ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನಿಗೆ ನಿಷ್ಠಾವಂತರಾಗಿ ಉಳಿಯುವುದು

ಯೆಹೋವನಿಗೆ ನಿಷ್ಠಾವಂತರಾಗಿ ಉಳಿಯುವುದು

ಯೆಹೋವನಿಗೆ ನಿಷ್ಠಾವಂತರಾಗಿ ಉಳಿಯುವುದು

ಇಂದು ನಿಷ್ಠೆಯು ಲೋಕದಲ್ಲಿ ಬಹಳ ಅಪರೂಪವಾಗಿ ಕಾಣಸಿಗುತ್ತದೆ. ಆದರೆ ಈ ಗುಣವು, ಸತ್ಯ ದೇವರಾದ ಯೆಹೋವನ ಸೇವಕರನ್ನು ಇತರರಿಂದ ಪ್ರತ್ಯೇಕಿಸುತ್ತದೆ. ನಿಷ್ಠಾವಂತ ವ್ಯಕ್ತಿ ಪರೀಕ್ಷೆಗಳ ಮಧ್ಯೆಯೂ ದೃಢವಾಗಿ ನಿಲ್ಲುತ್ತಾನೆ ಮತ್ತು ಬಹಳ ಕಾಲದ ವರೆಗೆ ತಾನು ಮಾಡಿದ ನಿರ್ಣಯಗಳಲ್ಲಿ ಸ್ಥಿರಚಿತ್ತನಾಗಿ ಉಳಿಯುತ್ತಾನೆ. ಒಳ್ಳೆಯ ರಾಜನಾಗಿದ್ದ ಹಿಜ್ಕೀಯನನ್ನು ಪರಿಗಣಿಸಿರಿ. ಬೈಬಲು ಅವನ ಕುರಿತು ಹೀಗೆ ಹೇಳುತ್ತದೆ: “ಯೆಹೂದ್ಯರಲ್ಲಿ ಇವನಿಗೆ ಸಮಾನನಾದ ಅರಸನು ಮುಂಚೆಯೂ ತರುವಾಯವೂ ಇರಲಿಲ್ಲ.” ಹಿಜ್ಕೀಯನನ್ನು ಅದ್ವಿತೀಯ ರಾಜನನ್ನಾಗಿ ಮಾಡಿದ್ದು ಯಾವುದು? ಅವನ ಸುತ್ತಮುತ್ತಲಿದ್ದ ಜನರು ಸುಳ್ಳು ದೇವರಾದ ಮೋಲೆಕನನ್ನು ಆರಾಧಿಸುತ್ತಿದ್ದರೂ, ಇವನು ‘ಯೆಹೋವನನ್ನೇ ಹೊಂದಿಕೊಂಡಿದ್ದನು.’ ಹೌದು, ಹಿಜ್ಕೀಯನು “ಆತನನ್ನು ಬಿಡದೆ ಹಿಂಬಾಲಿಸಿ . . . [“ಯೆಹೋವನು,” NW] ಅನುಗ್ರಹಿಸಿದ ಆಜ್ಞೆಗಳನ್ನು ಕೈಕೊಂಡನು.”—2 ಅರಸುಗಳು 18:1-6.

ದೇವರಿಗೆ ನಿಷ್ಠಾವಂತರಾಗಿ ನಡೆದುಕೊಂಡಿದ್ದವರಲ್ಲಿ ಅಪೊಸ್ತಲ ಪೌಲನು ಸಹ ಒಬ್ಬನಾಗಿದ್ದನು. ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳಲ್ಲಿ ಕಂಡುಬರುವ ಅವನ ಶುಶ್ರೂಷೆಯ ದಾಖಲೆಯು, ದೇವರಿಗೆ ಮನಃಪೂರ್ವಕವಾಗಿ ಸೇವೆಸಲ್ಲಿಸುವ ವಿಷಯದಲ್ಲಿ ಪೌಲನು ನಿಷ್ಠೆಯನ್ನು ತೋರಿಸಿದನೆಂಬುದಕ್ಕೆ ಸ್ಪಷ್ಟವಾದ ರುಜುವಾತನ್ನು ಕೊಡುತ್ತದೆ. ಪೌಲನು ತನ್ನ ಭೂಜೀವಿತದ ಕೊನೆಯ ಹಂತವನ್ನು ತಲುಪಿದಾಗ, ತನ್ನ ಕುರಿತು ಹೀಗೆ ಹೇಳಶಕ್ತನಾದನು: “ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.”—2 ತಿಮೊಥೆಯ 4:7.

ನಿಷ್ಠೆಯನ್ನು ತೋರಿಸುವ ವಿಷಯದಲ್ಲಿ ಹಿಜ್ಕೀಯನು ಮತ್ತು ಪೌಲನು ಎಂತಹ ಉತ್ತಮ ಮಾದರಿಗಳಾಗಿದ್ದಾರೆ! ನಮ್ಮ ಮಹಾನ್‌ ದೇವರಾದ ಯೆಹೋವನಿಗೆ ನಿಷ್ಠಾವಂತರಾಗಿ ಉಳಿಯುವುದರ ಮೂಲಕ, ನಾವು ಅವರ ನಂಬಿಕೆಯನ್ನು ಅನುಕರಿಸುವವರಾಗಿರೋಣ.—ಇಬ್ರಿಯ 13:7.