ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಐಕ್ಯತೆಯ ಮಾದರಿ”

“ಐಕ್ಯತೆಯ ಮಾದರಿ”

“ಐಕ್ಯತೆಯ ಮಾದರಿ”

ಈಶೀರ್ಷಿಕೆಯು, ಬ್ರಸಿಲ್‌ ದೇಶದ ಸವೊಪಾಲೊದ ಇಂಡಾಯಟಬ್‌ ನಗರದ ಒಂದು ವಾರ್ತಾಪತ್ರಿಕೆಯಲ್ಲಿನ ಸಂಪಾದಕೀಯದಾಗಿತ್ತು. ಈ ಐಕ್ಯತೆಯ ಮಾದರಿ ಯಾರದಾಗಿತ್ತು? “ಯೆಹೋವನ ಸಾಕ್ಷಿಗಳದ್ದೇ. ಅವರು ಒಂದು ಹೊಸ ‘ರಾಜ್ಯ ಸಭಾಗೃಹವನ್ನು’ ಕಟ್ಟಲಿದ್ದಾರೆ. ತಮ್ಮ ಆಲಯಗಳನ್ನು ಅಥವಾ ಸಭಾಂಗಣಗಳನ್ನು ಅವರು ಹಾಗೆ ಕರೆಯುತ್ತಾರೆ. ಅವರು ಸಹಕಾರದ ವಿಷಯದಲ್ಲಿ ಇಡುತ್ತಿರುವ ಸಕಾರಾತ್ಮಕ ಮತ್ತು ಬಲವಾದ ಮಾದರಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ಆ ಲೇಖಕನು ವಿವರಿಸಿದನು.

ಈ ರೀತಿಯ ಸಭಾಗೃಹಗಳನ್ನು ಕಟ್ಟುವ ಸಮಯಗಳಲ್ಲಿ, ಯೆಹೋವನ ಸಾಕ್ಷಿಗಳ ನಡುವೆ ಇರುವ ಐಕ್ಯವು ಎದ್ದುಕಾಣುತ್ತದೆ. ಆದುದರಿಂದ, ಆ ಲೇಖನವು ತಿಳಿಸಿದ್ದು: “ಒಟ್ಟುಗೂಡಿ ದೇವರನ್ನು ಆರಾಧಿಸುವಂತೆ ಒಂದು ಕಟ್ಟಡವನ್ನು ನಿರ್ಮಿಸಲಿಕ್ಕಾಗಿ, ಸ್ತ್ರೀಪುರುಷರು ಮತ್ತು ಹದಿವಯಸ್ಕ ಸ್ವಯಂಸೇವಕರು ಸ್ವಇಚ್ಛೆಯಿಂದ ಜೊತೆಯಾಗಿ ಕೆಲಸಮಾಡುವುದನ್ನು ನೋಡುವುದು ಒಂದು ಹೃದಯಸ್ಪರ್ಶಿ ದೃಶ್ಯವಾಗಿದೆ.”

ಯೆಹೋವನ ಸಾಕ್ಷಿಗಳು ಬೇರೆ ವಿಷಯಗಳಲ್ಲೂ ಒಳ್ಳೆಯ ಮಾದರಿಯನ್ನಿಡುತ್ತಾರೆ. “ಅಭ್ಯಾಸ ಮಾಡುವುದು ಮತ್ತು ಪ್ರಾರ್ಥನೆಮಾಡುವುದರೊಂದಿಗೆ, ಅವರ ಗುರಿಯು ಮದ್ಯವ್ಯಸನಿಗಳಿಗೆ ಮತ್ತು ಅಮಲೌಷಧ ವ್ಯಸನಿಗಳಿಗೆ ಸಹಾಯಮಾಡುವುದು ಮತ್ತು ಜನರಿಗೆ ಪ್ರೀತಿಐಕ್ಯತೆಯ ಮಾರ್ಗವನ್ನು ತೋರಿಸುವುದೇ ಆಗಿದೆ” ಎಂದು ಆ ಸಂಪಾದಕೀಯವು ಹೇಳಿತು. ಅವರು ಈ ಕೆಲಸವನ್ನು ಹೇಗೆ ಪೂರೈಸುತ್ತಾರೆ? ಬೈಬಲ್‌ ಸಲಹೆಯನ್ನು ಕಲಿತುಕೊಂಡು ಅನ್ವಯಿಸುವುದು, ಒಬ್ಬ ವ್ಯಕ್ತಿಯು ದುಶ್ಚಟಗಳನ್ನು ಬಿಟ್ಟುಬಿಡುವಂತೆ ಸಹಾಯಮಾಡುತ್ತದೆಂದು ಸಾಕ್ಷಿಗಳಿಗೆ ತಿಳಿದಿದೆ. ಆದುದರಿಂದ, ಅವರು ಬೈಬಲಿನಿಂದ ಏನನ್ನು ಕಲಿಯುತ್ತಾರೊ ಅದನ್ನು ಬೇರೆಯವರಿಗೆ ಕಲಿಸಲು ಪ್ರಯತ್ನಿಸುತ್ತಾರೆ. “ಅವರ ಮಾದರಿಯನ್ನು ಅನುಸರಿಸುವ ತುರ್ತಿನ ಅಗತ್ಯವಿದೆ” ಎಂದು ಹೇಳುತ್ತಾ ಆ ಸಂಪಾದಕೀಯವು ಕೊನೆಗೊಳ್ಳುತ್ತದೆ.

ಯೆಹೋವನ ಸಾಕ್ಷಿಗಳ ಕೂಟಗಳಿಗೆ ಸಾರ್ವಜನಿಕರು ಹಾಜರಾಗಬಹುದು, ಮತ್ತು ಅಲ್ಲಿ ಯಾವುದೇ ವಂತಿಗೆಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ನೀವು ಸಹ ನಿಮಗೆ ಹತ್ತಿರದಲ್ಲಿರುವ ಒಂದು ರಾಜ್ಯ ಸಭಾಗೃಹವನ್ನು ಸಂದರ್ಶಿಸುವಂತೆ ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತೇವೆ.