ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿಂಸಾಚಾರವನ್ನು ಯಾರು ಕೊನೆಗೊಳಿಸುವರು?

ಹಿಂಸಾಚಾರವನ್ನು ಯಾರು ಕೊನೆಗೊಳಿಸುವರು?

ಹಿಂಸಾಚಾರವನ್ನು ಯಾರು ಕೊನೆಗೊಳಿಸುವರು?

ವಿಶ್ವ ಸಂಸ್ಥೆಯ ಸೆಕ್ರಿಟರಿ ಜೆನರಲ್‌ ಕೋಫೀ ಅನಾನ್‌ರವರು, 1999ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಸಾಮಾನ್ಯ ಸಭೆಯ 54ನೆಯ ವಾರ್ಷಿಕ ಅಧಿವೇಶನಕ್ಕೆ ಅಭ್ಯರ್ಥಿಗಳನ್ನು ಸ್ವಾಗತಿಸಿದರು. ಟೊರಾಂಟೊ ಸ್ಟಾರ್‌ ಎಂಬ ವಾರ್ತಾಪತ್ರಿಕೆಯಲ್ಲಿ ವರದಿಸಲ್ಪಟ್ಟಂತೆ, ಅವರು ಲೋಕ ನಾಯಕರಿಗೆ ಸವಾಲನ್ನೊಡ್ಡುತ್ತಾ ಹೀಗಂದರು: “ಅನೇಕ ಜನರಿಗೆ ಎಲ್ಲ ರಾಷ್ಟ್ರಗಳಿಂದ ಕೇವಲ ಸಹಾನುಭೂತಿಯ ಮಾತುಗಳಿಗಿಂತಲೂ ಹೆಚ್ಚಿನದ್ದರ ಅಗತ್ಯವಿದೆ. ಇಂಥವರಿಗೆ, ಅವರ ಹಿಂಸಾಚಾರದ ಚಕ್ರವನ್ನು ನಿಲ್ಲಿಸಲು ಸಹಾಯಮಾಡಿ, ಸಮೃದ್ಧಿಗೆ ನಡೆಸುವ ಸುರಕ್ಷಿತವಾದ ಹಾದಿಯಲ್ಲಿ ತೊಡಗಿಸಲು ನಿಜವಾದ ಮತ್ತು ನಿರಂತರವಾದ ಪ್ರಯತ್ನಗಳು ಅಗತ್ಯ.”

ವಿಶ್ವ ಸಂಸ್ಥೆ ಮತ್ತು ಅದರ ಸದಸ್ಯ ರಾಷ್ಟ್ರಗಳು, ಹಿಂಸಾಚಾರವನ್ನು ಕೊನೆಗೊಳಿಸಲು ಅಗತ್ಯವಿರುವ “ನಿಜವಾದ ಮತ್ತು ನಿರಂತರವಾದ ಪ್ರಯತ್ನಗಳನ್ನು” ಮಾಡುವವೊ? ಅದೇ ಸ್ಟಾರ್‌ ವಾರ್ತಾಪತ್ರಿಕೆಯ ವರದಿಯಲ್ಲಿ ಅಮೆರಿಕದ ಅಧ್ಯಕ್ಷರಾದ ಬಿಲ್‌ ಕ್ಲಿಂಟನ್‌ ಹೀಗಂದಿರುವುದನ್ನು ತಿಳಿಸಲಾಗಿತ್ತು: “ಈ ಶತಮಾನದಲ್ಲಿ ಇಷ್ಟೊಂದು ರಕ್ತಪಾತವಾಗಿರುವುದನ್ನು ನೋಡಿ, ‘ಇನ್ನೆಂದೂ ಹೀಗಾಗಬಾರದು’ ಎಂದು ಹೇಳುವುದು ತುಂಬ ಸುಲಭ, ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಹೆಚ್ಚು ಕಷ್ಟಕರ.” ಅವರು ಕೂಡಿಸಿ ಹೇಳಿದ್ದು: “ತೀರ ಹೆಚ್ಚು ಭರವಸೆಯ ಮಾತುಗಳನ್ನಾಡುವುದು, ಯಾವುದೇ ಸಹಾಯವನ್ನು ಮಾಡದಿರುವಷ್ಟೇ ಕ್ರೂರವಾದದ್ದಾಗಿರಬಲ್ಲದು.”

2,500ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ಪ್ರವಾದಿಯಾದ ಯೆರೆಮೀಯನು ಮಾನವರ ಪ್ರಯತ್ನಗಳ ಕುರಿತು ಹೇಳಿದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಹಾಗಾದರೆ, ಒಂದಲ್ಲ ಒಂದು ದಿನ ಹಿಂಸಾಚಾರವು ಕೊನೆಗೊಳ್ಳುವುದೆಂಬ ವಿಷಯದಲ್ಲಿ ಯಾವುದೇ ಆಶಾಕಿರಣವಿದೆಯೊ?

ದೇವರು ಕೊಟ್ಟಿರುವ ಆಶ್ವಾಸನೆಯನ್ನು ನಾವು ಯೆಶಾಯ 60:18ರಲ್ಲಿ ಓದಬಹುದು: “ನಿನ್ನ ದೇಶದಲ್ಲಿ ಬಲಾತ್ಕಾರದ [“ಹಿಂಸಾಚಾರದ,” NW] ಸುದ್ದಿಯೇ ಕಿವಿಗೆ ಬೀಳದು, ನಿನ್ನ ಪ್ರಾಂತಗಳೊಳಗೆ ಭಂಗನಾಶನಗಳ ವಾರ್ತೆಯೇ ಕೇಳಬರುವದಿಲ್ಲ.” ದೇವರು ತನ್ನ ದೇಶಭ್ರಷ್ಟ ಜನರನ್ನು ಸ್ವದೇಶಕ್ಕೆ ಕರೆತಂದಾಗ ಆ ಪ್ರವಾದನೆಯು ಪ್ರಥಮ ಬಾರಿ ನೆರವೇರಿತು. ಅದು ಇನ್ನೂ ಭವ್ಯವಾದ ರೀತಿಯಲ್ಲಿ ಪುನಃ ನೆರವೇರಲಿದೆ ಮತ್ತು ಅದರಲ್ಲಿ ನಾವು ಆನಂದಿಸಬಲ್ಲೆವು. ಯೆಹೋವ ದೇವರು “ತೀರ ಹೆಚ್ಚು ಭರವಸೆಯ ಮಾತುಗಳನ್ನಾಡುವುದಿಲ್ಲ.” ಸರ್ವೋನ್ನತನೂ, ಮಾನವಕುಲದ ಸೃಷ್ಟಿಕರ್ತನೂ ಆಗಿರುವ ಈತನೊಬ್ಬನಿಗೆ ಮಾತ್ರ, “ಹಿಂಸಾಚಾರದ ಚಕ್ರ”ವನ್ನು ನಿಲ್ಲಿಸುವ ಸಾಮರ್ಥ್ಯವಿದೆ. ದೇವರ ರಾಜ್ಯದ ಕೆಳಗೆ ಶಾಂತಿಯು ಎಲ್ಲೆಲ್ಲೂ ಇರುವುದು. ಹಿಂಸಾಚಾರವು ಇನ್ನೆಂದಿಗೂ ಇರುವುದಿಲ್ಲ!—ದಾನಿಯೇಲ 2:44.