ವಾರ್ಷಿಕ ಸಭೆ ಅಕ್ಟೋಬರ್ 7, 2000
ವಾರ್ಷಿಕ ಸಭೆ ಅಕ್ಟೋಬರ್ 7, 2000
ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯಾದ ಸದಸ್ಯರ ವಾರ್ಷಿಕ ಸಭೆಯು, 2000 ಇಸವಿಯ ಅಕ್ಟೋಬರ್ 7ರಂದು, ಯೆಹೋವನ ಸಾಕ್ಷಿಗಳ ಅಸೆಂಬ್ಲಿ ಹಾಲ್, 2932 ಕೆನಡಿ ಬುಲವಾರ್ಡ್, ಜೆರ್ಸಿ ಸಿಟಿ, ನ್ಯೂ ಜೆರ್ಸಿಯಲ್ಲಿ ನಡೆಯಲಿರುವುದು. ಅದರ ಸದಸ್ಯರಿಗೆ ಮಾತ್ರ ಇರುವ ಆರಂಭದ ಕೂಟವು ಬೆಳಗ್ಗೆ 9:15ಕ್ಕೆ ನಡೆಯುವುದು. ಇದನ್ನು ಹಿಂಬಾಲಿಸಿ ಬೆಳಗ್ಗೆ 10:00 ಗಂಟೆಗೆ ಸಾಮಾನ್ಯ ವಾರ್ಷಿಕ ಸಭೆಯು ನಡೆಯುವುದು.
ಕಳೆದ ವರ್ಷ ನಿಗಮದ ಸದಸ್ಯರ ಅಂಚೆ ವಿಳಾಸದಲ್ಲಿ ಯಾವುದೇ ಬದಲಾವಣೆಗಳು ಮಾಡಲ್ಪಟ್ಟಿರುವಲ್ಲಿ, ಅಧ್ಯಕ್ಷರ ಕಛೇರಿಗೆ ಈಗಲೇ ತಿಳಿಸತಕ್ಕದ್ದು. ಹೀಗೆ ಕ್ರಮದ ನೋಟೀಸು ಪತ್ರಗಳು ಮತ್ತು ಪ್ರತಿನಿಧಿ ಪತ್ರಗಳನ್ನು ಜುಲೈ ತಿಂಗಳಿನಲ್ಲಿ ಅವರಿಗೆ ತಲಪಿಸಬಹುದು.
ವಾರ್ಷಿಕ ಸಭೆಯ ನೋಟೀಸಿನೊಂದಿಗೆ ಸದಸ್ಯರಿಗೆ ಕಳುಹಿಸಲಾಗುವ ಪ್ರತಿನಿಧಿ ಪತ್ರಗಳು, ಆಗಸ್ಟ್ 1ರೊಳಗಾಗಿ ಸೊಸೈಟಿಯ ಕಾರ್ಯದರ್ಶಿಯ ಕಾರ್ಯಾಲಯಕ್ಕೆ ಹಿಂದಿರುಗಿಸಲ್ಪಡಬೇಕು. ಪ್ರತಿ ಸದಸ್ಯನು ತನ್ನ ಪ್ರತಿನಿಧಿ ಪತ್ರಗಳನ್ನು ಪೂರ್ಣಗೊಳಿಸಿ, ಅವನು ವಾರ್ಷಿಕ ಸಭೆಯಲ್ಲಿ ವೈಯಕ್ತಿಕವಾಗಿ ಹಾಜರಿರುವನೋ ಇಲ್ಲವೋ ಎಂಬುದನ್ನು ಅದರಲ್ಲಿ ತಿಳಿಸಿ, ಬೇಗನೆ ಹಿಂದಿರುಗಿಸಬೇಕು. ಪ್ರತಿಯೊಂದು ಪ್ರತಿನಿಧಿ ಪತ್ರದಲ್ಲಿ ಕೊಡಲ್ಪಟ್ಟಿರುವ ಮಾಹಿತಿಯು ನಿಶ್ಚಿತವಾಗಿರಬೇಕು, ಏಕೆಂದರೆ ಯಾರು ವೈಯಕ್ತಿಕವಾಗಿ ಹಾಜರಿರುವರೆಂಬುದನ್ನು ಇದರ ಆಧಾರದ ಮೇಲೆಯೇ ನಿರ್ಣಯಿಸಲಾಗುತ್ತದೆ.
ಔಪಚಾರಿಕ ವ್ಯವಹಾರ ಕೂಟ (ಬಿಸ್ನೆಸ್ ಮೀಟಿಂಗ್) ಮತ್ತು ವರದಿಗಳನ್ನು ಸೇರಿಸಿ, ಇಡೀ ಕಾರ್ಯಕ್ರಮವು ಮಧ್ಯಾಹ್ನ 1:00 ಗಂಟೆಯೊಳಗೆ ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಸಮಯದೊಳಗೆ ಮುಗಿಸಲ್ಪಡುವಂತೆ ನಿರೀಕ್ಷಿಸಲಾಗುತ್ತದೆ. ಮಧ್ಯಾಹ್ನ ಯಾವುದೇ ಕಾರ್ಯಕ್ರಮವಿರುವುದಿಲ್ಲ. ಸೀಮಿತ ಸ್ಥಳಾವಕಾಶವಿರುವ ಕಾರಣ, ಟಿಕೇಟಿನ ಆಧಾರದ ಮೇಲೆ ಪ್ರವೇಶ ದೊರಕುವುದು. ವಾರ್ಷಿಕ ಸಭೆಯ ಕಾರ್ಯಕ್ರಮವನ್ನು ಬೇರೆ ಸಭಾಂಗಣಗಳು ಟೆಲಿಫೋನಿನ ಮೂಲಕ ಕೇಳಿಸಿಕೊಳ್ಳುವ ಯಾವುದೇ ವ್ಯವಸ್ಥೆಯಿರುವುದಿಲ್ಲ.