ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಸಾರ್ವಜನಿಕ ಆರೋಗ್ಯಕ್ಕೆ ಹಾನಿಮಾಡುವ ಗುಪ್ತ ಅಪಾಯ”

“ಸಾರ್ವಜನಿಕ ಆರೋಗ್ಯಕ್ಕೆ ಹಾನಿಮಾಡುವ ಗುಪ್ತ ಅಪಾಯ”

“ಸಾರ್ವಜನಿಕ ಆರೋಗ್ಯಕ್ಕೆ ಹಾನಿಮಾಡುವ ಗುಪ್ತ ಅಪಾಯ”

ಅಮೆರಿಕದಲ್ಲಿ ಇಂಟರ್‌ನೆಟ್‌ ಅನ್ನು ಉಪಯೋಗಿಸುವ ಯೌವನಸ್ಥರಲ್ಲಿ ಕನಿಷ್ಠಪಕ್ಷ 2,00,000 ಮಂದಿ, ಲೈಂಗಿಕತೆಯನ್ನು ತೋರಿಸುವ ಯಾವುದಾದರೊಂದು ಸೆಕ್ಸ್‌ಸೈಟ್‌ ಅನ್ನು ತೆರೆದು ನೋಡುವುದರಲ್ಲಿ ಒಳಗೂಡಿರುತ್ತಾರೆ, ಎಂಬುದಾಗಿ ಇತ್ತೀಚಿನ ಆನ್‌-ಲೈನ್‌ ಸೆಕ್ಸ್‌ನ ಕುರಿತ ಸರ್ವೆಯು ಪ್ರಕಟಪಡಿಸಿತು. ಅತ್ಯಧಿಕ ಸಂಖ್ಯೆಯಲ್ಲಿ ಜನರು ಇಂದು ಇಂಟರ್‌ನೆಟ್‌ನ ಮೂಲಕವಾಗಿ ತಮ್ಮ ಲೈಂಗಿಕ ತೃಷೆಯನ್ನು ತೃಪ್ತಿಪಡಿಸಿಕೊಳ್ಳುತ್ತಿದ್ದಾರೆ. “ಇದು ಸಾರ್ವಜನಿಕ ಆರೋಗ್ಯಕ್ಕೆ ಹಾನಿಮಾಡುವ ಗುಪ್ತ ಅಪಾಯವಾಗಿದ್ದು, ಸ್ವಲ್ಪ ಮಟ್ಟಿಗೆ ಸಿಡಿಯುತ್ತಿದೆ. ಏಕೆಂದರೆ ಕೆಲವರು ಮಾತ್ರವೇ ಇದನ್ನು ಅಪಾಯಕಾರಿ ಎಂದು ನೆನಸುತ್ತಾರೆ ಇಲ್ಲವೇ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದಾರೆ” ಎಂದು ಸರ್ವೆಯನ್ನು ಮಾಡಿದ ಡಾಕ್ಟರ್‌ ಅಲ್‌ ಕೂಪರ್‌ ಎಂಬ ಮನೋಶಾಸ್ತ್ರಜ್ಞರು ಹೇಳುತ್ತಾರೆ.

ವಿಶೇಷವಾಗಿ ಈ ಸೈಬರ್‌ಸೆಕ್ಸ್‌ಗೆ ಬಲಿಬೀಳುವವರು ಯಾರಾಗಿದ್ದಾರೆ? “ತಮ್ಮ ಜೀವನದಾದ್ಯಂತ ಲೈಂಗಿಕ ತೃಷೆಯನ್ನು ಅದುಮಿಟ್ಟು ಮತ್ತು ಸೀಮಿತವಾಗಿಟ್ಟು,” ಇಂಟರ್‌ನೆಟ್‌ನಲ್ಲಿ “ಇದ್ದಕ್ಕಿದ್ದಂತೆ ಲೈಂಗಿಕ ತೃಷೆಯನ್ನು ತಣಿಸಿಕೊಳ್ಳುವ ಅಸಂಖ್ಯಾತ ಅವಕಾಶಗಳನ್ನು ಕಂಡುಕೊಳ್ಳುತ್ತಿರುವವರೇ” ಎಂಬುದಾಗಿ ಡಾಕ್ಟರ್‌ ಕೂಪರ್‌ ಹೇಳುತ್ತಾರೆ.

ಆದರೆ, ಈ ರೀತಿಯ ಸೆಕ್ಸ್‌ಸೈಟ್‌ಗಳನ್ನು ಯಾವಾಗಲೂ ತೆರೆದು ನೋಡುವವರಲ್ಲಿ ಹೆಚ್ಚಿನವರು, ಈ ಅಭ್ಯಾಸವು ಹಾನಿಕರವಲ್ಲ ಎಂದು ನೆನಸುತ್ತಾರೆ. ಆದರೆ ಅದು ನಿಜವೇ? ಒಬ್ಬ ಮಾದಕವ್ಯಸನಿಯು ತಾನು ವ್ಯಸನಕ್ಕೊಳಪಟ್ಟಿರುವ ಅಮಲೌಷಧಕ್ಕೆ ಹೇಗೆ ಒಗ್ಗಿಹೋಗುತ್ತಾನೋ ಹಾಗೆಯೇ, ಅನೇಕ ಸೈಬರ್‌ಸೆಕ್ಸ್‌ ವ್ಯಸನಿಗಳು ತಮ್ಮ ಲೈಂಗಿಕ ತೃಷೆಯನ್ನು ತಣಿಸಿಕೊಳ್ಳಲು ಹೆಚ್ಚಿನ “ಪ್ರಮಾಣದ” ಲೈಂಗಿಕತೆಯನ್ನು ಬಯಸುತ್ತಾರೆ. ಅಷ್ಟೇ ಏಕೆ, ಅವರು ತಮ್ಮ ಕೆಲಸವನ್ನು ಮತ್ತು ತಮ್ಮ ಸಂಗಾತಿಯೊಂದಿಗಿರುವ ಸಂಬಂಧವನ್ನು ಸಹ ಅಪಾಯಕ್ಕೊಳಪಡಿಸಬಹುದು!

ಆದರೆ, ದೇವರನ್ನು ಮೆಚ್ಚಿಸಲು ಬಯಸುವವರಿಗೆ, ಇಂಟರ್‌ನೆಟ್‌ನಲ್ಲಿರುವ ಸೆಕ್ಸ್‌ಸೈಟ್‌ಗಳನ್ನು ತೆರೆದು ನೋಡುವ ಚಟವನ್ನು ತಪ್ಪಿಸಲು ಇನ್ನೂ ಹೆಚ್ಚಿನ ಕಾರಣಗಳಿವೆ. ದೇವರ ವಾಕ್ಯವು ಬುದ್ಧಿಹೇಳುವುದು: “ಆದುದರಿಂದ ನಿಮ್ಮಲ್ಲಿರುವ ಭೂಸಂಬಂಧವಾದ ಭಾವಗಳನ್ನು ಸಾಯಿಸಿರಿ. ಜಾರತ್ವ ಬಂಡುತನ ಕಾಮಾಭಿಲಾಷೆ ದುರಾಶೆ ವಿಗ್ರಹಾರಾಧನೆಗೆ ಸಮವಾಗಿರುವ ಲೋಭ ಇವುಗಳನ್ನು ವಿಸರ್ಜಿಸಿಬಿಡಿರಿ; ಇವುಗಳ ನಿಮಿತ್ತ ದೇವರ ಕೋಪವು ಉಂಟಾಗುತ್ತದೆ.” (ಕೊಲೊಸ್ಸೆ 3:​5, 6) ಅಶುದ್ಧವಾದ ಲೈಂಗಿಕ ತೃಷೆಗೆ ಸಂಬಂಧಿಸಿದ ‘ಭೂಸಂಬಂಧವಾದ ಭಾವಗಳನ್ನು ಸಾಯಿಸಲು’ ಒಬ್ಬ ವ್ಯಕ್ತಿಯು ಯೆಹೋವ ದೇವರಿಗಾಗಿ ಬಲವಾದ ಪ್ರೀತಿಯನ್ನು ಬೆಳೆಸಿಕೊಳ್ಳಬೇಕಾಗಿರುತ್ತದೆ. (ಕೀರ್ತನೆ 97:10) ಅವನು ಸಾರ್ವಜನಿಕ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುವ ಸೈಬರ್‌ಸೆಕ್ಸ್‌ನ ಅಪಾಯದ ಕಡೆಗೆ ತಾನು ಆಕರ್ಷಿತನಾಗುತ್ತಿರುವಂತೆ ಕಂಡುಕೊಳ್ಳುವಲ್ಲಿ, ದೇವರ ವಾಕ್ಯವಾದ ಬೈಬಲನ್ನು ಓದುವ ಮೂಲಕ ಯೆಹೋವನಿಗಾಗಿರುವ ತನ್ನ ಪ್ರೀತಿಯನ್ನು ಬಲಪಡಿಸಿಕೊಳ್ಳಬೇಕು. ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಹಿತಕರವಾದ ಸಹವಾಸವನ್ನು ಮಾಡುವಂಥದ್ದು, ದೇವರನ್ನು ಪ್ರೀತಿಸುವ ಒಬ್ಬ ವ್ಯಕ್ತಿಯ ದೃಢನಿರ್ಧಾರವನ್ನು ಬಲಪಡಿಸಲು ಬಹಳಷ್ಟು ಸಹಾಯ ಮಾಡುವುದು.