ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಡತನದ ವಿರುದ್ಧ ಹೋರಾಟ ಜಯಿಸಲಸಾಧ್ಯವಾದ ಕದನವೋ?

ಬಡತನದ ವಿರುದ್ಧ ಹೋರಾಟ ಜಯಿಸಲಸಾಧ್ಯವಾದ ಕದನವೋ?

ಬಡತನದ ವಿರುದ್ಧ ಹೋರಾಟ ಜಯಿಸಲಸಾಧ್ಯವಾದ ಕದನವೋ?

ನ್ಯೂಯಾರ್ಕ್‌ ನಗರದಲ್ಲಿರುವ ವಿಶ್ವಸಂಸ್ಥೆಯನ್ನು ಸಂದರ್ಶಿಸುವ ಪ್ರವಾಸಿಗರು, ಆರ್ಥಿಕ ಹಾಗೂ ಸಾಮಾಜಿಕ ಸಮಿತಿ ಭವನದ ಸಾರ್ವಜನಿಕ ಗ್ಯಾಲರಿಯನ್ನು ಪ್ರವೇಶಿಸಿ, ಅದರ ಒಳಮಾಳಿಗೆಯಲ್ಲಿ ಪೈಪ್‌ಗಳು ಹಾಗೂ ವೈರ್‌ಗಳು ನೇತಾಡುವುದನ್ನು ನೋಡುತ್ತಾರೆ. ಪ್ರವಾಸಿ ಗೈಡ್‌ ಹೀಗೆ ವಿವರಿಸುತ್ತಾಳೆ: “‘ಅಪೂರ್ಣವಾಗಿ’ ಬಿಡಲ್ಪಟ್ಟಿರುವ ಈ ಒಳಮಾಳಿಗೆಯು, ವಿಶ್ವಸಂಸ್ಥೆಯ ಆರ್ಥಿಕ ಹಾಗೂ ಸಾಮಾಜಿಕ ಕೆಲಸವು ಎಂದಿಗೂ ಕೊನೆಗೊಳ್ಳುವುದಿಲ್ಲ ಎಂಬುದರ ಒಂದು ಸಾಂಕೇತಿಕ ಮರುಜ್ಞಾಪನದೋಪಾದಿ ಪರಿಗಣಿಸಲ್ಪಡುತ್ತದೆ; ಲೋಕದ ಜನರ ಜೀವನದ ಪರಿಸ್ಥಿತಿಗಳನ್ನು ಉತ್ತಮಗೊಳಿಸಲಿಕ್ಕಾಗಿ ಯಾವುದಾದರೂ ಕೆಲಸವು ಇದ್ದೇಇರುವುದು.”

ಎಲ್ಲರಿಗೂ ಅತ್ಯುತ್ತಮ ಜೀವನ ಮಟ್ಟವನ್ನು ಒದಗಿಸುವುದೇ ಈ ಸಮಿತಿಯ ಉದಾತ್ತ ಧ್ಯೇಯವಾಗಿದೆ. ಇದನ್ನು ಪೂರೈಸುವುದರಲ್ಲಿ ಎಷ್ಟೇ ಪ್ರಯತ್ನಗಳು ಮಾಡಲ್ಪಟ್ಟಿರುವುದಾದರೂ, ಈ ಕೆಲಸವು ಎಂದೂ ಮುಗಿಯದಿರುವಂತೆ ತೋರುತ್ತದೆ. ಆಸಕ್ತಿಕರವಾಗಿಯೇ, ಸಾ.ಶ. ಒಂದನೆಯ ಶತಮಾನದಲ್ಲಿ ಯೇಸು ಕ್ರಿಸ್ತನ ಭೂಶುಶ್ರೂಷೆಯ ಸಮಯದಲ್ಲಿ ಅವನು ಹೇಳಿದ್ದು: “ಕರ್ತನ [“ಯೆಹೋವನ,” NW] ಆತ್ಮವು ನನ್ನ ಮೇಲೆ ಅದೆ, ಆತನು ನನ್ನನ್ನು ಬಡವರಿಗೆ ಶುಭವರ್ತಮಾನವನ್ನು ಸಾರುವದಕ್ಕೆ ಅಭಿಷೇಕಿಸಿದನು.” (ಲೂಕ 4:18) ಅವನು ಸಾರಿದಂತಹ ‘ಶುಭವರ್ತಮಾನವು’ ಯಾವುದಾಗಿತ್ತು? ‘ಇಕ್ಕಟ್ಟಿನಲ್ಲಿ ದರಿದ್ರರಿಗೆ ರಕ್ಷಣದುರ್ಗವಾಗಿರುವ’ ಯೆಹೋವ ದೇವರು ಸ್ಥಾಪಿಸಲಿದ್ದ ರಾಜ್ಯದ ಕುರಿತಾದ ಸಂದೇಶವೇ ಅದಾಗಿತ್ತು. ಮತ್ತು ಆ ರಾಜ್ಯದ ರಾಜನು ಯೇಸು ಕ್ರಿಸ್ತನಾಗಿರಲಿದ್ದನು. ಆ ರಾಜ್ಯವು ಏನನ್ನು ಪೂರೈಸುವುದು? ಯೆಶಾಯನು ಪ್ರವಾದಿಸಿದ್ದು: “ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ ಸಕಲಜನಾಂಗಗಳಿಗೂ ಸಾರವತ್ತಾದ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು. ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು; ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”​—ಯೆಶಾಯ 25:​4-6, 8.

ಇನ್ನೆಂದಿಗೂ ಯಾವುದೇ ವಿಷಯದ ಕೊರತೆಯಾಗದಂತಹ ರೀತಿಯಲ್ಲಿ “ಲೋಕದ ಜನರ ಜೀವನ ಪರಿಸ್ಥಿತಿಗಳನ್ನು ಉತ್ತಮಗೊಳಿಸಲಿಕ್ಕಾಗಿ” ದೇವರ ರಾಜ್ಯವು ಏನು ಮಾಡುವುದು ಎಂಬುದರ ಕುರಿತು ನೀವು ಹೆಚ್ಚನ್ನು ತಿಳಿದುಕೊಳ್ಳಲು ಬಯಸುತ್ತೀರೋ? ಇಂತಹ ವಿಷಯಗಳ ಕುರಿತು ಬೈಬಲು ಏನು ಹೇಳುತ್ತದೆ ಎಂಬುದನ್ನು ನಿಮಗೆ ತೋರಿಸಲಿಕ್ಕಾಗಿ, ಒಬ್ಬ ಅರ್ಹ ಶಿಕ್ಷಕರು ನಿಮ್ಮನ್ನು ಸಂದರ್ಶಿಸಸಾಧ್ಯವಾಗುವಂತೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗೆ ಕೊಡಲ್ಪಟ್ಟಿರುವ ವಿಷಯವನ್ನು ನೋಡಿರಿ.