ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 6, 2001ನೇ ಇಸವಿಯ ವಾರ್ಷಿಕ ಕೂಟ

ಅಕ್ಟೋಬರ್‌ 6, 2001ನೇ ಇಸವಿಯ ವಾರ್ಷಿಕ ಕೂಟ

ಅಕ್ಟೋಬರ್‌ 6, 2001ನೇ ಇಸವಿಯ ವಾರ್ಷಿಕ ಕೂಟ

ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಆಫ್‌ ಪೆನ್ಸಿಲ್ವೇನಿಯದ ಸದಸ್ಯರ ವಾರ್ಷಿಕ ಕೂಟವು, 2001ರ ಅಕ್ಟೋಬರ್‌ 6ರಂದು ನಡೆಯಲಿರುವುದು. ಇದು ನಡೆಯುವ ಸ್ಥಳ: ಅಸೆಂಬ್ಲಿ ಹಾಲ್‌ ಆಫ್‌ ಜೆಹೋವಾಸ್‌ ವಿಟ್ನೆಸಸ್‌, 2932 ಕೆನೆಡಿ ಬೂಲವಾರ್ಡ್‌, ಜೆರ್ಸಿ ಸಿಟಿ, ನ್ಯೂ ಜೆರ್ಸಿ. ಬೆಳಗ್ಗೆ 9:15ಕ್ಕೆ ಪೂರ್ವಭಾವಿ ಕೂಟವು ನಡೆಯಲಿದೆ, ಮತ್ತು ಅದರ ಸದಸ್ಯರು ಮಾತ್ರ ಈ ಕೂಟಕ್ಕೆ ಹಾಜರಾಗತಕ್ಕದ್ದು. ತದನಂತರ 10:00 ಗಂಟೆಗೆ ಸಾಮಾನ್ಯ ವಾರ್ಷಿಕ ಕೂಟವು ಆರಂಭವಾಗುವುದು.

ಈ ಸಂಘಟನೆಯ ಸದಸ್ಯರ ಹಿಂದಿನ ವರ್ಷದ ಅಂಚೆ ವಿಳಾಸಗಳಲ್ಲಿ ಯಾವುದಾದರೂ ಬದಲಾವಣೆಗಳಿರುವಲ್ಲಿ, ಆದಷ್ಟು ಬೇಗನೆ ಅವರು ಸೆಕ್ರಿಟರಿ ಆಫೀಸಿಗೆ ಇದರ ಬಗ್ಗೆ ತಿಳಿಸತಕ್ಕದ್ದು. ಹೀಗೆ ಮಾಡುವಲ್ಲಿ, ಕ್ರಮವಾದ ನೋಟಿಸ್‌ಗಳು ಹಾಗೂ ಪ್ರತಿನಿಧಿ ಪತ್ರಗಳು ಜುಲೈ ತಿಂಗಳಲ್ಲಿ ಅವರ ಕೈಸೇರಸಾಧ್ಯವಾಗುವುದು.

ವಾರ್ಷಿಕ ಕೂಟದ ನೋಟಿಸ್‌ನೊಂದಿಗೆ ಪ್ರತಿನಿಧಿ ಪತ್ರಗಳು ಸಹ ಎಲ್ಲ ಸದಸ್ಯರಿಗೆ ಕಳುಹಿಸಲ್ಪಡುವವು. ಇವುಗಳು ಆಗಸ್ಟ್‌ 1ಕ್ಕೆ ಮುಂಚೆ ಸೊಸೈಟಿಯ ಸೆಕ್ರಿಟರಿ ಆಫೀಸಿಗೆ ತಲಪಸಾಧ್ಯವಾಗುವಂತೆ ಇವುಗಳನ್ನು ಬೇಗನೆ ಹಿಂದಿರುಗಿಸಿರಿ. ಪ್ರತಿಯೊಬ್ಬ ಸದಸ್ಯನು ತನ್ನ ಪ್ರತಿನಿಧಿ ಪತ್ರವನ್ನು ಭರ್ತಿಮಾಡಿ, ಕೂಡಲೆ ಅದನ್ನು ಹಿಂದಿರುಗಿಸಬೇಕು ಮತ್ತು ವೈಯಕ್ತಿಕವಾಗಿ ಅವನು ಈ ಕೂಟಕ್ಕೆ ಹಾಜರಾಗುತ್ತಾನೋ ಇಲ್ಲವೋ ಎಂಬುದನ್ನು ಅದರಲ್ಲಿ ಸ್ಪಷ್ಟವಾಗಿ ತಿಳಿಸಬೇಕು. ಪ್ರತಿಯೊಂದು ಪ್ರತಿನಿಧಿ ಪತ್ರದಲ್ಲಿ ಕೊಡಲ್ಪಟ್ಟಿರುವ ವಿಷಯವು ನಿಶ್ಚಿತವಾಗಿರಬೇಕು, ಏಕೆಂದರೆ ಇದರ ಆಧಾರದ ಮೇಲೆ ಯಾರು ವಾರ್ಷಿಕ ಕೂಟಕ್ಕೆ ಉಪಸ್ಥಿತರಿರುವರು ಎಂಬುದನ್ನು ನಿರ್ಧರಿಸಲಾಗುವುದು.

ಬಿಸ್‌ನೆಸ್‌ ಮೀಟಿಂಗ್‌ ಹಾಗೂ ವರದಿಗಳನ್ನೂ ಸೇರಿಸಿ ಇಡೀ ಕಾರ್ಯಕ್ರಮವು, ಮಧ್ಯಾಹ್ನ 1:00 ಗಂಟೆಯಷ್ಟಕ್ಕೆ ಅಥವಾ ಅದಕ್ಕಿಂತ ಸ್ವಲ್ಪ ತಡವಾಗಿ ಮುಗಿಸಲ್ಪಡುವ ನಿರೀಕ್ಷೆಯಿದೆ. ಮಧ್ಯಾಹ್ನ ಯಾವುದೇ ರೀತಿಯ ಕಾರ್ಯಕ್ರಮ ಇರುವುದಿಲ್ಲ. ಸ್ಥಳಾವಕಾಶ ಕಡಿಮೆಯಿರುವುದರಿಂದ, ಟಿಕೆಟ್‌ ಇರುವವರಿಗೆ ಮಾತ್ರ ಒಳಗೆ ಪ್ರವೇಶವಿದೆ. ಟೆಲಿಫೋನ್‌ ಲೈನುಗಳ ಮೂಲಕ ಈ ವಾರ್ಷಿಕ ಕೂಟವನ್ನು ಬೇರೆ ಸಭಾಂಗಣಗಳು ಕೇಳಿಸಿಕೊಳ್ಳುವಂತೆ ಯಾವುದೇ ರೀತಿಯ ಏರ್ಪಾಡುಗಳು ಮಾಡಲ್ಪಡುವುದಿಲ್ಲ.