ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮವಯಸ್ಕರ ಒತ್ತಡಕ್ಕೆ ಅವರು ಮಣಿಯಲಿಲ್ಲ

ಸಮವಯಸ್ಕರ ಒತ್ತಡಕ್ಕೆ ಅವರು ಮಣಿಯಲಿಲ್ಲ

ಸಮವಯಸ್ಕರ ಒತ್ತಡಕ್ಕೆ ಅವರು ಮಣಿಯಲಿಲ್ಲ

ಸಮವಯಸ್ಕರು ತಮ್ಮನ್ನು ಸಹ ಅವರ ಗುಂಪಿಗೆ ಸೇರಿಸಿಕೊಳ್ಳಲಿ ಎಂಬ ಬಯಕೆಯು, ಸಮವಯಸ್ಕರ ಆಲೋಚನೆ ಹಾಗೂ ಕೃತ್ಯಗಳಿಗೆ ಒಗ್ಗಿಕೊಳ್ಳುವಂತೆ ಅನೇಕರ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಯುವ ಜನರಿಗೆ, ಮಾದಕ ಪದಾರ್ಥಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ ಇಲ್ಲವೆ ಲೈಂಗಿಕ ಅನೈತಿಕತೆಯಲ್ಲಿ ಒಳಗೂಡುವಂತಹ ವಿಷಯದಲ್ಲಿ ಬರುವ ಹಾನಿಕರ ಒತ್ತಡಗಳನ್ನು ಎದುರಿಸಿ ನಿಲ್ಲಲು ಬಲವು ಬೇಕಾಗಿರುತ್ತದೆ. ಆದರೆ ಅವರು ಸಮವಯಸ್ಕರ ಒತ್ತಡಕ್ಕೆ ಹೇಗೆ ಮಣಿಯದೆ ಇರಬಹುದು?

ಪೋಲೆಂಡ್‌ ದೇಶದ ಇಬ್ಬರು ಹದಿವಯಸ್ಕ ಹುಡುಗಿಯರು ಇತ್ತೀಚೆಗೆ ಹೀಗೆ ಪತ್ರವನ್ನು ಬರೆದರು: “ನಮ್ಮ ಸುತ್ತಮುತ್ತಲೂ ಇರುವ ಸಮವಯಸ್ಕರಲ್ಲಿ ಈ ಲೋಕದ ಆತ್ಮವು ಸ್ಪಷ್ಟವಾಗಿ ಕಂಡುಬರುತ್ತದೆ. ಏಕೆಂದರೆ, ಅವರು ಶಾಲೆಯ ಪರೀಕ್ಷೆಯಲ್ಲಿ ಕಾಪಿಹೊಡೆಯುತ್ತಾರೆ, ಅವಾಚ್ಯ ಶಬ್ದಗಳನ್ನು ಉಪಯೋಗಿಸುತ್ತಾರೆ, ವಿಚಿತ್ರವಾದ ಬಟ್ಟೆಗಳನ್ನು ಧರಿಸಲು ಹಾಗೂ ಅನೈತಿಕ ಸಂಗೀತವನ್ನು ಕೇಳಲು ಇಷ್ಟಪಡುತ್ತಾರೆ. ಆದರೆ ಈ ಅತೃಪ್ತ ಹಾಗೂ ದಂಗೆಕೋರ ಮನೋಭಾವವುಳ್ಳ ಹದಿವಯಸ್ಕರ ಪ್ರಭಾವಕ್ಕೆ ಬಲಿಬೀಳದಂತೆ ನಮ್ಮನ್ನು ಕಾಪಾಡುವ ಲೇಖನಗಳನ್ನು ನಮಗಾಗಿ ಒದಗಿಸುತ್ತಿರುವುದಕ್ಕೆ ನಾವು ಬಹಳ ಸಂತೋಷಿತರಾಗಿದ್ದೇವೆ!

“ನಾವು ನಿಮಗೆ ಎಷ್ಟು ಕೃತಜ್ಞರಾಗಿದ್ದೇವೆಂಬುದನ್ನು ಮಾತಿನಲ್ಲಿ ಹೇಳಸಾಧ್ಯವಿಲ್ಲ. ಏಕೆಂದರೆ, ನಮ್ಮಂತಹ ಯುವಜನರು ಬೇಕಾದವರಾಗಿದ್ದಾರೆ ಹಾಗೂ ಗಣ್ಯಮಾಡಲ್ಪಡುತ್ತಾರೆ ಎಂಬುದನ್ನು ತಿಳಿಸಿದ ಕಾವಲಿನಬುರುಜು ಪತ್ರಿಕೆಯ ಲೇಖನಗಳು ನಮ್ಮ ಹೃದಯವನ್ನು ಸ್ಪರ್ಶಿಸಿದವು. ನಾವು ಪಡೆದುಕೊಂಡಿರುವ ಬೈಬಲ್‌ ಸಲಹೆಗಳು, ಯೆಹೋವ ದೇವರನ್ನು ಸಂತೋಷಪಡಿಸುತ್ತಾ ಇರಲಿಕ್ಕಾಗಿ ಸರಿಯಾದ ಹೆಜ್ಜೆಯಿಡುವಂತೆ ನಮಗೆ ಸಹಾಯಮಾಡಿವೆ. ಯೆಹೋವನಿಗೆ ನಂಬಿಗಸ್ತಿಕೆಯಿಂದ ಸೇವೆಮಾಡುವುದೇ ಜೀವಿತದ ಅತ್ಯುತ್ತಮ ಮಾರ್ಗವಾಗಿದೆ ಎಂಬುದು ನಮಗೆ ಮನದಟ್ಟಾಗಿದೆ.”

ಹೌದು, ಯುವಜನರು ತಮ್ಮ ಸಮವಯಸ್ಕರ ಒತ್ತಡಕ್ಕೆ ಮಣಿಯದೆ, ಅಂತಹ ಒತ್ತಡವನ್ನು ಎದುರಿಸಿ ನಿಲ್ಲಸಾಧ್ಯವಿದೆ. ತಮ್ಮ ‘ಜ್ಞಾನೇಂದ್ರಿಯಗಳಿಗೆ’ ತರಬೇತಿಯನ್ನು ನೀಡುವ ಮೂಲಕ, ಕ್ರೈಸ್ತ ಯುವಜನರು “ಪ್ರಾಪಂಚಿಕ ಆತ್ಮವನ್ನು” ತೋರಿಸದೆ, ‘ದೇವರಿಂದ ಬಂದ ಆತ್ಮವನ್ನು’ ತೋರಿಸುವಂತಹ ವಿವೇಕಯುತ ನಿರ್ಣಯಗಳನ್ನು ಮಾಡಲು ಕಲಿತುಕೊಳ್ಳುತ್ತಾರೆ.​—ಇಬ್ರಿಯ 5:14; 1 ಕೊರಿಂಥ 2:12.