ಮಟ್ಟಗಳಲ್ಲಿ ಬದಲಾವಣೆ, ನಂಬಿಕೆಗೆ ದ್ರೋಹ
ಮಟ್ಟಗಳಲ್ಲಿ ಬದಲಾವಣೆ, ನಂಬಿಕೆಗೆ ದ್ರೋಹ
ಇಂಗ್ಲೆಂಡ್‌ನ ರಾಜನಾಗಿದ್ದ Iನೆಯ ಹೆನ್ರಿಯ ದಿನಗಳಲ್ಲಿ (1100-1135), ಒಂದು ಗಜ (ಯಾರ್ಡ್)ವು ಉದ್ದಳತೆಯ ಏಕಮಾನವಾಗಿತ್ತು. “ರಾಜನ ಮೂಗಿನ ತುದಿಯಿಂದ ಹಿಡಿದು ಮುಂದೆ ಚಾಚಲ್ಪಟ್ಟ ಅವನ ಕೈ ಹೆಬ್ಬೆರಳಿನ ತನಕದ ಉದ್ದವನ್ನು” ಒಂದು ಗಜವಾಗಿ ಪರಿಗಣಿಸಲಾಗುತ್ತಿತ್ತು. ರಾಜ ಹೆನ್ರಿಯ ಪ್ರಜೆಗಳ ಗಜಕಡ್ಡಿ (ಯಾರ್ಡ್‌ಸ್ಟಿಕ್)ಗಳು ಎಷ್ಟು ನಿಷ್ಕೃಷ್ಟವಾಗಿದ್ದವು? ಇದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿರುವ ಏಕಮಾತ್ರ ಮಾರ್ಗವು, ಈ ರಾಜನನ್ನು ಮುಖಾಮುಖಿಯಾಗಿ ಭೇಟಿಯಾಗುವುದೇ ಆಗಿತ್ತು.
ಇಂದಿನ ಅಳತೆಗಳನ್ನು ಮಟ್ಟಗಳ ರೂಪದಲ್ಲಿ ಹೆಚ್ಚು ನಿಷ್ಕೃಷ್ಟವಾಗಿ ನಿರೂಪಿಸಲಾಗುತ್ತದೆ. ಹೀಗೆ, ನಿರ್ವಾತದಲ್ಲಿ ಒಂದು ಸೆಕೆಂಡಿನ 1/299,792,458ನಲ್ಲಿ ಬೆಳಕು ವೇಗವಾಗಿ ಹಾದುಹೋಗುವ ಅಂತರವನ್ನು ಒಂದು ಮೀಟರ್ ಎಂದು ನಿರೂಪಿಸಲಾಗುತ್ತದೆ. ಇನ್ನೂ ಹೆಚ್ಚು ನಿಖರವಾಗಿ ಹೇಳುವಲ್ಲಿ, ಈ ಬೆಳಕು ನಿಗದಿತವಾದ ತರಂಗಮಾನ (ವೇವ್‌ಲೆಂತ್)ವುಳ್ಳದ್ದಾಗಿದ್ದು, ವಿಶೇಷ ರೀತಿಯ ಲೇಸರ್‌ನಿಂದ ಹೊರಸೂಸಲ್ಪಟ್ಟದ್ದಾಗಿದೆ. ಈ ಮಟ್ಟವನ್ನು ಪುನಃ ಉತ್ಪಾದಿಸಸಾಧ್ಯವಿರುವಂತಹ ಸಾಧನವು ಜನರ ಬಳಿಯಿರುವಲ್ಲಿ, ಎಲ್ಲೆಡೆಯಿರುವ ಜನರು ತಮ್ಮ ಉದ್ದಳತೆಯನ್ನು ಪರಿಶೀಲಿಸಿ, ತಮ್ಮದೂ ಇತರರ ಅಳತೆಯೊಂದಿಗೆ ಸರಿಹೋಲುತ್ತದೆ ಎಂಬುದನ್ನು ಕಂಡುಕೊಳ್ಳಸಾಧ್ಯವಿದೆ.
ಅಳತೆಯ ಮಟ್ಟದಲ್ಲಿ ಉಂಟಾಗುವ ಬದಲಾವಣೆಗಳು ಎಷ್ಟೇ ಸೂಕ್ಷ್ಮವಾಗಿದ್ದರೂ, ಅವು ಅನಿಶ್ಚಯತೆಯನ್ನು ಉಂಟುಮಾಡಸಾಧ್ಯವಿದೆ. ಆದುದರಿಂದ, ಅಳತೆಯ ಮಟ್ಟಗಳನ್ನು ಜೋಪಾನಮಾಡಲಿಕ್ಕಾಗಿ ಬಹಳಷ್ಟು ಪ್ರಯತ್ನಗಳನ್ನು ಮಾಡಲಾಗುತ್ತದೆ. ಉದಾಹರಣೆಗೆ, ಬ್ರಿಟನ್‌ನಲ್ಲಿ ಭಾರವನ್ನು ತೂಗಿನೋಡಲಿಕ್ಕಾಗಿರುವ ಮಟ್ಟವು, ಒಂದು ಕಿಲೋಗ್ರಾಂನಷ್ಟು ಭಾರವಾದ ಪ್ಲ್ಯಾಟಿನಮ್ ಮತ್ತು ಐರಿಡಿಯಮ್ ಮಿಶ್ರಲೋಹದ ತುಂಡಾಗಿದೆ. ಈ ತುಂಡನ್ನು, ನ್ಯಾಷನಲ್ ಫಿಸಿಕಲ್ ಲ್ಯಾಬರಟ್‌ರಿಯಲ್ಲಿ ಇಡಲಾಗಿದೆ. ವಾಹನ ಸಂಚಾರ ಹಾಗೂ ವಿಮಾನ ಸಂಚಾರದಿಂದ ಉಂಟಾಗುವ ವಾಯು ಮಾಲಿನ್ಯವು, ಈ ಕಿಲೋಗ್ರಾಂ ಮಟ್ಟದ ತೂಕವನ್ನು ಹೆಚ್ಚಿಸುತ್ತಿದೆ. ಫ್ರಾನ್ಸ್‌ನ ಸೆವ್ರ್‌ನಲ್ಲಿ, ತೂಕಗಳು ಮತ್ತು ಅಳತೆಗಳ ಅಂತಾರಾಷ್ಟ್ರೀಯ ಸಂಸ್ಥೆಯ ನೆಲಮಾಳಿಗೆಯ ಗುಮ್ಮಟದಲ್ಲಿ, ಗಂಟೆಯಾಕಾರದ ಮೂರು ಗಾಜಿನ ಜಾಡಿಗಳ ಕೆಳಗೆ ಲೋಕ ಮಟ್ಟಗಳನ್ನು ಇಡಲಾಗಿದೆ. ಮತ್ತು ಈ ಲೋಹದ ತುಂಡು ಅಥವಾ ಸಿಲಿಂಡರ್, ಆ ಲೋಕ ಮಟ್ಟದ ಒಂದು ನಕಲಾಗಿದೆ. ಆದರೂ, ಸೂಕ್ಷ್ಮದರ್ಶಕೀಯ ಮಾಲಿನ್ಯದಿಂದಾಗಿ, ಗಾಜಿನ ಜಾಡಿಗಳ ಕೆಳಗೆ ಇರುವಂಥ ಈ ವಸ್ತುವಿನ ತೂಕದ ಮಟ್ಟವು ಸಹ ಹೆಚ್ಚುಕಡಿಮೆಯಾಗುತ್ತದೆ. ಇಷ್ಟರ ತನಕ ಲೋಕದ ಅಳತೆಶಾಸ್ತ್ರಜ್ಞರು ಇನ್ನೂ ಹೆಚ್ಚು ಸ್ಥಿರವಾದ ಮಟ್ಟವನ್ನು ಕಂಡುಹಿಡಿದಿಲ್ಲ.
ಒಬ್ಬ ಸಾಮಾನ್ಯ ವ್ಯಕ್ತಿಗೆ ಇಂತಹ ಸಣ್ಣಪುಟ್ಟ ಬದಲಾವಣೆಗಳು ಅಷ್ಟೇನೂ ಪ್ರಾಮುಖ್ಯವೆಂದೆನಿಸುವುದಿಲ್ಲ; ಆದರೆ ಮಟ್ಟಗಳಲ್ಲಿ ಮಾಡಲ್ಪಡುವ ಸಂಪೂರ್ಣ ಬದಲಾವಣೆಯು ಗೊಂದಲವನ್ನು ಉಂಟುಮಾಡಸಾಧ್ಯವಿದೆ. ಬ್ರಿಟನ್‌ನಲ್ಲಿ ಜಾರಿಯಲ್ಲಿದ್ದ ತೂಕದ ಅಳತೆಯನ್ನು (ಪೌಂಡ್‌ಗಳು ಮತ್ತು ಔನ್ಸ್‌ಗಳು) ಮೆಟ್ರಿಕ್ ಪದ್ಧತಿಗೆ (ಕಿಲೋಗ್ರಾಂಗಳು ಮತ್ತು ಗ್ರಾಂಗಳು) ಬದಲಾಯಿಸಿದ್ದು, ಸಾಕಷ್ಟು ಪ್ರಮಾಣದಲ್ಲಿ ಅಪನಂಬಿಕೆಯನ್ನು ಉಂಟುಮಾಡಿತು. ಇದಕ್ಕೆ ಬಲವಾದ ಕಾರಣವೂ ಇತ್ತು. ಸಾಮಾನ್ಯವಾಗಿ ಅಪರಿಚಿತವಾಗಿದ್ದ ಹೊಸ ತೂಕದ ಪದ್ಧತಿಯನ್ನು ಸದುಪಯೋಗಿಸಿಕೊಂಡು, ನೀತಿನಿಷ್ಠೆಗಳಿಲ್ಲದ ವ್ಯಾಪಾರಿಗಳಲ್ಲಿ ಕೆಲವರು ತಮ್ಮ ಗಿರಾಕಿಗಳಿಗೆ ಮೋಸಮಾಡಿದರು.
ಕುಟುಂಬ ಮತ್ತು ನೈತಿಕ ಮಟ್ಟಗಳು
ಕುಟುಂಬ ಹಾಗೂ ನೈತಿಕ ಮಟ್ಟಗಳಲ್ಲಿ ಉಂಟಾಗಿರುವ ಬದಲಾವಣೆಗಳ ಕುರಿತಾಗಿ ಏನು? ಇಂತಹ ಬದಲಾವಣೆಗಳ ಪರಿಣಾಮವು ಇನ್ನಷ್ಟು ಹಾನಿಕರವಾಗಿರಸಾಧ್ಯವಿದೆ. ಕುಟುಂಬದಲ್ಲಿ ಒಡಕುಗಳು, ಲೈಂಗಿಕ ಸ್ವೇಚ್ಛಾಸಂಪರ್ಕ ಮತ್ತು ವ್ಯಾಪಕವಾಗಿರುವ ಮಕ್ಕಳ ದುರಾಚಾರದ ಕುರಿತಾದ ಇತ್ತೀಚಿನ ವರದಿಗಳು ಅನೇಕರಲ್ಲಿ ಭೀತಿಯನ್ನು ಹುಟ್ಟಿಸುತ್ತಿವೆ ಮತ್ತು ನೈತಿಕ ಮಟ್ಟಗಳು ಅವನತಿಹೊಂದುತ್ತಿರುವಂಥ ಯುಗದಲ್ಲಿ ನಾವು ಜೀವಿಸುತ್ತಿದ್ದೇವೆ ಎಂಬುದನ್ನು ದೃಢಪಡಿಸುತ್ತಿವೆ. ಏಕ ಹೆತ್ತವರ ಕುಟುಂಬಗಳು, ಸಲಿಂಗಿ “ಹೆತ್ತವರ” ಮೂಲಕ ಬೆಳೆಸಲ್ಪಟ್ಟ ಮಕ್ಕಳು ಮತ್ತು ಸ್ಥಳಿಕ ಅಧಿಕಾರಿಗಳ ಆರೈಕೆಯ ಕೆಳಗೆ ಬೆಳೆದ ಮಕ್ಕಳ ಲೈಂಗಿಕ ದುರಾಚಾರ—ಇವೆಲ್ಲವೂ ಜನರು ಅಂಗೀಕೃತ ಮಟ್ಟಗಳನ್ನು ತಿರಸ್ಕರಿಸಿರುವುದರ ಫಲಿತಾಂಶಗಳೇ ಆಗಿವೆ. ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಬೈಬಲ್ ಮುಂತಿಳಿಸಿದಂತೆ, ಹೆಚ್ಚೆಚ್ಚು 2 ತಿಮೊಥೆಯ 3:1-4.
ಜನರು “ಸ್ವಾರ್ಥಚಿಂತಕರೂ . . . ಮಮತೆಯಿಲ್ಲದವರೂ . . . ಒಳ್ಳೇದನ್ನು ಪ್ರೀತಿಸದವರೂ . . . ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ” ಆಗುತ್ತಿದ್ದಾರೆ.—ನೈತಿಕ ಮಟ್ಟಗಳ ಅವನತಿ ಹಾಗೂ ನಂಬಿಕೆಗೆ ದ್ರೋಹಮಾಡುವುದರ ಮಧ್ಯೆ ನಿಕಟ ಸಂಬಂಧವಿದೆ. ಇತ್ತೀಚೆಗೆ, ಉತ್ತರ ಇಂಗ್ಲೆಂಡ್‌ನಲ್ಲಿರುವ ಹೈಡ್ ಎಂಬ ಒಂದು ಪಟ್ಟಣದಲ್ಲಿ, ವೈದ್ಯಕೀಯ ವೃತ್ತಿಯವರ ಅಂಗೀಕೃತ ಮಟ್ಟಗಳು ಎದ್ದುಕಾಣುವಂಥ ರೀತಿಯಲ್ಲಿ ಅವನತಿಹೊಂದಿರುವುದನ್ನು ಬಯಲುಪಡಿಸಲಾಯಿತು. ಆ ಪಟ್ಟಣದ ನಿವಾಸಿಗಳು ತಮ್ಮ “ಗೌರವಾನ್ವಿತ ಹಾಗೂ ಭರವಸಾರ್ಹ” ಕುಟುಂಬ ವೈದ್ಯರಲ್ಲಿ ತುಂಬ ನಂಬಿಕೆಯಿಟ್ಟಿದ್ದರು. ಆದರೆ ವಿಷಾದನೀಯ ರೀತಿಯಲ್ಲಿ ಅವರ ನಂಬಿಕೆಗೆ ದ್ರೋಹಮಾಡಲಾಯಿತು. ಹೇಗೆ? ಒಬ್ಬ ವೈದ್ಯನು ತನ್ನ ಬಳಿಗೆ ಬಂದ ಸ್ತ್ರೀ ರೋಗಿಗಳಲ್ಲಿ ಕಡಿಮೆಪಕ್ಷ 15 ಮಂದಿಯ ಸಾವಿಗೆ ಕಾರಣನಾಗಿದ್ದನು ಎಂದು ವಿಚಾರಣೆಯ ವರದಿಗಳು ತಿಳಿಸುತ್ತವೆ. ವಾಸ್ತವದಲ್ಲಿ, ಈ ವೈದ್ಯನು ಕಾರಣನಾದ ಇನ್ನೂ 130ಕ್ಕಿಂತಲೂ ಹೆಚ್ಚು ಮರಣಗಳ ಬಗ್ಗೆ ಪೊಲೀಸರು ಪುನಃ ಪರೀಶೀಲನೆ ನಡೆಸಬೇಕಾಯಿತು. ಈ ವೈದ್ಯನು ಅಪರಾಧಿಯೆಂದು ನಿರ್ಣಯಿಸಲ್ಪಟ್ಟು, ಅವನಿಗೆ ಸೆರೆವಾಸದ ಶಿಕ್ಷೆಯು ನೀಡಲ್ಪಟ್ಟಾಗ, ಎಷ್ಟರ ಮಟ್ಟಿಗೆ ಅವನು ನಂಬಿಕೆಗೆ ದ್ರೋಹಮಾಡಿದ್ದನು ಎಂಬುದು ಸುವ್ಯಕ್ತವಾಯಿತು. ಈ ವೈದ್ಯನು ತಮ್ಮ ತಾಯಿಯನ್ನು ಕೊಂದಿದ್ದಿರಬಹುದೆಂದು ಸುದ್ದಿಯಿದ್ದ ಇಬ್ಬರು ಸೆರೆ ಅಧಿಕಾರಿಗಳಿಗೆ, ಈ ಕುಖ್ಯಾತ ಸೆರೆವಾಸಿಯನ್ನು ನೋಡಿಕೊಳ್ಳುವ ಜವಾಬ್ದಾರಿಗೆ ಬದಲಾಗಿ ಬೇರೆ ಕೆಲಸಗಳು ಕೊಡಲ್ಪಟ್ಟವು. ದ ಡೇಲಿ ಟೆಲಿಗ್ರಾಫ್ ವಾರ್ತಾಪತ್ರಿಕೆಯಲ್ಲಿ ಈ ಮೊಕದ್ದಮೆಯ ಕುರಿತು ಕೊಡಲ್ಪಟ್ಟ ವರದಿಯಲ್ಲಿ, ಅಪರಾಧಿಯಾಗಿರುವ ಈ ಚಿಕಿತ್ಸಕನನ್ನು “‘ಪಿಶಾಚ’ ವೈದ್ಯ”ನೆಂದು ವರ್ಣಿಸಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಜೀವಿತದ ಇಷ್ಟೊಂದು ಕ್ಷೇತ್ರಗಳಲ್ಲಿ ಬದಲಾಯಿಸಸಾಧ್ಯವಿರುವ ಮತ್ತು ಅವನತಿಹೊಂದುತ್ತಿರುವ ಮಟ್ಟಗಳನ್ನು ಪರಿಗಣಿಸುವಾಗ, ನೀವು ಯಾರ ಮೇಲೆ ಸಂಪೂರ್ಣವಾಗಿ ಭರವಸೆಯನ್ನು ಇಡಸಾಧ್ಯವಿದೆ? ಎಂದೂ ಬದಲಾಗದಂಥ ಮಟ್ಟಗಳನ್ನು—ಅವುಗಳನ್ನು ಎತ್ತಿಹಿಡಿಯುವ ಸಾಮರ್ಥ್ಯವಿರುವ ಅಧಿಕಾರದ ಬೆಂಬಲವಿರುವಂತಹ ಮಟ್ಟಗಳನ್ನು—ನೀವು ಎಲ್ಲಿ ಕಂಡುಕೊಳ್ಳಸಾಧ್ಯವಿದೆ? ಮುಂದಿನ ಲೇಖನವು ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವುದು.