ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ನಿಜವಾಗಿಯೂ ಸಂತೋಷವಾಗಿರಬಲ್ಲಿರೋ?

ನೀವು ನಿಜವಾಗಿಯೂ ಸಂತೋಷವಾಗಿರಬಲ್ಲಿರೋ?

ನೀವು ನಿಜವಾಗಿಯೂ ಸಂತೋಷವಾಗಿರಬಲ್ಲಿರೋ?

ಜಾರ್ಜ್‌ ಎಲ್ಲರನ್ನೂ ನಗುಮುಖದಿಂದ ಅಭಿವಂದಿಸುತ್ತಿದ್ದರು. ಅವರಿಗೆ, ಜೀವನವು ಅನುಭವಿಸಲ್ಪಡಬೇಕಾದ ಒಂದು ಅಮೂಲ್ಯ ಕೊಡುಗೆಯಾಗಿತ್ತು. ಸಂತೋಷ ಹಾಗೂ ಆಶಾವಾದವು ಅವರ ವಿಶಿಷ್ಟ ಗುರುತಾಗಿತ್ತು. ವೃದ್ಧಾಪ್ಯದ ಯಾತನೆಗಳನ್ನು ಅವರು ಅನುಭವಿಸಲು ಆರಂಭಿಸಿದಾಗ ಇದು ಇನ್ನೂ ನಿಜವಾಯಿತು. ಮೃತಪಡುವ ದಿನದ ತನಕ ಜಾರ್ಜ್‌ ಒಬ್ಬ ಸಂತೋಷಭರಿತ ವ್ಯಕ್ತಿಯೆಂದೇ ಪ್ರಖ್ಯಾತಿಪಡೆದಿದ್ದರು. ಜಾರ್ಜ್‌ನಂತೆ ನೀವು ಸಂತೋಷಭರಿತ ವ್ಯಕ್ತಿಯಾಗಿದ್ದೀರೋ? ಜೀವನದ ಪ್ರತಿಯೊಂದು ದಿನವು ಅನುಭವಿಸಲ್ಪಡಬೇಕಾದ ಒಂದು ಕೊಡುಗೆಯಾಗಿದೆ ಎಂದು ನಿಮಗೆ ಅನಿಸುತ್ತದೋ? ಇಲ್ಲವೆ ಒಂದು ಹೊಸ ದಿನದ ನಿರೀಕ್ಷೆಯು ನಿಮ್ಮಲ್ಲಿ ನಿರಾಸಕ್ತಿ ಮೂಡಿಸುತ್ತದೋ ಅಥವಾ ನಿಮ್ಮನ್ನು ಭಯಗೊಳಿಸುತ್ತದೋ? ಯಾವುದಾದರೂ ಸಮಸ್ಯೆಯು ನಿಮ್ಮಿಂದ ಸಂತೋಷವನ್ನು ಕಸಿದುಕೊಳ್ಳುತ್ತಿದೆಯೋ?

ಸಂತೋಷವನ್ನು, ಸ್ವಲ್ಪ ಮಟ್ಟಿಗೆ ನಿರಂತರವಾಗಿರುವ ಸುಕ್ಷೇಮ ಸ್ಥಿತಿಯಾಗಿದೆ ಎಂಬುದಾಗಿ ಅರ್ಥನಿರೂಪಿಸಲಾಗಿದೆ. ಸಂತೃಪ್ತಿಯಿಂದ ಹಿಡಿದು ಆಳವಾದ ಹಾಗೂ ತೀವ್ರವಾದ ಹರ್ಷದ ತನಕ ಇರುವ ಭಾವೋದ್ರೇಕ ಮತ್ತು ಸುಕ್ಷೇಮಕ್ಕಿರುವ ಸ್ವಾಭಾವಿಕ ಅಪೇಕ್ಷೆ ಸಂತೋಷದ ಲಕ್ಷಣವಾಗಿದೆ. ಇಂತಹ ಸಂತೋಷವು ನಿಜವಾಗಿಯೂ ಇದೆಯೋ?

ಇಂದು, ಜನರು ಸಾಕಷ್ಟು ಶ್ರೀಮಂತರಾಗಿದ್ದರೆ ಮಾತ್ರ ಸಂತೋಷವಾಗಿರಬಲ್ಲರು ಎಂಬ ದೃಷ್ಟಿಕೋನವನ್ನು ಸಮಾಜವು ಉತ್ತೇಜಿಸುತ್ತದೆ. ಶ್ರೀಮಂತರಾಗಲು ಹತೋಟಿಮೀರಿ ಪ್ರಯತ್ನಿಸುವುದರಲ್ಲಿ ಕೋಟ್ಯಂತರ ಜನರು ಮುಳುಗಿಹೋಗಿದ್ದಾರೆ. ಹೀಗೆ ಮಾಡುವಾಗ, ಅನೇಕರು ವೈಯಕ್ತಿಕ ಸಂಬಂಧಗಳು ಹಾಗೂ ಜೀವನದ ಇನ್ನಿತರ ಪ್ರಾಮುಖ್ಯ ವಿಷಯಗಳನ್ನು ತ್ಯಾಗಮಾಡುತ್ತಾರೆ. ಇರುವೆಗೂಡಿನ ಮೇಲಿರುವ ಇರುವೆಗಳಂತೆ, ಅವರು ಯಾವಾಗಲೂ ಆತುರದಿಂದ ಮುನ್ನುಗ್ಗುತ್ತಿರುತ್ತಾರೆ ಮತ್ತು ತಮ್ಮ ಕುರಿತೋ ಬೇರೆಯವರ ಕುರಿತೋ ಯೋಚಿಸಲು ಅವರಿಗೆ ಸಮಯ ಸಿಗುವುದು ತುಂಬ ಕಷ್ಟ. “ಖಿನ್ನತೆಯ ಸಮಸ್ಯೆಯಿದೆ ಎಂದು ರೋಗ ನಿರ್ಣಯಮಾಡಲ್ಪಡುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ. ಮತ್ತು ತೀರ ಚಿಕ್ಕ ಪ್ರಾಯದಲ್ಲೇ ಜನರು [ಖಿನ್ನತೆಯಿಂದ] ನರಳುತ್ತಿದ್ದಾರೆ . . . ಖಿನ್ನತೆನಿರೋಧಕಗಳು, ಔಷಧದ ಕಂಪೆನಿಗಳ ಅತ್ಯಧಿಕವಾಗಿ ಮಾರಾಟವಾಗುವ ಔಷಧಗಳ ಪಟ್ಟಿಯಲ್ಲಿ ಒಂದಾಗಿವೆ” ಎಂದು ಲಾಸ್‌ ಆ್ಯಂಜಲಿಸ್‌ ಟೈಮ್ಸ್‌ ಪತ್ರಿಕೆಯು ವರದಿಸುತ್ತದೆ. ಕೋಟಿಗಟ್ಟಲೆ ಜನರು ಕಾನೂನುಬಾಹಿರ ಅಮಲೌಷಧಗಳನ್ನು ತೆಗೆದುಕೊಳ್ಳುತ್ತಾರೆ ಅಥವಾ ತಮ್ಮ ಸಮಸ್ಯೆಗಳನ್ನು ಮರೆಯಲು ಮದ್ಯಪಾನಮಾಡುತ್ತಾರೆ. ಇನ್ನೂ ಕೆಲವರು, ಖಿನ್ನರಾದಾಗ ಹಿಡಿತವಿಲ್ಲದೆ ಖರ್ಚು ಮಾಡುತ್ತಾ ಹೋಗುತ್ತಾರೆ. ಒಂದು ಸಮೀಕ್ಷೆಯ ಪ್ರಕಾರ, “ಅಧಿಕಾಂಶ ಸ್ತ್ರೀಯರು ಷಾಪಿಂಗ್‌ ಅನ್ನು ಖಿನ್ನತೆಯ ಚಿಕಿತ್ಸೆಯೋಪಾದಿ ಪರಿಗಣಿಸುತ್ತಿರುವುದು ಕಂಡುಬಂತು,” ಎಂದು ದಿ ಗಾರ್ಡಿಯನ್‌ ಎಂಬ ಬ್ರಿಟಿಷ್‌ ವಾರ್ತಾಪತ್ರಿಕೆಯು ತಿಳಿಸುತ್ತದೆ. “ಖಿನ್ನರಾದಾಗ ಷಾಪಿಂಗ್‌ಗೆ ಹೋಗುವುದರಲ್ಲಿ ಪುರುಷರಿಗಿಂತ ಮೂರು ಪಟ್ಟು ಹೆಚ್ಚು ಸ್ತ್ರೀಯರು ಒಳಗೂಡಿದ್ದಾರೆ.”

ಆದರೆ, ನಿಜವಾದ ಸಂತೋಷವು ಅಂಗಡಿಯಲ್ಲೋ, ಬಾಟಲಿಯಲ್ಲೋ, ಮಾತ್ರೆಯಲ್ಲೋ, ಸಿರಿಂಜಿನಲ್ಲೋ, ಅಥವಾ ಬ್ಯಾಂಕ್‌ ಅಕೌಂಟಿನಲ್ಲೋ ಸಿಗುವುದಿಲ್ಲ. ಸಂತೋಷವು ಅಂಗಡಿಯಲ್ಲಿ ಸಿಗುವಂತಹ ವಸ್ತುವಲ್ಲ. ಅದು ಉಚಿತವಾಗಿ ಸಿಗುವಂಥದ್ದಾಗಿದೆ. ಇಂತಹ ಅಮೂಲ್ಯವಾದ ಕೊಡುಗೆಯನ್ನು ನಾವು ಎಲ್ಲಿ ಕಂಡುಕೊಳ್ಳಬಹುದು? ಇದನ್ನು ನಾವು ಮುಂದಿನ ಲೇಖನದಲ್ಲಿ ಚರ್ಚಿಸುವೆವು.