ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಕ್ಷಕನೊಬ್ಬನ ಪೂರ್ವಕಲ್ಪಿತ ಅಭಿಪ್ರಾಯಕ್ಕೆ ಹೆತ್ತವರ ವಿರೋಧ

ಶಿಕ್ಷಕನೊಬ್ಬನ ಪೂರ್ವಕಲ್ಪಿತ ಅಭಿಪ್ರಾಯಕ್ಕೆ ಹೆತ್ತವರ ವಿರೋಧ

ಶಿಕ್ಷಕನೊಬ್ಬನ ಪೂರ್ವಕಲ್ಪಿತ ಅಭಿಪ್ರಾಯಕ್ಕೆ ಹೆತ್ತವರ ವಿರೋಧ

ಇಟಲಿಯ ಕಾಸಾನೋ ಮರ್ಜಿ ಎಂಬಲ್ಲಿ, ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬನು ತನ್ನ ಕೆಲವು ವಿದ್ಯಾರ್ಥಿಗಳಿಗೆ ಸ್ಟಿಕ್ಕರ್‌ಗಳನ್ನು ಕೊಟ್ಟನು. ಈ ಸ್ಟಿಕ್ಕರ್‌ಗಳನ್ನು ಮನೆಯ ಮುಂಬಾಗಿಲಿನ ಮೇಲೆ ಅಂಟಿಸುವಂತೆ ಅವನು ಹೇಳಿದನು. ಆ ಸ್ಟಿಕ್ಕರಿನ ಮೇಲೆ, “ನಾವು ಕ್ಯಾಥೊಲಿಕರು. ಯೆಹೋವನ ಸಾಕ್ಷಿಗಳು ಈ ಮನೆಯ ಬಾಗಿಲನ್ನು ತಟ್ಟಕೂಡದು” ಎಂದು ಬರೆಯಲಾಗಿತ್ತು.

ಕೆಲವು ವಿದ್ಯಾರ್ಥಿಗಳ ಹೆತ್ತವರು ಯೆಹೋವನ ಸಾಕ್ಷಿಗಳಾಗಿರದಿದ್ದರೂ, ಈ ಶಿಕ್ಷಕನ ವರ್ತನೆಯನ್ನು ಬಲವಾಗಿ ವಿರೋಧಿಸಿದರು. ಮ್ವೋವೀಟೀ ಮ್ವೋವೀಟೀ ಎಂಬ ವಾರ್ತಾ ಪತ್ರಿಕೆಗನುಸಾರ, ‘ಈ ರೀತಿಯ ಸಂದೇಶವು, ತಾವು ಆಲೋಚಿಸುವಂತಹ ರೀತಿಯಲ್ಲಿ ಆಲೋಚಿಸದೇ ಇರುವ ಜನರನ್ನು ತಿರಸ್ಕರಿಸುವಂತೆ ಇಲ್ಲವೇ ತಮಗಿಂತ “ಭಿನ್ನವಾಗಿರುವ” ಒಂದು ಧರ್ಮದ ಜನರನ್ನು ಸೇರಿಸಿಕೊಳ್ಳದಿರುವಂತೆ ಮಕ್ಕಳಿಗೆ ಹೇಳಿಕೊಡುತ್ತದೆ’ ಎಂದು ಆ ಹೆತ್ತವರು ವಿರೋಧಿಸಿದರು. ಈ ಪತ್ರಿಕೆಗೆ ಪತ್ರವನ್ನು ಬರೆದ ಒಬ್ಬ ಹೆತ್ತವಳು, ಈ ಸ್ಟಿಕ್ಕರನ್ನು “ಕಳೆಯ ಬೀಜವೆಂದು, ಅಜ್ಞಾನ ಹಾಗೂ ಮೂರ್ಖತನದ ಫಲವೆಂದು” ಹೇಳಿದಳು.

ಈ ವರದಿಯು ತೋರಿಸುವಂತೆ, ನಿಷ್ಪಕ್ಷಪಾತಿಗಳಾದ ಅನೇಕ ಜನರು, ಈ ರೀತಿಯ ಪೂರ್ವಕಲ್ಪಿತ ಅಭಿಪ್ರಾಯದ ಕಳೆಗಳನ್ನು ಬಿತ್ತುವುದರಿಂದ ಆಗುವ ಅಪಾಯಗಳನ್ನು ಗ್ರಹಿಸುತ್ತಾರೆ. ಇಟಲಿ ಮತ್ತು ಲೋಕದಾದ್ಯಂತ ಯೆಹೋವನ ಸಾಕ್ಷಿಗಳು ಮಾಡುತ್ತಿರುವ ಸಾಕ್ಷಿಕಾರ್ಯದ ವಿಷಯದಲ್ಲಿಯೂ ಅವರು ಗೌರವವನ್ನು ತೋರಿಸುತ್ತಾರೆ. ‘ನಿಮ್ಮ ನಿರೀಕ್ಷೆಗೆ ಆಧಾರವೇನು’ ಎಂದು ಯೆಹೋವನ ಸಾಕ್ಷಿಗಳನ್ನು ನೀವೇಕೆ ಕೇಳಬಾರದು? ಈ ವಿಚಾರವನ್ನು ನಿಮ್ಮೊಂದಿಗೆ ಚರ್ಚಿಸಲು ಅವರು ಕಾತುರರಾಗಿರುವರು. ಮತ್ತು ಇದನ್ನು ಅವರು “ಗೌರವಭಾವದಿಂದ” ತಿಳಿಸುವರು.—1 ಪೇತ್ರ 3:15, NW.