ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧರ್ಮವು ಲೋಕವ್ಯಾಪಕವಾಗಿ ಶಾಂತಿಯನ್ನು ತರಸಾಧ್ಯವೋ?

ಧರ್ಮವು ಲೋಕವ್ಯಾಪಕವಾಗಿ ಶಾಂತಿಯನ್ನು ತರಸಾಧ್ಯವೋ?

ಧರ್ಮವು ಲೋಕವ್ಯಾಪಕವಾಗಿ ಶಾಂತಿಯನ್ನು ತರಸಾಧ್ಯವೋ?

ಇಸವಿ 2000ದ ಆಗಸ್ಟ್‌ 28ರಿಂದ 31ನೇ ತಾರೀಖಿನ ವರೆಗೆ, 73 ದೇಶಗಳಿಂದ ಬಂದ ಸುಮಾರು 500ಕ್ಕಿಂತಲೂ ಹೆಚ್ಚಿನ ಪ್ರತಿನಿಧಿಗಳು ನ್ಯೂ ಯಾರ್ಕ್‌ ನಗರದಲ್ಲಿ ಒಟ್ಟುಗೂಡಿದರು. ಇವರೆಲ್ಲರೂ “ಧಾರ್ಮಿಕ ಹಾಗೂ ಆಧ್ಯಾತ್ಮಿಕ ಗುರುಗಳ ಸಹಸ್ರಮಾನ ಲೋಕ ಶಾಂತಿ ಶೃಂಗಸಭೆ”ಗಾಗಿ ವಿಶ್ವಸಂಸ್ಥೆಯಲ್ಲಿ ಕೂಡಿಬಂದರು. ಈ ಗುರುಗಳು ಅನೇಕ ಧರ್ಮಗಳನ್ನು ಪ್ರತಿನಿಧಿಸುತ್ತಿದ್ದರು. ಇವರಲ್ಲಿ ಅನೇಕರು ಪೇಟ, ಕಾವಿಬಟ್ಟೆ, ರೆಕ್ಕೆಪುಕ್ಕಗಳುಳ್ಳ ಮುಂಡಾಸನ್ನು ಅಥವಾ ಉದ್ದನೆಯ ಕಪ್ಪು ಮೇಲಂಗಿಗಳನ್ನು ಧರಿಸಿದ್ದರು. ಇವರಲ್ಲಿ, ಮುಸ್ಲಿಮ್‌, ಯೆಹೂದಿಮತ, ಜೈನ್‌, ಜೊರೊಆ್ಯಸ್ಟ್ರಿಯನ್‌, ಟೌಇಸಮ್‌, ಬಹಾಯ್ಸ್‌, ಬೌದ್ಧ, ಶಿಂಟೋ, ಸಿಕ್ಖ್‌, ಹಿಂದೂ ಧರ್ಮ ಹಾಗೂ ಕ್ರೈಸ್ತಪ್ರಪಂಚದ ಧರ್ಮಗಳ ಜನರಿದ್ದರು.

ಇದು ನಾಲ್ಕು ದಿವಸದ ಸಮಾಲೋಚನೆಯಾಗಿತ್ತು. ಇದರ ಮೊದಲ ಎರಡು ದಿನ, ಈ ಪ್ರತಿನಿಧಿಗಳು ವಿಶ್ವಸಂಸ್ಥೆಯಲ್ಲಿ ಕೂಡಿಬಂದರು. ವಿಶ್ವಸಂಸ್ಥೆಯು ಈ ಸಮಾಲೋಚನೆಯನ್ನು ಏರ್ಪಡಿಸಲಿಲ್ಲ ಇಲ್ಲವೆ ಹಣಕಾಸಿನ ನೆರವನ್ನು ನೀಡಲಿಲ್ಲ, ಬದಲಿಗೆ ವಿವಿಧ ಧರ್ಮಕಾರ್ಯ ಸಂಸ್ಥೆಗಳು ನೆರವನ್ನು ನೀಡಿದವು. ಬಡತನ, ಕುಲವಾದ, ಪರಿಸರೀಯ ಸಮಸ್ಯೆಗಳು ಯುದ್ಧ ಹಾಗೂ ಬಹುಹತ್ಯೆಯ ಶಸ್ತಾಸ್ತ್ರಗಳನ್ನು ಇನ್ನಿಲ್ಲದಂತೆ ಮಾಡುವುದಕ್ಕಾಗಿ ಒಟ್ಟಿಗೆ ಕೆಲಸಮಾಡುವ ಮಹತ್ತ್ವದ ಬಗ್ಗೆ ವಿಶ್ವಸಂಸ್ಥೆ ಹಾಗೂ ಇನ್ನಿತರ ಧಾರ್ಮಿಕ ಗುರುಗಳು ಮಾತಾಡಿದರು.

“ಭೌಗೋಲಿಕ ಶಾಂತಿಗೆ ಬದ್ಧತೆ” ಎಂಬ ಮೇಲ್ಬರಹವುಳ್ಳ ದಾಖಲೆಪತ್ರಕ್ಕೆ ಅಲ್ಲಿ ನೆರೆದುಬಂದಿದ್ದ ಪ್ರತಿನಿಧಿಗಳು ಸಹಿಹಾಕಿದರು. ಹಿಂಸೆ ಹಾಗೂ ಯುದ್ಧವು “ಕೆಲವೊಮ್ಮೆ ಧರ್ಮದ ಹೆಸರಿನಲ್ಲಿ ಎಸಗಲ್ಪಡುತ್ತದೆ” ಎಂಬುದನ್ನು ಒಪ್ಪಿಕೊಂಡರೂ, ಸಹಿಹಾಕಿದವರು “ಶಾಂತಿಯ ಬೆನ್ನಟ್ಟುವಿಕೆಯಲ್ಲಿ . . . ವಿಶ್ವಸಂಸ್ಥೆಯೊಂದಿಗೆ ಜೊತೆಗೂಡಿ ಕೆಲಸಮಾಡುವರು” ಎಂಬುದನ್ನು ಆ ದಾಖಲೆಯು ಘೋಷಿಸಿತು. ಆದರೆ ಇದನ್ನು ಹೇಗೆ ಮಾಡಬೇಕೆಂಬುದಕ್ಕೆ ಯಾವುದೇ ನಿರ್ದಿಷ್ಟ ನಿರ್ಣಯಗಳು ತೆಗೆದುಕೊಳ್ಳಲ್ಪಡಲಿಲ್ಲ.

ಎರಡನೇ ದಿನ, ಶೃಂಗಸಭೆಯ ಸೆಕ್ರಿಟರಿ ಜನರೆಲ್‌ ಆದ ಬಾವ ಜೈನ್‌ ತಮ್ಮ ಆರಂಭದ ಭಾಷಣದ ಕೊನೆಯಲ್ಲಿ ಕೆಲವು ವರ್ಷಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ಒಂದು ಚಿತ್ರಕಲೆಯನ್ನು ನೋಡಿದ್ದ ವಿಷಯವನ್ನು ತಿಳಿಸಿದರು. ಆ ಚಿತ್ರಕಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಚಿತ್ರಿಸಲಾಗಿತ್ತು. ಅವನು ವಿಶ್ವಸಂಸ್ಥೆಯ ಸೆಕ್ರಿಟೇರಿಯಟ್‌ ಕಟ್ಟಡಕ್ಕಿಂತಲೂ ಎತ್ತರವಾಗಿದ್ದನು. ಅವನು ಆ ಕಟ್ಟಡವೇ ಒಂದು ಬಾಗಿಲು ಆಗಿದೆಯೋ ಎಂಬಂತೆ ಅದನ್ನು ತಟ್ಟುತ್ತಿದ್ದನು. ಆ ಚಿತ್ರದ ಕೆಳಗೆ “ಶಾಂತಿಯ ಪ್ರಭು” ಎಂಬ ಬರಹವಿತ್ತು. ಶ್ರೀ. ಜೈನ್‌ ಹೇಳಿದ್ದು: “[ಈ ಚಿತ್ರವನ್ನು] ನೋಡಿದಾಕ್ಷಣವೇ ಇದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಲ್ಪಟ್ಟಿತು. ಆಗ ನಾನು [ಇದರ] ಅರ್ಥವೇನು ಎಂದು ಹಲವಾರು ಜನರನ್ನು ಕೇಳಿದ್ದೆ. ಆದರೆ ನನಗನಿಸುತ್ತದೆ ಇಂದು ಅದಕ್ಕೆ ಉತ್ತರವು ಸಿಕ್ಕಿದೆ. ಲೋಕದ ಸುತ್ತಲೂ ಇರುವ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಗುರುಗಳು ಇಲ್ಲಿ ಕೂಡಿಬಂದಿರುವುದನ್ನು ನೋಡಿದರೆ, ವಿಶ್ವಸಂಸ್ಥೆಯ ಬಾಗಿಲನ್ನು ತಟ್ಟುತ್ತಿರುವ ಶಾಂತಿಯ ಪ್ರಭುವು [ಇದೇ] ಆಗಿದೆ ಎಂದು ನನಗೆ ತೋರುತ್ತದೆ.”

ಆದರೆ ಬೈಬಲು ಭಿನ್ನವಾದ ದೃಷ್ಟಿಕೋನವನ್ನು ನೀಡುತ್ತದೆ. ಅದು ಶಾಂತಿಯ ಪ್ರಭು ಯೇಸು ಕ್ರಿಸ್ತನಾಗಿದ್ದಾನೆ ಎಂದು ತೋರಿಸುತ್ತದೆ. ಅವನು ಲೋಕದ ರಾಜಕೀಯ ಇಲ್ಲವೆ ಧಾರ್ಮಿಕ ಗುರುಗಳ ಪ್ರಯತ್ನಗಳ ಮುಖಾಂತರ ಭೌಗೋಲಿಕ ಶಾಂತಿಯನ್ನು ತರುವುದಿಲ್ಲ ಬದಲಿಗೆ ದೇವರ ರಾಜ್ಯದ ಮುಖಾಂತರ ತರುತ್ತಾನೆ. ಇದು ದೇವರ ಸ್ವರ್ಗೀಯ ಸರಕಾರವಾಗಿದೆ. ಈ ರಾಜ್ಯವು ವಿಧೇಯ ಮಾನವಕುಲವನ್ನು ಯಶಸ್ವಿಕರವಾಗಿ ಏಕೀಕೃತಗೊಳಿಸುವುದು ಮತ್ತು ಈ ಭೂಮಿಯಲ್ಲಿ ದೇವರ ಚಿತ್ತವನ್ನು ನೆರವೇರಿಸಲು ಸಹಾಯಮಾಡುವುದು.​—ಯೆಶಾಯ 9:6; ಮತ್ತಾಯ 6:​9, 10.