ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಸ ಸಹಸ್ರಮಾನಕ್ಕಾಗಿ ಶಾಂತಿಯೋ?

ಹೊಸ ಸಹಸ್ರಮಾನಕ್ಕಾಗಿ ಶಾಂತಿಯೋ?

ಹೊಸ ಸಹಸ್ರಮಾನಕ್ಕಾಗಿ ಶಾಂತಿಯೋ?

ಇಸವಿ 2000, ಶಾಂತಿ ಸಂಸ್ಕೃತಿಯ ಅಂತಾರಾಷ್ಟ್ರೀಯ ವರ್ಷವಾಗಿರುವುದೆಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಘೋಷಿಸಿತ್ತು. ಆದುದರಿಂದ, 1999ರ ಸೆಪ್ಟೆಂಬರ್‌ 14ರಂದು ಪ್ಯಾರಿಸ್‌ ಮತ್ತು ನ್ಯೂಯಾರ್ಕ್‌ ನಗರದಲ್ಲಿ ಸಮಾರಂಭಗಳ ಮೂಲಕ ಈ ವರ್ಷವನ್ನು ವಿಧಿವತ್ತಾಗಿ ಆರಂಭಿಸಲಾಯಿತು. ಯೂನೆಸ್ಕೊವಿನ ಮಾಜಿ ಡೈರೆಕ್ಟರ್‌ ಜನರಲ್‌ ಆಗಿರುವ ಫೆಡರೀಕೊ ಮಾಯೋರ್‌ರವರು, “ಶಾಂತಿ ಮತ್ತು ಅಹಿಂಸೆಯ ಸಂಸ್ಕೃತಿಗಾಗಿ ಒಂದು ಭೌಗೋಲಿಕ ಚಳುವಳಿಯನ್ನು ರಚಿಸಲಿಕ್ಕಾಗಿ” ಒಂದು ಗಂಭೀರವಾದ ಬೇಡಿಕೆಯನ್ನು ಮಾಡಿದರು.

“ಯುದ್ಧದ ವಿಚಾರಗಳು ಮನುಷ್ಯರ ಮನಸ್ಸುಗಳಲ್ಲಿ ಹುಟ್ಟುವುದರಿಂದ, ಆ ಮನಸ್ಸುಗಳಲ್ಲಿಯೇ ಶಾಂತಿಯನ್ನು ಕಾಪಾಡುವುದು ಹೇಗೆಂಬ ವಿಚಾರವನ್ನು ನಿರ್ಮಿಸಬೇಕು” ಎಂಬುದು ಯುನೆಸ್ಕೋವಿನ ನೀತಿವಚನ ಆಗಿದೆ. ಇದಕ್ಕನುಗುಣವಾಗಿ, ಈ ಸಂಸ್ಥೆಯು “ಶಿಕ್ಷಣ, ವಿಚಾರವಿನಿಮಯ ಮತ್ತು ಸಹಕಾರದ” ಮೂಲಕ ಶಾಂತಿ ಸಂಸ್ಕೃತಿಯನ್ನು ಪ್ರವರ್ಧಿಸಲು ಉದ್ದೇಶಿಸುತ್ತದೆ. “ಶಾಂತಪೂರ್ಣರಾಗಿರುವುದು” ಅಷ್ಟೇ ಸಾಕಾಗುವುದಿಲ್ಲ, “ಇಲ್ಲವೇ ಶಾಂತಿವಾದಿಗಳಾಗಿರುವುದು ಸಾಕಾಗುವುದಿಲ್ಲ, ಅದಕ್ಕೆ ಬದಲು ಶಾಂತಿಕರ್ತೃರಾಗಿರುವುದು” ಪ್ರಾಮುಖ್ಯವೆಂದು ಶ್ರೀಮಾನ್‌ ಮಾಯೋರ್‌ ಹೇಳಿದರು.

ದುಃಖದ ಸಂಗತಿಯೇನೆಂದರೆ, 2000ನೆಯ ಇಸವಿಯಲ್ಲಿ ಶಾಂತಿಯ ಸುಳಿವೇ ಇರಲಿಲ್ಲ. ಮನುಷ್ಯನು ಯುದ್ಧ ಮತ್ತು ಹಿಂಸೆಯನ್ನು ನಿಲ್ಲಿಸಲು ಎಷ್ಟೇ ಪ್ರಯಾಸಪಟ್ಟರೂ, ಅವನು ಅದನ್ನು ಮಾಡಲು ಅಶಕ್ತನಾಗಿದ್ದಾನೆಂಬುದನ್ನು 2000 ಇಸವಿಯನ್ನು ಸೇರಿಸಿ ಆಧುನಿಕ ಇತಿಹಾಸದಲ್ಲಿ ನಡೆದಿರುವ ಘಟನೆಗಳು ಸಾರಿಹೇಳುತ್ತವೆ.

ಆದರೆ ಒಂದು ವಿಷಯವು ಗಮನಾರ್ಹವಾದದ್ದಾಗಿದೆ. ಅದೇನೆಂದರೆ, ಶಾಂತಿ ಮತ್ತು ಶಿಕ್ಷಣದ ನಡುವೆ ಖಂಡಿತವಾಗಿಯೂ ಸಂಬಂಧವಿದೆ. ಸುಮಾರು 2,700 ವರ್ಷಗಳ ಹಿಂದೆ ಪ್ರವಾದಿಯಾದ ಯೆಶಾಯನು ಮುಂತಿಳಿಸಿದ್ದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮ [“ಶಾಂತಿ,” NW]ವಾಗುವದು.” (ಯೆಶಾಯ 54:​13, ಓರೆಅಕ್ಷರಗಳು ನಮ್ಮವು.) ಎಲ್ಲ ದೇಶಗಳವರು ಯೆಹೋವ ದೇವರ ಶುದ್ಧಾರಾಧನೆಗೆ, ಆತನ ಮಾರ್ಗಗಳ ಕುರಿತು ಕಲಿಯಲಿಕ್ಕಾಗಿ ಪ್ರವಾಹದಂತೆ ಬರಲಿರುವ ಸಮಯವನ್ನು ಸಹ ಇದೇ ಪ್ರವಾದಿಯು ಮುನ್ನೋಡಿದನು. ಮತ್ತು ಇದರ ಫಲಿತಾಂಶವೇನಾಗಿರುವುದು? “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” (ಯೆಶಾಯ 2:2-4, ಓರೆಅಕ್ಷರಗಳು ನಮ್ಮವು.) ಈ ಪ್ರವಾದನೆಗೆ ಹೊಂದಿಕೆಯಲ್ಲಿ, ಯೆಹೋವನ ಸಾಕ್ಷಿಗಳು ಲೋಕವ್ಯಾಪಕ ಶೈಕ್ಷಣಿಕ ಕೆಲಸದಲ್ಲಿ ತೊಡಗಿದ್ದಾರೆ. ಹೆಚ್ಚಿನ ಯುದ್ಧಗಳಿಗೆ ಮೂಲ ಕಾರಣವಾಗಿರುವ ರಾಷ್ಟ್ರೀಯ ಹಾಗೂ ಜಾತೀಯ ದ್ವೇಷವನ್ನು ಕಿತ್ತೊಗೆಯಲು ಈ ಶೈಕ್ಷಣಿಕ ಕೆಲಸವು ಈಗಾಗಲೇ ಲಕ್ಷಾಂತರ ಮಂದಿಗೆ ಸಹಾಯಮಾಡಿದೆ.

ಶೀಘ್ರದಲ್ಲೇ ದೇವರ ರಾಜ್ಯವು ಈ ಭೂಮಿಯ ಮೇಲೆ ಶಾಶ್ವತ ಶಾಂತಿ ಮತ್ತು ಭದ್ರತೆಯನ್ನು ತರುವುದು. ಆಗ ಇನ್ನೆಂದಿಗೂ ಯುದ್ಧಗಳಿರುವುದಿಲ್ಲ. (ಕೀರ್ತನೆ 72:7; ದಾನಿಯೇಲ 2:44) ಆ ಸಮಯದಲ್ಲಿ ಕೀರ್ತನೆಗಾರನ ಮಾತುಗಳು ನೆರವೇರುವವು: “ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು ಭೂಲೋಕದಲ್ಲಿ ಎಂಥಾ ಪ್ರಳಯವನ್ನು ನಡಿಸಿದ್ದಾನೆ. ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನು ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.”​—ಕೀರ್ತನೆ 46:8, 9.