ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಅಭ್ಯಾಸ ನಿಮಗೆ ಪ್ರಯೋಜನಕರವೊ?

ಬೈಬಲ್‌ ಅಭ್ಯಾಸ ನಿಮಗೆ ಪ್ರಯೋಜನಕರವೊ?

ಬೈಬಲ್‌ ಅಭ್ಯಾಸ ನಿಮಗೆ ಪ್ರಯೋಜನಕರವೊ?

“ಒಬ್ಬ ಪಾದ್ರಿಯು ಉಪಸ್ಥಿತನಿಲ್ಲದಿದ್ದರೆ ಓದಬಾರದು.” ಈ ಎಚ್ಚರಿಕೆಯು, ಕ್ಯಾಥೊಲಿಕರ ಬಳಿ ಇರುವ ಕೆಲವೊಂದು ಬೈಬಲ್‌ಗಳ ಆರಂಭದಲ್ಲಿ ಕೊಡಲ್ಪಟ್ಟಿದೆ. “ಕ್ಯಾಥೊಲಿಕರಾಗಿದ್ದುದರಿಂದ ನಮಗೆ ಬೈಬಲನ್ನು ಎಂದೂ ಪರಿಚಯಿಸಲಾಗಲಿಲ್ಲ,” ಎಂದು ಲಾಸ್‌ ಏಂಜಲಿಸ್‌ನಲ್ಲಿರುವ ಕ್ಯಾಥೊಲಿಕ್‌ ಬೈಬಲ್‌ ಇನ್‌ಸ್ಟಿಟ್ಯೂಟ್‌ಗೆ ಸೇರಿದವರಾಗಿರುವ ಕೇ ಮರಡೀ ಹೇಳುತ್ತಾರೆ. “ಆದರೆ ಈಗ ಆ ಪರಿಸ್ಥಿತಿಯು ಬದಲಾಗುತ್ತಿದೆ.” ಶಾಸ್ತ್ರವಚನಗಳು ತಮ್ಮ ಜೀವಿತದ ಮೇಲೆ ಹೇಗೆ ಪ್ರಭಾವವನ್ನು ಬೀರಬಲ್ಲವೆಂದು ಕ್ಯಾಥೊಲಿಕರಿಗೆ ತಿಳಿದಾಕ್ಷಣ, “ತಾವೇ ಬೈಬಲ್‌ಗಾಗಿ ಹಸಿವು ಮತ್ತು ಬಾಯಾರಿಕೆಯನ್ನು ಬೆಳೆಸಿಕೊಳ್ಳುತ್ತಾರೆ.”

ಈ ಬದಲಾವಣೆಯ ಸಂಬಂಧದಲ್ಲಿ ಯು.ಎಸ್‌. ಕ್ಯಾಥೊಲಿಕ್‌ ಪತ್ರಿಕೆಯು, ಒಬ್ಬ ಧಾರ್ಮಿಕ ಶಿಕ್ಷಣ ಸಂಘಟಕನ ಮಾತುಗಳನ್ನು ಉಲ್ಲೇಖಿಸಿತು. ಅವನು ಹೇಳಿದ್ದೇನೆಂದರೆ, “ಬೈಬಲಿನಲ್ಲಿ ಬಹಳಷ್ಟು ಸಿರಿವಂತಿಕೆಯಿದ್ದರೂ, ಕ್ಯಾಥೊಲಿಕರೋಪಾದಿ ತಾವು ವಂಚಿತರಾಗಿದ್ದೆವು” ಎಂದು ಬೈಬಲ್‌ ಸ್ಟಡಿ ಕ್ಲಾಸ್‌ಗಳಿಗೆ ಸೇರಿರುವ ಕ್ಯಾಥೊಲಿಕರಿಗೆ ಅನಿಸುತ್ತಿತ್ತು. “ತಾವು ಪಡೆಯದೆಹೋದ ಆ ಸಿರಿವಂತಿಕೆಯಲ್ಲಿ ಸ್ವಲ್ಪವನ್ನಾದರೂ ಅವರು ಈಗ ಗಳಿಸಲು ಬಯಸುತ್ತಾರೆ.”

ಆದರೆ ಏನೇ ಆಗಲಿ, ಒಬ್ಬ ಬೈಬಲ್‌ ವಿದ್ಯಾರ್ಥಿಯು ಬೈಬಲಿನಲ್ಲಿ ಕಂಡುಹಿಡಿಯಲು ಅಂಥದ್ದೇನು “ಸಿರಿವಂತಿಕೆ” ಇದೆ? ಇದರ ಕುರಿತು ಸ್ವಲ್ಪ ಯೋಚಿಸಿರಿ: ದಿನನಿತ್ಯದ ಚಿಂತೆಗಳನ್ನು ಯಶಸ್ವಿಕರವಾಗಿ ನಿಭಾಯಿಸುವುದು ಹೇಗೆಂಬುದನ್ನು ನೀವು ತಿಳಿದುಕೊಳ್ಳಲು ಇಷ್ಟಪಡುತ್ತೀರೊ? ಕುಟುಂಬದಲ್ಲಿ ಶಾಂತಿಯನ್ನು ಹೇಗೆ ಕಾಪಾಡಿಕೊಳ್ಳಬಹುದು? ಎಲ್ಲೆಡೆಯೂ ಇಷ್ಟೊಂದು ಒರಟಾದ ಮತ್ತು ಸಮಾಜವಿರೋಧಿ ನಡವಳಿಕೆ ಏಕೆ ಇದೆ? ಇಂದಿನ ಯುವಜನತೆಯ ನಡುವಿನ ಹಿಂಸಾಚಾರಕ್ಕೆ ಕಾರಣವೇನು? ಗಲಿಬಿಲಿಗೊಳಿಸುವಂಥ ಈ ಪ್ರಶ್ನೆಗಳಿಗೆ ಮತ್ತು ಇತರ ಪ್ರಶ್ನೆಗಳಿಗೆ ಭರವಸಾರ್ಹವಾದ ಉತ್ತರಗಳು, ದೇವರ ವಾಕ್ಯವಾಗಿರುವ ಬೈಬಲಿನಲ್ಲಿ ಸಿಗುತ್ತವೆ. ಈ ಉತ್ತರಗಳೇ, ಕ್ಯಾಥೊಲಿಕರಿಗೆ ಅಥವಾ ಪ್ರಾಟೆಸ್ಟೆಂಟರಿಗೆ ಮಾತ್ರವಲ್ಲ ಬದಲಾಗಿ, ಬೌದ್ಧರು, ಹಿಂದೂಗಳು, ಮುಸಲ್ಮಾನರು, ಶಿಂಟೊ ಅನುಯಾಯಿಗಳು, ಹಾಗೂ ನಾಸ್ತಿಕರು ಮತ್ತು ಅಜ್ಞೇಯತಾವಾದಿಗಳಿಗೂ ಖಂಡಿತವಾಗಿಯೂ “ಸಿರಿವಂತಿಕೆ” ಆಗಿರುವುದು. ಕೀರ್ತನೆಗಾರನು ಹೇಳಿದಂತೆ ‘ದೇವರ ವಾಕ್ಯವು ಅವನ ಕಾಲಿಗೆ ದೀಪವೂ, ಅವನ ದಾರಿಗೆ ಬೆಳಕೂ ಆಗಿತ್ತು.’ ಇದು ನಿಮ್ಮ ವಿಷಯದಲ್ಲೂ ಸತ್ಯವಾಗಿರಬಲ್ಲದು.​—ಕೀರ್ತನೆ 119:105.