ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಕ್ತರಹಿತ ಶಸ್ತ್ರಚಿಕಿತ್ಸೆ “ಚಾಲ್ತಿಯಲ್ಲಿರುವ ಪ್ರಧಾನ ವೈದ್ಯಕೀಯ ರೂಢಿ”

ರಕ್ತರಹಿತ ಶಸ್ತ್ರಚಿಕಿತ್ಸೆ “ಚಾಲ್ತಿಯಲ್ಲಿರುವ ಪ್ರಧಾನ ವೈದ್ಯಕೀಯ ರೂಢಿ”

ರಕ್ತರಹಿತ ಶಸ್ತ್ರಚಿಕಿತ್ಸೆ “ಚಾಲ್ತಿಯಲ್ಲಿರುವ ಪ್ರಧಾನ ವೈದ್ಯಕೀಯ ರೂಢಿ”

“‘ರಕ್ತರಹಿತ’ ಚಿಕಿತ್ಸೆ” ಎಂಬ ಶೀರ್ಷಿಕೆಯ ಕೆಳಗೆ, ಮೆಕ್ಲೀನ್ಸ್‌ ಪತ್ರಿಕೆಯು ವರದಿಸಿದ್ದೇನೆಂದರೆ, ಕೆನಡದಲ್ಲೆಲ್ಲ ಇರುವ ಡಾಕ್ಟರರು, “ಕಳೆದ ಐದು ವರ್ಷಗಳಿಂದ ಹೊರತರುತ್ತಿರುವ ಹೊಸಹೊಸ ಚಿಕಿತ್ಸಾವಿಧಾನಗಳಿಂದಾಗಿ, ರಕ್ತರಹಿತವೆಂದು ಕರೆಯಲಾಗುವ ಚಿಕಿತ್ಸೆಯು, ಚಾಲ್ತಿಯಲ್ಲಿರುವ ಒಂದು ಪ್ರಧಾನ ವೈದ್ಯಕೀಯ ರೂಢಿ ಆಗಿಬಿಟ್ಟಿದೆ.” ವಿನಿಪೆಗ್ಸ್‌ ಹೆಲ್ತ್‌ ಸೈಯೆನ್ಸಸ್‌ ಸೆಂಟರ್‌ನಲ್ಲಿ ಒಬ್ಬ ಅರಿವಳಿಕೆತಜ್ಞರಾಗಿರುವ ಬ್ರೈಯನ್‌ ಮ್ಯೂರ್‌ಹೆಡ್‌ ಈ ಡಾಕ್ಟರುಗಳಲ್ಲಿ ಒಬ್ಬರಾಗಿದ್ದಾರೆ. ರಕ್ತರಹಿತ ಅನ್ಯ ಚಿಕಿತ್ಸೆಯ ಅನ್ವೇಷಣೆಯಲ್ಲಿ ಅವರು ತೊಡಗಿದ್ದೇಕೆ?

1986ರಲ್ಲಿ, ಡಾಕ್ಟರ್‌ ಮ್ಯೂರ್‌ಹೆಡ್‌ 70 ವರ್ಷ ಪ್ರಾಯದ ಒಬ್ಬ ವೃದ್ಧನಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸುವ ಕಷ್ಟಸಾಧ್ಯ ಕೆಲಸವನ್ನು ಕೈಗೊಂಡರು. ಈ ವ್ಯಕ್ತಿಗೆ ರಕ್ತಸ್ರವಿಸುತ್ತಿರುವ ಹುಣ್ಣಿನ ಸಮಸ್ಯೆಯಿತ್ತು. ಮತ್ತು ಅವನೊಬ್ಬ ಯೆಹೋವನ ಸಾಕ್ಷಿಯಾಗಿದ್ದದ್ದರಿಂದ, ತನ್ನ ಬೈಬಲ್‌ ಆಧಾರಿತ ನಂಬಿಕೆಗಳಿಗೆ ಹೊಂದಿಕೆಯಲ್ಲಿ, ರಕ್ತಪೂರಣದ ಅಗತ್ಯವಿಲ್ಲದಿರುವ ಚಿಕಿತ್ಸೆಗಾಗಿ ಕೇಳಿಕೊಂಡನು. (ಅ. ಕೃತ್ಯಗಳು 15:​28, 29) ಆದುದರಿಂದ, ಡಾಕ್ಟರ್‌ ಮ್ಯೂರ್‌ಹೆಡ್‌ರವರು, “ಆ ರೋಗಿಯ ರಕ್ತದೊತ್ತಡವು ಕಡಿಮೆಯಾಗದಂತೆ, ಅವನೊಳಗೆ ಸಲೈನ್‌ ದ್ರಾವಣವನ್ನು ಪಂಪ್‌ ಮಾಡುತ್ತಾ ಇದ್ದರು. ಇದು ತೀರ ವಿರಳವಾಗಿ ಉಪಯೋಗಿಸಲಾಗುವ ಒಂದು ವಿಧಾನವಾಗಿದೆ” ಎಂದು ಮ್ಯಾಕ್ಲೀನ್ಸ್‌ ಪತ್ರಿಕೆಯು ವರದಿಸುತ್ತದೆ. “ಈ ಕಾರ್ಯವಿಧಾನವು ಸಫಲವಾಯಿತು ಮತ್ತು ಅದು, ‘ನಾವು ತೀರ ಹೆಚ್ಚು ರಕ್ತ ಪೂರಣಗಳನ್ನು ಕೊಡುತ್ತಿದ್ದೇವೆ’ ಎಂಬ ಮ್ಯೂರ್‌ಹೆಡ್‌ರವರ ನಂಬಿಕೆಗೆ ಪುಷ್ಟಿಕೊಟ್ಟಿತ್ತು. ‘ಅನ್ಯ ಚಿಕಿತ್ಸೆಗಳ ಕಡೆಗೆ ಗಮನಹರಿಸಲು ಇದೇ ಸರಿಯಾದ ಸಮಯವೆಂದು ನಾನು ನೆನಸಿದೆ.’”

ರಕ್ತರಹಿತವಾದ ಶಸ್ತ್ರಚಿಕಿತ್ಸೆಗಾಗಿರುವ ಈ ಅನ್ವೇಷಣೆಯು, “ಭವಿಷ್ಯತ್ತಿನಲ್ಲಿ ದಾನಿ ರಕ್ತದ ಸರಬರಾಯಿಯ ಕುರಿತಾದ ಚಿಂತೆಯಿಂದಲೂ, ರಕ್ತಪೂರಣದಿಂದ ರೋಗಾಣುವನ್ನು ಪಡೆದುಕೊಳ್ಳುವ ಬಗ್ಗೆ ಅನೇಕ ರೋಗಿಗಳಿದ್ದ ಭಯದಿಂದಲೂ ಪ್ರೇರಿಸಲ್ಪಟ್ಟಿತು.” ಹೊಸಹೊಸ ವಿಧಾನಗಳನ್ನು ಹುಡುಕುತ್ತಿರುವ ಡಾಕ್ಟರುಗಳ ಸಂಶೋಧನೆಯಿಂದಾಗಿ, ಯೆಹೋವನ ಸಾಕ್ಷಿಗಳಿಗೆ ಮಾತ್ರವಲ್ಲ, ಇನ್ನಿತರ ಅನೇಕರಿಗೂ ಪ್ರಯೋಜನವಾಗಿದೆ. “ರಕ್ತರಹಿತ ಚಿಕಿತ್ಸೆಯು, ಹೆಚ್ಚಿನ ವಿದ್ಯಮಾನಗಳಲ್ಲಿ ಪೂರಣಗಳನ್ನು ಕೊಡುವ ಅಗತ್ಯವನ್ನು ಅಳಿಸಿಹಾಕುತ್ತದಲ್ಲದೆ, ಕಲುಷಿತ ರಕ್ತದಿಂದ ಸೋಂಕುತಗಲುವ ಅಪಾಯವನ್ನು ಸಹ ಕಡಿಮೆಮಾಡುತ್ತದೆ” ಎಂದು ಮ್ಯಾಕ್ಲೀನ್ಸ್‌ ಪತ್ರಿಕೆಯು ಹೇಳುತ್ತದೆ. ಆದರೆ “ಕಲುಷಿತವಾಗಿರದ” ರಕ್ತ ಸಹ, ರೋಗಿಗಳ ಸೋಂಕುರಕ್ಷಣಾ ವ್ಯವಸ್ಥೆಗಳನ್ನು ತಾತ್ಕಾಲಿಕವಾಗಿ ಅಡಗಿಸುವ ಮೂಲಕ ಸೋಂಕು ತಗಲುವ ಅಪಾಯವನ್ನೊಡ್ಡಬಲ್ಲದು.

ರಕ್ತರಹಿತ ಅನ್ಯ ಚಿಕಿತ್ಸೆಯ ಕುರಿತಾಗಿ ಯೆಹೋವನ ಸಾಕ್ಷಿಗಳಿಗಿರುವ ದೃಢವಾದ ನಂಬಿಕೆಗೆ ಕಾರಣವೇನು? ರಕ್ತವು ನಿಮ್ಮ ಜೀವವನ್ನು ಹೇಗೆ ರಕ್ಷಿಸಬಲ್ಲದು? ಎಂಬ ಬ್ರೋಷರನ್ನು ನೀವು ಓದಲು ಆಸಕ್ತರಾಗಿರಬಹುದು. ಅದನ್ನು ನಿಮಗೆ ಕೊಡಲು ಯೆಹೋವನ ಸಾಕ್ಷಿಗಳು ಸಂತೋಷಿಸುವರು.