ಒಂದು ವಿಶೇಷ ಪ್ರಕಟನೆ
ಒಂದು ವಿಶೇಷ ಪ್ರಕಟನೆ
ಇಸವಿ 2000ದ ಅಕ್ಟೋಬರ್ 7ರಂದು ನಡೆದ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯದ ವಾರ್ಷಿಕ ಕೂಟದ ಕೊನೆಯಲ್ಲಿ, ಆಡಳಿತ ಮಂಡಲಿಯ ಸದಸ್ಯರೂ ಈ ಕಾರ್ಯಕ್ರಮದ ಅಧ್ಯಕ್ಷರೂ ಆಗಿದ್ದ ಜಾನ್ ಇ. ಬಾರ್ ಅವರು ಒಂದು ವಿಶೇಷ ಪ್ರಕಟನೆಯನ್ನು ಮಾಡಿದರು. ಈ ಪ್ರಕಟನೆಯು, ಅದೇ ದಿನ ಸಹೋದರ ಥಿಯೊಡರ್ ಜಾರಸ್ ಮತ್ತು ಡ್ಯಾನಿಯೆಲ್ ಸಿಡ್ಲಿಕ್ ಅವರು ಕೊಟ್ಟ ಭಾಷಣಗಳನ್ನು ಆಧಾರವಾಗಿ ಉಪಯೋಗಿಸಿತು.—ಈ ಪತ್ರಿಕೆಯ 12-16 ಮತ್ತು 28-31ನೆಯ ಪುಟಗಳನ್ನು ನೋಡಿರಿ.
ಬಹಳ ವಿಶೇಷವಾದ ಒಂದು ಅಂಶವನ್ನು ತಿಳಿಸುತ್ತಾ ಸಹೋದರ ಬಾರ್ ಹೇಳಿದ್ದು: “ಕಾನೂನುಬದ್ಧ ಸಂಘಟನೆಗಳಿಗೆ ಕೊಡಲ್ಪಟ್ಟಿರುವುದಕ್ಕಿಂತಲೂ ಹೆಚ್ಚು ಮಹತ್ವದ ಹಾಗೂ ಹೆಚ್ಚು ಗಂಭೀರವಾದ ಜವಾಬ್ದಾರಿಗಳನ್ನು, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳು’ ಮತ್ತು ಅದರ ಆಡಳಿತ ಮಂಡಲಿಗೆ ವಹಿಸಲಾಗಿದೆ. ಇಂತಹ ಕಾನೂನುಬದ್ಧ ಸಂಘಟನೆಗಳ ಪ್ರತಿಯೊಂದು ಶಾಸನಪತ್ರಗಳಲ್ಲಿರುವ ಉದ್ದೇಶಗಳು, ಅವುಗಳ ಕೈಗೆಟುಕುವಂತಹ ಕ್ಷೇತ್ರಗಳಿಗೆ ಮಾತ್ರ ಸೀಮಿತಗೊಳಿಸಲ್ಪಟ್ಟಿವೆ. ಆದರೆ ನಮ್ಮ ಯಜಮಾನನಾದ ಯೇಸು ಕ್ರಿಸ್ತನು, ನಂಬಿಗಸ್ತ ಆಳು ವರ್ಗವನ್ನು ತನ್ನ ‘ಎಲ್ಲಾ ಆಸ್ತಿಯ ಮೇಲೆ’ ಅಥವಾ ಭೂಮಿಯಲ್ಲಿರುವ ರಾಜ್ಯಾಭಿರುಚಿಗಳ ಮೇಲೆ ನೇಮಿಸಿದ್ದಾನೆ.”—ಮತ್ತಾಯ 24:45-47.
ಪೆನ್ಸಿಲ್ವೇನಿಯ ಸಂಘಟನೆಯ ಕುರಿತು ಸಹೋದರ ಬಾರ್ ಹೇಳಿದ್ದು: “1884ರಲ್ಲಿ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಪೆನ್ಸಿಲ್ವೇನಿಯವು ಸಂಘಟಿಸಲ್ಪಟ್ಟಂದಿನಿಂದ, ನಮ್ಮ ಆಧುನಿಕ ದಿನದ ಇತಿಹಾಸದಲ್ಲಿ ಇದು ಅತ್ಯಂತ ಪ್ರಾಮುಖ್ಯ ಪಾತ್ರವನ್ನು ವಹಿಸಿದೆ. ಆದರೂ, ಇದು ಕೇವಲ ಒಂದು ಕಾನೂನುಬದ್ಧ ಸಾಧನವಾಗಿದ್ದು, ಅಗತ್ಯವಿರುವಾಗ ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ಉಪಯೋಗಿಸಲ್ಪಡುತ್ತದೆ.”
ಸಹೋದರ ಸಿಡ್ಲಿಕ್ ಮತ್ತು ಜಾರಸ್ ಅವರು ತಮ್ಮ ಭಾಷಣಗಳಲ್ಲಿ ವಿವರಿಸಿದ್ದೇನೆಂದರೆ, “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ಕರ್ತನ ಎಲ್ಲ ಭೂಆಸ್ತಿಯನ್ನು ನೋಡಿಕೊಳ್ಳುವಂತೆ ನೇಮಿಸಲ್ಪಟ್ಟಿದೆ. ಆದರೆ ಕ್ರಮವಾದ ಆಡಳಿತ ಜವಾಬ್ದಾರಿಗಳನ್ನು ನೋಡಿಕೊಳ್ಳುವ ಹೊಣೆಯನ್ನು, ‘ಬೇರೆ ಕುರಿಗಳ’ ನಡುವೆ ಇರುವ ಅರ್ಹ ಪುರುಷರಿಗೆ ಆಳು ವರ್ಗವು ವಹಿಸಿಕೊಡುವುದರಿಂದ ಯಾವುದೂ ತಡೆಯಲಾರದು. (ಯೋಹಾನ 10:16) ಅಥವಾ ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುವ ಕಾನೂನುಬದ್ಧ ಸಂಘಟನೆಗಳ ಎಲ್ಲ ಡೈರೆಕ್ಟರ್‌ಗಳು ಅಥವಾ ಯಾವುದೇ ಡೈರೆಕ್ಟರ್‌ಗಳು, ಅಭಿಷಿಕ್ತ ಕ್ರೈಸ್ತರಾಗಿರಬೇಕು ಎಂಬುದಕ್ಕೆ ಯಾವ ಶಾಸ್ತ್ರೀಯ ಕಾರಣವೂ ಇಲ್ಲ.
ಈ ಮುಂಚೆ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಕೆಲವು ಸದಸ್ಯರು, ಕಾನೂನುಬದ್ಧ ಸಂಘಟನೆಗಳ ಡೈರೆಕ್ಟರ್‌ಗಳಾಗಿ ಮತ್ತು ಅಧಿಕಾರಿಗಳಾಗಿ ಸೇವೆಸಲ್ಲಿಸುತ್ತಿದ್ದರು. ಆದರೆ, ಇತ್ತೀಚೆಗೆ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನಿಂದ’ ಅಮೆರಿಕದಲ್ಲಿ ಉಪಯೋಗಿಸಲ್ಪಡುವ ಎಲ್ಲ ಸಂಘಟನೆಗಳ ಬೋರ್ಡ್ ಆಫ್ ಡೈರೆಕ್ಟರ್‌ಗಳ ಸ್ಥಾನಕ್ಕೆ ಆಡಳಿತ ಮಂಡಲಿಯ ಸದಸ್ಯರು ಸ್ವಇಷ್ಟದಿಂದ ರಾಜೀನಾಮೆ ನೀಡಿದ್ದಾರೆ ಎಂದು ಸಹೋದರ ಬಾರ್ ಸಭಿಕರಿಗೆ ಹೇಳಿದರು. ಬೇರೆ ಕುರಿವರ್ಗದಲ್ಲಿರುವ ಜವಾಬ್ದಾರಿಯುತ ಸಹೋದರರನ್ನು ಈ ಸ್ಥಾನಗಳಿಗೆ ಆಯ್ಕೆಮಾಡಲಾಗಿದೆ.
ಈ ನಿರ್ಧಾರವು ಖಂಡಿತವಾಗಿಯೂ ಪ್ರಯೋಜನದಾಯಕವಾದದ್ದಾಗಿದೆ. ಇದು ಆಡಳಿತ ಮಂಡಲಿಯ ಸದಸ್ಯರು ಆತ್ಮಿಕ ಆಹಾರವನ್ನು ಸಿದ್ಧಗೊಳಿಸುವುದರಲ್ಲಿ ಹಾಗೂ ಲೋಕವ್ಯಾಪಕ ಸಹೋದರತ್ವದ ಇನ್ನಿತರ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಇನ್ನೂ ಹೆಚ್ಚು ಸಮಯವನ್ನು ವಿನಿಯೋಗಿಸಲು ಅವಕಾಶಮಾಡಿಕೊಡುವುದು.
ಮುಕ್ತಾಯದಲ್ಲಿ, ಕಾರ್ಯಕ್ರಮದ ಅಧ್ಯಕ್ಷನು ಹರ್ಷಭರಿತ ಸಭಿಕರಿಗೆ ಹೇಳಿದ್ದು: “ಅನುಭವಸ್ಥ ಮೇಲ್ವಿಚಾರಕರಿಗೆ ಬೇರೆ ಬೇರೆ ರೀತಿಯ ಕಾನೂನುಬದ್ಧ ಹಾಗೂ ಆಡಳಿತಕ್ಕೆ ಸಂಬಂಧಿಸಿದ ಜವಾಬ್ದಾರಿಗಳು ವಹಿಸಲ್ಪಟ್ಟಿರುವುದಾದರೂ, . . . ಇವರೆಲ್ಲರೂ ಆಡಳಿತ ಮಂಡಲಿಯ ಆತ್ಮಿಕ ಮಾರ್ಗದರ್ಶನಕ್ಕನುಸಾರ ಕಾರ್ಯನಡಿಸುತ್ತಾರೆ. . . . ಯೆಹೋವನ ಮಹಾನ್ ಹೆಸರಿನ ಘನತೆ ಹಾಗೂ ಮಹಿಮೆಗಾಗಿ, ಆತನ ಚಿತ್ತವನ್ನು ಮಾಡುವುದರಲ್ಲಿನ ನಮ್ಮ ಐಕ್ಯ ಪ್ರಯತ್ನಗಳನ್ನು ಆಶೀರ್ವದಿಸುವಂತೆ ನಾವೆಲ್ಲರೂ ಯೆಹೋವನಲ್ಲಿ ಪ್ರಾರ್ಥಿಸುತ್ತಿರೋಣ.”