ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ರೋಮಾಪುರ 5:​3-5ರಲ್ಲಿ ಅಪೊಸ್ತಲ ಪೌಲನು ನಿರೀಕ್ಷೆಯನ್ನು ವಿಚಾರಸರಣಿಯ ಕೊನೆಯಲ್ಲೇಕೆ ಪಟ್ಟಿಮಾಡಿದನು?

ಕ್ರೈಸ್ತರು ಅನುಭವಿಸುವ ವಿಷಯಗಳನ್ನು ಪೌಲನು ವಿಚಾರಸರಣಿಯಲ್ಲಿ ಪ್ರಸ್ತುತಪಡಿಸಿದನು. ಅವು ಉಪದ್ರವ, ತಾಳ್ಮೆ, ಅಂಗೀಕೃತ ಸ್ಥಿತಿ ಮತ್ತು ನಿರೀಕ್ಷೆಯಾಗಿದ್ದವು. ಈ “ನಿರೀಕ್ಷೆಯು” ಒಬ್ಬನು ಬೈಬಲಿನಿಂದ ಪಡೆದುಕೊಳ್ಳುವ ಆರಂಭದ ನಿರೀಕ್ಷೆಯಲ್ಲ, ಬದಲಿಗೆ ಸಮಯ ಕಳೆದಂತೆ ಒಬ್ಬ ಕ್ರೈಸ್ತನು ಪಡೆದುಕೊಳ್ಳುವ ಬಲಗೊಳಿಸಲ್ಪಟ್ಟ, ಆಳವಾದ, ವ್ಯಾಪಕವಾದ ನಿರೀಕ್ಷೆಯಾಗಿದೆ.​—12/15, ಪುಟಗಳು 22-3.

ಪ್ರಾಚೀನ ಗ್ರೀಸ್‌ನಲ್ಲಿ ನಡೆಯುತ್ತಿದ್ದ ಕ್ರೀಡಾಪಂದ್ಯಗಳ ಕುರಿತು ತಿಳಿದುಕೊಳ್ಳಲು ಇಂದಿನ ಕ್ರೈಸ್ತನೊಬ್ಬನು ಏಕೆ ಆಸಕ್ತನಾಗಿರಬಹುದು?

ಆ ಪಂದ್ಯಗಳ ಸ್ವರೂಪ ಮತ್ತು ಪದ್ಧತಿಗಳನ್ನು ಅರ್ಥಮಾಡಿಕೊಳ್ಳುವುದು ಬೈಬಲಿನ ಅನೇಕ ವಚನಗಳ ಮೇಲೆ ಬೆಳಕನ್ನು ಬೀರುವುದು. ಅವುಗಳಲ್ಲಿ ಕೆಲವು ‘ನಿಯಮದ ಪ್ರಕಾರ ಹೋರಾಡುವುದು,’ ‘ಎಲ್ಲಾ ಬಾರವನ್ನು ತೆಗೆದಿಡುವುದು ಮತ್ತು ಕ್ರಿಸ್ತನ ಮಾದರಿಯನ್ನು ಅನುಸರಿಸುವುದು,’ ‘ಓಟವನ್ನು ಕಡೆಗಾಣಿಸುವುದು’ ಮತ್ತು ಜಯಮಾಲೆ ಅಥವಾ ಬಹುಮಾನವನ್ನು ಪಡೆದುಕೊಳ್ಳುವುದನ್ನು ಸೂಚಿಸುತ್ತವೆ. (2 ತಿಮೊಥೆಯ 2:5; 4:​7, 8; ಇಬ್ರಿಯ 12:​1, 2; 1 ಕೊರಿಂಥ 9:​24, 25; 1 ಪೇತ್ರ 5:4)​—1/1, ಪುಟಗಳು 28-30.

ಜನವರಿ 1914ರಲ್ಲಿ ಸುವಾರ್ತೆಯನ್ನು ಸಾರುವ ಯಾವ ಹೊಸ ವಿಧಾನವನ್ನು ಪರಿಚಯಿಸಲಾಯಿತು?

ಆ ಸಮಯದಲ್ಲಿ “ಫೋಟೋ-ಡ್ರಾಮಾ ಆಫ್‌ ಕ್ರಿಯೇಷನ್‌” ಬಿಡುಗಡೆಯಾಯಿತು. ಇದು, ವರ್ಣರಂಜಿತವಾದ ನೂರಾರು ಗಾಜಿನ ಸ್ಲೈಡ್‌ಗಳು ಹಾಗೂ ಚಲನ ಚಿತ್ರದ ಬಿಡಿಭಾಗಗಳನ್ನೊಳಗೊಂಡ ನಾಲ್ಕು ಭಾಗಗಳ ಪ್ರಸ್ತುತಪಡಿಸುವಿಕೆಯಾಗಿತ್ತು. ಇವುಗಳಲ್ಲಿ ಛಾಯಾಚಿತ್ರದೊಂದಿಗೆ ವಿವರಣೆಯನ್ನು ನೀಡುವ ಭಾಷಣವೂ ಕೂಡಿದ ಫೋನೋಗ್ರಾಫಿಕ್‌ ರೆಕಾರ್ಡಿಂಗ್‌ಗಳು ಸೇರಿದ್ದವು. ಈ ಡ್ರಾಮಾದ 20 ಸೆಟ್‌ಗಳು ಸಿದ್ಧಗೊಳಿಸಲ್ಪಟ್ಟಿದ್ದವು ಮತ್ತು ಬೈಬಲಿನ ಸಂದೇಶವನ್ನು ಜನರಿಗೆ ಕಲಿಸುವುದಕ್ಕಾಗಿ ವ್ಯಾಪಕವಾಗಿ ಉಪಯೋಗಿಸಲ್ಪಟ್ಟವು.​—1/15, ಪುಟಗಳು 8-9.

ಯಾವ ರೀತಿಯಲ್ಲಿ ಆಡಳಿತ ಮಂಡಲಿಯು ಒಂದು ಕಾನೂನುಬದ್ಧ ಸಂಘಟನೆಗಿಂತ ಭಿನ್ನವಾಗಿದೆ?

ಕಾನೂನುಬದ್ಧ ಸಂಘಟನೆಯ ಡೈರೆಕ್ಟರ್‌ಗಳನ್ನು ಅದರ ಸದಸ್ಯರೇ ಆ ಸ್ಥಾನಕ್ಕೆ ಚುನಾಯಿಸುತ್ತಾರೆ. ಆದರೆ ಆಡಳಿತ ಮಂಡಲಿಯು ಯಾವ ಮನುಷ್ಯನಿಂದಲೂ ನೇಮಿಸಲ್ಪಡದೆ, ಯೇಸು ಕ್ರಿಸ್ತನಿಂದ ನೇಮಿಸಲ್ಪಟ್ಟಿದೆ. ಯೆಹೋವನ ಸಾಕ್ಷಿಗಳಿಂದ ಉಪಯೋಗಿಸಲ್ಪಡುವ ಬೇರೆ ಬೇರೆ ಸಂಘಟನೆಗಳ ಡೈರೆಕ್ಟರರು ಆಡಳಿತ ಮಂಡಲಿಯ ಸದಸ್ಯರಾಗಿರುವ ಅಗತ್ಯವಿಲ್ಲ. ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ ಇತ್ತೀಚಿನ ವಾರ್ಷಿಕ ಕೂಟದಲ್ಲಿ, ಅದರ ಡೈರೆಕ್ಟರ್‌ಗಳಾಗಿ ಮತ್ತು ಅಧಿಕಾರಿಗಳಾಗಿ ಸೇವೆಮಾಡುತ್ತಿದ್ದ ಆಡಳಿತ ಮಂಡಲಿಯ ಸದಸ್ಯರು ತಮ್ಮ ಸ್ಥಾನಗಳನ್ನು ಸ್ವಇಚ್ಛೆಯಿಂದ ಬಿಟ್ಟುಕೊಟ್ಟರು. “ಬೇರೆ ಕುರಿ”ಗಳ ಪ್ರೌಢ ಸಹೋದರರು ಈ ಸ್ಥಾನಗಳನ್ನು ತುಂಬಿಸಿದರು. (ಯೋಹಾನ 10:16) ಹೀಗೆ, ಆಡಳಿತ ಮಂಡಲಿಯು ಆತ್ಮಿಕ ಆಹಾರವನ್ನು ಸಿದ್ಧಗೊಳಿಸುವುದರಲ್ಲಿ ಹಾಗೂ ಲೋಕವ್ಯಾಪಕ ಸಹೋದರತ್ವದ ಇನ್ನಿತರ ಆತ್ಮಿಕ ಆವಶ್ಯಕತೆಗಳನ್ನು ಪೂರೈಸುವುದರಲ್ಲಿ ಇನ್ನು ಹೆಚ್ಚು ಸಮಯವನ್ನು ಕಳೆಯಬಹುದು.​—1/15, ಪುಟಗಳು 29, 31.

ನಿರುತ್ಸಾಹವನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಕಲಿಯಲು ಬೈಬಲಿನ ಯಾವ ಎರಡು ಉದಾಹರಣೆಗಳನ್ನು ನಾವು ಪರೀಕ್ಷಿಸಬಹುದು?

ಒಂದು ಉದಾಹರಣೆಯು ಸಮುವೇಲನ ತಾಯಿಯಾಗಿದ್ದ ಹನ್ನಳದ್ದಾಗಿದೆ. ಇಸ್ರಾಯೇಲಿನ ಮಹಾಯಾಜಕನಾದ ಏಲಿಯು ಅವಳನ್ನು ತಪ್ಪಾಗಿ ಅರ್ಥಮಾಡಿಕೊಂಡಾಗ ಅವಳು ನಿರುತ್ತೇಜಿತಳಾಗಬಹುದಿತ್ತು. ಬದಲಿಗೆ, ಅವಳು ಮುಚ್ಚುಮರೆಯಿಲ್ಲದೆ ಗೌರವಪೂರ್ವಕವಾಗಿ ನಿಜಾಂಶವೇನೆಂಬುದನ್ನು ಅವನ ಮುಂದಿಟ್ಟಳು. ಅಷ್ಟೇ ಅಲ್ಲದೆ, ಹನ್ನಳು ಏಲಿಯ ವಿರುದ್ಧ ದ್ವೇಷವನ್ನು ಕಾರಲಿಲ್ಲ. ಎರಡನೇ ಉದಾಹರಣೆಯು ಮಾರ್ಕನದ್ದಾಗಿದೆ. ಮಿಷನೆರಿ ಪ್ರಯಾಣದಲ್ಲಿ ಅಪೊಸ್ತಲ ಪೌಲನು ಅವನನ್ನು ಒಬ್ಬನಾಗಿ ಸೇರಿಸಿಕೊಳ್ಳಲು ಬಯಸದಿದ್ದಾಗ ಅವನು ನಿರುತ್ಸಾಹಗೊಂಡಿರಬೇಕು. ಈ ಸುಯೋಗವನ್ನು ಕಳೆದುಕೊಂಡದ್ದಕ್ಕಾಗಿ ಮಾರ್ಕನು ಮನಗುಂದದೆ ಬಾರ್ನಬನೊಂದಿಗೆ ಪ್ರಯಾಣಮಾಡುವ ಮೂಲಕ ತನ್ನ ಕ್ರಿಯಾಶೀಲ ಸೇವೆಯನ್ನು ಮುಂದುವರಿಸಿದನು.​—2/1, ಪುಟಗಳು 20-2.

ಕಂಪ್ಯೂಟರ್‌ ಸಾಫ್ಟ್‌ವೇರ್‌ ಪ್ರೋಗ್ರಾಮುಗಳ ಪ್ರತಿಗಳನ್ನು ಮಾಡಿ ಬೇರೆಯವರಿಗೆ ಕೊಡುವುದರ ಇಲ್ಲವೇ ಅವರಿಂದ ತೆಗೆದುಕೊಳ್ಳುವುದರ ಕುರಿತು ಕ್ರೈಸ್ತನೊಬ್ಬನು ಏಕೆ ಎಚ್ಚರಿಕೆಯುಳ್ಳವನಾಗಿರಬೇಕು?

ಬಹುತೇಕ ಕಂಪ್ಯೂಟರ್‌ ಪ್ರೋಗ್ರಾಮುಗಳು (ಗೇಮ್ಸ್‌ಗಳು ಒಳಗೂಡಿದಂತೆ) ಲೈಸನ್ಸ್‌ ಅನ್ನು ಪಡೆದಿರುತ್ತವೆ. ಮತ್ತು ಉಪಯೋಗವು ಧಣಿ/ಬಳಕೆದಾರರ ಕಂಪ್ಯೂಟರ್‌ಗೆ ಮಾತ್ರ ಸೀಮಿತವಾಗಿರುತ್ತದೆ. ಸಾಮಾನ್ಯವಾಗಿ, ಅವುಗಳ ಪ್ರತಿಗಳನ್ನು ಮಾಡಿ ಇತರರಿಗೆ ನಾವು ಪುಕ್ಕಟ್ಟೆಯಾಗಿ ಕೊಡುವುದಾದರೂ, ಅದೂ ಕಾಪಿರೈಟ್‌ನ ನಿಯಮವನ್ನು ಮುರಿದಂತಾಗುತ್ತದೆ. ‘ಕೈಸರನದನ್ನು ಕೈಸರನಿಗೆ ಕೊಡುವ’ ನಿಯಮಕ್ಕೆ ಕ್ರೈಸ್ತರು ವಿಧೇಯತೆಯನ್ನು ತೋರಿಸಲು ಬಯಸುತ್ತಾರೆ. (ಮಾರ್ಕ 12:17)​—2/15, ಪುಟಗಳು 28-9.

ಸಿರಿಲ್‌ ಮತ್ತು ಮೆಥೊಡ್ಯಸ್‌ ಯಾರಾಗಿದ್ದರು, ಮತ್ತು ಇವರು ಬೈಬಲಿನ ಅಧ್ಯಯನಕ್ಕಾಗಿ ಯಾವ ಕೊಡುಗೆಯನ್ನು ನೀಡಿದ್ದಾರೆ?

ಈ ಸಹೋದರರಿಬ್ಬರು ಒಂಭತ್ತನೇ ಶತಮಾನದಲ್ಲಿ ಗ್ರೀಸ್‌ನ ಥೆಸಲೊನೀಕ ನಗರದಲ್ಲಿ ಹುಟ್ಟಿದವರಾಗಿದ್ದರು. ಇವರು ಸ್ಲಾವಿಕ್‌ ಭಾಷೆಗಾಗಿ ಲಿಪಿಯನ್ನು ಕಂಡುಹಿಡಿದರು ಹಾಗೂ ಸ್ಲಾವೊನಿಕ್‌ ಭಾಷೆಯಲ್ಲಿ ಅಧಿಕಾಂಶ ಬೈಬಲನ್ನು ಭಾಷಾಂತರ ಮಾಡಿದರು.​—3/1, ಪುಟಗಳು 28-9.

“ಪವಿತ್ರಾತ್ಮನವುಗಳ ಮೇಲೆ ಮನಸ್ಸಿಡುವದು” ಎಂಬ ಅಭಿವ್ಯಕ್ತಿಯ ಅರ್ಥವೇನು?​—ರೋಮಾಪುರ 8:6.

ಇದರ ಅರ್ಥ, ಯೆಹೋವನ ಕ್ರಿಯಾತ್ಮಕ ಶಕ್ತಿಯ ವಶದಲ್ಲಿಡಲ್ಪಟ್ಟು, ಹತೋಟಿಯಲ್ಲಿಡಲ್ಪಟ್ಟು, ಪ್ರಚೋದಿಸಲ್ಪಡುವುದೇ ಆಗಿದೆ. ಬೈಬಲನ್ನು ಓದುವ ಮತ್ತು ಅಭ್ಯಸಿಸುವ ಮೂಲಕ, ದೇವರ ನಿಯಮಕ್ಕೆ ಹೃತ್ಪೂರ್ವಕವಾಗಿ ವಿಧೇಯತೆಯನ್ನು ತೋರಿಸುವ ಮೂಲಕ ಹಾಗೂ ದೇವರ ಆತ್ಮಕ್ಕಾಗಿ ಪ್ರಾರ್ಥಿಸುವ ಮೂಲಕ, ದೇವರ ಪವಿತ್ರಾತ್ಮವು ನಮ್ಮ ಮೇಲೆ ಕೆಲಸಮಾಡುವಂತೆ ನಾವು ಅನುಮತಿಸಬಹುದು.​—3/15, ಪುಟ 15.

ನಮ್ಮನ್ನು ಅಪಾರ್ಥಮಾಡಿಕೊಳ್ಳಲಾಗಿದೆ ಎಂದು ನಮಗನಿಸುವಾಗ ನಾವು ಏನು ಮಾಡಬಹುದು?

ಪ್ರೀತಿಯ ಆತ್ಮದೊಂದಿಗೆ ವಿಷಯವನ್ನು ಸ್ಪಷ್ಟಪಡಿಸುವುದು ಬಹಳ ಪ್ರಾಮುಖ್ಯವಾಗಿದೆ. ಒಂದುವೇಳೆ ಅದು ಯಶಸ್ವಿಯಾಗದಿರುವಂತೆ ತೋರುವಲ್ಲಿ ಹತಾಶರಾಗಬೇಡಿ. ‘ಹೃದಯಗಳನ್ನೇ ಪರೀಕ್ಷಿಸುವವನಾದ’ ಯೆಹೋವನ ಬಳಿ ಸಹಾಯವನ್ನು ಮತ್ತು ತಿಳುವಳಿಕೆಯನ್ನು ಬೇಡಿಕೊಳ್ಳಿರಿ. (ಜ್ಞಾನೋಕ್ತಿ 21:2; 1 ಸಮುವೇಲ 16:7)​—4/1, ಪುಟಗಳು 21-3.