ಯೆಹೋವನಿಗೆ ಯೋಗ್ಯರಾಗಿ ನಡೆಯಲು ಇತರರಿಗೆ ಸಹಾಯಮಾಡಿರಿ
ಯೆಹೋವನಿಗೆ ಯೋಗ್ಯರಾಗಿ ನಡೆಯಲು ಇತರರಿಗೆ ಸಹಾಯಮಾಡಿರಿ
“ನಾವು . . . ನಿಮಗೋಸ್ಕರ ಪ್ರಾರ್ಥಿಸುವುದನ್ನು ಬಿಟ್ಟಿಲ್ಲ ಮತ್ತು ನೀವು . . . ಯೆಹೋವನಿಗೆ ಯೋಗ್ಯರಾಗಿ ನಡೆದು, ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸುವವರಾಗಿರಬೇಕೆಂತಲೂ ನೀವು ಸಕಲಸತ್ಕಾರ್ಯವೆಂಬ ಫಲವನ್ನು ಕೊಡುತ್ತಾ ಇರಬೇಕೆಂತಲೂ ಬೇಡಿಕೊಳ್ಳುತ್ತಿದ್ದೇವೆ.”—ಕೊಲೊಸ್ಸೆ 1:9, 10, NW.
1, 2. ಸಂತೋಷ ಹಾಗೂ ಸಂತೃಪ್ತಿಯ ವಿಶೇಷ ಮೂಲವು ಯಾವುದು?
“ನಾವು ಒಂದು ತೋಟದ ಮನೆಯಲ್ಲಿರುವ ಸಂಚಾರಿ ಗೃಹದಲ್ಲಿ (ಟ್ರೈಲರ್‌ನಲ್ಲಿ) ವಾಸಿಸುತ್ತೇವೆ. ನಮ್ಮ ಜೀವನವನ್ನು ಸರಳವಾಗಿಟ್ಟುಕೊಂಡಿರುವುದರಿಂದ, ಜನರಿಗೆ ಸುವಾರ್ತೆಯನ್ನು ಮುಟ್ಟಿಸಲು ನಮಗೆ ಹೆಚ್ಚು ಸಮಯ ಸಿಗುತ್ತದೆ. ಅನೇಕರು ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವಂತೆ ಸಹಾಯಮಾಡುವ ಸುಯೋಗ ನಮಗೆ ಸಿಕ್ಕಿದೆ. ಖಂಡಿತವಾಗಿಯೂ ಯೆಹೋವನು ನಮ್ಮನ್ನು ಹೇರಳವಾಗಿ ಆಶೀರ್ವದಿಸಿದ್ದಾನೆ.”—ದಕ್ಷಿಣ ಆಫ್ರಿಕದಲ್ಲಿ ಪೂರ್ಣ ಸಮಯದ ಶುಶ್ರೂಷಕರಾಗಿರುವ ಒಬ್ಬ ವಿವಾಹಿತ ದಂಪತಿಗಳು ಹೇಳಿದ್ದು.
2 ಇತರರಿಗೆ ಸಹಾಯಮಾಡುವುದರಿಂದ ಸಂತೋಷ ಸಿಗುತ್ತದೆ ಎಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೋ? ಕೆಲವರು ಅಸ್ವಸ್ಥರಿಗೆ, ನಿರ್ಗತಿಕರಿಗೆ, ಅಥವಾ ಒಬ್ಬೊಂಟಿಗರಿಗೆ ಸಹಾಯಮಾಡಲು ಪ್ರಯತ್ನಿಸುತ್ತಾರೆ. ಮತ್ತು ಹೀಗೆ ಮಾಡುವುದರಲ್ಲಿ ಸಂತೃಪ್ತಿಯನ್ನು ಕಂಡುಕೊಳ್ಳುತ್ತಾರೆ. ಯೆಹೋವ ದೇವರ ಹಾಗೂ ಯೇಸು ಕ್ರಿಸ್ತನ ಕುರಿತಾದ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವುದೇ ತಾವು ಮಾಡಸಾಧ್ಯವಿರುವ ಅತಿ ದೊಡ್ಡ ಸಹಾಯವಾಗಿದೆ ಎಂದು ಸತ್ಯ ಕ್ರೈಸ್ತರು ನೆನಸುತ್ತಾರೆ. ಈ ಸಹಾಯವು ಮಾತ್ರ, ಇತರರು ಯೇಸುವಿನ ಪ್ರಾಯಶ್ಚಿತ್ತವನ್ನು ಅಂಗೀಕರಿಸುವಂತೆ, ದೇವರೊಂದಿಗೆ ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳುವಂತೆ, ಮತ್ತು ನಿತ್ಯಜೀವವನ್ನು ಪಡೆದುಕೊಳ್ಳಲು ಅರ್ಹರಾಗುವಂತೆ ಮಾಡಬಲ್ಲದು.—ಅ. ಕೃತ್ಯಗಳು 3:19-21; 13:48.
3. ಯಾವ ರೀತಿಯ ಸಹಾಯಕ್ಕೆ ನಾವು ಗಮನವನ್ನು ಕೊಡಬೇಕಾಗಿದೆ?
3 ಆದರೂ, ಸರಿಯಾದ “ಮಾರ್ಗ”ವನ್ನು ಅನುಸರಿಸುತ್ತಾ, ಈಗಾಗಲೇ ದೇವರ ಸೇವೆಮಾಡುತ್ತಿರುವವರಿಗೆ ಸಹಾಯಮಾಡುವುದರ ಕುರಿತಾಗಿ ಏನು? (ಅ. ಕೃತ್ಯಗಳು 19:9) ಅವರ ವಿಷಯದಲ್ಲಿ ನಿಮಗೆ ತುಂಬ ಆಸಕ್ತಿಯಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೂ, ಅವರಿಗೆ ಹೆಚ್ಚಿನ ಸಹಾಯವನ್ನು ನೀಡಸಾಧ್ಯವಿರುವ ವಿಧಗಳು ನಿಮಗೆ ಗೊತ್ತಿಲ್ಲದಿರಬಹುದು. ಅಥವಾ ಸಹಾಯಮಾಡುವ ವಿಧಗಳು ನಿಮಗೆ ಗೊತ್ತಿರಬಹುದಾದರೂ, ಅದನ್ನು ಮಾಡಲು ನಿಮ್ಮ ಪರಿಸ್ಥಿತಿಯು ಅನುಮತಿಸದಿರಬಹುದು. ಇದರಿಂದಾಗಿ ನೀವು ಪಡೆದುಕೊಳ್ಳಸಾಧ್ಯವಿರುವ ಸಂತೃಪ್ತಿಯೂ ತುಂಬ ಮಿತವಾಗಿರುವುದು. (ಅ. ಕೃತ್ಯಗಳು 20:35) ಈ ಎರಡೂ ಅಂಶಗಳ ಬಗ್ಗೆ ನಾವು ಕೊಲೊಸ್ಸೆ ಪುಸ್ತಕದಿಂದ ಪಾಠವನ್ನು ಕಲಿಯಸಾಧ್ಯವಿದೆ.
4. (ಎ) ಯಾವ ಸನ್ನಿವೇಶಗಳ ಕೆಳಗೆ ಪೌಲನು ಕೊಲೊಸ್ಸೆಯವರಿಗೆ ಪತ್ರವನ್ನು ಬರೆದನು? (ಬಿ) ಅದರಲ್ಲಿ ಎಪಫ್ರನು ಹೇಗೆ ಒಳಗೂಡಿದ್ದನು?
4 ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಪತ್ರ ಬರೆದಾಗ, ಅವನು ರೋಮ್‌ನಲ್ಲಿ ಗೃಹಬಂಧನದಲ್ಲಿದ್ದನು. ಆದರೂ, ಸಂದರ್ಶಕರು ಅವನನ್ನು ಭೇಟಿಮಾಡಸಾಧ್ಯವಿತ್ತು. ನೀವು ನಿರೀಕ್ಷಿಸಸಾಧ್ಯವಿರುವಂತೆಯೇ, ಪೌಲನು ತನಗೆ ದೊರಕಿದ್ದ ಮಿತವಾದ ಸ್ವಾತಂತ್ರ್ಯವನ್ನು ದೇವರ ರಾಜ್ಯದ ಕುರಿತು ಸಾರಲಿಕ್ಕಾಗಿ ಉಪಯೋಗಿಸಿದನು. (ಅ. ಕೃತ್ಯಗಳು 28:16-31) ಜೊತೆ ಕ್ರೈಸ್ತರು ಸಹ ಪೌಲನನ್ನು ಭೇಟಿಯಾಗಸಾಧ್ಯವಿತ್ತು. ಅಷ್ಟುಮಾತ್ರವಲ್ಲ, ಅವರಲ್ಲಿ ಕೆಲವರು ಅವನೊಂದಿಗೆ ಸೆರೆಮನೆಯಲ್ಲೂ ಹಾಕಲ್ಪಟ್ಟಿದ್ದಿರಬಹುದು. (ಕೊಲೊಸ್ಸೆ 1:7, 8; 4:10) ಅವರಲ್ಲಿ ಒಬ್ಬನು, ಹುರುಪಿನ ಸೌವಾರ್ತಿಕನಾದ ಎಪಫ್ರನಾಗಿದ್ದನು. ಇವನು ಏಷ್ಯಾ ಮೈನರ್‌ನ (ಆಧುನಿಕ ದಿನದ ಟರ್ಕಿ) ಎಫೆಸದ ಪೂರ್ವಕ್ಕಿರುವ ಪ್ರಸ್ಥಭೂಮಿ ನಗರದಲ್ಲಿದ್ದ ಫ್ರುಗ್ಯ ಸೀಮೆಯ ಕೊಲೊಸ್ಸೆಯಿಂದ ಬಂದವನಾಗಿದ್ದನು. ಕೊಲೊಸ್ಸೆಯಲ್ಲಿ ಒಂದು ಸಭೆಯನ್ನು ಸ್ಥಾಪಿಸುವುದಕ್ಕಾಗಿ ಎಪಫ್ರನು ಸಹಾಯ ಮಾಡಿದ್ದನು. ಮತ್ತು ಸಮೀಪದ ಲವೊದಿಕೀಯ ಹಾಗೂ ಹಿರಿಯಾಪೊಲಿಯಲ್ಲಿದ್ದ ಸಭೆಗಳಿಗೋಸ್ಕರವೂ ಪ್ರಯಾಸಪಟ್ಟಿದ್ದನು. (ಕೊಲೊಸ್ಸೆ 4:12, 13) ರೋಮ್‌ನಲ್ಲಿದ್ದ ಪೌಲನನ್ನು ನೋಡಲಿಕ್ಕಾಗಿ ಎಪಫ್ರನು ಏಕೆ ಅಲ್ಲಿಗೆ ಪ್ರಯಾಣಿಸಿದನು, ಮತ್ತು ಪೌಲನು ಕೊಟ್ಟ ಪ್ರತ್ಯುತ್ತರದಿಂದ ನಾವೇನನ್ನು ಕಲಿತುಕೊಳ್ಳಸಾಧ್ಯವಿದೆ?
ಕೊಲೊಸ್ಸೆಯವರಿಗೆ ಪ್ರಯೋಜನದಾಯಕ ಸಹಾಯ
5. ಪೌಲನು ಕೊಲೊಸ್ಸೆಯವರಿಗೆ ಪತ್ರ ಬರೆಯಲು ಕಾರಣವೇನು?
5 ಕೊಲೊಸ್ಸೆ ಸಭೆಯಲ್ಲಿದ್ದ ಪರಿಸ್ಥಿತಿಯ ಕುರಿತು ಪೌಲನಿಂದ ಸಲಹೆಯನ್ನು ಕೇಳುವುದಕ್ಕಾಗಿ ಎಪಫ್ರನು, ರೋಮ್‌ಗೆ ಹೋಗುವ ಸಾಹಸಮಯ ಪ್ರಯಾಣವನ್ನು ಕೈಗೊಂಡಿದ್ದನು. ಆ ಕ್ರೈಸ್ತರ ನಂಬಿಕೆ, ಪ್ರೀತಿ, ಹಾಗೂ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಪರಿಶ್ರಮದ ಕುರಿತು ಅವನು ಪೌಲನಿಗೆ ವರದಿಸಿದನು. (ಕೊಲೊಸ್ಸೆ 1:4-8) ಅಷ್ಟುಮಾತ್ರವಲ್ಲ, ಕೊಲೊಸ್ಸೆ ಸಭೆಯ ಆತ್ಮಿಕತೆಗೆ ಬೆದರಿಕೆಯನ್ನು ಒಡ್ಡುತ್ತಿದ್ದಂತಹ ನಕಾರಾತ್ಮಕ ಪ್ರಭಾವದ ಕುರಿತು ಸಹ ಅವನು ಪೌಲನಿಗೆ ಹೇಳಿದ್ದಿರಬೇಕು. ಇದಕ್ಕೆ ಒಂದು ದೈವಪ್ರೇರಿತ ಪತ್ರದ ಮೂಲಕ ಪೌಲನು ಪ್ರತ್ಯುತ್ತರಿಸಿದನು. ಅದರಲ್ಲಿ, ಸುಳ್ಳು ಬೋಧಕರು ಹಬ್ಬಿಸುತ್ತಿದ್ದಂತಹ ಕೆಲವೊಂದು ಅಭಿಪ್ರಾಯಗಳನ್ನು ಅವನು ವಿರೋಧಿಸಿ ಬರೆದಿದ್ದನು. ಇದಲ್ಲದೆ, ಯೇಸು ಕ್ರಿಸ್ತನು ವಹಿಸುವ ಪ್ರಮುಖ ಪಾತ್ರದ ಕುರಿತು ಅವನು ವಿಶೇಷ ಗಮನವನ್ನು ಹರಿಸಿದನು. * ಪ್ರಾಮುಖ್ಯವಾದ ಬೈಬಲ್ ಸತ್ಯತೆಗಳನ್ನು ಒತ್ತಿಹೇಳುವುದಕ್ಕೆ ಮಾತ್ರ ಅವನ ಸಹಾಯವು ಸೀಮಿತವಾಗಿತ್ತೋ? ಬೇರೆ ಯಾವ ರೀತಿಯಲ್ಲಿ ಅವನು ಕೊಲೊಸ್ಸೆಯವರಿಗೆ ಸಹಾಯಮಾಡಸಾಧ್ಯವಿತ್ತು, ಮತ್ತು ಇತರರಿಗೆ ಸಹಾಯ ಮಾಡುವ ವಿಷಯದಲ್ಲಿ ನಾವು ಯಾವ ಪಾಠಗಳನ್ನು ಕಲಿತುಕೊಳ್ಳಬಲ್ಲೆವು?
6. ಕೊಲೊಸ್ಸೆಯವರಿಗೆ ಬರೆದ ತನ್ನ ಪತ್ರದಲ್ಲಿ ಪೌಲನು ಯಾವುದನ್ನು ಒತ್ತಿಹೇಳಿದನು?
6 ತನ್ನ ಪತ್ರದ ಆರಂಭದಲ್ಲಿ ಪೌಲನು, ನಾವು ಪರಿಗಣಿಸಲು ತಪ್ಪಿಹೋಗಿರಬಹುದಾದ ಒಂದು ರೀತಿಯ ಸಹಾಯದ ಕುರಿತಾದ ಒಳನೋಟವನ್ನು ನೀಡುತ್ತಾನೆ. ಅದು ಒಬ್ಬ ವ್ಯಕ್ತಿಯು ದೂರವಿದ್ದರೂ ಪರಿಣಾಮಕಾರಿಯಾದ ರೀತಿಯಲ್ಲಿ ಸಹಾಯಮಾಡುವ ಮಾಧ್ಯಮವೇ ಆಗಿತ್ತು. ಪೌಲ ಹಾಗೂ ಎಪಫ್ರರು ಕೊಲೊಸ್ಸೆಯಿಂದ ದೂರವಿದ್ದರೂ ತಾವಿದ್ದ ಸ್ಥಳಗಳಿಂದಲೇ ಸಹಾಯಮಾಡಿದರು. ಈ ವಿಷಯದಲ್ಲಿ ಪೌಲನು ಒತ್ತಿಹೇಳಿದ್ದು: “ನಾವು ಪ್ರಾರ್ಥನೆಮಾಡುವಾಗೆಲ್ಲಾ ನಿಮ್ಮ ನಿಮಿತ್ತವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾಗಿರುವ ದೇವರಿಗೆ ಸ್ತೋತ್ರಮಾಡುತ್ತೇವೆ [NW ಪಾದಟಿಪ್ಪಣಿ, “ಯಾವಾಗಲೂ ಪ್ರಾರ್ಥಿಸುತ್ತೇವೆ”].” ಹೌದು, ಕೊಲೊಸ್ಸೆಯಲ್ಲಿದ್ದ ಕ್ರೈಸ್ತರಿಗೋಸ್ಕರ ನಿರ್ದಿಷ್ಟ ಪ್ರಾರ್ಥನೆಗಳನ್ನು ಅವರು ಮಾಡಿದರು. ಅಷ್ಟುಮಾತ್ರವಲ್ಲ, “ಆದಕಾರಣ ನಾವು ನಿಮ್ಮ ಸುದ್ಧಿಯನ್ನು ಕೇಳಿದ ದಿವಸದಿಂದ ನಿಮಗೋಸ್ಕರ ಪ್ರಾರ್ಥಿಸುವದನ್ನು ಬಿಡದೆ ನೀವು ಸಕಲ ಆತ್ಮೀಯ ಜ್ಞಾನವನ್ನೂ ಗ್ರಹಿಕೆಯನ್ನೂ ಹೊಂದು”ವಂತೆ ಬೇಡಿಕೊಳ್ಳುತ್ತಿದ್ದೇವೆ ಎಂದು ಸಹ ಪೌಲನು ಹೇಳಿದನು.—ಕೊಲೊಸ್ಸೆ 1:3, 9.
7, 8. ನಮ್ಮ ವೈಯಕ್ತಿಕ ಪ್ರಾರ್ಥನೆಗಳು ಹಾಗೂ ಸಭಾ ಪ್ರಾರ್ಥನೆಗಳು ಅನೇಕವೇಳೆ ಯಾವ ವಿಷಯವನ್ನು ಒಳಗೂಡಿರುತ್ತವೆ?
7 ಯೆಹೋವನು “ಪ್ರಾರ್ಥನೆಯನ್ನು ಕೇಳುವವ”ನಾಗಿದ್ದಾನೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದುದರಿಂದ, ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ಮಾಡಲ್ಪಡುವ ನಮ್ಮ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳಲು ಆತನು ಸಿದ್ಧಮನಸ್ಸುಳ್ಳವನಾಗಿದ್ದಾನೆ ಎಂಬ ವಿಷಯದಲ್ಲಿ ನಾವು ಭರವಸೆಯಿಡಸಾಧ್ಯವಿದೆ. (ಕೀರ್ತನೆ 65:2; 86:6; ಜ್ಞಾನೋಕ್ತಿ 15:8, 29; 1 ಯೋಹಾನ 5:14) ಆದರೂ, ಇತರರಿಗೋಸ್ಕರ ನಾವು ಪ್ರಾರ್ಥಿಸುವಾಗ, ನಮ್ಮ ಪ್ರಾರ್ಥನೆಗಳು ಯಾವ ರೀತಿಯಲ್ಲಿರುತ್ತವೆ?
8 ‘ಲೋಕದಲ್ಲಿರುವ ನಮ್ಮ ಇಡೀ ಸಹೋದರರ ಬಳಗದ’ (NW) ಕುರಿತು ನಾವು ಅನೇಕವೇಳೆ ಚಿಂತಿಸಬಹುದು ಮತ್ತು ಅವರ ಪರವಾಗಿ ಪ್ರಾರ್ಥಿಸಬಹುದು. (1 ಪೇತ್ರ 5:9) ಅಥವಾ ನೈಸರ್ಗಿಕ ವಿಪತ್ತು ಇಲ್ಲವೆ ದುರಂತವು ಸಂಭವಿಸಿರುವಂತಹ ಕ್ಷೇತ್ರದಲ್ಲಿರುವ ಕ್ರೈಸ್ತರ ಕುರಿತು ಹಾಗೂ ಇನ್ನಿತರರ ಕುರಿತು ನಾವು ಯೆಹೋವನ ಬಳಿ ವಿನಂತಿಸಿಕೊಳ್ಳಬಹುದು. ಯೂದಾಯ ಸೀಮೆಯಲ್ಲಿ ಕ್ಷಾಮವು ಉಂಟಾದುದರ ಬಗ್ಗೆ ಬೇರೆ ಕಡೆಗಳಲ್ಲಿದ್ದ ಪ್ರಥಮ ಶತಮಾನದ ಶಿಷ್ಯರು ಕೇಳಿಸಿಕೊಂಡಾಗ, ಪರಿಹಾರ ನಿಧಿಯನ್ನು ಕಳುಹಿಸುವುದಕ್ಕಿಂತಲೂ ಮುಂಚೆ ಇವರು ತಮ್ಮ ಸಹೋದರರ ಪರವಾಗಿ ಅಸಂಖ್ಯಾತ ಪ್ರಾರ್ಥನೆಗಳನ್ನು ಸಲ್ಲಿಸಿದ್ದಿರಬೇಕು. (ಅ. ಕೃತ್ಯಗಳು 11:27-30) ನಮ್ಮ ದಿನಗಳಲ್ಲಿ, ಇಡೀ ಸಹೋದರರ ಬಳಗದ ಕುರಿತು ಅಥವಾ ಸಹೋದರರ ಒಂದು ದೊಡ್ಡ ಗುಂಪಿನ ಕುರಿತಾದ ಪ್ರಾರ್ಥನೆಗಳು ಅನೇಕವೇಳೆ ಕ್ರೈಸ್ತ ಕೂಟಗಳಲ್ಲಿ ಕೇಳಿಬರುತ್ತವೆ. ಮತ್ತು ಈ ಪ್ರಾರ್ಥನೆಗಳನ್ನು ಅನೇಕರು ಅರ್ಥಮಾಡಿಕೊಂಡು, “ಆಮೆನ್” ಎಂದು ಹೇಳಶಕ್ತರಾಗುತ್ತಾರೆ.—1 ಕೊರಿಂಥ 14:16.
ಪ್ರಾರ್ಥನೆಯಲ್ಲಿ ನಿಮ್ಮ ಆವಶ್ಯಕತೆಗಳನ್ನು ಸ್ಪಷ್ಟವಾಗಿ ತಿಳಿಸಿರಿ
9, 10. (ಎ) ನಿರ್ದಿಷ್ಟ ವ್ಯಕ್ತಿಗಳ ಕುರಿತಾಗಿ ಪ್ರಾರ್ಥಿಸುವುದು ಸೂಕ್ತವಾದದ್ದಾಗಿದೆ ಎಂಬುದನ್ನು ಯಾವ ಉದಾಹರಣೆಗಳು ತೋರಿಸುತ್ತವೆ? (ಬಿ) ಯಾವ ರೀತಿಯಲ್ಲಿ ಪೌಲನು ನಿರ್ದಿಷ್ಟ ಪ್ರಾರ್ಥನೆಯ ಕೇಂದ್ರಬಿಂದುವಾಗಿದ್ದನು?
9 ಇತರರ ಪರವಾಗಿ ಮಾಡಲ್ಪಡುವ ಪ್ರಾರ್ಥನೆಗಳ ಮಾದರಿಯನ್ನು ಬೈಬಲು ನಮಗೆ ಒದಗಿಸುತ್ತದೆ. ಈ ಪ್ರಾರ್ಥನೆಗಳಲ್ಲಿ ಆವಶ್ಯಕತೆಗಳು ಸ್ಪಷ್ಟವಾಗಿ ತಿಳಿಸಲ್ಪಟ್ಟಿದ್ದವು ಮತ್ತು ಅವು ನಿರ್ದಿಷ್ಟ ವ್ಯಕ್ತಿಗಳಿಗೋಸ್ಕರ ಸಲ್ಲಿಸಲ್ಪಟ್ಟ ಪ್ರಾರ್ಥನೆಗಳಾಗಿದ್ದವು. ಲೂಕ 22:31, 32ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಹೇಳಿಕೆಯ ಕುರಿತು ಮನನಮಾಡಿರಿ. ಅವನ ಜೊತೆ 11 ಮಂದಿ ನಂಬಿಗಸ್ತ ಅಪೊಸ್ತಲರಿದ್ದರು. ಅವರ ಮುಂದಿರುವ ಕಷ್ಟಕರ ಸಮಯಗಳಲ್ಲಿ ಅವರೆಲ್ಲರಿಗೂ ದೇವರ ಬೆಂಬಲದ ಅಗತ್ಯವಿತ್ತು. ಮತ್ತು ಯೇಸು ಅವರಿಗೋಸ್ಕರ ಪ್ರಾರ್ಥಿಸಿದನು. (ಯೋಹಾನ 17:9-14) ಆದರೂ, ಯೇಸು ಪೇತ್ರನಿಗೋಸ್ಕರ ಬೇಡಿಕೊಂಡನು; ಅಂದರೆ, ಆ ಒಬ್ಬ ಶಿಷ್ಯನಿಗೋಸ್ಕರ ನಿರ್ದಿಷ್ಟವಾದ ಒಂದು ಪ್ರಾರ್ಥನೆಯನ್ನು ಮಾಡಿದನು. ಇನ್ನಿತರ ಉದಾಹರಣೆಗಳು ಯಾವುವೆಂದರೆ: ಒಬ್ಬ ನಿರ್ದಿಷ್ಟ ವ್ಯಕ್ತಿಗೆ, ಅಂದರೆ ತನ್ನ ಸೇವಕನಿಗೆ ದೇವರು ಸಹಾಯಮಾಡುವಂತೆ ಎಲೀಷನು ಪ್ರಾರ್ಥಿಸಿದನು. (2 ಅರಸು 6:15-17) ಗಾಯನು ಭೌತಿಕವಾಗಿ ಹಾಗೂ ಆತ್ಮಿಕವಾಗಿ ಅಭಿವೃದ್ಧಿ ಹೊಂದಿ ಸುಕ್ಷೇಮವಾಗಿರಲಿ ಎಂದು ಅಪೊಸ್ತಲ ಯೋಹಾನನು ಪ್ರಾರ್ಥಿಸಿದನು. (3 ಯೋಹಾನ 1, 2) ಮತ್ತು ಇನ್ನಿತರ ಪ್ರಾರ್ಥನೆಗಳು ನಿರ್ದಿಷ್ಟ ಗುಂಪುಗಳ ಮೇಲೆ ಕೇಂದ್ರೀಕೃತವಾಗಿದ್ದವು.—ಯೋಬ 42:7, 8; ಲೂಕ 6:28; ಅ. ಕೃತ್ಯಗಳು 7:60; 1 ತಿಮೊಥೆಯ 2:1, 2.
10 ನಿರ್ದಿಷ್ಟ ಆವಶ್ಯಕತೆಗಳನ್ನು ಸ್ಪಷ್ಟವಾಗಿ ತಿಳಿಯಪಡಿಸುವಂತಹ ಪ್ರಾರ್ಥನೆಗಳ ಮಹತ್ವವನ್ನು ಪೌಲನ ಪತ್ರಗಳು ಒತ್ತಿಹೇಳುತ್ತವೆ. ತನಗೋಸ್ಕರ ಹಾಗೂ ತನ್ನ ಸಂಗಡಿಗರಿಗೋಸ್ಕರ ಪ್ರಾರ್ಥಿಸುವಂತೆ ಅವನು ಕೇಳಿಕೊಂಡನು. ಕೊಲೊಸ್ಸೆ 4:2, 3ರಲ್ಲಿ ನಾವು ಹೀಗೆ ಓದುತ್ತೇವೆ: “ಪ್ರಾರ್ಥನೆಯನ್ನು ತಪ್ಪದೆ ಮಾಡುವವರಾಗಿ ಅದರಲ್ಲಿ ಎಚ್ಚರವಾಗಿದ್ದು ದೇವರಿಗೆ ಕೃತಜ್ಞತಾಸ್ತುತಿಮಾಡಿರಿ. ಇದಲ್ಲದೆ ನಮಗೋಸ್ಕರವೂ ಪ್ರಾರ್ಥನೆಮಾಡಿರಿ. ಕ್ರಿಸ್ತನ ವಿಷಯದಲ್ಲಿ ದೇವರು ತಿಳಿಯಪಡಿಸಿದ ಸತ್ಯಾರ್ಥವನ್ನು ಪ್ರಸಂಗಿಸುವದಕ್ಕೆ ಆತನು ಅನುಕೂಲವಾದ ಸಂದರ್ಭವನ್ನು ನಮಗೆ ದಯಪಾಲಿಸಿ ನಾನು ಅದನ್ನು ಹೇಳಬೇಕಾದ ರೀತಿಯಲ್ಲಿ ತಿಳಿಸುವಂತೆ ಅನುಗ್ರಹಮಾಡಬೇಕೆಂದು ಬೇಡಿಕೊಳ್ಳಿರಿ; ಆ ಸತ್ಯಾರ್ಥದ ನಿಮಿತ್ತವೇ ನಾನು ಸೆರೆಯಲ್ಲಿದ್ದೇನಲ್ಲಾ.” ಈ ಕೆಳಗಿನ ಉದಾಹರಣೆಗಳನ್ನು ಸಹ ಪರಿಗಣಿಸಿರಿ: ರೋಮಾಪುರ 15:30; 1 ಥೆಸಲೊನೀಕ 5:25; 2 ಥೆಸಲೊನೀಕ 3:1; ಇಬ್ರಿಯ 13:18.
11. ರೋಮ್‌ನಲ್ಲಿದ್ದಾಗ ಎಪಫ್ರನು ಯಾರಿಗೋಸ್ಕರ ಪ್ರಾರ್ಥಿಸುತ್ತಿದ್ದನು?
11 ರೋಮ್‌ನಲ್ಲಿ ಪೌಲನ ಸಂಗಡಿಗನಾಗಿದ್ದ ಎಪಫ್ರನ ವಿಷಯದಲ್ಲಿಯೂ ಇದು ಸತ್ಯವಾಗಿತ್ತು. “ನಿಮ್ಮ ಊರಿನ ಎಪಫ್ರನು ನಿಮಗೆ ವಂದನೆಹೇಳುತ್ತಾನೆ; ಇವನು ಪ್ರಾರ್ಥನೆಮಾಡುವಾಗೆಲ್ಲಾ ನಿಮಗೋಸ್ಕರ ಹೋರಾಡಿ . . . ವಿಜ್ಞಾಪನೆಮಾಡುತ್ತಾನೆ.” (ಕೊಲೊಸ್ಸೆ 4:12) ‘ಹೋರಾಡು’ ಎಂದು ಭಾಷಾಂತರಿಸಲ್ಪಟ್ಟಿರುವ ಶಬ್ದವು, “ಪ್ರಯಾಸಪಡುವುದನ್ನು” ಸೂಚಿಸಸಾಧ್ಯವಿದೆ. ಇದನ್ನು ಪುರಾತನ ಕಾಲದ ಕ್ರೀಡೆಗಳಲ್ಲಿ ಒಳಗೂಡುತ್ತಿದ್ದ ಅಂಗಸಾಧಕನ ಪ್ರಯಾಸಕ್ಕೆ ಹೋಲಿಸಸಾಧ್ಯವಿದೆ. ಹಾಗಾದರೆ ಎಪಫ್ರನು, ಲೋಕವ್ಯಾಪಕವಾಗಿದ್ದ ವಿಶ್ವಾಸಿಗಳ ಬಳಗದ ಕುರಿತು ಕಟ್ಟಾಸಕ್ತಿಯಿಂದ ಪ್ರಾರ್ಥಿಸುತ್ತಿದ್ದನೋ ಅಥವಾ ಏಷ್ಯಾ ಮೈನರ್‌ನಲ್ಲೆಲ್ಲ ಇದ್ದ ಸತ್ಯಾರಾಧಕರ ಕುರಿತು ಪ್ರಾರ್ಥಿಸುತ್ತಿದ್ದನೋ? ನಿರ್ದಿಷ್ಟವಾಗಿ ಕೊಲೊಸ್ಸೆ ಸಭೆಯಲ್ಲಿದ್ದವರ ಪರವಾಗಿ ಎಪಫ್ರನು ಪ್ರಾರ್ಥಿಸುತ್ತಿದ್ದನು ಎಂದು ಪೌಲನು ಸೂಚಿಸಿದನು. ಏಕೆಂದರೆ ಕೊಲೊಸ್ಸೆ ಸಭೆಯಲ್ಲಿದ್ದವರ ಸನ್ನಿವೇಶದ ಕುರಿತು ಎಪಫ್ರನಿಗೆ ತಿಳಿದಿತ್ತು. ಅವರೆಲ್ಲರ ಹೆಸರೂ ನಮಗೆ ಗೊತ್ತಿಲ್ಲ, ಅಥವಾ ಅವರು ಯಾವ ಸಮಸ್ಯೆಗಳನ್ನು ಎದುರಿಸಿದರು ಎಂಬುದೂ ನಮಗೆ ಗೊತ್ತಿಲ್ಲ. ಆದರೆ ಅವರು ಕೆಲವು ಸಮಸ್ಯೆಗಳನ್ನು ಎದುರಿಸಿದ್ದಿರಬಹುದು ಎಂಬುದನ್ನು ನಾವು ಊಹಿಸಸಾಧ್ಯವಿದೆ. ಆಗ ಪ್ರಚಲಿತವಾಗಿದ್ದ ತತ್ವಜ್ಞಾನದ ಪ್ರಭಾವದಿಂದ ದೂರವಿರಲು ಲೀನನು ಹೋರಾಟ ನಡಿಸುತ್ತಿದ್ದಿರಬಹುದು. ಮತ್ತು ರೂಫನು ಯೆಹೂದಿ ಮತದಲ್ಲಿದ್ದಾಗ ರೂಢಿಯಲ್ಲಿದ್ದ ಕೆಲವು ಪದ್ಧತಿಗಳ ಆಕರ್ಷಣೆಯನ್ನು ಪ್ರತಿರೋಧಿಸಲು ಅವನಿಗೆ ಹೆಚ್ಚಿನ ಬಲದ ಅಗತ್ಯವಿದ್ದಿರಬಹುದು. ಪೆರ್ಸೀಸಳಿಗೆ ಅವಿಶ್ವಾಸಿ ಗಂಡನಿದ್ದುದರಿಂದ, ತನ್ನ ಮಕ್ಕಳನ್ನು ಕರ್ತನ ಉಪದೇಶಗಳಿಗನುಸಾರ ಬೆಳೆಸಲು ಅವಳಿಗೆ ತಾಳ್ಮೆ ಹಾಗೂ ವಿವೇಕದ ಆವಶ್ಯಕತೆಯಿದ್ದಿರಬಹುದು. ಹಾಗೂ ಮಾರಕ ಅಸ್ವಸ್ಥತೆಯಿಂದ ನರಳುತ್ತಿದ್ದ ಅಸುಂಕ್ರಿತನಿಗೆ ಇನ್ನೂ ಹೆಚ್ಚಿನ ಸಾಂತ್ವನದ ಜರೂರಿಯಿದ್ದಿರಬಹುದು. ಹೌದು, ತನ್ನ ಸ್ವಂತ ಸಭೆಯಲ್ಲಿದ್ದವರ ಆವಶ್ಯಕತೆಗಳ ಅರಿವು ಎಪಫ್ರನಿಗಿತ್ತು. ಆದುದರಿಂದಲೇ, ಅವನು ಅವರ ಕುರಿತು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸಿದನು. ಇದಲ್ಲದೆ, ಅಂತಹ ಸಮರ್ಪಿತ ಮನೋಭಾವದ ಜನರು ಯೆಹೋವನಿಗೆ ಯೋಗ್ಯರಾಗಿ ನಡೆಯಬೇಕೆಂಬುದು ಎಪಫ್ರನ ಹಾಗೂ ಪೌಲನ ಬಯಕೆಯಾಗಿತ್ತು.
12. ನಮ್ಮ ಖಾಸಗಿ ಪ್ರಾರ್ಥನೆಗಳಲ್ಲಿ ನಾವು ಇನ್ನೂ ನಿರ್ದಿಷ್ಟವಾದ ರೀತಿಯಲ್ಲಿ ಹೇಗೆ ಬೇಡಿಕೊಳ್ಳಬಹುದು?
12 ನಾವು ಇತರರಿಗೆ ಸಹಾಯಮಾಡಸಾಧ್ಯವಿರುವ ಒಂದು ವಿಧವನ್ನು, ಅಂದರೆ ಒಂದು ಮಾದರಿಯನ್ನು ನೀವು ಗಮನಿಸಿದಿರೋ? ಈಗಾಗಲೇ ನೋಡಿದಂತೆ, ಕ್ರೈಸ್ತ ಕೂಟಗಳಲ್ಲಿ ಮಾಡಲ್ಪಡುವ ಬಹಿರಂಗ ಪ್ರಾರ್ಥನೆಗಳು ಅನೇಕವೇಳೆ ಸಹೋದರರ ಒಂದು ದೊಡ್ಡ ಬಳಗದ ಪರವಾಗಿ ವಿಶಾಲಾರ್ಥದಲ್ಲಿ ಮಾಡಲ್ಪಡುತ್ತವೆ. ಆದರೆ, ನಮ್ಮ ವೈಯಕ್ತಿಕ ಪ್ರಾರ್ಥನೆಗಳಲ್ಲಿ ಅಥವಾ ಕುಟುಂಬದ ಪ್ರಾರ್ಥನೆಗಳಲ್ಲಿ ನಾವು ನಿರ್ದಿಷ್ಟವಾದ ವಿಚಾರವನ್ನು ವ್ಯಕ್ತಪಡಿಸಸಾಧ್ಯವಿದೆ. ಸಂಚರಣ ಮೇಲ್ವಿಚಾರಕರನ್ನು ಅಥವಾ ಆತ್ಮಿಕ ಕುರುಬರನ್ನು ಮಾರ್ಗದರ್ಶಿಸು ಮತ್ತು ಆಶೀರ್ವದಿಸು ಎಂದು ನಾವು ಪ್ರಾರ್ಥನೆಯಲ್ಲಿ ಬೇಡಿಕೊಳ್ಳಬಹುದಾದರೂ, ಕೆಲವೊಮ್ಮೆ ಒಬ್ಬ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಪ್ರಾರ್ಥಿಸುವುದು ಒಳ್ಳೇದಾಗಿರುವುದಿಲ್ಲವೋ? ಉದಾಹರಣೆಗೆ, ನಮ್ಮ ಸಭೆಯನ್ನು ಸಂದರ್ಶಿಸುತ್ತಿರುವ ಸರ್ಕಿಟ್ ಮೇಲ್ವಿಚಾರಕನಿಗೋಸ್ಕರ ಅಥವಾ ನಮ್ಮ ಸಭಾ ಪುಸ್ತಕಭ್ಯಾಸ ಚಾಲಕನಿಗೋಸ್ಕರ ಅವರ ಹೆಸರನ್ನು ಹೇಳಿ ನಾವು ಏಕೆ ಪ್ರಾರ್ಥಿಸಬಾರದು? ಫಿಲಿಪ್ಪಿ 2:25-28 ಮತ್ತು 1 ತಿಮೊಥೆಯ 5:23ನೆಯ ವಚನಗಳು, ಎಪಫ್ರೊದೀತ ಹಾಗೂ ತಿಮೊಥೆಯ ಆರೋಗ್ಯದ ಕುರಿತು ಪೌಲನು ತೋರಿಸಿದ ವ್ಯಕ್ತಿಗತ ಕಾಳಜಿಯನ್ನು ತೋರಿಸುತ್ತವೆ. ತದ್ರೀತಿಯಲ್ಲಿ ನಮಗೆ ಗೊತ್ತಿರುವಂತಹ ಅಸ್ವಸ್ಥರ ಬಗ್ಗೆ ನಾವು ಸಹ ಇಂತಹದ್ದೇ ಆಸಕ್ತಿಯನ್ನು ತೋರಿಸಿ, ಅವರ ಹೆಸರನ್ನು ಪ್ರಾರ್ಥನೆಯಲ್ಲಿ ಒಳಗೂಡಿಸಬಲ್ಲೆವೋ?
13. ಯಾವ ರೀತಿಯ ಸನ್ನಿವೇಶಗಳನ್ನು ನಮ್ಮ ವೈಯಕ್ತಿಕ ಪ್ರಾರ್ಥನೆಗಳಲ್ಲಿ ಒಳಗೂಡಿಸುವುದು ಸೂಕ್ತವಾದದ್ದಾಗಿದೆ?
13 ಇತರರ ವೈಯಕ್ತಿಕ ವಿಷಯಗಳಲ್ಲಿ ತಲೆಹಾಕುವುದರಿಂದ ದೂರವಿರಬೇಕು ಎಂಬುದು ಒಪ್ಪಿಕೊಳ್ಳತಕ್ಕದ್ದೇ. ಆದರೆ, ನಮಗೆ ಗೊತ್ತಿರುವ ಹಾಗೂ ನಾವು ಕಾಳಜಿ ತೋರಿಸುವಂತಹ ವ್ಯಕ್ತಿಗಳ ಒಳಿತಿಗಾಗಿ ಪ್ರಾರ್ಥಿಸುವುದರಲ್ಲಿ ತಪ್ಪೇನಿಲ್ಲ. (1 ತಿಮೊಥೆಯ 5:13; 1 ಪೇತ್ರ 4:15) ಒಬ್ಬ ಸಹೋದರನು ತನ್ನ ಉದ್ಯೋಗವನ್ನು ಕಳೆದುಕೊಂಡಿರಬಹುದು. ಆಗ ನಾವು ಅವನಿಗೆ ಒಂದು ಉದ್ಯೋಗವನ್ನು ಕೊಡುವ ಸ್ಥಿತಿಯಲ್ಲಿ ಇಲ್ಲದಿರಬಹುದು. ಆದರೆ, ನಮ್ಮ ವೈಯಕ್ತಿಕ ಪ್ರಾರ್ಥನೆಗಳಲ್ಲಿ ಅವನ ಹೆಸರನ್ನು ಉಪಯೋಗಿಸಿ, ಅವನಿಗಿರುವ ತೊಂದರೆಯ ಬಗ್ಗೆ ಯೆಹೋವನಲ್ಲಿ ವಿನಂತಿಸಿಕೊಳ್ಳಸಾಧ್ಯವಿದೆ. (ಕೀರ್ತನೆ 37:25; ಜ್ಞಾನೋಕ್ತಿ 10:3) “ಕರ್ತನಲ್ಲಿ ಮಾತ್ರ” (NW) ವಿವಾಹವಾಗುವ ನಿರ್ಧಾರ ಮಾಡಿದ್ದರಿಂದ, ಇಷ್ಟರ ತನಕ ಅವಿವಾಹಿತಳಾಗಿಯೇ ಉಳಿದಿರುವಂತಹ ಒಬ್ಬ ಸಹೋದರಿಯ ಬಗ್ಗೆ ನಮಗೆ ಗೊತ್ತಿದೆಯೋ? (1 ಕೊರಿಂಥ 7:39) ಹಾಗಾದರೆ, ಅವರನ್ನು ಆಶೀರ್ವದಿಸುವಂತೆ ಮತ್ತು ತಮ್ಮ ಸೇವೆಯಲ್ಲಿ ನಿಷ್ಠೆಯಿಂದ ಮುಂದುವರಿಯಲು ಅವರಿಗೆ ಸಹಾಯಮಾಡುವಂತೆ, ನಿಮ್ಮ ಖಾಸಗಿ ಪ್ರಾರ್ಥನೆಗಳಲ್ಲಿ ಯೆಹೋವನನ್ನು ನೀವೇಕೆ ಬೇಡಿಕೊಳ್ಳಬಾರದು? ಇನ್ನೊಂದು ಉದಾಹರಣೆಯನ್ನು ತೆಗೆದುಕೊಳ್ಳುವಲ್ಲಿ, ಒಬ್ಬ ತಪ್ಪಿತಸ್ಥ ಸಹೋದರನಿಗೆ ಇಬ್ಬರು ಹಿರಿಯರು ಸಲಹೆಯನ್ನು ಕೊಟ್ಟಿರಬಹುದು. ಅಂತಹ ಸನ್ನಿವೇಶದಲ್ಲಿ, ಈ ಇಬ್ಬರೂ ಹಿರಿಯರು ತಮ್ಮ ವೈಯಕ್ತಿಕ ಪ್ರಾರ್ಥನೆಗಳಲ್ಲಿ ಆಗಿಂದಾಗ್ಗೆ ಈ ವ್ಯಕ್ತಿಯ ಹೆಸರನ್ನು ಉಪಯೋಗಿಸಿ ಏಕೆ ಬೇಡಿಕೊಳ್ಳಬಾರದು?
14. ನಿರ್ದಿಷ್ಟ ಆವಶ್ಯಕತೆಯನ್ನು ಪ್ರಾರ್ಥನೆಯಲ್ಲಿ ಸ್ಪಷ್ಟವಾಗಿ ತಿಳಿಯಪಡಿಸುವುದು, ಇತರರಿಗೆ ಸಹಾಯಮಾಡುವ ವಿಷಯಕ್ಕೆ ಹೇಗೆ ಸಂಬಂಧಿಸಿದೆ?
14 ಯೆಹೋವನ ಬೆಂಬಲ, ಸಾಂತ್ವನ, ವಿವೇಕ, ಹಾಗೂ ಪವಿತ್ರಾತ್ಮದ ಅಥವಾ ಪವಿತ್ರಾತ್ಮದ ಫಲಗಳಲ್ಲಿ ಒಂದರ ಅಗತ್ಯವಿರುವಂತಹ ವ್ಯಕ್ತಿಗಳು ನಿಮಗೆ ಗೊತ್ತಿರಬಹುದು. ಮತ್ತು ಇಂಥವರ ಹೆಸರನ್ನು ನೀವು ನಿಮ್ಮ ವೈಯಕ್ತಿಕ ಪ್ರಾರ್ಥನೆಗಳಲ್ಲಿ ಒಳಗೂಡಿಸುವ ಸಾಧ್ಯತೆಯಿದೆ. ನೀವು ಅವರಿಂದ ಬಹಳ ದೂರದಲ್ಲಿ ವಾಸಿಸುತ್ತಿರುವ ಕಾರಣ ಅಥವಾ ಇನ್ನಿತರ ಸನ್ನಿವೇಶಗಳಿಂದಾಗಿ, ಅವರಿಗೆ ಭೌತಿಕವಾಗಿ ಅಥವಾ ನೇರವಾಗಿ ಸಹಾಯಮಾಡಲು ಅಸಮರ್ಥರಾಗಿದ್ದೀರಿ ಎಂಬ ಅನಿಸಿಕೆ ನಿಮಗಾಗಬಹುದು. ಆದರೆ ನಿಮ್ಮ ಸಹೋದರ ಸಹೋದರಿಯರಿಗಾಗಿ ಪ್ರಾರ್ಥಿಸಲು ಮರೆಯದಿರಿ. ಅವರು ಯೆಹೋವನಿಗೆ ಯೋಗ್ಯರಾಗಿ ನಡೆಯಲು ಬಯಸುತ್ತಾರಾದರೂ, ಅದನ್ನು ಸತತವಾಗಿ ಮಾಡಲು ಅವರಿಗೆ ನಿಜವಾಗಿಯೂ ಸಹಾಯದ ಅಗತ್ಯವಿರಬಹುದು ಎಂಬುದು ನಿಮಗೆ ಗೊತ್ತಿದೆ. ಆದುದರಿಂದ, ಕೀರ್ತನೆ 18:2; 20:1, 2; 34:15; 46:1; 121:1-3.
ಅವರಿಗೆ ಸಹಾಯಮಾಡಲಿಕ್ಕಾಗಿರುವ ಕೀಲಿ ಕೈ, ನಿಮ್ಮ ಪ್ರಾರ್ಥನೆಗಳೇ ಆಗಿವೆ.—ಇತರರನ್ನು ಬಲಪಡಿಸಲಿಕ್ಕಾಗಿ ಶ್ರಮಿಸಿರಿ
15. ಕೊಲೊಸ್ಸೆ ಪುಸ್ತಕದ ಕೊನೆಯ ಭಾಗದಲ್ಲಿ ನಾವು ಏಕೆ ಆಸಕ್ತಿಯುಳ್ಳವರಾಗಿರಬೇಕು?
15 ಹೃತ್ಪೂರ್ವಕವಾದ, ನಿರ್ದಿಷ್ಟ ಪ್ರಾರ್ಥನೆಯು, ಇತರರಿಗೆ ಅದರಲ್ಲೂ ವಿಶೇಷವಾಗಿ ನೀವು ತುಂಬ ಇಷ್ಟಪಡುವಂತಹ ವ್ಯಕ್ತಿಗಳಿಗೆ ಹಾಗೂ ಆತ್ಮೀಯರಿಗೆ ಸಹಾಯಮಾಡಲಿಕ್ಕಿರುವ ಏಕಮಾತ್ರ ವಿಧಾನವಾಗಿರುವುದಿಲ್ಲ. ಈ ಅಂಶವನ್ನು ಕೊಲೊಸ್ಸೆ ಪುಸ್ತಕವು ಸ್ಪಷ್ಟಪಡಿಸುತ್ತದೆ. ಪೌಲನು ತನ್ನ ಪತ್ರದಲ್ಲಿ ತಾತ್ವಿಕ ವಿಚಾರಗಳ ಕುರಿತಾದ ಮಾರ್ಗದರ್ಶನ ಹಾಗೂ ವ್ಯಾವಹಾರಿಕ ಸಲಹೆಯನ್ನು ಕೊಟ್ಟ ಬಳಿಕ, ಕೇವಲ ವೈಯಕ್ತಿಕ ವಂದನೆಗಳನ್ನು ಒಳಗೂಡಿಸಿದನಷ್ಟೆ ಎಂಬುದು ಅನೇಕ ವಿದ್ವಾಂಸರ ಅಭಿಪ್ರಾಯ. (ಕೊಲೊಸ್ಸೆ 4:7-18) ಇದಕ್ಕೆ ವ್ಯತಿರಿಕ್ತವಾಗಿ, ಕೊಲೊಸ್ಸೆ ಪುಸ್ತಕದ ಈ ಕೊನೆಯ ಭಾಗವು ಗಮನಾರ್ಹ ಸಲಹೆಯನ್ನು ಒಳಗೊಂಡಿದೆ ಎಂಬುದನ್ನು ಈಗಾಗಲೇ ನಾವು ನೋಡಿದ್ದೇವೆ. ಮತ್ತು ಈ ಭಾಗದಿಂದ ಇನ್ನೂ ಹೆಚ್ಚನ್ನು ಕಲಿಯಲಿಕ್ಕಿದೆ.
16, 17. ಕೊಲೊಸ್ಸೆ 4:10, 11ರಲ್ಲಿ ತಿಳಿಸಲ್ಪಟ್ಟಿರುವ ಸಹೋದರರ ಕುರಿತು ನಾವು ಏನು ಹೇಳಸಾಧ್ಯವಿದೆ?
16 ಪೌಲನು ಬರೆದುದು: “ನನ್ನ ಜೊತೆಸೆರೆಯವನಾದ ಅರಿಸ್ತಾರ್ಕನೂ ಬಾರ್ನಬನಿಗೆ ದಾಯಾದನಾಗಿರುವ ಮಾರ್ಕನೂ ನಿಮಗೆ ವಂದನೆಹೇಳುತ್ತಾರೆ. ಮಾರ್ಕನನ್ನು ಕುರಿತು ಅಪ್ಪಣೆಗಳನ್ನು ಹೊಂದಿದಿರಲ್ಲಾ; ಅವನು ನಿಮ್ಮ ಬಳಿಗೆ ಬಂದರೆ ಅವನನ್ನು ಸೇರಿಸಿಕೊಳ್ಳಿರಿ. ಯೂಸ್ತನೆನಿಸಿಕೊಳ್ಳುವ ಯೇಸು ಸಹ ನಿಮಗೆ ವಂದನೆಹೇಳುತ್ತಾನೆ. ಸುನ್ನತಿಯವರೊಳಗೆ ಇವರು ಮಾತ್ರವೇ ದೇವರ ರಾಜ್ಯಾಭಿವೃದ್ಧಿಗಾಗಿ ನನ್ನ ಜೊತೆಗೆಲಸದವರಾಗಿದ್ದಾರೆ; ಇವರಿಂದ ನನಗೆ ಉಪಶಮನ ಉಂಟಾಯಿತು [“ಇವರೇ ನನಗೆ ಬಲವರ್ಧಕ ಸಹಾಯವನ್ನು ನೀಡಿದರು,” NW].”—ಕೊಲೊಸ್ಸೆ 4:10, 11.
17 ವಿಶೇಷ ಗಮನಕ್ಕೆ ಅರ್ಹರಾಗಿದ್ದಂತಹ ಕೆಲವು ಸಹೋದರರ ಹೆಸರುಗಳನ್ನು ಪೌಲನು ಇಲ್ಲಿ ಗುರುತಿಸಿದನು. ಆ ಸಹೋದರರು ಸುನ್ನತಿಮಾಡಿಸಿಕೊಂಡವರಾಗಿದ್ದರು, ಅಂದರೆ ಯೆಹೂದಿ ಧರ್ಮದ ಹಿನ್ನೆಲೆಯವರಾಗಿದ್ದರು ಎಂದು ಅವನು ಹೇಳಿದನು. ರೋಮ್‌ನಲ್ಲಿ ಸುನ್ನತಿಮಾಡಿಸಿಕೊಂಡಿದ್ದ ಅನೇಕ ಯೆಹೂದ್ಯರಿದ್ದರು, ಮತ್ತು ಅವರಲ್ಲಿ ಕೆಲವರು ಈಗ ಕ್ರೈಸ್ತರಾಗಿದ್ದರು. ಆದರೂ, ಇಲ್ಲಿ ಪೌಲನು ಹೆಸರಿಸಿರುವಂತಹ ವ್ಯಕ್ತಿಗಳು ಅವನಿಗೆ ಸಹಾಯ ಮಾಡಿದವರಾಗಿದ್ದರು. ಬಹುಶಃ ಇವರು ಅನ್ಯ ಹಿನ್ನೆಲೆಯಿಂದ ಬಂದವರಾಗಿದ್ದ ಕ್ರೈಸ್ತರೊಂದಿಗೆ ಸಹವಾಸಮಾಡಲು ಹಿಂಜರಿಯಲಿಲ್ಲ. ಮತ್ತು ಇವರು ಪೌಲನೊಂದಿಗೆ ಅನ್ಯರಿಗೆ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಸಂತೋಷದಿಂದ ಭಾಗವಹಿಸಿದ್ದಿರಬೇಕು.—ರೋಮಾಪುರ 11:13; ಗಲಾತ್ಯ 1:16; 2:11-14.
18. ತನ್ನೊಂದಿಗಿದ್ದ ಕೆಲವರನ್ನು ಪೌಲನು ಹೇಗೆ ಪ್ರಶಂಸಿಸಿದನು?
18 ಪೌಲನ ಹೇಳಿಕೆಯನ್ನು ಗಮನಿಸಿರಿ: “ಇವರೇ ನನಗೆ ಬಲವರ್ಧಕ ಸಹಾಯವನ್ನು ನೀಡಿದರು.” ಇಲ್ಲಿ ಅವನು ಒಂದು ಗ್ರೀಕ್ ಶಬ್ದವನ್ನು ಉಪಯೋಗಿಸಿದನು. ಈ ಶಬ್ದವು ಬೈಬಲಿನಲ್ಲಿ ಇದೊಂದೇ ಬಾರಿ ಕಂಡುಬರುತ್ತದೆ. ಅನೇಕ ಭಾಷಾಂತರಕಾರರು ಇದನ್ನು “ಉಪಶಮನ” ಎಂದು ಭಾಷಾಂತರಿಸುತ್ತಾರೆ. ಆದರೂ, ಸಾಮಾನ್ಯವಾಗಿ ಇನ್ನೊಂದು ಗ್ರೀಕ್ ಶಬ್ದ (ಪಾರಾಕಾಲೀಯೋ)ವನ್ನು “ಉಪಶಮನ” ಎಂದು ಭಾಷಾಂತರಿಸಲಾಗುತ್ತದೆ. ಕೊಲೊಸ್ಸೆಯವರಿಗೆ ಬರೆದ ಪತ್ರದಲ್ಲಿ ಪೌಲನು ಪಾರಾಕಾಲೀಯೋ ಎಂಬ ಶಬ್ದವನ್ನು ಉಪಯೋಗಿಸಿದ್ದಾನಾದರೂ, ಕೊಲೊಸ್ಸೆ 4:11ರಲ್ಲಿ ಅವನು ಈ ಶಬ್ದವನ್ನು ಉಪಯೋಗಿಸಿಲ್ಲ.—ಮತ್ತಾಯ 5:4; ಅ. ಕೃತ್ಯಗಳು 4:36; 9:31; 2 ಕೊರಿಂಥ 1:4; ಕೊಲೊಸ್ಸೆ 2:2; 4:8.
19, 20. (ಎ) ರೋಮ್‌ನಲ್ಲಿ ತನಗೆ ಸಹಾಯ ನೀಡಿದ್ದ ಸಹೋದರರಿಗೆ ಪೌಲನು ಅನ್ವಯಿಸಿ ಮಾತಾಡಿದ ಅಭಿವ್ಯಕ್ತಿಯ ಅರ್ಥವೇನಾಗಿದೆ? (ಬಿ) ಯಾವ ವಿಧಗಳಲ್ಲಿ ಆ ಸಹೋದರರು ಪೌಲನಿಗೆ ಸಹಾಯಮಾಡಿದ್ದಿರಬಹುದು?
19 ಪೌಲನು ಇಲ್ಲಿ ಹೆಸರಿಸಿರುವಂತಹ ವ್ಯಕ್ತಿಗಳು, ಅವನಿಗೆ ಬಾಯಿಮಾತಿನ ದುಃಖೋಪಶಮನಕ್ಕಿಂತಲೂ ಹೆಚ್ಚಿನ ಸಹಾಯವನ್ನು ನೀಡಿದ್ದಿರಬೇಕು. ಕೊಲೊಸ್ಸೆ 4:11ರಲ್ಲಿ “ಬಲವರ್ಧಕ ಸಹಾಯ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಶಬ್ದವು, ಐಹಿಕ ಪುಸ್ತಕಗಳಲ್ಲಿ ಕೆಲವೊಮ್ಮೆ ಅತಿಯಾದ ನೋವಿನಿಂದ ಉಪಶಮನ ನೀಡುವ ಔಷಧವನ್ನು ಸೂಚಿಸಲಿಕ್ಕಾಗಿ ಉಪಯೋಗಿಸಲ್ಪಟ್ಟಿತ್ತು. ನ್ಯೂ ಲೈಫ್ ವರ್ಷನ್‌ನಲ್ಲಿ ಹೀಗೆ ಬರೆಯಲ್ಪಟ್ಟಿದೆ: “ಅವರು ನನಗೆ ಎಷ್ಟೊಂದು ಸಹಾಯಮಾಡಿದ್ದಾರೆ!” ಟುಡೇಸ್ ಇಂಗ್ಲಿಷ್ ವರ್ಷನ್ ಈ ವಾಕ್ಸರಣಿಯನ್ನು ಉಪಯೋಗಿಸುತ್ತದೆ: “ಅವರು ನನಗೆ ಬಹಳಷ್ಟು ನೆರವು ನೀಡಿದ್ದಾರೆ.” ಹಾಗಾದರೆ, ಪೌಲನ ಬಳಿಯಲ್ಲಿ ವಾಸಿಸುತ್ತಿದ್ದ ಆ ಕ್ರೈಸ್ತ ಸಹೋದರರು ಅವನಿಗೆ ಸಹಾಯಮಾಡಲಿಕ್ಕಾಗಿ ಏನು ಮಾಡಿದ್ದಿರಬಹುದು?
20 ಸಂದರ್ಶಕರು ಪೌಲನನ್ನು ಭೇಟಿಮಾಡಸಾಧ್ಯವಿತ್ತು. ಆದರೆ, ತನಗೆ ಅತ್ಯಗತ್ಯವಾಗಿದ್ದ ಅನೇಕ ವಸ್ತುಗಳನ್ನು, ಅಂದರೆ ಚಳಿಗಾಲಕ್ಕಾಗಿ ಬೇಕಾಗಿದ್ದ ಆಹಾರ ಹಾಗೂ ಉಡುಪನ್ನು ಖರೀದಿಸುವಂತಹ ಅನೇಕ ಕೆಲಸಗಳನ್ನು ಅವನು ಮಾಡಸಾಧ್ಯವಿರಲಿಲ್ಲ. ತನ್ನ ಅಭ್ಯಾಸಕ್ಕಾಗಿ ಬೇಕಿದ್ದ ಚರ್ಮದ ಕಾಗದಗಳನ್ನು ಅಥವಾ ಬರಹದ ಸಾಮಗ್ರಿಗಳನ್ನು ಎಲ್ಲಿಂದ ಪಡೆಯಸಾಧ್ಯವಿತ್ತು? (2 ತಿಮೊಥೆಯ 4:13) ಅವನಿಗೆ ಅಗತ್ಯವಿದ್ದಂತಹ ವಸ್ತುಗಳನ್ನು ಖರೀದಿಸುವ ಮೂಲಕ ಅಥವಾ ಅವನು ನೇಮಿಸಿದ ಕೆಲಸಗಳನ್ನು ಮಾಡುವ ಮೂಲಕ, ಪೌಲನ ಆವಶ್ಯಕತೆಗಳನ್ನು ಪೂರೈಸಲು ಆ ಸಹೋದರರು ಶ್ರಮಿಸಿದರು ಎಂಬುದನ್ನು ನೀವು ಊಹಿಸಿಕೊಳ್ಳಲಾರಿರೋ? ಪೌಲನು ಒಂದು ನಿರ್ದಿಷ್ಟ ಸಭೆಯ ಸ್ಥಿತಿಗತಿಯನ್ನು ಗಮನಿಸಿ, ಅದನ್ನು ಉತ್ತೇಜಿಸಲು ಬಯಸಿದ್ದಿರಬಹುದು. ಆದರೆ ಈಗ, ಅವನು ಬಂಧಿತನಾಗಿರುವುದರಿಂದ ಅದನ್ನು ಮಾಡಲು ಸಾಧ್ಯವಿಲ್ಲ. ಆದುದರಿಂದ, ಆ ಸಹೋದರರು ಪೌಲನ ಪರವಾಗಿ ಅಂತಹ ಸಭೆಗಳನ್ನು ಸಂದರ್ಶಿಸಿದ್ದಿರಬಹುದು, ಸಂದೇಶಗಳನ್ನು ಕೊಂಡೊಯ್ದಿರಬಹುದು, ಮತ್ತು ವರದಿಗಳನ್ನು ತಂದೊಪ್ಪಿಸಿರಬಹುದು. ಇದೆಷ್ಟು ಬಲವರ್ಧಕವಾದದ್ದಾಗಿತ್ತು!
21, 22. (ಎ) ಕೊಲೊಸ್ಸೆ 4:11ರಲ್ಲಿರುವ ಮಾತುಗಳು ನಮಗೆ ಏಕೆ ಆಸಕ್ತಿಕರವಾಗಿರಬೇಕು? (ಬಿ) ಪೌಲನೊಂದಿಗಿದ್ದಂತಹ ವ್ಯಕ್ತಿಗಳ ಮಾದರಿಯನ್ನು ನಾವು ಅನ್ವಯಿಸಸಾಧ್ಯವಿರುವ ಕೆಲವು ವಿಧಗಳು ಯಾವುವು?
21 “ಬಲವರ್ಧಕ ಸಹಾಯ”ವನ್ನು ನೀಡುವುದರ ಕುರಿತು ಪೌಲನು ಬರೆದ ವಿಷಯವು, ನಾವು ಹೇಗೆ ಇತರರಿಗೆ ಸಹಾಯವನ್ನು ನೀಡಬಹುದು ಎಂಬ ವಿಚಾರದಲ್ಲಿ ಒಳನೋಟವನ್ನು ಒದಗಿಸುತ್ತದೆ. ಇತರರು ಯೆಹೋವನ ನೈತಿಕ ಮಟ್ಟಗಳನ್ನು ಅನುಸರಿಸುವುದರಲ್ಲಿ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದರಲ್ಲಿ, ಮತ್ತು ಸಾರುವ ಕೆಲಸದಲ್ಲಿ ಭಾಗವಹಿಸುವುದರಲ್ಲಿ ಆತನಿಗೆ ಯೋಗ್ಯರಾಗಿ ನಡೆಯುತ್ತಿರಬಹುದು. ಆದುದರಿಂದ, ನಮ್ಮ ಗಣ್ಯತೆಯ ಮಾತುಗಳಿಗೆ ಅವರು ಅರ್ಹರಾಗಿದ್ದಾರೆ. ಆದರೂ, ಪೌಲನೊಂದಿಗೆ ಇದ್ದವರು ಹೇಗೆ ಅವನಿಗೆ ಸಹಾಯಮಾಡಿದರೋ ಹಾಗೆಯೇ ನಾವು ಸಹ ಇತರರಿಗೆ ‘ಬಲವರ್ಧಕ ಸಹಾಯವನ್ನು’ ನೀಡಸಾಧ್ಯವಿದೆಯೋ?
22 ಅವಿವಾಹಿತ ಸ್ಥಿತಿಯ ಬಗ್ಗೆ ತಿಳಿಸಲ್ಪಟ್ಟಿರುವ ಬೈಬಲ್ ಮೂಲತತ್ವಕ್ಕೆ ಬಲವಾಗಿ ಅಂಟಿಕೊಂಡಿರುವ ಒಬ್ಬ ಸಹೋದರಿಯು ನಿಮಗೆ ಗೊತ್ತಿರಬಹುದು. ಯಾಜಕಕಾಂಡ 19:32; ಜ್ಞಾನೋಕ್ತಿ 16:31) ಇದರ ಫಲಿತಾಂಶವಾಗಿ, ನಿಮ್ಮ ಸ್ನೇಹವು ಇನ್ನೂ ಆತ್ಮೀಯವಾಗಬಹುದು. ಆಗ, ಔಷಧದಂಗಡಿಯಿಂದ ಯಾವುದಾದರೂ ಔಷಧವನ್ನು ತರಿಸಬೇಕಾಗಿರುವಲ್ಲಿ ಅಥವಾ ಇನ್ನೇನಾದರೂ ಸಹಾಯದ ಅಗತ್ಯವಿರುವಲ್ಲಿ, ನಿಮ್ಮ ಬಳಿಗೆ ಬರಲು ಅವರು ಹಿಂಜರಿಯಲಾರರು. ರೋಮ್‌ನಲ್ಲಿ ಪೌಲನೊಂದಿಗಿದ್ದ ಸಹೋದರರು ಅವನಿಗೆ ಪ್ರಾಯೋಗಿಕವಾದ, ಬಲವರ್ಧಕ ಸಹಾಯವನ್ನು ನೀಡಿದ್ದಿರಬೇಕು; ಮತ್ತು ನೀವು ಸಹ ಅದೇ ರೀತಿಯ ಸಹಾಯವನ್ನು ನೀಡಸಾಧ್ಯವಿದೆ. ಅಂದು ಮತ್ತು ಇಂದು, ಈ ರೀತಿಯ ಸಹಾಯದಿಂದ ಸಿಕ್ಕಿರುವ ಆಶೀರ್ವಾದವೇನೆಂದರೆ, ಪ್ರೀತಿಯ ಬಂಧಗಳು ಇನ್ನಷ್ಟು ಬಲಗೊಳಿಸಲ್ಪಡುತ್ತಿವೆ ಮತ್ತು ನಾವೆಲ್ಲರೂ ಒಟ್ಟಿಗೆ ನಿಷ್ಠೆಯಿಂದ ಯೆಹೋವನ ಸೇವೆ ಮಾಡುವ ನಮ್ಮ ನಿರ್ಧಾರವೂ ದೃಢವಾಗುತ್ತಿದೆ.
ಮತ್ತು ಈಗ ಅವಳ ಕುಟುಂಬವು ಅವಳ ಹತ್ತಿರವಿಲ್ಲದಿರಬಹುದು. ಹಾಗಾದರೆ, ನಿಮ್ಮ ಕುಟುಂಬದ ಚಟುವಟಿಕೆಗಳಲ್ಲಿ ಅವಳನ್ನೂ ಒಳಗೂಡಿಸುತ್ತಾ, ನಿಮ್ಮೊಂದಿಗೆ ಊಟಮಾಡಲು ಬರುವಂತೆ ಅಥವಾ ಸ್ನೇಹಿತರು ಹಾಗೂ ಸಂಬಂಧಿಕರ ಒಂದು ಚಿಕ್ಕ ಪಾರ್ಟಿಗೆ ಬರುವಂತೆ ಅವಳನ್ನು ಆಮಂತ್ರಿಸಸಾಧ್ಯವಿದೆಯೋ? ನಿಮ್ಮ ಕುಟುಂಬದೊಂದಿಗೆ ಒಂದು ಅಧಿವೇಶನಕ್ಕೋ ಅಥವಾ ರಜೆಯನ್ನು ಕಳೆಯಲಿಕ್ಕಾಗಿಯೋ ಬರುವಂತೆ ಆ ಸಹೋದರಿಗೆ ಏಕೆ ಕರೆಕೊಡಬಾರದು? ಇದಲ್ಲದೆ, ನೀವು ಆಹಾರ ಸಾಮಗ್ರಿಗಳನ್ನು ಖರೀದಿಸಲು ಹೋಗುವಾಗ, ನಿಮ್ಮೊಂದಿಗೆ ಬರುವಂತೆ ಅವಳನ್ನು ಕರೆಯಿರಿ. ತದ್ರೀತಿಯಲ್ಲಿ, ವಿಧವೆಯರಿಗೆ ಅಥವಾ ವಿಧುರರಿಗೆ, ಈಗ ವಾಹನವನ್ನು ಓಡಿಸಲು ಅಶಕ್ತರಾಗಿರುವವರಿಗೆ ಸಹ ಈ ರೀತಿಯ ಸಹಾಯವನ್ನು ನೀಡಲು ಮುನ್ನೆಜ್ಜೆಗಳನ್ನು ತೆಗೆದುಕೊಳ್ಳಸಾಧ್ಯವಿದೆ. ಅವರ ಅನುಭವಗಳನ್ನು ಕೇಳಿಸಿಕೊಳ್ಳುವುದು ನಿಮಗೆ ಪ್ರಯೋಜನದಾಯಕವಾದದ್ದಾಗಿ ಕಂಡುಬರಸಾಧ್ಯವಿದೆ. ಅಷ್ಟುಮಾತ್ರವಲ್ಲ, ಒಳ್ಳೆಯ ಹಣ್ಣುಗಳನ್ನು ಆರಿಸಿಕೊಳ್ಳುವ ವಿಷಯದಲ್ಲಿ ಇಲ್ಲವೆ ಮಕ್ಕಳ ಬಟ್ಟೆಗಳನ್ನು ಆಯ್ಕೆಮಾಡುವ ವಿಷಯದಲ್ಲಿ ಅವರಿಗಿರುವ ಅನುಭವದಿಂದ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಸಾಧ್ಯವಿದೆ. (23. ಏನನ್ನು ಮಾಡುವುದರಲ್ಲಿ ಸಮಯವನ್ನು ಕಳೆಯುವುದು ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಳಿತನ್ನು ಉಂಟುಮಾಡುತ್ತದೆ?
23 ಈ ಲೇಖನದಲ್ಲಿ ತಿಳಿಸಲ್ಪಟ್ಟಿರುವ ಸನ್ನಿವೇಶಗಳ ಕುರಿತು ನಮ್ಮಲ್ಲಿ ಪ್ರತಿಯೊಬ್ಬರೂ ಮನನಮಾಡಸಾಧ್ಯವಿದೆ. ಇವು ಕೇವಲ ಉದಾಹರಣೆಗಳಾಗಿವೆ. ಆದರೆ ನಮ್ಮ ಸಹೋದರ ಸಹೋದರಿಯರಿಗೆ ಹೆಚ್ಚೆಚ್ಚು “ಬಲವರ್ಧಕ ಸಹಾಯ”ವನ್ನು ನೀಡಸಾಧ್ಯವಿರುವ ನೈಜ ಸನ್ನಿವೇಶಗಳನ್ನು ಇವು ನಮ್ಮ ನೆನಪಿಗೆ ತರಬಲ್ಲವು. ನಾವು ಲೋಕೋಪಕಾರಿ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳಬೇಕೆಂದು ಇಲ್ಲಿ ಒತ್ತಿಹೇಳುತ್ತಿಲ್ಲ. ಏಕೆಂದರೆ ಕೊಲೊಸ್ಸೆ 4:10, 11ರಲ್ಲಿ ತಿಳಿಸಲ್ಪಟ್ಟಿರುವ ಸಹೋದರರ ಗುರಿಯು ಅದಾಗಿರಲಿಲ್ಲ. ಅವರು ‘ದೇವರ ರಾಜ್ಯಾಭಿವೃದ್ಧಿಯ ಕೆಲಸದಲ್ಲಿ ಜೊತೆಗೆಲಸದವರಾಗಿದ್ದರು.’ ಆದುದರಿಂದ, ಬಲವರ್ಧಕ ಸಹಾಯವು ಇದಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದೆ. ನಮ್ಮ ವಿಷಯದಲ್ಲಿಯೂ ಹೀಗೆಯೇ ಆಗಲಿ.
24. ಇತರರ ವಿಷಯವಾಗಿ ಪ್ರಾರ್ಥಿಸುವುದು ಮತ್ತು ಅವರನ್ನು ಬಲಪಡಿಸಲು ಪ್ರಯತ್ನಿಸುವುದರ ಮುಖ್ಯ ಕಾರಣವೇನು?
24 ನಮ್ಮ ಖಾಸಗಿ ಪ್ರಾರ್ಥನೆಗಳಲ್ಲಿ ನಾವು ಇತರರ ಹೆಸರನ್ನು ಒಳಗೂಡಿಸುವುದು ಮತ್ತು ಅವರನ್ನು ಬಲಪಡಿಸಲು ಪ್ರಯತ್ನಗಳನ್ನು ಮಾಡುವುದಕ್ಕೆ ಒಂದು ಕಾರಣವಿದೆ. ಅದೇನೆಂದರೆ, ನಮ್ಮ ಸಹೋದರ ಸಹೋದರಿಯರು ‘ಯೆಹೋವನಿಗೆ ಯೋಗ್ಯರಾಗಿ ನಡೆಯಲು ಮತ್ತು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷಪಡಿಸಲು’ ಬಯಸುತ್ತಾರೆ ಎಂಬುದನ್ನು ನಾವು ದೃಢವಾಗಿ ನಂಬುವುದೇ. (ಕೊಲೊಸ್ಸೆ 1:10) ಈ ವಾಸ್ತವಾಂಶವು ಬೇರೊಂದು ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಮತ್ತು ಕೊಲೊಸ್ಸೆಯವರ ಪರವಾಗಿ ಎಪಫ್ರನು ಮಾಡುತ್ತಿದ್ದ ಪ್ರಾರ್ಥನೆಗಳ ಕುರಿತು ಬರೆಯುತ್ತಿರುವಾಗ ಪೌಲನು ಇದನ್ನು ಸ್ಪಷ್ಟವಾಗಿ ತಿಳಿಸಿದನು. ಅವರು “ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತದ ಕುರಿತು ದೃಢನಿಶ್ಚಿತರಾಗಿದ್ದು, ಪೂರ್ಣರಾಗಿ ನಿಲ್ಲಬೇಕೆಂದು” ಎಪಫ್ರನು ಪ್ರಾರ್ಥಿಸಿದನು. (ಕೊಲೊಸ್ಸೆ 4:12, NW) ವೈಯಕ್ತಿಕವಾಗಿ ನಾವು ಇದನ್ನು ಹೇಗೆ ಮಾಡಸಾಧ್ಯವಿದೆ? ಅದನ್ನು ಮುಂದಿನ ಲೇಖನದಲ್ಲಿ ನೋಡೋಣ.
[ಪಾದಟಿಪ್ಪಣಿ]
^ ಪ್ಯಾರ. 5 ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಪುಸ್ತಕದ ಸಂಪುಟ 1ರ 490-1ನೆಯ ಪುಟಗಳನ್ನು, ಮತ್ತು “ಎಲ್ಲ ಶಾಸ್ತ್ರವಚನಗಳು ದೇವಪ್ರೇರಿತವಾಗಿವೆ ಮತ್ತು ಪ್ರಯೋಜನಾರ್ಹವಾಗಿವೆ” (ಇಂಗ್ಲಿಷ್) ಎಂಬ ಪುಸ್ತಕದ 226-8ನೆಯ ಪುಟಗಳನ್ನು ನೋಡಿರಿ.
ನೀವು ಗಮನಿಸಿದಿರೋ?
• ನಮ್ಮ ಖಾಸಗಿ ಪ್ರಾರ್ಥನೆಗಳ ಮೂಲಕ ನಾವು ಹೇಗೆ ಇತರರಿಗೆ ಹೆಚ್ಚಿನ ಸಹಾಯವನ್ನು ನೀಡಬಹುದು?
• ಯಾವ ಅರ್ಥದಲ್ಲಿ ಕೆಲವು ಕ್ರೈಸ್ತರು ಪೌಲನಿಗೆ ‘ಬಲವರ್ಧಕ ಸಹಾಯ’ವನ್ನು ನೀಡುವವರಾಗಿದ್ದರು?
• ಯಾವ ಸನ್ನಿವೇಶಗಳಲ್ಲಿ ನಾವು ‘ಬಲವರ್ಧಕ ಸಹಾಯ’ವಾಗಿರಸಾಧ್ಯವಿದೆ?
• ನಮ್ಮ ಸಹೋದರ ಸಹೋದರಿಯರಿಗೋಸ್ಕರ ನಾವು ಪ್ರಾರ್ಥಿಸುವುದು ಹಾಗೂ ಅವರನ್ನು ಬಲಪಡಿಸುವುದರ ಹಿಂದಿರುವ ಗುರಿಯೇನು?
[ಅಧ್ಯಯನ ಪ್ರಶ್ನೆಗಳು]
[ಪುಟ 18ರಲ್ಲಿರುವ ಚಿತ್ರ]
ನೀವು ಕುಟುಂಬವಾಗಿ ಹೊರಗೆ ಪ್ರಯಾಣ ಬೆಳೆಸುವಾಗ, ಇನ್ನೊಬ್ಬ ಕ್ರೈಸ್ತ ಸಹೋದರ ಅಥವಾ ಸಹೋದರಿಯನ್ನು ಸಹ ನಿಮ್ಮ ಜೊತೆಗೆ ಕರೆದುಕೊಂಡುಹೋಗಬಲ್ಲಿರೋ?
[ಕೃಪೆ]
Courtesy of Green Chimney’s Farm