ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಉದಾರತೆ ಸಂತೋಷವನ್ನು ತರುತ್ತದೆ

ಉದಾರತೆ ಸಂತೋಷವನ್ನು ತರುತ್ತದೆ

ಉದಾರತೆ ಸಂತೋಷವನ್ನು ತರುತ್ತದೆ

ಒಬ್ಬ ಪ್ರೀತಿಯುಳ್ಳ ಕ್ರೈಸ್ತ ಮೇಲ್ವಿಚಾರಕನೋಪಾದಿ, ಅಪೊಸ್ತಲ ಪೌಲನು ತನ್ನ ಜೊತೆ ವಿಶ್ವಾಸಿಗಳ ಬಗ್ಗೆ ಬಹಳ ಅಕ್ಕರೆಯುಳ್ಳವನಾಗಿದ್ದನು. (2 ಕೊರಿಂಥ 11:28) ಸಾಮಾನ್ಯ ಶಕದ ಪ್ರಥಮ ಶತಮಾನದ ಮಧ್ಯಭಾಗದಲ್ಲಿ, ಯೂದಾಯದ ಬಡ ಕ್ರೈಸ್ತರಿಗೆ ಸಹಾಯಮಾಡಲಿಕ್ಕಾಗಿ ಅವನು ಹಣವನ್ನು ಸಂಗ್ರಹಿಸಿದನು. ಈ ಅವಕಾಶವನ್ನು ಅವನು ಉದಾರತೆಯ ಬಗ್ಗೆ ಒಂದು ಅತ್ಯುತ್ತಮ ಪಾಠವನ್ನು ಕಲಿಸಲಿಕ್ಕಾಗಿ ಉಪಯೋಗಿಸಿದನು. ಸಂತೋಷವಾಗಿ ಕೊಡುವವರನ್ನು ಯೆಹೋವನು ಮಾನ್ಯರೆಂದೆಣಿಸುತ್ತಾನೆ ಎಂಬುದರ ಬಗ್ಗೆ ಪೌಲನು ಒತ್ತಿಹೇಳಿದನು. ಅವನು ಹೇಳಿದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.”​—⁠2 ಕೊರಿಂಥ 9:⁠7.

ಕಡು ಬಡತನ ಆದರೂ ಉದಾರತೆ

ಪ್ರಥಮ ಶತಮಾನದ ಕ್ರೈಸ್ತರಲ್ಲಿ ಅನೇಕರು ಸಮಾಜದಲ್ಲಿ ಉನ್ನತದರ್ಜೆಯನ್ನು ಹೊಂದಿರಲಿಲ್ಲ. ಅವರಲ್ಲಿ “ಅಧಿಕಾರಿಗಳೂ ಅನೇಕರಿಲ್ಲ” ಎಂದು ಪೌಲನು ಹೇಳಿದನು. ಅವರು ‘ಈ ಲೋಕದ ಬಲಹೀನರು,’ ‘ಈ ಲೋಕದ ಕುಲಹೀನರು’ ಆಗಿದ್ದರು. (1 ಕೊರಿಂಥ 1:26-28) ಉದಾಹರಣೆಗೆ, ಮಕೆದೋನ್ಯದಲ್ಲಿ ವಾಸಿಸುತ್ತಿದ್ದ ಕ್ರೈಸ್ತರು ‘ಬಹಳ ಹಿಂಸೆ ತಾಳುವವರು’ ಹಾಗೂ ‘ವಿಪರೀತವಾದ ಬಡತನದಲ್ಲಿದ್ದರು.’ ಇಷ್ಟೆಲ್ಲ ಆದರೂ, ಈ ನಮ್ರಭಾವದ ಮಕೆದೋನ್ಯರು, ‘ದೇವಜನರಿಗೆ ಸಹಾಯಮಾಡುವ ಕೆಲಸಕ್ಕೆ’ ಹಣಕಾಸಿನ ನೆರವನ್ನು ನೀಡುವ ಅವಕಾಶವನ್ನು ತಮಗೆ ಕೊಡುವಂತೆ ಬೇಡಿಕೊಂಡರು. ಅವರು ಏನನ್ನು ಕೊಟ್ಟರೂ ಅದನ್ನು “ಶಕ್ತ್ಯನುಸಾರವಾಗಿ ಮಾತ್ರ ಕೊಡದೆ ಶಕ್ತಿಯನ್ನು ಮೀರಿ” ಕೊಟ್ಟರು ಎಂದು ಪೌಲನು ಸಾಕ್ಷಿ ಹೇಳಿದ್ದಾನೆ.​—⁠2 ಕೊರಿಂಥ 8:1-4.

ಆದರೆ ಉದಾರತೆಯಿಂದ ನೀಡಲಾಗುತ್ತಿದ್ದದ್ದು ಎಷ್ಟು ಕೊಟ್ಟರೆಂಬುದರ ಮೇಲೆ ಆಧಾರಿಸಿರಲಿಲ್ಲ. ಅದಕ್ಕೆ ಬದಲು, ಅದರ ಹಿಂದಿದ್ದ ಪ್ರಚೋದನೆ, ಹಂಚಿಕೊಳ್ಳುವುದಕ್ಕಾಗಿದ್ದ ಸಿದ್ಧಮನಸ್ಸು, ಮತ್ತು ಹೃದಯದ ಪ್ರವೃತ್ತಿಯು ಬಹುಮುಖ್ಯವಾಗಿದ್ದವು. ಕಾಣಿಕೆಗಳನ್ನು ನೀಡುವುದರಲ್ಲಿ ಹೃದಮನಗಳು ಒಳಗೂಡಿವೆ ಎಂದು ಕೊರಿಂಥದ ಕ್ರೈಸ್ತರಿಗೆ ಪೌಲನು ಹೇಳಿದನು. ಅವನು ಹೇಳಿದ್ದು: “ನಿಮ್ಮ ಮನಸ್ಸು ಸಿದ್ಧವಾಗಿದೆ ಎಂಬದು ನನಗೆ ಗೊತ್ತುಂಟು. . . . ಮಕೆದೋನ್ಯದವರ ಮುಂದೆ ನಿಮ್ಮನ್ನು ಹೊಗಳುತ್ತಾ ಇದ್ದೇನೆ. ಮತ್ತು ನಿಮ್ಮ ಆಸಕ್ತಿಯು ಅವರಲ್ಲಿ ಬಹುಜನರನ್ನು ಪ್ರೇರೇಪಿಸಿತು.” ಉದಾರತೆಯಿಂದ ಕೊಡಲು ಅವರು “ತಮ್ಮ ಹೃದಯದಲ್ಲಿ ಮನಸ್ಸುಮಾಡಿದ್ದರು.”​—⁠2 ಕೊರಿಂಥ 9:2, 7, NW.

‘ಅವರ ಮನಸ್ಸು ಸಿದ್ಧವಾಗಿತ್ತು’

ಸುಮಾರು 15 ಶತಮಾನಗಳ ಹಿಂದೆ ಅರಣ್ಯದಲ್ಲಿ ತೋರಿಸಿದ ಉದಾರತೆಯ ಕುರಿತ ಉದಾಹರಣೆಯು ಅಪೊಸ್ತಲ ಪೌಲನ ಮನಸ್ಸಿನಲ್ಲಿದ್ದಿರಬೇಕು. ಇಸ್ರಾಯೇಲಿನ 12 ಕುಲಗಳು ಐಗುಪ್ತ್ಯದ ದಾಸತ್ವದಿಂದ ಬಿಡುಗಡೆ ಹೊಂದಿದ್ದವು. ಅವರು ಈಗ ಸೀನಾಯಿ ಪರ್ವತದ ತಪ್ಪಲಿನಲ್ಲಿದ್ದರು. ಅಲ್ಲಿ ಯೆಹೋವನು ಆರಾಧನೆಗಾಗಿ ಒಂದು ಗುಡಾರವನ್ನು ಕಟ್ಟುವಂತೆ ಹಾಗೂ ಆರಾಧನೆಯ ಸಾಮಾನುಗಳನ್ನು ಸಜ್ಜುಗೊಳಿಸುವಂತೆ ಅವರಿಗೆ ಆಜ್ಞಾಪಿಸಿದನು. ಅವುಗಳನ್ನು ಮಾಡಲು ಬಹಳಷ್ಟು ಸಂಪನ್ಮೂಲಗಳು ಬೇಕಾಗಿದ್ದವು ಮತ್ತು ಇದಕ್ಕಾಗಿ ಕಾಣಿಕೆಯನ್ನು ನೀಡುವಂತೆ ಇಸ್ರಾಯೇಲ್‌ ಜನಾಂಗವನ್ನು ಕೇಳಿಕೊಳ್ಳಲಾಯಿತು.

ಆಗ ಆ ಇಸ್ರಾಯೇಲ್ಯರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸಿದರು? “ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕೋಸ್ಕರವೂ ಅದರ ಸಮಸ್ತಸೇವೆಗೋಸ್ಕರವೂ ದೀಕ್ಷಾವಸ್ತ್ರಗಳಿಗೋಸ್ಕರವೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.” (ವಿಮೋಚನಕಾಂಡ 35:21) ಇಸ್ರಾಯೇಲ್‌ ಜನಾಂಗವು ಉದಾರತೆಯಿಂದ ಕಾಣಿಕೆಯನ್ನು ನೀಡಿತೋ? ಖಂಡಿತವಾಗಿಯೂ! ಈ ರೀತಿಯ ವರದಿಯು ಮೋಶೆಗೆ ಒಪ್ಪಿಸಲ್ಪಟ್ಟಿತು: ‘ಯೆಹೋವನು ಆಜ್ಞಾಪಿಸಿದ ಕೆಲಸಕ್ಕೆ ಬೇಕಾದದ್ದಕ್ಕಿಂತಲೂ ಬಹಳ ಹೆಚ್ಚಾಗಿ ಜನರು ಕಾಣಿಕೆಗಳನ್ನು ತರುತ್ತಾ’ ಇದ್ದಾರೆ.​—⁠ವಿಮೋಚನಕಾಂಡ 36:⁠5.

ಆಗ ಇಸ್ರಾಯೇಲ್ಯರ ಆರ್ಥಿಕ ಪರಿಸ್ಥಿತಿಯು ಹೇಗಿತ್ತು? ಸ್ವಲ್ಪ ಸಮಯದ ಹಿಂದೆಯೇ ಅವರು ‘ಬಿಟ್ಟೀಕೆಲಸದಿಂದ ಉಪದ್ರವಪಡಿಸಲ್ಪಟ್ಟಿದ್ದರು,’ ‘ಬೇಸರ ಜೀವನವನ್ನು’ ಅನುಭವಿಸಿದ್ದರು, “ದುರವಸ್ಥೆಯ” ಜೀವನವು ಅವರದ್ದಾಗಿತ್ತು. (ವಿಮೋಚನಕಾಂಡ 1:​11, 14; 3:7; 5:​10-18) ಆಗ ಇಸ್ರಾಯೇಲ್ಯರು ಹಣವಂತರಾಗಿರಲಿಲ್ಲವೆಂಬುದು ಇದರಿಂದ ಗೊತ್ತಾಗುತ್ತದೆ. ಇಸ್ರಾಯೇಲ್ಯರು ದಾಸತ್ವದ ದೇಶವನ್ನು ಬಿಟ್ಟು ಬರುವಾಗ ತಮ್ಮೊಂದಿಗೆ ದನಕುರಿಗಳನ್ನು ತಂದಿದ್ದರು ನಿಜ. (ವಿಮೋಚನಕಾಂಡ 12:32) ಆದರೆ ಅದು ಹೆಚ್ಚೇನು ಆಗಿದ್ದಿರಲಿಕ್ಕಿಲ್ಲ ನಿಜ, ಏಕೆಂದರೆ ಐಗುಪ್ತ್ಯವನ್ನು ಬಿಟ್ಟು ಬಂದ ಸ್ವಲ್ಪದರಲ್ಲಿಯೇ ತಿನ್ನಲು ರೊಟ್ಟಿಯೋ ಇಲ್ಲವೇ ಮಾಂಸವೋ ಇಲ್ಲ ಎಂದು ಅವರು ದೂರುತ್ತಿದ್ದರು ಎಂಬುದು ತಿಳಿದುಬರುತ್ತದೆ.​—⁠ವಿಮೋಚನಕಾಂಡ 16:⁠3.

ಗುಡಾರವನ್ನು ಕಟ್ಟುವುದಕ್ಕಾಗಿ ಕಾಣಿಕೆನೀಡಿದ ಅಷ್ಟೊಂದು ಅಮೂಲ್ಯವಸ್ತುಗಳು ಇಸ್ರಾಯೇಲ್ಯರಿಗೆ ಹೇಗೆ ಸಿಕ್ಕಿದವು? ಅವರ ಹಿಂದಿನ ಧಣಿಗಳಿಂದಲೇ. ಬೈಬಲು ಇದರ ಬಗ್ಗೆ ಹೇಳುವುದು: “ಇಸ್ರಾಯೇಲ್ಯರು . . . ಐಗುಪ್ತ್ಯರಿಂದ ಬೆಳ್ಳಿಬಂಗಾರದ ಒಡವೆಗಳನ್ನೂ ಬಟ್ಟೆಗಳನ್ನೂ ಕೇಳಿಕೊಂಡರು. . . . [ಐಗುಪ್ತ್ಯರು] ಅವರು ಕೇಳಿಕೊಂಡದ್ದನ್ನು ಕೊಟ್ಟರು.” ಐಗುಪ್ತ್ಯದವರು ಉದಾರತೆಯಿಂದ ನೀಡಿದ್ದು, ಯೆಹೋವ ದೇವರ ಆಶೀರ್ವಾದವೇ ಆಗಿತ್ತು ಹೊರತು ಫರೋಹನದ್ದಾಗಿರಲಿಲ್ಲ. ಪ್ರೇರಿತ ದಾಖಲೆಯು ಹೇಳುವುದು: “ಯೆಹೋವನು ಅವರ ಮೇಲೆ ಐಗುಪ್ತ್ಯರಲ್ಲಿ ದಯೆಯನ್ನು ಹುಟ್ಟಿಸಿದ್ದರಿಂದ ಅವರು ಕೇಳಿಕೊಂಡದ್ದನ್ನು ಕೊಟ್ಟರು.”​—⁠ವಿಮೋಚನಕಾಂಡ 12:35, 36.

ಇಸ್ರಾಯೇಲ್ಯರಿಗೆ ಹೇಗನಿಸಿದ್ದಿರಬಹುದು ಎಂಬುದನ್ನು ಊಹಿಸಿಕೊಳ್ಳಿ. ಅನೇಕ ತಲೆಮಾರುಗಳಿಂದ ಅವರು ಕಠಿನವಾದ ದಾಸತ್ವದಿಂದ ಕಷ್ಟಹಿಂಸೆಯನ್ನು ಅನುಭವಿಸಿದ್ದರು. ಅವರು ಅನೇಕ ವಿಷಯಗಳಿಂದ ವಂಚಿತರಾಗಿದ್ದರು. ಆದರೆ ಈಗ ಅವರು ಸ್ವತಂತ್ರರರಾಗಿದ್ದರು ಮಾತ್ರವಲ್ಲ, ಅವರ ಬಳಿ ಬಹಳಷ್ಟು ಸಿರಿಸಂಪತ್ತಿತ್ತು. ಈಗ ತಮ್ಮಲ್ಲಿದ್ದ ಸಿರಿಸಂಪತ್ತುಗಳಲ್ಲಿ ಸ್ವಲ್ಪವನ್ನು ಹಂಚುವುದರ ಕುರಿತು ಅವರಿಗೆ ಹೇಗನಿಸಿದ್ದಿರಬಹುದು? ನಾವು ಅವುಗಳನ್ನು ಸಂಪಾದಿಸಿದ್ದೇವಾದುದರಿಂದ, ಅದನ್ನು ನಾವಿಟ್ಟುಕೊಳ್ಳುವುದೇ ನ್ಯಾಯವಾದದ್ದು ಎಂದು ಅವರಿಗೆ ಅನಿಸಿದ್ದಿರಬಹುದು. ಆದರೆ, ಶುದ್ಧಾರಾಧನೆಯನ್ನು ಬೆಂಬಲಿಸಲಿಕ್ಕಾಗಿ ಹಣಕಾಸಿನ ಸಹಾಯವನ್ನು ನೀಡುವಂತೆ ಅವರನ್ನು ಕೇಳಿಕೊಂಡಾಗ, ಅವರು ಖಂಡಿತವಾಗಿಯೂ ಸಹಾಯಮಾಡಿದರು. ಆದರೆ ಇದನ್ನು ಕೊಡಬೇಕೋ ಬೇಡವೋ ಎಂದು ಯೋಚಿಸುತ್ತಾ ಇಲ್ಲವೇ ಜಿಪುಣತನದಿಂದ ಕೊಡಲಿಲ್ಲ! ಯೆಹೋವನಿಂದಲೇ ಆ ಸಿರಿಸಂಪತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಯಿತೆಂಬುದನ್ನು ಅವರು ಅರಿತಿದ್ದರು. ಆದುದರಿಂದಲೇ, ತಮ್ಮಲ್ಲಿದ್ದ ಚಿನ್ನ, ಬೆಳ್ಳಿ, ದನಕುರಿಗಳನ್ನೆಲ್ಲ ಧಾರಾಳವಾಗಿ ಕೊಟ್ಟುಬಿಟ್ಟರು. ಅವರು “ಮನಃಪೂರ್ವಕವಾಗಿ” ಕೊಟ್ಟರು. ಯಾರಾರನ್ನು “ಹೃದಯವು ಪ್ರೇರಿಸಿತೋ” ಯಾರಾರ “ಮನಸ್ಸು ಸಿದ್ಧವಾಗಿತ್ತೋ” ಅವರೆಲ್ಲರೂ ಕೊಟ್ಟರು. ಅದು ಸ್ವಇಷ್ಟದಿಂದ “ಯೆಹೋವನಿಗೆ ಕೊಟ್ಟ ಕಾಣಿಕೆ” (NW) ಆಗಿತ್ತು.​—⁠ವಿಮೋಚನಕಾಂಡ 25:​1-9; 35:​4-9, 20-29; 36:​3-7.

ಕೊಡಲು ಮನಸ್ಸುಳ್ಳವರಾಗಿರಿ

ಕಾಣಿಕೆಯ ಗಾತ್ರವು ತಾನೇ ಕೊಡುವವನ ಧಾರಾಳತನವನ್ನು ತೋರಿಸುವುದಿಲ್ಲ. ಒಮ್ಮೆ ಯೇಸು, ದೇವಾಲಯದ ಬೊಕ್ಕಸದಲ್ಲಿ ಹಣಹಾಕುತ್ತಿದ್ದ ಜನರನ್ನು ಗಮನಿಸುತ್ತಿದ್ದನು. ಧನಿಕರು ಅನೇಕ ನಾಣ್ಯಗಳನ್ನು ಅದರೊಳಗೆ ಹಾಕುತ್ತಿದ್ದರು. ಆದರೆ ಅತಿ ಕಡಿಮೆ ಬೆಲೆಯುಳ್ಳ ಎರಡು ಚಿಕ್ಕ ನಾಣ್ಯಗಳನ್ನು ಹಾಕುತ್ತಿದ್ದ ಒಬ್ಬ ಬಡ ವಿಧವೆಯನ್ನು ನೋಡಿ ಯೇಸು ಬಹಳ ಪ್ರಭಾವಿತನಾದನು. ಅವನು ಹೇಳಿದ್ದು: “ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. . . . ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟಳು.”​—⁠ಲೂಕ 21:1-4; ಮಾರ್ಕ 12:41-44.

ಕೊರಿಂಥದವರಿಗೆ ಪೌಲನು ಹೇಳಿದ ಮಾತುಗಳು ಯೇಸುವಿನ ಈ ಆಲೋಚನೆಗೆ ಹೊಂದಿಕೆಯಲ್ಲಿದ್ದವು. ಜೊತೆ ವಿಶ್ವಾಸಿಗಳಲ್ಲಿ ಬಡವರಾಗಿದ್ದವರಿಗೆ ಕಾಣಿಕೆಗಳನ್ನು ನೀಡುವ ವಿಷಯದಲ್ಲಿ, ಪೌಲನು ಹೇಳಿದ್ದು: “ಒಬ್ಬನು ಕೊಡುವದಕ್ಕೆ ಮನಸ್ಸುಳ್ಳವನಾಗಿರುವಲ್ಲಿ ಅವನು ತನ್ನಲ್ಲಿ ಇರುವದಕ್ಕೆ ಅನುಸಾರವಾಗಿ ಕೊಟ್ಟರೆ ಅದು ಸಮರ್ಪಕವಾಗಿರುವದು; ಅವನಿಗೆ ಇಲ್ಲದ್ದನ್ನು ದೇವರು ಕೇಳಿಕೊಳ್ಳುವದಿಲ್ಲ.” (2 ಕೊರಿಂಥ 8:12) ಕಾಣಿಕೆಗಳನ್ನು ನೀಡುವುದು ಪೈಪೋಟಿಯಿಂದಲೋ ಇಲ್ಲವೆ ಇತರರೊಂದಿಗೆ ಹೋಲಿಸಿಕೊಳ್ಳುವ ಮೂಲಕವಲ್ಲ. ತನ್ನ ಸ್ಥಿತಿಗತಿಗನುಸಾರ ಒಬ್ಬನು ಕಾಣಿಕೆಯನ್ನು ನೀಡುತ್ತಾನೆ ಮತ್ತು ಅವನ ಹೃದಯ ವೈಶಾಲ್ಯತೆಯ ಮನೋಭಾವವು ಯೆಹೋವನನ್ನು ಸಂತೋಷಪಡಿಸುತ್ತದೆ.

ಸರ್ವಸ್ವಕ್ಕೂ ಒಡೆಯನಾದ ಯೆಹೋವನನ್ನು ಯಾರೊಬ್ಬರೂ ಐಶ್ವರ್ಯವಂತನನ್ನಾಗಿ ಮಾಡಸಾಧ್ಯವಿಲ್ಲ. ಅದಕ್ಕೆ ಬದಲಾಗಿ, ಕಾಣಿಕೆ ನೀಡುವುದು ಒಂದು ಸುಯೋಗವಾಗಿದೆ. ಏಕೆಂದರೆ, ಯೆಹೋವನ ಕಡೆಗೆ ತಮಗಿರುವ ಪ್ರೀತಿಯನ್ನು ತೋರ್ಪಡಿಸುವ ಸದಾವಕಾಶವನ್ನು ಇದು ಆರಾಧಕರಿಗೆ ನೀಡುತ್ತದೆ. (1 ಪೂರ್ವಕಾಲವೃತ್ತಾಂತ 29:​14-17) ಕಾಣಿಕೆಗಳನ್ನು ಪ್ರದರ್ಶನೆಗಾಗಿ ಅಥವಾ ಇನ್ನಿತರ ಸ್ವಾರ್ಥ ಉದ್ದೇಶದಿಂದ ಕೊಡುವುದಕ್ಕೆ ಬದಲಾಗಿ, ಒಳ್ಳೆಯ ಭಾವದಿಂದಲೂ ಸತ್ಯಾರಾಧನೆಯ ವೃದ್ಧಿಗಾಗಿಯೂ ಕೊಡಲ್ಪಟ್ಟಲ್ಲಿ, ಇದು ಸಂತೋಷವನ್ನು ಮಾತ್ರವಲ್ಲ ದೇವರ ಆಶೀರ್ವಾದವನ್ನೂ ತರುವುದು. ಯೇಸು ಹೇಳಿದ್ದು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ [“ಸಂತೋಷ,” NW].” (ಅ. ಕೃತ್ಯಗಳು 20:35) ಯೆಹೋವನ ಸೇವೆಗಾಗಿ ನಮ್ಮ ಶಕ್ತಿಯನ್ನು ಉಪಯೋಗಿಸುವ ಹಾಗೂ ಸತ್ಯಾರಾಧನೆಗಾಗಿ ಭೌತಿಕ ಸಹಾಯವನ್ನು ಮಾಡುವ ಮೂಲಕ ಮತ್ತು ಅರ್ಹ ವ್ಯಕ್ತಿಗಳಿಗೆ ಸಹಾಯವನ್ನು ಮಾಡುವ ಮೂಲಕ ಸಂತೋಷವನ್ನು ಪಡೆದುಕೊಳ್ಳಬಹುದು.​—⁠1 ಕೊರಿಂಥ 16:​1, 2.

ಇಂದು ಕೊಡಲು ಸಿದ್ಧಮನಸ್ಸು

‘ಪರಲೋಕ ರಾಜ್ಯದ ಈ ಸುವಾರ್ತೆಯನ್ನು’ ಸಾರುತ್ತಿರುವುದರಿಂದ ಇಡೀ ಲೋಕದಲ್ಲಿ ಆಗುತ್ತಿರುವ ಪ್ರಗತಿಯನ್ನು ನೋಡಿ ಇಂದು ಯೆಹೋವನ ಸಾಕ್ಷಿಗಳು ಬಹಳ ರೋಮಾಂಚಿತರಾಗಿದ್ದಾರೆ. (ಮತ್ತಾಯ 24:14) ಈ 20ನೆಯ ಶತಮಾನದ ಕೊನೆಯ ದಶಕದಲ್ಲಿ, ಯೆಹೋವ ದೇವರಿಗೆ ಸಮರ್ಪಣೆಭಾವವನ್ನು ತೋರಿಸುತ್ತಾ ಸುಮಾರು 30,00,000ಕ್ಕಿಂತಲೂ ಹೆಚ್ಚಿನ ಜನರು ದೀಕ್ಷಾಸ್ನಾನ ಪಡೆದುಕೊಂಡರು. ಮತ್ತು ಸುಮಾರು 30,000 ಹೊಸ ಸಭೆಗಳು ಸ್ಥಾಪನೆಗೊಂಡವು. ಹೌದು, ಇಂದಿರುವ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸಭೆಗಳು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸ್ಥಾಪಿಸಲ್ಪಟ್ಟಂಥವುಗಳಾಗಿವೆ! ಇಷ್ಟೊಂದು ಸಭೆಗಳು ಸ್ಥಾಪನೆಗೊಂಡದ್ದು ಹೆಚ್ಚಾಗಿ, ಪ್ರಾಮಾಣಿಕ ಹೃದಯದ ಕ್ರೈಸ್ತ ಸಹೋದರ ಸಹೋದರಿಯರು ತಮ್ಮ ಸಮಯ, ಶಕ್ತಿಯನ್ನು ವ್ಯಯಿಸಿ ಯೆಹೋವನ ಉದ್ದೇಶಗಳ ಕುರಿತು ತಿಳಿಸಲು ತಮ್ಮ ನೆರೆಹೊರೆಯವರನ್ನು ಭೇಟಿಮಾಡಿದುದರಿಂದಲೇ. ಅಷ್ಟುಮಾತ್ರವಲ್ಲ, ಈ ಕೆಲಸದಲ್ಲಿ ಮಿಷನೆರಿಗಳ ಪಾತ್ರವೂ ಇದೆ. ಇವರು ತಮ್ಮ ಮನೆಯನ್ನು ಬಿಟ್ಟು, ದೂರದ ದೇಶಗಳಿಗೆ ಹೋಗಿ ರಾಜ್ಯವನ್ನು ಸಾರುವುದರ ಮೂಲಕ ಇತರರಿಗೆ ಸಹಾಯಮಾಡಿದ್ದಾರೆ. ಇದು ಹೊಸ ಸರ್ಕಿಟ್‌ಗಳನ್ನು ಏರ್ಪಡಿಸಲು ಸಹಾಯಮಾಡಿದೆ. ಹೀಗೆ ಹೊಸ ಸರ್ಕಿಟ್‌ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಇದಕ್ಕೆ ಕೂಡಿಸಿ, ಸಾರುವ ಕೆಲಸದಲ್ಲಿ ಹಾಗೂ ವೈಯಕ್ತಿಕ ಅಧ್ಯಯನದಲ್ಲಿ ಉಪಯೋಗಿಸಲು ಬಹಳಷ್ಟು ಬೈಬಲುಗಳು ಬೇಕಾಗಿವೆ. ಇನ್ನೂ ಹೆಚ್ಚಿನ ಮುದ್ರಿತ ಸಾಹಿತ್ಯವು ಜರೂರಿಯಾಗಿದೆ. ಅನೇಕ ದೇಶಗಳಲ್ಲಿ, ಬ್ರಾಂಚು ಆಫೀಸುಗಳನ್ನು ಇನ್ನೂ ದೊಡ್ಡದಾಗಿ ಕಟ್ಟಬೇಕಾಗಿತ್ತು ಇಲ್ಲವೆ ದೊಡ್ಡ ಕಟ್ಟಡಗಳುಳ್ಳ ಸ್ಥಳಕ್ಕೆ ಅದನ್ನು ಬದಲಾಯಿಸಬೇಕಾಗಿತ್ತು. ಇವೆಲ್ಲವೂ ಸಾಧ್ಯವಾಗುತ್ತಿರುವುದು, ಯೆಹೋವನ ಸಾಕ್ಷಿಗಳು ನೀಡುವ ಸ್ವಯಂಪ್ರೇರಿತ ದಾನಗಳಿಂದಲೇ.

ರಾಜ್ಯ ಸಭಾಗೃಹಗಳ ಅಗತ್ಯ

ಯೆಹೋವನ ಸಾಕ್ಷಿಗಳ ಸಂಖ್ಯೆಗಳಲ್ಲಿ ಹೆಚ್ಚಳವು, ಹೆಚ್ಚಿನ ರಾಜ್ಯ ಸಭಾಗೃಹಗಳ ಅಗತ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇಸವಿ 2000ದ ಆದಿಭಾಗದಲ್ಲಿ ನಡೆಸಲ್ಪಟ್ಟ ಸರ್ವೇಗಳ ಪ್ರಕಾರ, ಕಡಿಮೆ ಆರ್ಥಿಕ ಮಟ್ಟವಿರುವ ದೇಶಗಳಲ್ಲಿ ಸುಮಾರು 11,000ಕ್ಕಿಂತಲೂ ಹೆಚ್ಚಿನ ರಾಜ್ಯ ಸಭಾಗೃಹಗಳ ಅಗತ್ಯವಿತ್ತು. ಅಂಗೋಲದ ಉದಾಹರಣೆಯನ್ನು ತೆಗೆದುಕೊಳ್ಳಿರಿ. ಅಲ್ಲಿ ಹಲವಾರು ವರ್ಷಗಳಿಂದ ಆಂತರಿಕ ಕಲಹಗಳಾಗುತ್ತಿರುವುದಾದರೂ, ರಾಜ್ಯ ಪ್ರಚಾರಕರ ಸಂಖ್ಯೆಯಲ್ಲಿ ವರ್ಷದಲ್ಲಿ ಸುಮಾರು 10 ಪ್ರತಿಶತದಷ್ಟು ಹೆಚ್ಚಳವಿರುತ್ತದೆ. ಮತ್ತು ಈ ವಿಸ್ತಾರವಾದ ಆಫ್ರಿಕ ದೇಶದಲ್ಲಿರುವ ಸುಮಾರು 675 ಸಭೆಗಳಲ್ಲಿ ಅನೇಕ ಸಭೆಗಳು, ಈಗಲೂ ಬಯಲಿನಲ್ಲಿ ಕೂಟಗಳನ್ನು ನಡೆಸುತ್ತವೆ. ಆ ದೇಶದಲ್ಲಿ ಕೇವಲ 22 ರಾಜ್ಯ ಸಭಾಗೃಹಗಳು ಇವೆ. ಮತ್ತು ಅವುಗಳಲ್ಲಿ 12 ರಾಜ್ಯ ಸಭಾಗೃಹಗಳಿಗೆ ಮಾತ್ರ ಛಾವಣಿಯಿದೆ.

ಇದೇ ರೀತಿಯ ಪರಿಸ್ಥಿತಿಯನ್ನು ಡೆಮೋಕ್ರ್ಯಾಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋದಲ್ಲಿ ಸಹ ನೋಡಬಹುದು. ಕಿನ್‌ಷಾಸ ರಾಜಧಾನಿಯಲ್ಲಿ ಸುಮಾರು 300 ಸಭೆಗಳಿರುವುದಾದರೂ, ಅಲ್ಲಿ ಕೇವಲ ಹತ್ತು ರಾಜ್ಯ ಸಭಾಗೃಹಗಳಿವೆ. ಈ ದೇಶದಲ್ಲಿ ಸುಮಾರು 1,500ಕ್ಕಿಂತಲೂ ಹೆಚ್ಚಿನ ರಾಜ್ಯ ಸಭಾಗೃಹಗಳು ತುರ್ತಾಗಿ ಬೇಕಾಗಿವೆ. ಪೂರ್ವ ಯೂರೋಪಿಯನ್‌ ದೇಶಗಳಲ್ಲಿ, ರಷ್ಯ ಹಾಗೂ ಯೂಕ್ರೇನಿನಲ್ಲಿ ಬಹಳ ಬೆಳವಣಿಗೆ ಆಗುತ್ತಿರುವ ಕಾರಣ ನೂರಾರು ರಾಜ್ಯ ಸಭಾಗೃಹಗಳು ಬೇಕಾಗಿವೆ. ಲ್ಯಾಟಿನ್‌ ಅಮೆರಿಕದಲ್ಲಿ ಆಗುತ್ತಿರುವ ಪ್ರಚಂಡ ಬೆಳವಣಿಗೆಯ ಒಂದು ಉದಾಹರಣೆಯು ಬ್ರೆಸಿಲ್‌ ದೇಶವಾಗಿದೆ. ಇಲ್ಲಿ ಐದು ಲಕ್ಷಕ್ಕಿಂತಲೂ ಹೆಚ್ಚಿನ ಸಾಕ್ಷಿಗಳಿದ್ದಾರೆ ಮತ್ತು ಹೆಚ್ಚಿನ ರಾಜ್ಯ ಸಭಾಗೃಹಗಳು ಬೇಕಾಗಿವೆ.

ಇಂತಹ ದೇಶಗಳಿಗಿರುವ ಅಗತ್ಯವನ್ನು ಪೂರೈಸಲು ಯೆಹೋವನ ಸಾಕ್ಷಿಗಳು ರಾಜ್ಯ ಸಭಾಗೃಹಗಳನ್ನು ಕಟ್ಟಲಿಕ್ಕಾಗಿ ತ್ವರಿತಗತಿಯಲ್ಲಿ ಏರ್ಪಾಡುಗಳನ್ನು ಮಾಡುತ್ತಿದ್ದಾರೆ. ಈ ಏರ್ಪಾಡುಗಳು ಲೋಕವ್ಯಾಪಕವಾಗಿರುವ ಸಹೋದರರು ನೀಡುವ ಉದಾರವಾದ ಕಾಣಿಕೆಗಳಿಂದ ಬೆಂಬಲಿಸಲ್ಪಡುತ್ತಿವೆ. ಹೀಗೆ, ಬಹಳ ಬಡತನದಲ್ಲಿರುವ ಸಭೆಗಳು ಸಹ ಆರಾಧನೆಗಾಗಿ ಒಂದು ತಕ್ಕ ಕಟ್ಟಡವನ್ನು ಹೊಂದಿರಶಕ್ತವಾಗುವುವು.

ಪುರಾತನ ಇಸ್ರಾಯೇಲಿನ ಸಮಯದಲ್ಲಿ ಸಾಧಿಸಿದಂತೆ, ಇನ್ನೂ ಅನೇಕ ವಿಷಯಗಳು ವ್ಯಾಪಕಮಟ್ಟದಲ್ಲಿ ಸಾಧಿಸಲ್ಪಡಸಾಧ್ಯವಿದೆ. ಏಕೆಂದರೆ ಪ್ರಾಮಾಣಿಕ ಹೃದಯದ ಕ್ರೈಸ್ತರು ‘ಆದಾಯದಿಂದ ಯೆಹೋವನನ್ನು ಸನ್ಮಾನಿಸುತ್ತಾರೆ.’ (ಜ್ಞಾನೋಕ್ತಿ 3:9, 10) ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯು, ಸ್ವಯಂಪ್ರೇರಿತವಾಗಿ ದಾನವನ್ನು ನೀಡಿರುವ ಪ್ರತಿಯೊಬ್ಬರಿಗೂ ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಸದಾ ವೃದ್ಧಿಸುತ್ತಿರುವ ರಾಜ್ಯದ ಕೆಲಸದ ಅಗತ್ಯಗಳನ್ನು ಪೂರೈಸಲಿಕ್ಕಾಗಿ ಯೆಹೋವನ ಆತ್ಮವು ತನ್ನ ಜನರ ಹೃದಯಗಳನ್ನು ಪ್ರೇರೇಪಿಸುತ್ತಾ ಮುಂದುವರಿಯುವುದು ಎಂಬುದರ ಬಗ್ಗೆ ನಾವು ದೃಢವಿಶ್ವಾಸದಿಂದ ಇದ್ದೇವೆ.

ಲೋಕವ್ಯಾಪಕವಾಗಿ ವಿಸ್ತಾರ್ಯ ಕಾರ್ಯವು ಮುಂದುವರಿದಂತೆ, ನಮ್ಮ ಶಕ್ತಿ, ಸಮಯ ಹಾಗೂ ಸಂಪನ್ಮೂಲಗಳನ್ನು ಸಂತೋಷದಿಂದ ಹಾಗೂ ಸಿದ್ಧಮನಸ್ಸಿನಿಂದ ಕೊಡುವುದಕ್ಕೆ ಅವಕಾಶವನ್ನು ಹುಡುಕುತ್ತಾ ಇರೋಣ. ಹೀಗೆ, ಕೊಡುವುದರಿಂದ ಸಿಗುವ ಆನಂದವನ್ನು ನಾವು ಅನುಭವಿಸೋಣ.

[ಪುಟ 29ರಲ್ಲಿರುವ ಚೌಕ]

“ಇದನ್ನು ಜಾಣತನದಿಂದ ಉಪಯೋಗಿಸಿರಿ!”

“ನಾನು ಹತ್ತು ವರ್ಷದ ಹುಡುಗಿ. ಪುಸ್ತಕಗಳನ್ನು ಮಾಡಲು ಬೇಕಾಗಿರುವ ಪೇಪರನ್ನು ಇಲ್ಲವೇ ಬೇರಾವುದಾದರೂ ವಸ್ತುಗಳನ್ನು ಖರೀದಿಸಲಿಕ್ಕಾಗಿ ನಾನು ಈ ಹಣವನ್ನು ಕಳುಹಿಸುತ್ತಿದ್ದೇನೆ.”​—⁠ಸಿಂಡಿ.

“ನಮಗಾಗಿ ಇನ್ನೂ ಹೆಚ್ಚಿನ ಪುಸ್ತಕಗಳನ್ನು ತಯಾರಿಸುವಂತೆ ನಾನು ಈ ಹಣವನ್ನು ಕಳುಹಿಸಲು ತುಂಬ ಸಂತೋಷಿಸುತ್ತೇನೆ. ನನ್ನ ತಂದೆಗೆ ಸಹಾಯ ಮಾಡುವುದರ ಮೂಲಕ ಈ ಹಣವನ್ನು ನಾನು ಕೂಡಿಸಿಟ್ಟೆ. ಆದುದರಿಂದ ಇದನ್ನು ಜಾಣತನದಿಂದ ಉಪಯೋಗಿಸಿರಿ!”​—⁠ಪ್ಯಾಮ್‌, ಏಳು ವರ್ಷ.

“ಚಂಡಮಾರುತದ ಬಗ್ಗೆ ನಾನು ಸುದ್ದಿಯನ್ನು ಕೇಳಿಸಿಕೊಂಡಾಗ ನನಗೆ ಬಹಳ ದುಃಖವಾಯಿತು. ನೀವು ಸುರಕ್ಷಿತರಾಗಿದ್ದೀರೆಂದು ನಾನು ಆಶಿಸುತ್ತೇನೆ. ನನ್ನ ಬ್ಯಾಂಕಿನ ಖಾತೆಯಲ್ಲಿರುವುದು ಇಷ್ಟು ಹಣ [2 ಅಮೆರಿಕನ್‌ ಡಾಲರ್‌] ಮಾತ್ರ.”​—⁠ಆ್ಯಲಿಸನ್‌, ನಾಲ್ಕು ವರ್ಷ.

“ನನ್ನ ಹೆಸರು ರೂಡಿ, ನನಗೆ 11 ವರ್ಷ. ನನ್ನ ತಮ್ಮನಾದ ರ್ಯಾಲ್ಫ್‌ಗೆ ಆರು ವರ್ಷ. ನನ್ನ ತಂಗಿಯಾದ ಜೂಡಿತ್‌ಗೆ ಎರಡೂವರೆ ವರ್ಷ. [ಯುದ್ಧ ಛಿದ್ರ ದೇಶದಲ್ಲಿರುವ] ಸಹೋದರರಿಗೆ ಸಹಾಯಮಾಡಲಿಕ್ಕಾಗಿ ನಮ್ಮ ಖರ್ಚಿಗಾಗಿ ಕೊಟ್ಟಿದ್ದ ಹಣವನ್ನು ಸುಮಾರು ಮೂರು ತಿಂಗಳುಗಳ ವರೆಗೆ ನಾವು ಕೂಡಿಸಿಟ್ಟೆವು. ಹೀಗೆ, ನಾವು 20 ಡಾಲರುಗಳನ್ನು ಕೂಡಿಸಿಡಸಾಧ್ಯವಾಯಿತು ಮತ್ತು ಈಗ ಅದನ್ನು ನಿಮಗೆ ಕಳುಹಿಸುತ್ತಿದ್ದೇವೆ.”

“[ಚಂಡಮಾರುತದಿಂದ ತತ್ತರಿಸಿದ] ಸಹೋದರರ ಕಷ್ಟವನ್ನು ನೆನೆದು ನನಗೆ ದುಃಖವಾಗುತ್ತದೆ. ನನ್ನ ತಂದೆಯೊಂದಿಗೆ ಕೆಲಸಮಾಡಿದ ಕಾರಣ, ನನಗೆ 17 ಡಾಲರುಗಳು ಸಿಕ್ಕಿದವು. ನಿರ್ದಿಷ್ಟವಾದ ಉದ್ದೇಶಕ್ಕಾಗಿ ಈ ಹಣವನ್ನು ನಾನು ಕಳುಹಿಸುತ್ತಿಲ್ಲವಾದ ಕಾರಣ, ಇದನ್ನು ಯಾವುದಕ್ಕಾಗಿ ಉಪಯೋಗಿಸಬೇಕೆಂಬುದನ್ನು ನೀವೇ ನಿರ್ಧಾರಮಾಡಿ.”​—⁠ಮ್ಯಾಕ್‌ಲೇನ್‌, ಎಂಟು ವರ್ಷ.

[ಪುಟ 31ರಲ್ಲಿರುವ ಚೌಕ]

ಲೋಕವ್ಯಾಪಕವಾದ ಕೆಲಸಕ್ಕಾಗಿ

ಕೆಲವರು ಕಾಣಿಕೆಗಳನ್ನು ಕೊಡುವ ವಿಧಗಳು

ಅನೇಕರು, “ಸೊಸೈಟಿಯ ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು​—⁠ಮತ್ತಾಯ 24:14” ಎಂದು ಗುರುತುಮಾಡಲ್ಪಟ್ಟ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್‌ ಮಾಡುತ್ತಾರೆ. ಪ್ರತಿ ತಿಂಗಳು ಸಭೆಗಳು ಈ ಹಣವನ್ನು ಸೊಸೈಟಿಗೆ ಕಳುಹಿಸುತ್ತವೆ.

ಸ್ವಯಂಪ್ರೇರಿತ ಹಣದ ದಾನಗಳನ್ನು ನೇರವಾಗಿ, The Watch Tower Bible and Tract Society of India, H-58 Old Khandala Road, Lonavla 410 401, Maharashtra, ಇಲ್ಲವೇ ನಿಮ್ಮ ದೇಶದಲ್ಲಿರುವ ಸೊಸೈಟಿಯ ಆಫೀಸಿಗೆ ಕಳುಹಿಸಬಹುದು. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಈ ಕಾಣಿಕೆಗಳೊಂದಿಗೆ, ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜೊತೆಗೂಡಿರಬೇಕು.

ಯೋಜಿತ ಕೊಡುಗೆ

ನೇರವಾದ ಹಣದ ಕೊಡುಗೆಗಳು ಮತ್ತು ಹಣದ ಷರತ್ತು ದಾನಗಳಿಗೆ ಕೂಡಿಸಿ, ಲೋಕವ್ಯಾಪಕವಾದ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುವ ವಿಧಾನಗಳಿವೆ. ಇವು ಕೆಳಗಿನವುಗಳನ್ನು ಒಳಗೂಡುತ್ತವೆ:

ವಿಮೆ: ವಾಚ್‌ ಟವರ್‌ ಸೊಸೈಟಿಯನ್ನು ಒಂದು ಜೀವ ವಿಮಾ ಪಾಲಿಸಿ ಫಲಾನುಭವಿಯಾಗಿ ಹೆಸರಿಸಬಹುದು.

ಬ್ಯಾಂಕ್‌ ಖಾತೆಗಳು: ಬ್ಯಾಂಕ್‌ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು, ಸ್ಥಳಿಕ ಬ್ಯಾಂಕ್‌ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ವಾಚ್‌ ಟವರ್‌ ಸೊಸೈಟಿಗೆ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣಹೊಂದುವಲ್ಲಿ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ಗಳು ಹಾಗೂ ಬಾಂಡ್‌ಗಳನ್ನು ನೇರವಾದ ಕೊಡುಗೆಯಾಗಿ ವಾಚ್‌ ಟವರ್‌ ಸೊಸೈಟಿಗೆ ದಾನಮಾಡಬಹುದು.

ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ, ಇಲ್ಲವೇ ದಾನಿಯು ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ವಾಚ್‌ ಟವರ್‌ ಸೊಸೈಟಿಗೆ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರಮಾಡುವ ಮೊದಲು ಸೊಸೈಟಿಯನ್ನು ಸಂಪರ್ಕಿಸತಕ್ಕದ್ದು.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಇಚ್ಛಾಪತ್ರದ ಮೂಲಕ, ವಾಚ್‌ ಟವರ್‌ ಸೊಸೈಟಿಗೆ ಬಿಟ್ಟುಹೋಗಬಹುದು. ಅಥವಾ ಸೊಸೈಟಿಗೆ ಒಂದು ಟ್ರಸ್ಟ್‌ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು. ಸೊಸೈಟಿಯನ್ನು ಫಲಾನುಭವಿಯಾಗಿ ಹೆಸರಿಸಿ ಉಯಿಲನ್ನು ಬರೆಯುವಾಗ, ಇಂಡಿಯನ್‌ ಸಕ್ಷಷೆನ್‌ ಆ್ಯಕ್ಟ್‌, 1925ರ ಸೆಕ್ಷನ್‌ 118ರಲ್ಲಿ ಕಂಡುಬರುವ ಈ ವಿಷಯವನ್ನು ದಯವಿಟ್ಟು ಗಮನಿಸಿರಿ. ಅದು ಹೇಳುವುದು: “ಒಬ್ಬನ ಮರಣಕ್ಕೆ ಹನ್ನೆರಡು ತಿಂಗಳುಗಳಿಗಿಂತ ಕಡಿಮೆಯಾಗಿರದ ಕಾಲದಲ್ಲಿ ಮೃತ್ಯುಪತ್ರವನ್ನು ಸಪ್ರಮಾಣಿಸಿ, ಅಂದಿನಿಂದ ಅದರ ಕಾರ್ಯನಿರ್ವಹಣೆ ನಡೆಯುವುದಕ್ಕೆ ಆರು ತಿಂಗಳುಗಳೊಳಗೆ, ಜೀವಂತ ವ್ಯಕ್ತಿಗಳ ಮೃತ್ಯುಪತ್ರಗಳನ್ನು ಶಾಸನವು ಒದಗಿಸುವ ಸ್ಥಳದಲ್ಲಿ ಭದ್ರವಾಗಿರಿಸಿದ ಹೊರತು, ಸೋದರಳಿಯ ಅಥವಾ ಸೋದರ ಸೊಸೆ ಅಥವಾ ಹತ್ತಿರ ಸಂಬಂಧಿಗಳಿರುವ ಯಾವ ವ್ಯಕ್ತಿಗೂ ತನ್ನ ಯಾವುದೇ ಆಸ್ತಿಯನ್ನು ಧರ್ಮಕ್ಕೆ ಅಥವಾ ಧರ್ಮಕಾರ್ಯಗಳಿಗೆ ಬಿಟ್ಟುಹೋಗುವ ಅಧಿಕಾರವಿಲ್ಲ.”