ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳ ವಾಚನವನ್ನು ನೀವು ಗಣ್ಯಮಾಡಿದ್ದೀರೋ? ಹಾಗಿರುವಲ್ಲಿ, ಈ ಕೆಳಗಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ಕೊಡಬಲ್ಲಿರೋ ಎಂಬುದನ್ನು ನೋಡಿರಿ:

ಯಾರೊಂದಿಗಾದರೂ ಒಂದು ಭಿನ್ನಾಭಿಪ್ರಾಯವಿರುವಲ್ಲಿ, ನಾವು ಅದನ್ನು ಬಗೆಹರಿಸಲಿಕ್ಕಿರುವ ಮೂಲಭೂತ ಹೆಜ್ಜೆಯು ಯಾವುದು?

ಮೊದಲಾಗಿ, ನಾವೆಲ್ಲರೂ ತಪ್ಪಾಲೋಚನೆಗಳು ಮತ್ತು ಮನೋಭಾವಗಳಿಗೆ ಬಲಿಬೀಳುತ್ತೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ತದನಂತರ, ಆ ಇನ್ನೊಬ್ಬ ವ್ಯಕ್ತಿಗೆ ಬದಲಾಗಿ ನಾವೇ ಈ ಸಮಸ್ಯೆಯ ಮೂಲ ಕಾರಣವಾಗಿದ್ದೇವೋ ಎಂಬುದನ್ನು ನಾವು ಗಂಭೀರವಾಗಿ ಪರಿಗಣಿಸತಕ್ಕದ್ದು.​—⁠8/15, 23ನೆಯ ಪುಟ.

ಅ. ಕೃತ್ಯಗಳು 3:21ರಲ್ಲಿ ತಿಳಿಸಲ್ಪಟ್ಟಿರುವ “ಸಮಸ್ತವನ್ನು ಸರಿಮಾಡುವ ಪುನಸ್ಸ್ಥಾಪನೆಯ ಕಾಲ”ವು (NW) ಯಾವಾಗ ಬರಲಿಕ್ಕಿತ್ತು?

ಆ ಪುನಸ್ಸ್ಥಾಪನೆಯು ಎರಡು ಹಂತಗಳಲ್ಲಿ ಬರುವುದು. ಮೊದಲನೆಯದಾಗಿ, 1919ರಿಂದ ಒಂದು ಆತ್ಮಿಕ ಪ್ರಮೋದವನದ ಪುನಸ್ಸ್ಥಾಪನೆಯು ನಡೆಯುತ್ತಿದೆ. ಭೂಮಿಯ ಮೇಲೆ ಒಂದು ಭೌತಿಕ ಪ್ರಮೋದವನವು ಸ್ಥಾಪಿಸಲ್ಪಡುವಾಗ ಇನ್ನೊಂದು ಪುನಸ್ಸ್ಥಾಪನೆಯು ಸಂಭವಿಸುವುದು.​—⁠9/1, 17, 18ನೆಯ ಪುಟಗಳು.

ಜ್ಞಾನೋಕ್ತಿ 6:​6-8ರಲ್ಲಿ ತಿಳಿಸಲ್ಪಟ್ಟಿರುವಂತೆ, ಇರುವೆಗೆ ಯಾವುದೇ ನಾಯಕನಿಲ್ಲವಾದರೂ, ಯಾವ ವಿಧದಲ್ಲಿ ಅದು ನಮಗೆ ಒಂದು ಅತ್ಯುತ್ತಮ ಮಾದರಿಯನ್ನು ಒದಗಿಸುತ್ತದೆ?

ಇರುವೆಗಳ ಸಮೂಹದಲ್ಲಿ, ಒಂದು ರಾಣಿ ಇರುವೆ ಇರುತ್ತದೆ. ಆದರೆ ಮೊಟ್ಟೆಗಳನ್ನಿಟ್ಟು, ಇರುವೆಗಳ ಸಮೂಹಕ್ಕೆ ತಾಯಿಯಾಗಿರುವ ಅರ್ಥದಲ್ಲಿ ಮಾತ್ರ ಅದು ರಾಣಿಯಂತೆ ಕೆಲಸಮಾಡುತ್ತದೆ. ಇರುವೆಗಳು ಸದಾ ಕಾರ್ಯಮಗ್ನವಾಗಿರುತ್ತವೆ. ಆದುದರಿಂದ, ನಮ್ಮ ಕೆಲಸದ ಮೇಲೆ ಮೇಲ್ವಿಚಾರಣೆ ನಡೆಸಲು ಯಾವುದೇ ಮೇಲ್ವಿಚಾರಕನು ಇಲ್ಲದಿರುವಾಗಲೂ, ನಾವು ಸಹ ಇರುವೆಗಳಂತೆ ಕಾರ್ಯನಿರತರಾಗಿರಬೇಕು ಮತ್ತು ನಮ್ಮ ಕೆಲಸದಲ್ಲಿ ಪ್ರಗತಿಯನ್ನು ಮಾಡಲು ಶ್ರಮಿಸಬೇಕು.​—⁠9/15, 26ನೆಯ ಪುಟ.

ಯೋಷೀಯನು ಕದನದಲ್ಲಿ ಮಾರಕವಾಗಿ ಗಾಯಗೊಂಡದ್ದರಿಂದ, 2 ಅರಸು 22:20ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅವನು ರಣರಂಗದಲ್ಲಿ “ಸಮಾಧಾನ”ದಿಂದ ಮರಣಪಡುತ್ತಾನೆ ಎಂಬ ಹುಲ್ದಳ ಪ್ರವಾದನೆಯು ನಿಷ್ಕೃಷ್ಟವಾಗಿತ್ತೋ?

ಹೌದು, ಬಬಿಲೋನಿಯರು ಸಾ.ಶ.ಪೂ. 609-607ರಲ್ಲಿ ಯೆರೂಸಲೇಮಿಗೆ ಮುತ್ತಿಗೆಹಾಕಿ ಅದನ್ನು ನಾಶಮಾಡಿದ ಘೋರ ವಿಪತ್ತಿಗೆ ಮುಂಚೆಯೇ ಯೋಷೀಯನು ಸತ್ತುಹೋದನು; ಈ ಅರ್ಥದಲ್ಲಿ ಅವನು ಸಮಾಧಾನದಿಂದ ಮರಣಪಟ್ಟನು.​—⁠9/15, 30ನೆಯ ಪುಟ.

ಒಬ್ಬ ಪತ್ನಿಯನ್ನು “ಮನೋಹರವಾದ ಒಂದು ಜಿಂಕೆ ಮತ್ತು ಅಂದವಾದ ಬೆಟ್ಟದ ಮೇಕೆ” (NW) ಎಂದು ವರ್ಣಿಸುವುದು ಸೊಲೊಮೋನನಿಗೆ ಹೇಗೆ ಶ್ಲಾಘನೀಯವಾಗಿತ್ತು? (ಜ್ಞಾನೋಕ್ತಿ 5:​18, 19)

ಹೆಣ್ಣು ಆಡು ಅಥವಾ ಬೆಟ್ಟದ ಮೇಕೆಯು ಶಾಂತ ಸ್ವಭಾವದ್ದಾಗಿದೆ ಮತ್ತು ನಯನಾಜೂಕಿನ ವರ್ತನೆಯುಳ್ಳದ್ದಾಗಿದೆ. ಆದರೂ, ಈ ಬೆಟ್ಟದ ಮೇಕೆಯು ಕಡಿದಾದ ಕಲ್ಲುಬಂಡೆಗಳಲ್ಲಿ, ಅಂದರೆ ದುರ್ಗಮವಾದ ಬಂಡೆಗಳ ಮಧ್ಯೆ ಬದುಕಿ ಉಳಿಯಬಲ್ಲದು ಮತ್ತು ಅಲ್ಲಿಯೇ ಮರಿಗಳಿಗೂ ಜನ್ಮನೀಡಬಲ್ಲದು. ಅಷ್ಟುಮಾತ್ರವಲ್ಲ, ಈ ಸ್ಥಳಗಳಲ್ಲಿ ಆಹಾರ ಸಿಗುವುದು ಸಹ ತುಂಬ ಅಪರೂಪ.​—⁠10/1, 30, 31ನೆಯ ಪುಟಗಳು.

ಹೆನ್ರಿ ಗ್ರೂ ಮತ್ತು ಜಾರ್ಜ್‌ ಸ್ಟೊರ್ಸ್‌ ಯಾರಾಗಿದ್ದರು?

ಈ ಇಬ್ಬರು ವ್ಯಕ್ತಿಗಳು 1800ಗಳಲ್ಲಿ ಜೀವಿಸಿದ್ದರು ಮತ್ತು ಇವರು ಅತ್ಯಾಸಕ್ತಿಯುಳ್ಳ ಬೈಬಲ್‌ ವಿದ್ಯಾರ್ಥಿಗಳಾಗಿದ್ದರು. ಆತ್ಮದ ಅಮರತ್ವ ಹಾಗೂ ನರಕಾಗ್ನಿಯ ಸಿದ್ಧಾಂತಗಳಂತೆಯೇ ತ್ರಯೈಕ್ಯವು ಸಹ ಅಶಾಸ್ತ್ರೀಯ ಸಿದ್ಧಾಂತವಾಗಿದೆ ಎಂಬುದನ್ನು ಗ್ರೂ ಕಂಡುಕೊಂಡರು. ಕೆಲವರು ಭೂಮಿಯ ಮೇಲೆ ನಿತ್ಯಜೀವವನ್ನು ಪಡೆದುಕೊಳ್ಳುವರು ಎಂಬ ವಿಚಾರವನ್ನು ಸ್ಟೊರ್ಸ್‌ ವಿವೇಚಿಸಿ ತಿಳಿದುಕೊಂಡರು. ಇವರಿಬ್ಬರೂ, 1879ರಲ್ಲಿ ಈ ಕಾವಲಿನಬುರುಜು ಪತ್ರಿಕೆಯನ್ನು ಮುದ್ರಿಸಲು ಆರಂಭಿಸಿದ ಚಾರ್ಲ್ಸ್‌ ಟೇಸ್‌ ರಸಲ್‌ರಿಗಿಂತಲೂ ಹಿಂದಿನವರಾಗಿದ್ದರು.​—⁠10/15, 26-30ನೆಯ ಪುಟಗಳು.

ಒಬ್ಬನು ವೈದ್ಯಕೀಯ ಕಾರ್ಯವಿಧಾನಗಳಲ್ಲಿ ತನ್ನ ಸ್ವಂತ ರಕ್ತವನ್ನು ಉಪಯೋಗಿಸುವುದರ ಕುರಿತು ಯೆಹೋವನ ಸಾಕ್ಷಿಗಳ ಅಭಿಪ್ರಾಯವೇನು?

ಅವರ ನಂಬಿಕೆಗಳು ಬೈಬಲಿನ ಮೇಲಾಧಾರಿತವಾಗಿರುವುದರಿಂದ, ಅವರು ತಮ್ಮ ಸ್ವಂತ ರಕ್ತವನ್ನು ಶೇಖರಿಸಿ, ತದನಂತರ ಅದನ್ನು ರಕ್ತಪೂರಣವಾಗಿ ಸ್ವೀಕರಿಸುವುದಿಲ್ಲ. ತನ್ನ ಸ್ವಂತ ರಕ್ತವು ಒಂದು ಶಸ್ತ್ರಚಿಕಿತ್ಸಾ ವಿಧಾನದಲ್ಲಿ, ವೈದ್ಯಕೀಯ ಪರೀಕ್ಷೆಯಲ್ಲಿ, ಅಥವಾ ಸದ್ಯದ ಚಿಕಿತ್ಸಾ ಕ್ರಮದಲ್ಲಿ ಹೇಗೆ ಉಪಯೋಗಿಸಲ್ಪಡಬೇಕೆಂಬುದನ್ನು ಒಬ್ಬ ಕ್ರೈಸ್ತನು ಸ್ವತಃ ನಿರ್ಧರಿಸುತ್ತಾನೆ. ರಕ್ತದ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ಅವನು ಪರಿಗಣಿಸಬೇಕು ಮತ್ತು ತಾನು ಸಂಪೂರ್ಣವಾಗಿ ದೇವರಿಗೆ ಸಮರ್ಪಿತನಾಗಿದ್ದೇನೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡಿರಬೇಕು.​—⁠10/15, 30, 31ನೆಯ ಪುಟಗಳು.

ಈ ವರ್ಷದ ಆರಂಭದಲ್ಲಿ ನಡೆಸಲ್ಪಟ್ಟ ಒಂದು ಸಮೀಕ್ಷೆಯು, ಭೂವ್ಯಾಪಕವಾಗಿ ಯೆಹೋವನ ಸಾಕ್ಷಿಗಳ ನಡುವೆ ಇರುವ ಯಾವ ಸ್ಪಷ್ಟ ಆವಶ್ಯಕತೆಯನ್ನು ಪ್ರಕಟಪಡಿಸಿತು?

ಕಡಿಮೆ ಆರ್ಥಿಕ ಸೌಲಭ್ಯಗಳಿದ್ದು, ಈಗ ಅಭಿವೃದ್ಧಿ ಹೊಂದುತ್ತಿರುವಂತಹ ದೇಶಗಳಲ್ಲಿ, ಸುಮಾರು 11,000ಕ್ಕಿಂತಲೂ ಹೆಚ್ಚಿನ ರಾಜ್ಯ ಸಭಾಗೃಹಗಳ ಆವಶ್ಯಕತೆಯಿದೆ. ಅನೇಕ ದೇಶಗಳಲ್ಲಿರುವ ಕ್ರೈಸ್ತರು ಕೊಡುತ್ತಿರುವ ಕಾಣಿಕೆಗಳು, ಸಾಕಷ್ಟು ರಾಜ್ಯ ಸಭಾಗೃಹಗಳನ್ನು ಕಟ್ಟುವಂತೆ ಸಹಾಯಮಾಡಲಿಕ್ಕಾಗಿ ನಿರ್ದೇಶಿಸಲ್ಪಡುತ್ತಿವೆ.​—⁠11/1, 30ನೆಯ ಪುಟ.

ಬೈಬಲಿನಲ್ಲಿ ಆರಾಧನೆಯ ಸಂಬಂಧವಾಗಿ ಉಪಯೋಗಿಸಲ್ಪಟ್ಟಿರುವ ಮೂಲ ಗ್ರೀಕ್‌ ಭಾಷಾ ಶಬ್ದಗಳಲ್ಲಿ ಕೆಲವು ಯಾವುವು?

ಒಂದು ಶಬ್ದವು ಲೀಟೂರೈಯೀಅ ಎಂದಾಗಿದ್ದು, ಇದು “ಸಾರ್ವಜನಿಕ ಸೇವೆ” ಎಂದು ಭಾಷಾಂತರಿಸಲ್ಪಟ್ಟಿದೆ. ಇನ್ನೊಂದು ಶಬ್ದವು ಲಾಟ್ರೀಆ ಎಂದಾಗಿದ್ದು, ಇದು “ಪವಿತ್ರ ಸೇವೆ” ಎಂದು ಭಾಷಾಂತರಿಸಲ್ಪಟ್ಟಿದೆ. (ಇಬ್ರಿಯ 10:11; ಲೂಕ 2:​36, 37)​—⁠11/15, 11, 12ನೆಯ ಪುಟಗಳು.

ಆದಾಮ ಹವ್ವರ ಕುರಿತಾದ ಬೈಬಲ್‌ ವೃತ್ತಾಂತದಿಂದ ನಾವು ಕಲಿಯಸಾಧ್ಯವಿರುವ ಮೂಲಭೂತ ಪಾಠವು ಯಾವುದಾಗಿದೆ?

ಯೆಹೋವ ದೇವರಿಂದ ಸ್ವತಂತ್ರರಾಗಿರಲು ಮಾಡಲ್ಪಡುವ ಯಾವುದೇ ಪ್ರಯತ್ನವು ಕೇವಲ ಮೂರ್ಖತನವಾಗಿದೆ.​—⁠11/15, 24-7ನೆಯ ಪುಟ.

ದೇವರು ತನ್ನ ಸೇವಕರಿಗೆ ಬಲವನ್ನು ಕೊಡುತ್ತಾನೆ ಎಂಬುದಕ್ಕೆ ಯಾವ ಶಾಸ್ತ್ರೀಯ ಆಧಾರವಿದೆ?

ಯೆಹೋವ ದೇವರು ತಮಗೆ ಬಲವನ್ನು ಅಥವಾ ಶಕ್ತಿಯನ್ನು ಕೊಡುತ್ತಾನೆ ಎಂಬುದಕ್ಕೆ, ದಾವೀದ, ಹಬಕ್ಕೂಕ, ಮತ್ತು ಅಪೊಸ್ತಲ ಪೌಲರು ವೈಯಕ್ತಿಕ ಆಧಾರವನ್ನು ನೀಡಿದರು. (ಕೀರ್ತನೆ 60:12; ಹಬಕ್ಕೂಕ 3:19; ಫಿಲಿಪ್ಪಿ 4:13) ಹೀಗೆ, ದೇವರು ನಮಗೂ ಬಲವನ್ನು ಕೊಡಲು ಮನಃಪೂರ್ವಕವಾಗಿ ಸಿದ್ಧನಿದ್ದಾನೆ ಮತ್ತು ಹಾಗೆ ಮಾಡಲು ಶಕ್ತನಾಗಿದ್ದಾನೆ ಎಂಬ ದೃಢಭರವಸೆ ನಮಗಿರಸಾಧ್ಯವಿದೆ.​—⁠12/1, 10, 11ನೆಯ ಪುಟಗಳು.