ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾರ್ಥನೆ ಮಾಡುವುದರಿಂದ ಪ್ರಯೋಜನ ಇದೆಯೊ?

ಪ್ರಾರ್ಥನೆ ಮಾಡುವುದರಿಂದ ಪ್ರಯೋಜನ ಇದೆಯೊ?

ಪ್ರಾರ್ಥನೆ ಮಾಡುವುದರಿಂದ ಪ್ರಯೋಜನ ಇದೆಯೊ?

ಒಂದಲ್ಲ ಒಂದು ಸಮಯದಲ್ಲಿ ಹೆಚ್ಚುಕಡಿಮೆ ಪ್ರತಿಯೊಬ್ಬರಿಗೂ ಪ್ರಾರ್ಥನೆಮಾಡಬೇಕೆಂಬ ಅನಿಸಿಕೆಯಾಗುತ್ತದೆ. ವಾಸ್ತವದಲ್ಲಿ, ಬಹುಮಟ್ಟಿಗೆ ಎಲ್ಲ ಧಾರ್ಮಿಕ ಜನರು ಕಟ್ಟಾಸಕ್ತಿಯಿಂದ ಪ್ರಾರ್ಥಿಸುತ್ತಾರೆ. ಉದಾಹರಣೆಗಾಗಿ, ಬೌದ್ಧಮತಕ್ಕೆ ಸೇರಿರುವಂತಹ ಒಬ್ಬ ವ್ಯಕ್ತಿಯು, “ಆ್ಯಮೀಡಾ ಬುದ್ಧನೇ ನಾನು ನಿನ್ನಲ್ಲೇ ನಂಬಿಕೆಯಿಡುತ್ತೇನೆ” ಎಂಬ ಪ್ರಾರ್ಥನೆಯನ್ನು ದಿನಕ್ಕೆ ಸಾವಿರಾರು ಬಾರಿ ಪುನರಾವರ್ತಿಸಬಹುದು.

ಜನರು ಎಷ್ಟೇ ಪ್ರಾರ್ಥಿಸಿದರೂ, ಭೂವ್ಯಾಪಕವಾಗಿ ಸಮಸ್ಯೆಗಳು ಹಾಗೇ ಉಳಿದಿರುವುದನ್ನು ನೋಡುವಾಗ, ಹೀಗೆ ಪ್ರಶ್ನಿಸುವುದು ನ್ಯಾಯೋಚಿತವಾದದ್ದಾಗಿದೆ: ಪ್ರಾರ್ಥಿಸುವುದರ ಮೂಲಕ ಜನರು ಏನನ್ನು ಸಾಧಿಸಲು ಬಯಸುತ್ತಾರೆ? ಅವರು ಮಾಡುವ ಪ್ರಾರ್ಥನೆಗಳಿಂದ ಏನಾದರೂ ಪ್ರಯೋಜನವಿದೆಯೆ?

ಜನರು ಏಕೆ ಪ್ರಾರ್ಥಿಸುತ್ತಾರೆ?

ಪೂರ್ವದೇಶದಲ್ಲಿರುವ ಅನೇಕರು ತಮ್ಮ ಪೂರ್ವಜರಿಗೋ ಶಿಂಟೋ ದೇವರಿಗೋ ಅಥವಾ ಟಾವೋ ದೇವರಿಗೋ ಪ್ರಾರ್ಥನೆಮಾಡುತ್ತಾರೆ. ಅವರ ಪ್ರಾರ್ಥನೆಗಳಲ್ಲಿ, ಶಾಲೆಯ ಪರೀಕ್ಷೆಗಳನ್ನು ಪಾಸಾಗಲು, ಒಳ್ಳೆಯ ಬೆಳೆಯನ್ನು ಕೊಯ್ಯಲು, ಇಲ್ಲವೇ ರೋಗಗಳನ್ನು ತಡೆಗಟ್ಟಲಿಕ್ಕಾಗಿರುವ ನಿರೀಕ್ಷೆಗಳು ವ್ಯಕ್ತಪಡಿಸಲ್ಪಟ್ಟಿರುತ್ತವೆ. ತಮ್ಮ ಪ್ರಯತ್ನಗಳಿಂದ ಬೌದ್ಧರು ಜ್ಞಾನೋದಯವನ್ನು ಪಡೆದುಕೊಳ್ಳುವ ಆಶೆಯನ್ನಿಟ್ಟುಕೊಂಡಿರುತ್ತಾರೆ. ಹಿಂದೂಗಳು ಜ್ಞಾನ, ಐಶ್ವರ್ಯ ಹಾಗೂ ಸಂರಕ್ಷಣೆಗಾಗಿ ತಮ್ಮ ಅಚ್ಚುಮೆಚ್ಚಿನ ದೇವದೇವತೆಗಳಿಗೆ ಭಯಭಕ್ತಿಯಿಂದ ಪ್ರಾರ್ಥಿಸುತ್ತಾರೆ.

ಏಕಾಂತವಾದ ಸಂನ್ಯಾಸಿಮಠಗಳು ಅಥವಾ ಕಾನ್ವೆಂಟ್‌ಗಳಲ್ಲಿ ಸತತವಾಗಿ ಪ್ರಾರ್ಥಿಸುತ್ತಾ, ಸಂನ್ಯಾಸಿಗಳು ಇಲ್ಲವೇ ಸಂನ್ಯಾಸಿನಿಯರಾಗಿ ತಮ್ಮ ಜೀವಿತಗಳನ್ನು ಕಳೆಯುತ್ತಾರೆ. ಹೀಗೆ ಮಾಡುವ ಮೂಲಕ ಕೆಲವು ಕ್ಯಾಥೊಲಿಕರು ಮಾನವಕುಲಕ್ಕೆ ಪ್ರಯೋಜನವನ್ನು ಉಂಟುಮಾಡುವ ನಿರೀಕ್ಷೆಯನ್ನಿಟ್ಟುಕೊಂಡಿರುತ್ತಾರೆ. ಕೋಟಿಗಟ್ಟಲೆ ಕ್ಯಾಥೊಲಿಕರು, ಮಣಿಗಳುಳ್ಳ ಜಪಸರ (ರೋಸರಿ)ಗಳ ಸಹಾಯದಿಂದ ಪ್ರಾರ್ಥನೆಗಳನ್ನು ಬಾಯಿಪಾಠವಾಗಿ ಹೇಳುವ ಮೂಲಕ, ಮರಿಯಳ ಅನುಗ್ರಹವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾರೆ. ಪೂರ್ವದೇಶಗಳಲ್ಲಿ, ಅನೇಕ ಜನರು ಪ್ರಾರ್ಥನಾ ಚಕ್ರಗಳನ್ನು ಉಪಯೋಗಿಸುತ್ತಾರೆ. ಪ್ರಾಟೆಸ್ಟಂಟರು ಕರ್ತನ ಪ್ರಾರ್ಥನೆಯ ಶಬ್ದಗಳನ್ನು ಪುನರಾವರ್ತಿಸುತ್ತಾರೆ, ಅದೇ ಸಮಯದಲ್ಲಿ ತಮ್ಮ ಭಾವನೆಗಳನ್ನು ಸಹ ದೇವರಿಗೆ ವ್ಯಕ್ತಪಡಿಸುತ್ತಾರೆ. ಯೆರೂಸಲೇಮಿನಲ್ಲಿರುವ ವೆಸ್ಟರ್ನ್‌ ವಾಲ್‌ನಲ್ಲಿ ಪ್ರಾರ್ಥನೆಮಾಡಲಿಕ್ಕಾಗಿ, ಅನೇಕ ಯೆಹೂದ್ಯರು ಬಹಳಷ್ಟು ದೂರ ಪ್ರಯಾಣಿಸುತ್ತಾರೆ. ಹೀಗೆ ಪ್ರಾರ್ಥಿಸುವುದರಿಂದ ದೇವಾಲಯವು ಪುನಸ್ಸ್ಥಾಪಿಸಲ್ಪಡುತ್ತದೆ ಮತ್ತು ಶಾಂತಿಸಮೃದ್ಧಿಗಳ ಒಂದು ಹೊಸ ಯುಗವು ಆರಂಭವಾಗುತ್ತದೆಂಬುದು ಅವರ ನಂಬಿಕೆಯಾಗಿದೆ.

ಕೋಟಿಗಟ್ಟಲೆ ಜನರು ಇಷ್ಟು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವುದಾದರೂ, ಮಾನವ ಸಮಾಜವು ಬಡತನ, ದುರಭ್ಯಾಸಗಳು, ಒಡೆದ ಕುಟುಂಬಗಳು, ದುಷ್ಕೃತ್ಯ, ಹಾಗೂ ಯುದ್ಧದಂತಹ ಸಮಸ್ಯೆಗಳಿಂದ ಹೆಚ್ಚೆಚ್ಚು ಬಾಧಿಸಲ್ಪಡುತ್ತಿದೆ. ಇವರೆಲ್ಲರೂ ಸರಿಯಾದ ರೀತಿಯಲ್ಲಿ ಪ್ರಾರ್ಥಿಸುತ್ತಿಲ್ಲ ಎಂಬುದು ಅದಕ್ಕೆ ಕಾರಣವಾಗಿರಬಹುದೊ? ಹಾಗಿದ್ದ ಪಕ್ಷದಲ್ಲಿ, ಯಾರಾದರೂ ಪ್ರಾರ್ಥನೆಗಳಿಗೆ ನಿಜವಾಗಿಯೂ ಕಿವಿಗೊಡುತ್ತಾರೋ?

ಯಾರಾದರೂ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾರೋ?

ಪ್ರಾರ್ಥನೆಗಳಿಗೆ ಯಾರೂ ಕಿವಿಗೊಡದಿದ್ದಲ್ಲಿ, ಪ್ರಾರ್ಥನೆಗಳಿಂದ ಯಾವುದೇ ಪ್ರಯೋಜನವು ಸಿಗಸಾಧ್ಯವಿಲ್ಲ. ಒಬ್ಬ ವ್ಯಕ್ತಿಯು ಪ್ರಾರ್ಥಿಸುವಾಗ, ಅಗೋಚರ ಆತ್ಮಲೋಕದಲ್ಲಿರುವ ಯಾರೋ ಒಬ್ಬನು ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳುತ್ತಾನೆ ಎಂಬುದನ್ನು ಅವನು ಖಂಡಿತವಾಗಿಯೂ ನಂಬುತ್ತಾನೆ. ಆದರೂ, ಪ್ರಾರ್ಥನೆಗಳು ಧ್ವನಿ ತರಂಗಗಳ ಮೂಲಕ ಸಾಗಿಸಲ್ಪಡುವುದಿಲ್ಲ. ಪ್ರಾರ್ಥನೆಮಾಡುತ್ತಿರುವಂತಹ ವ್ಯಕ್ತಿಯ ಮನಸ್ಸಿನ ಭಾವನೆಗಳನ್ನು ಓದಸಾಧ್ಯವಿರುವಂತಹ ಯಾರೋ ಒಬ್ಬನಿದ್ದಾನೆ ಎಂದು ಅನೇಕರು ನಂಬುತ್ತಾರೆ. ಆತನು ಯಾರಾಗಿರಬಹುದು?

ನಮ್ಮ ಮಿದುಳಿನ ಕಾರ್ಟೆಕ್ಸನ್ನು ರಚಿಸುವಂತಹ ನೂರಾರುಕೋಟಿ ನರಕೋಶ (ನ್ಯೂರಾನ್‌)ಗಳಲ್ಲಿ ಭಾವನೆಗಳು ಹೇಗೆ ರೂಪಿತಗೊಳ್ಳುತ್ತವೆ ಎಂಬುದು ಸಂಶೋಧಕರಿಗೂ ಒಂದು ರಹಸ್ಯವಾಗಿಯೇ ಉಳಿದಿದೆ. ಆದರೂ, ಮಿದುಳನ್ನು ವಿನ್ಯಾಸಿಸಿರುವಂತಹ ಒಬ್ಬನು ಅಂತಹ ಭಾವನೆಗಳನ್ನು ಓದಬಲ್ಲನು ಎಂಬುದು ಸಮಂಜಸವಾದದ್ದಾಗಿದೆ. ಆತನು ನಮ್ಮ ಸೃಷ್ಟಿಕರ್ತನಾಗಿರುವ ಯೆಹೋವ ದೇವರೇ ಆಗಿದ್ದಾನೆ. (ಕೀರ್ತನೆ 83:18; ಪ್ರಕಟನೆ 4:11) ಆದುದರಿಂದ, ಪ್ರಾರ್ಥನೆಗಳು ಆತನಿಗೇ ಸಲ್ಲಿಸಲ್ಪಡಬೇಕು. ಆದರೆ ಅಂತಹ ಎಲ್ಲ ಪ್ರಾರ್ಥನೆಗಳಿಗೆ ಯೆಹೋವನು ಕಿವಿಗೊಡುತ್ತಾನೋ?

ಎಲ್ಲ ಪ್ರಾರ್ಥನೆಗಳಿಗೆ ದೇವರು ಕಿವಿಗೊಡುತ್ತಾನೋ?

ಪುರಾತನ ಇಸ್ರಾಯೇಲಿನ ಅರಸನಾಗಿದ್ದ ದಾವೀದನು ಸತತವಾಗಿ ಪ್ರಾರ್ಥಿಸುವಂತಹ ವ್ಯಕ್ತಿಯಾಗಿದ್ದನು. ದೈವಪ್ರೇರಿತ ಕೀರ್ತನೆಗಾರನಾಗಿದ್ದ ಅವನು ಹೀಗೆ ಹಾಡಿದನು: “ಪ್ರಾರ್ಥನೆಯನ್ನು ಕೇಳುವವನೇ, ನರರೆಲ್ಲರು ನಿನ್ನ ಬಳಿಗೆ ಬರುವರು.” (ಕೀರ್ತನೆ 65:⁠2) ಆದುದರಿಂದ, ಮಾನವಕುಲವು ಮಾತಾಡುವಂತಹ ಸಾವಿರಾರು ಭಾಷೆಗಳಲ್ಲಿ ಯಾವುದೇ ಭಾಷೆಯಲ್ಲಿ ಪ್ರಾರ್ಥನೆಗಳನ್ನು ಮಾಡುವುದಾದರೂ ಯೆಹೋವನು ಅವುಗಳನ್ನು ಅರ್ಥಮಾಡಿಕೊಳ್ಳಶಕ್ತನು. ಇಷ್ಟೊಂದು ಮಾಹಿತಿಯನ್ನು ಯಾವ ಮಾನವ ಮನಸ್ಸೂ ಸಂಗ್ರಹಿಸಲಾರದು ಎಂಬುದು ನಿಜವಾಗಿರುವುದಾದರೂ, ದೇವರಿಂದ ಇದು ಸಾಧ್ಯ. ಆದುದರಿಂದ, ಸ್ವೀಕಾರಾರ್ಹವಾದ ರೀತಿಯಲ್ಲಿ ತನಗೆ ಪ್ರಾರ್ಥನೆಮಾಡುವವರೆಲ್ಲರಿಗೆ ದೇವರು ಖಂಡಿತವಾಗಿಯೂ ಕಿವಿಗೊಡಶಕ್ತನು.

ಆದರೂ, ಎಲ್ಲ ಪ್ರಾರ್ಥನೆಗಳನ್ನು ದೇವರು ಮೆಚ್ಚುವುದಿಲ್ಲ ಎಂದು, ಸತತವಾಗಿ ಪ್ರಾರ್ಥನೆಮಾಡುತ್ತಿದ್ದಂತಹ ವ್ಯಕ್ತಿಯಾಗಿದ್ದ ಯೇಸು ಕ್ರಿಸ್ತನು ಸಹ ಹೇಳಿದನು. ಆ ಸಮಯದಲ್ಲಿ ಬಾಯಿಪಾಠಮಾಡಿದಂತಹ ಪ್ರಾರ್ಥನೆಗಳನ್ನೇ ಜನರು ಪುನರಾವರ್ತಿಸುತ್ತಿದ್ದರು. ಅಂತಹ ಪ್ರಾರ್ಥನೆಗಳ ಕುರಿತು ಯೇಸು ಏನು ಹೇಳಿದನು ಎಂಬುದನ್ನು ಗಮನಿಸಿರಿ. ಕ್ಯಾಥೊಲಿಕ್‌ ಜೆರೂಸಲೇಮ್‌ ಬೈಬಲ್‌ಗನುಸಾರವಾಗಿ ಅವನು ಹೇಳಿದ್ದು: “ನಿನ್ನ ಪ್ರಾರ್ಥನೆಗಳಲ್ಲಿ ವಿಧರ್ಮಿಗಳಂತೆ ಹೇಳಿದ್ದನ್ನೇ ಪದೇಪದೇ ಹೇಳಬೇಡ, ಏಕೆಂದರೆ ಬಹಳ ಮಾತುಗಳನ್ನು ಉಪಯೋಗಿಸುವ ಮೂಲಕ ದೇವರು ತಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುವನು ಎಂದು ಅವರು ನೆನಸುತ್ತಾರೆ.” (ಮತ್ತಾಯ 6:⁠7) ಆದುದರಿಂದ, ನಮ್ಮ ನಿಜವಾದ ಭಾವನೆಗಳನ್ನು ವ್ಯಕ್ತಪಡಿಸದಿರುವಂತಹ ಪ್ರಾರ್ಥನೆಗಳಿಗೆ ಯೆಹೋವನು ಕಿವಿಗೊಡಬೇಕು ಎಂದು ನಾವು ನಿರೀಕ್ಷಿಸಲಾರೆವು.

ಕೆಲವು ಪ್ರಾರ್ಥನೆಗಳು ಏಕೆ ದೇವರಿಗೆ ಮೆಚ್ಚಿಗೆಯಾಗುವುದಿಲ್ಲ ಎಂಬುದನ್ನು ಸೂಚಿಸುತ್ತಾ ಒಂದು ಬೈಬಲ್‌ ಜ್ಞಾನೋಕ್ತಿಯು ಹೇಳುವುದು: “ಧರ್ಮೋಪದೇಶಕ್ಕೆ ಕಿವಿಗೊಡದವನು ಮಾಡುವ ದೇವಪ್ರಾರ್ಥನೆಯೂ ಅಸಹ್ಯ.” (ಜ್ಞಾನೋಕ್ತಿ 28:⁠9) ಇನ್ನೊಂದು ಜ್ಞಾನೋಕ್ತಿಯು ಹೇಳುವುದು: “ಯೆಹೋವನು ದುಷ್ಟರಿಗೆ ದೂರ, ಶಿಷ್ಟರ ಬಿನ್ನಹಕ್ಕೆ ಹತ್ತಿರ.” (ಜ್ಞಾನೋಕ್ತಿ 15:29) ಪುರಾತನ ಯೆಹೂದದ ಮುಖಂಡರು ಗಂಭೀರವಾದ ತಪ್ಪಿನ ದೋಷಾಪರಾಧಿಗಳಾಗಿದ್ದ ಸಮಯದಲ್ಲಿ ಯೆಹೋವನು ಅವರಿಗೆ ಹೇಳಿದ್ದು: “ನೀವು [ನನ್ನ ಕಡೆಗೆ] ಕೈಯೆತ್ತುವಾಗ ನಿಮ್ಮನ್ನು ನೋಡದಂತೆ ನನ್ನ ಕಣ್ಣುಗಳನ್ನು ಮರೆಮಾಡಿಕೊಳ್ಳುವೆನು; ಹೌದು, ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು, ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.”​—⁠ಯೆಶಾಯ 1:​1, 15.

ಕೆಲವು ಪ್ರಾರ್ಥನೆಗಳಿಗೆ ದೇವರು ಕಿವಿಗೊಡದೆ ಇರುವಂತೆ ಮಾಡಸಾಧ್ಯವಿರುವ ಇನ್ನೊಂದು ಕಾರಣವನ್ನು ಅಪೊಸ್ತಲ ಪೇತ್ರನು ತಿಳಿಯಪಡಿಸಿದನು. ಪೇತ್ರನು ಬರೆದುದು: “ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ. ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.” (1 ಪೇತ್ರ 3:⁠7) ಅಂತಹ ಸಲಹೆಯನ್ನು ಧಿಕ್ಕರಿಸುವಂತಹ ಒಬ್ಬ ವ್ಯಕ್ತಿಯ ಪ್ರಾರ್ಥನೆಗಳು, ಅವನ ಮನೆಯ ಛಾವಣಿಯಿಂದ ಹೊರಗೆ ತಲಪಲಾರವು!

ನಮ್ಮ ಪ್ರಾರ್ಥನೆಗಳಿಗೆ ದೇವರು ಕಿವಿಗೊಡಬೇಕಾದರೆ, ನಾವು ಕೆಲವೊಂದು ಆವಶ್ಯಕತೆಗಳನ್ನು ಮುಟ್ಟಬೇಕು ಎಂಬುದಂತೂ ಸ್ಪಷ್ಟ. ಆದರೂ, ಪ್ರಾರ್ಥನೆಯನ್ನು ಮಾಡುವಂತಹ ಅನೇಕರು, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೋ ಅದನ್ನು ಮಾಡುವ ವಿಷಯದಲ್ಲಿ ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ. ಆದುದರಿಂದಲೇ, ಇಷ್ಟೊಂದು ಮಂದಿ ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವುದಾದರೂ, ಇದುವರೆಗೆ ಹೆಚ್ಚು ಉತ್ತಮವಾದ ಒಂದು ಲೋಕವು ಅಸ್ತಿತ್ವಕ್ಕೆ ಬಂದಿಲ್ಲ.

ಹಾಗಾದರೆ, ನಮ್ಮ ಪ್ರಾರ್ಥನೆಗಳಿಗೆ ದೇವರು ಕಿವಿಗೊಡಬೇಕಾದರೆ ನಾವೇನು ಮಾಡುವಂತೆ ಆತನು ಬಯಸುತ್ತಾನೆ? ಇದಕ್ಕೆ ಉತ್ತರವು, ನಾವು ಏಕೆ ಪ್ರಾರ್ಥಿಸಬೇಕು ಎಂಬ ಕಾರಣಕ್ಕೆ ಸಂಬಂಧಿಸಿದ್ದಾಗಿದೆ. ವಾಸ್ತವದಲ್ಲಿ, ಪ್ರಾರ್ಥಿಸುವುದರಿಂದ ಏನಾದರೂ ಪ್ರಯೋಜನವಿದೆಯೊ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸುವಲ್ಲಿ, ಮೊದಲಾಗಿ ನಾವು ಪ್ರಾರ್ಥನೆಗಳ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ನಾವು ಯೆಹೋವನೊಂದಿಗೆ ಮಾತಾಡಲು ಸಾಧ್ಯವಾಗುವಂತಹ ಏರ್ಪಾಡನ್ನು ಆತನು ಏಕೆ ಮಾಡಿದ್ದಾನೆ?

[ಪುಟ 3ರಲ್ಲಿರುವ ಚಿತ್ರ ಕೃಪೆ]

G.P.O., Jerusalem