ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತೀಯ ಪ್ರೀತಿ ಮಾತಿಗೆ ಮೀರಿದ್ದು

ಕ್ರಿಸ್ತೀಯ ಪ್ರೀತಿ ಮಾತಿಗೆ ಮೀರಿದ್ದು

ಕ್ರಿಸ್ತೀಯ ಪ್ರೀತಿ ಮಾತಿಗೆ ಮೀರಿದ್ದು

ಬಾರ್ತಾಲಮ್ಯೂ ಕುಟುಂಬವು ತಮ್ಮ ಜೀವವನ್ನು ಹೊರತುಪಡಿಸಿ ಎಲ್ಲವನ್ನೂ ಕಳೆದುಕೊಂಡಿತು. ಏಕೆಂದರೆ, ಅವರು ವಾಸಿಸುವ ಸ್ಥಳವಾದ ಟ್ರಿನಿಡ್ಯಾಡ್‌ನಲ್ಲಿ ಅವರ ಮನೆಗೆ ಬೆಂಕಿ ಬಿತ್ತು. ಅವರ ಮನೆಯ ಹತ್ತಿರವೇ ವಾಸಿಸುತ್ತಿದ್ದ ಸಂಬಂಧಿಕರೊಬ್ಬರು ಅವರನ್ನು ತಮ್ಮ ಮನೆಗೆ ಸೇರಿಸಿಕೊಂಡರಾದರೂ, ಕಥೆ ಇಲ್ಲಿಗೇ ಮುಗಿಯಲಿಲ್ಲ.

ಆಲಿವ್‌ ಬಾರ್ತಾಲಮ್ಯೂ ಯೆಹೋವನ ಸಾಕ್ಷಿಯಾಗಿದ್ದಾಳೆ. ಅವಳ ಸಭೆಯ ಇತರ ಸದಸ್ಯರು ಹಾಗೂ ಸುತ್ತುಮುತ್ತಲಿನ ಸಭೆಗಳವರು ಮನೆಯನ್ನು ಪುನಃ ಕಟ್ಟಲಿಕ್ಕಾಗಿ ಹಣವನ್ನು ದಾನವಾಗಿ ಕೊಟ್ಟರು. ಈ ಕಟ್ಟುವ ಕೆಲಸದ ಉಸ್ತುವಾರಿಗಾಗಿ ಒಂದು ಕಮಿಟಿಯನ್ನು ರಚಿಸಲಾಯಿತು ಮತ್ತು ಕೆಲಸವು ಪ್ರಾರಂಭವಾಯಿತು. ಮನೆಯನ್ನು ಕಟ್ಟಲಿಕ್ಕಾಗಿ ಸುಮಾರು 20 ಸಾಕ್ಷಿಗಳು ಹಾಗೂ ಕೆಲವು ನೆರೆಹೊರೆಯವರು ಅಲ್ಲಿದ್ದರು. ಯುವಕರು ಸಹ ಈ ಕೆಲಸದಲ್ಲಿ ಜೊತೆಗೂಡಿದರು. ಇನ್ನಿತರರು ಆಗಾಗ ಲಘು ಉಪಾಹಾರವನ್ನು ಇತರರಿಗೆ ಕೊಡುವುದರಲ್ಲಿ ನಿರತರಾಗಿದ್ದರು.

“ನನ್ನ ಕುಟುಂಬದವರು ಸಾಕ್ಷಿಗಳಲ್ಲ, ಆದರೆ ಇದನ್ನು ನೋಡಿ ಅವರು ಮೂಕವಿಸ್ಮಿತರಾಗಿದ್ದಾರೆ. ನನ್ನ ಪತಿಯಂತೂ ಬಹಳ ಆಶ್ಚರ್ಯಚಕಿತರಾಗಿದ್ದಾರೆ” ಎಂದು ಆಲಿವ್‌ ಹೇಳಿದಳೆಂದು ಟ್ರಿನಿಡ್ಯಾಡ್‌ನ ಸಂಡೇ ಗಾರ್ಡಿಯನ್‌ ಎಂಬ ಪತ್ರಿಕೆಯು ವರದಿಸಿದೆ.

ಇಷ್ಟೆಲ್ಲ ಕಷ್ಟಪಟ್ಟು ದುಡಿದ ಬಗ್ಗೆ, ಕಟ್ಟುವ ಕೆಲಸದ ಮೇಲ್ವಿಚಾರಕನು ಒಂದೇ ಮಾತಿನಲ್ಲಿ ಹೇಳಿದ್ದು, ಇದು ನಿಜವಾದ ಕ್ರೈಸ್ತತ್ವದ ಚಿಹ್ನೆಯಾಗಿದೆ. “ನಾವು ಮನೆಮನೆಗೆ ಹೋಗಿ ಬರಿಯ ಮಾತಿನಲ್ಲಿ ಪ್ರೀತಿಯ ಬಗ್ಗೆ ಹೇಳುವುದಿಲ್ಲ. ನಾವೇನನ್ನು ಸಾರುತ್ತೇವೋ ಅದಕ್ಕನುಸಾರ ನಡೆದುಕೊಳ್ಳಲು ಪ್ರಯತ್ನಿಸುತ್ತೇವೆ” ಎಂದು ಅವನು ಹೇಳಿದನು.​—⁠ಯೋಹಾನ 13:​34, 35.

[ಪುಟ 32ರಲ್ಲಿರುವ ಚಿತ್ರ]

ಆಲಿವ್‌ ಬಾರ್ತಾಲಮ್ಯೂ ತನ್ನ ಪತಿಯೊಂದಿಗೆ