ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಮಿತ್ರನು ಮಾಡುವ ಗಾಯಗಳು”

“ಮಿತ್ರನು ಮಾಡುವ ಗಾಯಗಳು”

“ಮಿತ್ರನು ಮಾಡುವ ಗಾಯಗಳು”

ಗಲಾತ್ಯದಲ್ಲಿದ್ದ ಪ್ರಥಮ ಶತಮಾನದ ಕ್ರೈಸ್ತರಿಗೆ ತಿದ್ದುಪಾಟನ್ನು ನೀಡುವ ಅಗತ್ಯವಿದೆ ಎಂದು ಅಪೊಸ್ತಲ ಪೌಲನು ಮನಗಂಡನು. ಯಾವುದೇ ರೀತಿಯ ಅಸಮಾಧಾನವನ್ನು ಮೊದಲೇ ತಡೆಗಟ್ಟಲಿಕ್ಕಾಗಿ ಅವನು, “ಹೀಗಿರಲಾಗಿ ನಾನು ನಿಮಗೆ ಸತ್ಯವನ್ನು ಹೇಳುವದರಿಂದ ನಿಮಗೆ ಶತ್ರುವಾಗಿದ್ದೇನೋ?” ಎಂದು ಅವರನ್ನು ಪ್ರಶ್ನಿಸಿದನು.​—ಗಲಾತ್ಯ 4:16.

‘ಸತ್ಯವನ್ನು ಹೇಳುವ ಮೂಲಕ’ ಪೌಲನು ಅವರ ಶತ್ರುವಾಗಿ ಪರಿಣಮಿಸಲಿಲ್ಲ. ವಾಸ್ತವದಲ್ಲಿ, “ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ [“ವಿಶ್ವಾಸಾರ್ಹವಾಗಿವೆ,” NW]” ಎಂಬ ಬೈಬಲ್‌ ಮೂಲತತ್ತ್ವಕ್ಕೆ ಹೊಂದಿಕೆಯಲ್ಲಿ ಅವನು ಕಾರ್ಯನಡಿಸುತ್ತಿದ್ದನು. (ಜ್ಞಾನೋಕ್ತಿ 27:6) ತಪ್ಪುಮಾಡುತ್ತಿರುವವರಿಗೆ ತಿದ್ದುಪಾಟು ನೀಡುವಲ್ಲಿ, ಅದು ಅವರ ಆತ್ಮಾಭಿಮಾನವನ್ನು ಗಾಯಗೊಳಿಸಸಾಧ್ಯವಿದೆ ಎಂಬುದು ಅವನಿಗೆ ತಿಳಿದಿತ್ತು. ಆದರೂ, ಒಂದುವೇಳೆ ತಪ್ಪಿತಸ್ಥನಿಗೆ ಅಗತ್ಯವಿರುವ ತಿದ್ದುಪಾಟನ್ನು ತಾನು ನೀಡದಿರುವಲ್ಲಿ, ಇದು ಯೆಹೋವ ದೇವರ ಪ್ರೀತಿಯು ಅವನ ಕಡೆಗೆ ವ್ಯಕ್ತಪಡಿಸಲ್ಪಡುವುದಿಲ್ಲ ಎಂಬುದನ್ನು ಅರ್ಥೈಸಸಾಧ್ಯವಿತ್ತು ಎಂದು ಸಹ ಪೌಲನಿಗೆ ಸ್ಪಷ್ಟವಾಗಿ ತಿಳಿದಿತ್ತು. (ಇಬ್ರಿಯ 12:​5-7) ಆದುದರಿಂದ, ಸಭೆಯ ದೀರ್ಘಾವಧಿಯ ಹಿತವನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿದ್ದ ಒಬ್ಬ ನಂಬಿಗಸ್ತ ಮಿತ್ರನೋಪಾದಿ ಪೌಲನು, ಯಾರಿಗೂ ಆಗಲಿ ಸೂಕ್ತವಾದ ತಿದ್ದುಪಾಟನ್ನು ನೀಡಲು ಹಿಂಜರಿಯಲಿಲ್ಲ.

ಇಂದು ಯೆಹೋವನ ಸಾಕ್ಷಿಗಳು ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ’ ಎಂಬ ಯೇಸು ಕ್ರಿಸ್ತನ ನೇಮಕವನ್ನು ಪೂರೈಸುತ್ತಿದ್ದಾರೆ. ಹೀಗೆ ಮಾಡುವಾಗ, ಸಿದ್ಧಾಂತಗಳಿಗೆ ಸಂಬಂಧಿಸಿದ ತಪ್ಪುಗಳನ್ನು ಹಾಗೂ ಅಕ್ರೈಸ್ತ ನಡವಳಿಕೆಯನ್ನು ಬಯಲುಪಡಿಸುವ ಹಾಗೂ ಖಂಡಿಸುವಂತಹ ಬೈಬಲ್‌ ಸತ್ಯತೆಗಳೊಂದಿಗೆ ನಿಜ ಕ್ರೈಸ್ತರು ಎಂದೂ ಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ. (ಮತ್ತಾಯ 15:9; 23:9; 28:​19, 20; 1 ಕೊರಿಂಥ 6:​9, 10) ನಿಜ ಕ್ರೈಸ್ತರು ಈ ರೀತಿ ಮಾಡುತ್ತಾರಾದ್ದರಿಂದ, ಇತರರು ಅವರನ್ನು ತಿರಸ್ಕಾರಯೋಗ್ಯವಾದ ಶತ್ರುಗಳೆಂದು ಪರಿಗಣಿಸಬಾರದು. ಏಕೆಂದರೆ, ವಾಸ್ತವದಲ್ಲಿ ಅವರು ಜನರಲ್ಲಿ ನಿಜವಾದ ಮಿತ್ರರ ವಿಶೇಷ ಗುಣವಾಗಿರುವ ಯಥಾರ್ಥ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಅಷ್ಟೇ.

ದೈವಿಕವಾಗಿ ಪ್ರೇರಿತವಾದ ಒಳನೋಟದಿಂದ ಕೀರ್ತನೆಗಾರನು ಬರೆದುದು: “ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗುಪಕಾರ; ಅವರು ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ; ನನ್ನ ತಲೆಯು ಅದನ್ನು ಬೇಡವೆನ್ನದಿರಲಿ.”​—ಕೀರ್ತನೆ 141:5.