ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವಿಕನಿಂದ ಪಾಠ ಕಲಿಯುವುದು

ನಾವಿಕನಿಂದ ಪಾಠ ಕಲಿಯುವುದು

ನಾವಿಕನಿಂದ ಪಾಠ ಕಲಿಯುವುದು

ಎಲ್ಲೆಲ್ಲೂ ಕಣ್ಣುಹಾಯಿಸಿದಷ್ಟು ದೂರಕ್ಕೂ ನೀಲಿ ಸಮುದ್ರ, ಅಲ್ಲಿ ನಾವಿಕನೊಬ್ಬನು ಒಂಟಿಯಾಗಿ ಹಡಗನ್ನು ಹಾಯಿಸುತ್ತಿದ್ದಾನೆ ಎಂದಿಟ್ಟುಕೊಳ್ಳಿ. ಆಗ ಅವನು ತೀರ ಬಳಲಿಹೋಗಬಹುದು. ಅವನು ಎಷ್ಟು ಸುಸ್ತಾಗಬಹುದೆಂದರೆ, ಇದು ಅವನನ್ನು ಮಾನಸಿಕವಾಗಿ ಬಳಲಿಸಿ ಅಪಾಯದ ಅಂಚಿಗೆ ತಳ್ಳಬಹುದು. ಅಷ್ಟುಮಾತ್ರವಲ್ಲದೆ, ಇದು ಅವನನ್ನು ತಪ್ಪುಗಳನ್ನು ಮಾಡುವಂತೆ ಇಲ್ಲವೇ ತಪ್ಪಾದ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಮಾಡಸಾಧ್ಯವಿದೆ. ಆಗಲೇ ಲಂಗರು ತಾನೇ ಆಪದ್ಭಾಂದವನಂತೆ ಅವನ ನೆರವಿಗೆ ಬರುವುದು. ಇದು ಬಾಡಿ ಬಸವಳಿದ ಆ ನಾವಿಕನಿಗೆ ಪುರುಸೊತ್ತನ್ನು ನೀಡುತ್ತದೆ ಮಾತ್ರವಲ್ಲ, ದಾರಿತಪ್ಪಿಹೋಗಿ ಅಪಾಯದಲ್ಲಿ ಸಿಲುಕದಂತೆ ಮಾಡುವುದರಲ್ಲಿ ಸಹ ಸಹಾಯಮಾಡುತ್ತದೆ. ಜೋರಾಗಿ ಬೀಸುತ್ತಿರುವ ಗಾಳಿ, ಅಲೆಗಳ ಭೋರ್ಗರತೆಗಳ ಕಡೆಗೆ ಹಡಗಿನ ಮೂತಿಯು ತಿರುಗಿದರು ಕೂಡ, ಲಂಗರು ಅದನ್ನು ಹಿಡಿದಿಟ್ಟಿರುವ ಕಾರಣ ಹಡಗು ದಿಕ್‌ಚ್ಯುತಿ ಹೊಂದುವುದಿಲ್ಲ.

ಸಮುದ್ರದಲ್ಲಿ ನಾವಿಕರು ಹತ್ತು ಹಲವಾರು ಅಪಾಯಗಳನ್ನು ಎದುರಿಸಬೇಕಾಗಿರುವಂತೆ, ಇಂದು ಲೋಕದಲ್ಲಿ ಕ್ರೈಸ್ತರು ದಿನನಿತ್ಯವೂ ಒತ್ತಡಗಳನ್ನು ಎದುರಿಸಬೇಕಾಗಿರುತ್ತದೆ. ಇದರಿಂದಾಗಿ ಅವರು ಬಹಳವಾಗಿ ಆಯಾಸಗೊಳ್ಳುವ ಕಾರಣದಿಂದ, ಅವರಿಗೆ ದಣಿವಾರಿಸಿಕೊಳ್ಳುವ ಅಗತ್ಯವಿರುತ್ತದೆ. ಒಮ್ಮೆ ಯೇಸು ತನ್ನ ಶಿಷ್ಯರಿಗೆ, “ನೀವು ಮಾತ್ರ ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿಕೊಳ್ಳಿರಿ” ಎಂದು ಹೇಳಿದನು. (ಮಾರ್ಕ 6:31) ಇಂದು ಕೆಲವರು ದಣಿವಾರಿಸಿಕೊಳ್ಳಲು ತಮ್ಮ ಕುಟುಂಬದೊಂದಿಗೆ ಕೆಲವೊಂದು ವಾರಗಳಿಗಾಗಿ ಇಲ್ಲವೇ ವಾರಾಂತ್ಯಗಳಲ್ಲಿ ಪರವೂರಿಗೆ ಹೋಗಬಹುದು. ಈ ಕ್ಷಣಗಳು ನಿಜವಾಗಿಯೂ ಮನಕ್ಕೆ ಮುದನೀಡುತ್ತವೆ ಮತ್ತು ನವಚೈತನ್ಯದಿಂದ ಪುಟಿದೇಳುವಂತೆ ಮಾಡುತ್ತವೆ. ಇಂತಹ ಸಮಯಗಳಲ್ಲಿ ನಾವು ಆತ್ಮಿಕವಾದ ರೀತಿಯಲ್ಲಿ ಸುರಕ್ಷಿತರಾಗಿದ್ದೇವೆ ಎಂಬುದನ್ನು ಹೇಗೆ ಖಚಿತಪಡಿಸಿಕೊಳ್ಳುವೆವು? ದಾರಿತಪ್ಪಿಹೋಗದಂತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವಂತೆ ನಮ್ಮ ಆತ್ಮಿಕ ಲಂಗರು ನಮಗೆ ಯಾವ ರೀತಿಯಲ್ಲಿ ಸಹಾಯಮಾಡಸಾಧ್ಯವಿದೆ?

ಯೆಹೋವನು ತನ್ನ ಪವಿತ್ರ ವಾಕ್ಯವಾದ ಬೈಬಲನ್ನು ನಮಗೆ ಉದಾರವಾಗಿ ನೀಡಿದ್ದಾನೆ. ಇದರ ಸಂಪೂರ್ಣ ಲಾಭವನ್ನು ನಾವು ಪಡೆದುಕೊಳ್ಳಬಾರದೋ? ಬೈಬಲನ್ನು ಪ್ರತಿನಿತ್ಯವೂ ಓದುವಲ್ಲಿ, ನಾವು ಯೆಹೋವನಿಗೆ ಹತ್ತಿರವಾಗಿರುತ್ತೇವೆ ಮತ್ತು ನಾವು ಆತನಿಂದ ಎಂದೆಂದಿಗೂ ದೂರಹೋಗದಿರುವೆವು. ಅದರಲ್ಲಿರುವ ಸಲಹೆಯು ನಮ್ಮನ್ನು ಸ್ಥಿರರಾಗಿ ನಿಲ್ಲುವಂತೆ ಸಹಾಯಮಾಡುತ್ತದೆ. ಮತ್ತು ಸೈತಾನನು ಇಲ್ಲವೇ ಆತನ ದುಷ್ಟ ಲೋಕವು, ಎಷ್ಟೇ ಕಷ್ಟತೊಂದರೆಗಳು ಅಪಕರ್ಷಣೆಗಳನ್ನು ತರಲಿ, ಅವನ್ನು ಎದುರಿಸಿ ನಿಲ್ಲುವಂತೆ ಇದು ನಮಗೆ ಸಹಾಯಮಾಡುತ್ತದೆ. ವಿಶ್ರಮಿಸಲು ನಾವು ಪರವೂರಿಗೆ ಹೋಗಿರುವಾಗಲೂ ದಿನನಿತ್ಯವೂ ಬೈಬಲನ್ನು ಓದುವುದಾದರೆ, ಇದು ನಮ್ಮನ್ನು ಆತ್ಮಿಕವಾಗಿ ಸದೃಢರಾಗಿ, ನೆಲೆಗೊಳ್ಳುವಂತೆ ಸಹಾಯಮಾಡುತ್ತದೆ.—ಯೆಹೋಶುವ 1:7, 8; ಕೊಲೊಸ್ಸೆ 2:7.

‘ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು ಎಷ್ಟೋ ಧನ್ಯನು’ ಎಂದು ಕೀರ್ತನೆಗಾರನು ನಮಗೆ ಜ್ಞಾಪಿಸುತ್ತಾನೆ. (ಕೀರ್ತನೆ 1:1, 2) ದೇವರ ವಾಕ್ಯವನ್ನು ಪ್ರತಿನಿತ್ಯವೂ ಓದುವುದು ನಮಗೆ “ಆನಂದ”ದಾಯಕವಾದ ಫಲಿತಾಂಶಗಳನ್ನು ತರುವುದು. ಇದು ನಿಜವಾಗಿಯೂ ಮನಸ್ಸಿಗೆ ಮುದನೀಡುವಂತಹದ್ದೂ ನವಚೈತನ್ಯಕಾರಿಯೂ ಆದದ್ದಾಗಿದ್ದು, ನಾವು ನಮ್ಮ ಕ್ರೈಸ್ತ ಮಾರ್ಗಕ್ರಮದಲ್ಲಿ ಮುಂದೆ ಮುಂದೆ ಸಾಗುತ್ತಾ ಹೋಗುವುದಕ್ಕೆ ನಮ್ಮನ್ನು ಸಜ್ಜುಗೊಳಿಸುವುದು.