ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಅಭಿಪ್ರಾಯಗಳು

ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಅಭಿಪ್ರಾಯಗಳು

ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಅಭಿಪ್ರಾಯಗಳು

ಪ್ರತಿ ವರ್ಷ ಯೆಹೋವನ ಸಾಕ್ಷಿಗಳು ತಮ್ಮ ತಮ್ಮ ದೇಶಗಳಲ್ಲಿ ನಡೆಯುವ ಕ್ರೈಸ್ತ ಸಮ್ಮೇಳನಗಳು ಹಾಗೂ ಅಧಿವೇಶನಗಳಿಗಾಗಿ ಒಟ್ಟುಗೂಡುತ್ತಾರೆ. ಆತ್ಮಿಕವಾಗಿ ಭಕ್ತಿವೃದ್ಧಿಯನ್ನು ಉಂಟುಮಾಡುವ ಉಪದೇಶ ಹಾಗೂ ಸಹವಾಸದಲ್ಲಿ ಆನಂದಿಸಲಿಕ್ಕಾಗಿ ಅವರು ಹೀಗೆ ಒಟ್ಟುಗೂಡುತ್ತಾರೆ. ಆದರೆ ಅವರ ಒಟ್ಟುಗೂಡುವಿಕೆಯ ಇನ್ನಿತರ ಅಂಶಗಳು ಸಂದರ್ಶಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವ ಅಭಿಪ್ರಾಯಗಳನ್ನು ಮೂಡಿಸಬಲ್ಲವು.

ಉದಾಹರಣೆಗಾಗಿ, 1999ರ ಜುಲೈ ತಿಂಗಳಿನಲ್ಲಿ, ಮೊಸಾಂಬೀಕ್‌ನಲ್ಲಿರುವ ಸಾವಿರಾರು ಸಾಕ್ಷಿಗಳು, ಆತ್ಮಿಕವಾಗಿ ಪುಷ್ಟಿನೀಡುವಂಥ ಮೂರು ದಿನಗಳ “ದೇವರ ಪ್ರವಾದನ ವಾಕ್ಯ” ಜಿಲ್ಲಾ ಅಧಿವೇಶನಗಳಿಗಾಗಿ ಕೂಡಿಬಂದರು. ಈ ಅಧಿವೇಶನಗಳಿಗೆ ಬಂದಿದ್ದವರಲ್ಲಿ ಅನೇಕರು, ಪ್ರಥಮ ಬಾರಿ ಅಧಿವೇಶನಕ್ಕೆ ಹಾಜರಾಗಿದ್ದರು. ಅವರು ವೇದಿಕೆಯಿಂದ ಕೇಳಿಸಿಕೊಂಡ ಮಾತುಗಳಿಂದ ಮಾತ್ರವಲ್ಲ, ತಮ್ಮ ಸುತ್ತಲೂ ನೋಡಿದ ವಿಷಯಗಳಿಂದಲೂ ತುಂಬ ಪ್ರಭಾವಿತರಾದರು.

ಮಾಪುಟೊ ಅಸೆಂಬ್ಲಿ ಹಾಲ್‌ನಲ್ಲಿ ಒಬ್ಬರು ಹೀಗೆ ಹೇಳಿದರು: “ನನ್ನ ಇಡೀ ಜೀವಮಾನದಲ್ಲೇ ಇಂತಹ ಒಂದು ಸುಂದರ ಸ್ಥಳವನ್ನು ನಾನು ಎಂದೂ ಕಂಡಿರಲಿಲ್ಲ! ಶೌಚಾಲಯಗಳಲ್ಲಿ ಸೋಪನ್ನು ಇಡಲಾಗಿತ್ತು, ಕನ್ನಡಿಗಳಿದ್ದವು ಮತ್ತು ಅವು ತುಂಬ ಸ್ವಚ್ಛವಾಗಿದ್ದವು. ಸುತ್ತಮುತ್ತಲ ಪರಿಸರವು ತುಂಬ ಪ್ರಶಾಂತವಾಗಿತ್ತು, ಮಕ್ಕಳ ಗಲಾಟೆಯ ಶಬ್ದವೂ ಅಲ್ಲಿ ಕೇಳಿಬರುತ್ತಿರಲಿಲ್ಲ. ಅಷ್ಟೇಕೆ, ಜನರ ನೂಕುನುಗ್ಗಲು ಸಹ ಇರಲಿಲ್ಲ! ಸಂತೋಷಭರಿತರಾದ ಯುವಜನರು ಉತ್ತೇಜನದಾಯಕ ಸಂಭಾಷಣೆಗಳಲ್ಲಿ ಒಳಗೂಡಿರುವುದನ್ನು ನಾನು ನೋಡಿದೆ. ಪ್ರತಿಯೊಬ್ಬರೂ ಒಳ್ಳೆಯ ರೀತಿಯಲ್ಲಿ ವಸ್ತ್ರಧರಿಸಿರುವುದನ್ನು ನೋಡಿದಾಗಲಂತೂ ಇನ್ನಷ್ಟು ಪ್ರಭಾವಿತಳಾದೆ. ಮುಂದಿನ ಬಾರಿ ನನ್ನ ಮಕ್ಕಳನ್ನು ಸಹ ಕರೆದುಕೊಂಡು ಬರುತ್ತೇನೆ ಮತ್ತು ಈ ಅಧಿವೇಶನಕ್ಕೆ ನಮ್ಮ ಕುಟುಂಬವು ಹಾಜರಾಗಲೇಬೇಕು ಎಂದು ನನ್ನ ಪತಿಗೆ ಮನಗಾಣಿಸುವೆ.”

ಹೌದು, ಯೆಹೋವನ ಸಾಕ್ಷಿಗಳ ಪ್ರಾಮಾಣಿಕತೆ, ಯಥಾರ್ಥತೆ ಹಾಗೂ ಶಾರೀರಿಕ ಶುದ್ಧತೆಯು ಖಂಡಿತವಾಗಿಯೂ ಇತರರ ದೃಷ್ಟಿಗೆ ಬೀಳುತ್ತದೆ. ಸಾಕ್ಷಿಗಳು ಏಕೆ ಭಿನ್ನರಾಗಿದ್ದಾರೆ? ಏಕೆಂದರೆ, ಬೈಬಲಿನಿಂದ ತಾವು ಕಲಿಯುವ ವಿಷಯಗಳನ್ನು ಅವರು ತಮ್ಮ ಜೀವನಗಳಲ್ಲಿ ಅಳವಡಿಸಿಕೊಳ್ಳುತ್ತಾರೆ. ಈ ವರ್ಷ ಅವರ ದೇಶದಲ್ಲಿ ನಡೆಯುವ ಅಧಿವೇಶನಗಳಿಗೆ ಅಥವಾ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ನಡೆಯುವ ಅವರ ಸಾಪ್ತಾಹಿಕ ಕೂಟಗಳಿಗೆ ಅವರೊಂದಿಗೆ ಹಾಜರಾಗಿ, ನೀವೇ ಇದನ್ನು ಕಣ್ಣಾರೆ ನೋಡಬಾರದೇಕೆ?

[ಪುಟ 32ರಲ್ಲಿರುವ ಚಿತ್ರ]

ಕೆನ್ಯ

[ಪುಟ 32ರಲ್ಲಿರುವ ಚಿತ್ರ]

ಸಾಂಬಿಯ

[ಪುಟ 32ರಲ್ಲಿರುವ ಚಿತ್ರ]

ಮೊಸಾಂಬೀಕ್‌