬಿಕೆ ಕೆಲವು ಆಫ್ರಿಕನ್‌ ಸಂಸ್ಕೃತಿಗಳಲ್ಲಿದೆ. ಆದಕಾರಣ, ಈ ಸ್ತ್ರೀಯು ಸಾಕ್ಷಿ ಹೆಂಡತಿಯನ್ನು ಸಮೀಪಿಸಿ, “ನಿನ್ನ ಪತಿಯು ನಿನ್ನನ್ನು ಪ್ರೀತಿಸುವಂತೆಯೇ ನನ್ನ ಪತಿಯು ನನ್ನನ್ನು ಪ್ರೀತಿಸಸಾಧ್ಯವಾಗುವಂತೆ, ನಿನ್ನ ಪತಿಯ ಮೇಲೆ ನೀನು ಪ್ರಯೋಗಿಸಿದ ಮಾಟಮಂತ್ರವನ್ನು ನನಗೆ ದಯವಿಟ್ಟು ಕೊಡುವೆಯೊ?” ಎಂದು ಕೇಳಿದಳು. “ಖಂಡಿತವಾಗಿಯೂ ಕೊಡುವೆ. ನಾಳೆ ಮಧ್ಯಾಹ್ನ ನಿನಗದನ್ನು ಕೊಡುತ್ತೇನೆ” ಎಂದು ಸಾಕ್ಷಿಯು ಉತ್ತರಿಸಿದಳು.

ಮರುದಿನ ಈ ಸಹೋದರಿಯು ತನ್ನ ನೆರೆಯವಳನ್ನು ಸಂದರ್ಶಿಸಿದಾಗ, ತನ್ನೊಂದಿಗೆ “ಮಾಟಮಂತ್ರ”ವನ್ನು ಕೊಂಡೊಯ್ದಳು. ಅದು ಏನಾಗಿತ್ತು? ಅದು ಬೈಬಲ್‌ ಆಗಿತ್ತು. ಮತ್ತು ಅದರೊಂದಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪ್ರಕಾಶನವೂ ಇತ್ತು. ಆ ಪ್ರಕಾಶನದಲ್ಲಿರುವ “ದೇವರನ್ನು ಗೌರವಿಸುವ ಒಂದು ಕುಟುಂಬವನ್ನು ಕಟ್ಟುವುದು” ಎಂಬ ಅಧ್ಯಾಯದಿಂದ ವಿಷಯವನ್ನು ಚರ್ಚಿಸಿದ ತರುವಾಯ ಸಾಕ್ಷಿಯು ಆ ಸ್ತ್ರೀಗೆ ಹೇಳಿದ್ದು: “ನನ್ನ ಪತಿ ಮತ್ತು ನಾನು ಒಬ್ಬರನ್ನೊಬ್ಬರು ‘ಸಾಧು’ಗೊಳಿಸಿಕೊಳ್ಳಲು ಬಳಸುವಂತಹ ‘ಮಾಟಮಂತ್ರ’ ಇದೇ ಆಗಿದೆ. ಇದರಿಂದಲೇ ನಾವು ಒಬ್ಬರನ್ನೊಬ್ಬರು ಬಹಳವಾಗಿ ಪ್ರೀತಿಸುತ್ತೇವೆ.” ಆ ಸ್ತ್ರೀಯೊಂದಿಗೆ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಲಾಯಿತು ಮತ್ತು ಅವಳು ನೀರಿನ ದೀಕ್ಷಾಸ್ನಾನದ ಮೂಲಕ ಯೆಹೋವನಿಗೆ ತಾನು ಮಾಡಿದ್ದ ಸಮರ್ಪಣೆಯನ್ನು ಸಂಕೇತಿಸಿಕೊಳ್ಳುವಷ್ಟರ ಮಟ್ಟಿಗೆ ಬೇಗನೆ ಪ್ರಗತಿಮಾಡಿದಳು.

• ಸಿಂಬಾಬ್ವೆ ಮತ್ತು ಮೊಸಾಂಬೀಕ್‌ ದೇಶಗಳ ಈಶಾನ್ಯ ಗಡಿಯ ಬಳಿಯಲ್ಲಿರುವ ಒಂದು ಚಿಕ್ಕ ಸಭೆಗೆ ನೇಮಿಸಲ್ಪಟ್ಟಿದ್ದ ಇಬ್ಬರು ವಿಶೇಷ ಪಯನೀಯರರು, ಎರಡು ವಾರಗಳಿಂದ ಮನೆ ಮನೆಯ ಸೇವೆಯಲ್ಲಿ ಭಾಗವಹಿಸಲಿಲ್ಲ. ಏಕೆ? ಏಕೆಂದರೆ ಅವರು ಹೇಳುತ್ತಿದ್ದ ವಿಷಯಕ್ಕೆ ಕಿವಿಗೊಡಲು ಜನರೇ ಅವರಲ್ಲಿಗೆ ಬರುತ್ತಿದ್ದರು. ಇದಕ್ಕಿರುವ ಕಾರಣವನ್ನು ಈ ಪಯನೀಯರರಲ್ಲಿ ಒಬ್ಬರು ವಿವರಿಸುತ್ತಾರೆ: “ಒಬ್ಬ ಆಸಕ್ತ ವ್ಯಕ್ತಿಯೊಂದಿಗೆ ಪ್ರತಿ ವಾರ ಮನೆ ಬೈಬಲ್‌ ಅಭ್ಯಾಸವನ್ನು ನಡೆಸಲು ನಾವು 15 ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸುತ್ತಿದ್ದೆವು. ಆ ಕ್ಷೇತ್ರವನ್ನು ತಲಪುವುದು ಅಷ್ಟೇನೂ ಸುಲಭವಾಗಿರಲಿಲ್ಲ. ನಾವು ಕೆಸರಿನಲ್ಲಿ ನಡೆದು, ನಮ್ಮ ಕುತ್ತಿಗೆಗಳ ವರೆಗೂ ತುಂಬಿ ಹರಿಯುತ್ತಿದ್ದ ನದಿಗಳನ್ನು ದಾಟಬೇಕಿತ್ತು. ಅಷ್ಟೇ ಅಲ್ಲದೆ, ನಮ್ಮ ತಲೆಯ ಮೇಲಿರುವ ಬಟ್ಟೆಬರೆ ಹಾಗೂ ಶೂಗಳು ಕೆಳಗೆ ಬೀಳದಂತೆ ಜೋಪಾನವಾಗಿಟ್ಟುಕೊಂಡು, ನದಿಯನ್ನು ದಾಟಿ, ಆಚೆ ದಡವನ್ನು ಸೇರಿದ ಮೇಲೆ ಪುನಃ ಉಡುಪು ಧರಿಸಿಕೊಳ್ಳಬೇಕಾಗುತ್ತಿತ್ತು.

“ನಮ್ಮ ಹುರುಪು, ಈ ಆಸಕ್ತ ವ್ಯಕ್ತಿಯ ನೆರೆಯವರ ಮೇಲೆ ಭಾರೀ ಪ್ರಭಾವವನ್ನು ಬೀರಿತು. ನಮ್ಮ ಹುರುಪನ್ನು ಗಮನಿಸಿದವರಲ್ಲಿ ಸ್ಥಳಿಕ ಧಾರ್ಮಿಕ ಸಂಸ್ಥೆಯ ಮುಖಂಡನೂ ಒಬ್ಬನಾಗಿದ್ದನು. ‘ಯೆಹೋವನ ಸಾಕ್ಷಿಗಳಾಗಿರುವ ಆ ಇಬ್ಬರು ಯುವ ಪುರುಷರಂತೆ ಹುರುಪುಳ್ಳವರಾಗಿರಲು ನೀವು ಬಯಸುವುದಿಲ್ಲವೊ?’ ಎಂಬುದಾಗಿ ಅವನು ತನ್ನ ಅನುಯಾಯಿಗಳಿಗೆ ಕೇಳಿದನು. ನಾವೇಕೆ ಪಟ್ಟುಬಿಡದೆ ಕೆಲಸಮಾಡುತ್ತೇವೆ ಎಂಬುದನ್ನು ತಿಳಿದುಕೊಳ್ಳಲು ಅವನ ಅನುಯಾಯಿಗಳಲ್ಲಿ ಅನೇಕರು ಮರುದಿನ ನಮ್ಮ ಮನೆಗೆ ಬಂದರು. ಅಷ್ಟೇ ಅಲ್ಲ, ಮುಂದಿನ ಎರಡು ವಾರಗಳಲ್ಲಿ ನಮ್ಮ ಮನೆಗೆ ಎಷ್ಟೊಂದು ಮಂದಿ ಭೇಟಿನೀಡಿದರೆಂದರೆ, ನಮಗೆ ಅಡಿಗೆ ಮಾಡಲೂ ಸಮಯವಿರಲಿಲ್ಲ!”

ಈ ಎರಡು ವಾರದ ಅವಧಿಯಲ್ಲಿ ಪಯನೀಯರರ ಮನೆಗೆ ಭೇಟಿನೀಡಿದ ವ್ಯಕ್ತಿಗಳಲ್ಲಿ ಆ ಧಾರ್ಮಿಕ ಮುಖಂಡನೂ ಒಬ್ಬನಾಗಿದ್ದನು. ಅವನೊಂದು ಮನೆ ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡಾಗ, ಆ ಪಯನೀಯರರಿಗಾದ ಆನಂದವನ್ನು ಊಹಿಸಿಕೊಳ್ಳಿರಿ!