ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಜವಾಗಿಯೂ ದೇವರು ಜನರನ್ನು ನರಕದಲ್ಲಿ ಸುಡುವ ಶಿಕ್ಷೆಕೊಡುತ್ತಾನೊ?”

“ನಿಜವಾಗಿಯೂ ದೇವರು ಜನರನ್ನು ನರಕದಲ್ಲಿ ಸುಡುವ ಶಿಕ್ಷೆಕೊಡುತ್ತಾನೊ?”

“ನಿಜವಾಗಿಯೂ ದೇವರು ಜನರನ್ನು ನರಕದಲ್ಲಿ ಸುಡುವ ಶಿಕ್ಷೆಕೊಡುತ್ತಾನೊ?”

“ನೀವೇನಾದರೂ ದೇವತಾಶಾಸ್ತ್ರವನ್ನು ಅಭ್ಯಾಸಮಾಡುತ್ತಿದ್ದೀರೊ?”

ಈ ಪ್ರಶ್ನೆಯಿಂದ ಜೋಅಲ್‌ ಮತ್ತು ಕಾರ್ಲ್‌ ಇಬ್ಬರೂ ಚಕಿತರಾದರು. ಈ ಇಬ್ಬರು ಯುವಕರು, ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಕೆಲಸಮಾಡುತ್ತಿದ್ದ ಸ್ವಯಂ ಸೇವಕರಾಗಿದ್ದರು. ಅವರು ಹತ್ತಿರದಲ್ಲೇ ಇದ್ದ ಒಂದು ಪುಸ್ತಕದಂಗಡಿಯಲ್ಲಿ ಪುಸ್ತಕಗಳನ್ನು ನೋಡುತ್ತಾ ಇದ್ದರು. ಜೋಅಲ್‌ ಕೆಲವೊಂದು ಬೈಬಲ್‌ ಕಾನ್‌ಕಾರ್ಡೆನ್ಸ್‌ಗಳನ್ನು ಪರಿಶೀಲಿಸುತ್ತಾ ಇದ್ದಾಗ, ಕಾರ್ಲ್‌ ಅವನಿಗೆ ಶುಶ್ರೂಷೆಯಲ್ಲಿ ನಡೆದ ಒಂದು ಚರ್ಚೆಯ ಕುರಿತಾಗಿ ಹೇಳುತ್ತಾ ಇದ್ದನು. ಹತ್ತಿರದಲ್ಲೇ ನಿಂತುಕೊಂಡಿದ್ದ ಒಬ್ಬ ವ್ಯಕ್ತಿಯು ಈ ಸಂಭಾಷಣೆಯ ಕೆಲವೊಂದು ಅಂಶಗಳನ್ನು ಕೇಳಿಸಿಕೊಂಡು ಅವರನ್ನು ಮಾತಾಡಿಸುವಂತೆ ಪ್ರೇರಿಸಲ್ಪಟ್ಟನು.

ಆ ಇಬ್ಬರೂ ಯುವಕರು ದೇವತಾಶಾಸ್ತ್ರವನ್ನು ಅಭ್ಯಾಸಮಾಡುತ್ತಿದ್ದಾರೊ ಎಂಬುದನ್ನು ತಿಳಿಯುವುದಕ್ಕಿಂತಲೂ ಹೆಚ್ಚಾಗಿ, ಆ ವ್ಯಕ್ತಿಗೆ ಒಂದು ವೈಯಕ್ತಿಕ ಚಿಂತೆ ಇತ್ತು. ಅವನು ವಿವರಿಸಿದ್ದು: “ನಾನೊಬ್ಬ ಯೆಹೂದಿ. ಯೆಹೂದ್ಯರು ಯೇಸುವನ್ನು ತಿರಸ್ಕರಿಸಿರುವುದರಿಂದ, ನಾನು ನರಕದಲ್ಲಿ ಸುಡಲ್ಪಡುವೆನೆಂದು ನನ್ನ ಕೆಲವು ಕ್ರೈಸ್ತ ಮಿತ್ರರು ನನಗೆ ಹೇಳಿದ್ದಾರೆ. ಈ ಸಂಗತಿಯು ನನ್ನನ್ನು ತುಂಬ ಕಾಡಿಸುತ್ತಿದೆ. ಒಬ್ಬ ಪ್ರೀತಿಪರ ದೇವರು ಇಂಥ ಶಿಕ್ಷೆಯನ್ನು ಕೊಡುವುದು ನ್ಯಾಯವಾದದ್ದಾಗಿ ತೋರುವುದಿಲ್ಲ. ನಿಜವಾಗಿಯೂ ದೇವರು ಜನರನ್ನು ನರಕದಲ್ಲಿ ಸುಡುವ ಶಿಕ್ಷೆಕೊಡುತ್ತಾನೊ?”

ತಾವು ಬೈಬಲಿನ ಶ್ರದ್ಧಾಪೂರ್ವಕ ವಿದ್ಯಾರ್ಥಿಗಳಾಗಿದ್ದೇವೆಂದು ಜೋಅಲ್‌ ಮತ್ತು ಕಾರ್ಲ್‌ ಆ ಪ್ರಾಮಾಣಿಕ ಮನಸ್ಸಿನ ವ್ಯಕ್ತಿಗೆ ಹೇಳಿದರು. ಮೃತರು ಪ್ರಜ್ಞೆಯಿಲ್ಲದವರಾಗಿದ್ದಾರೆ ಮತ್ತು ಮರಣದಲ್ಲಿ ನಿದ್ರಿಸುತ್ತಿದ್ದಾರೆ ಹಾಗೂ ಪುನರುತ್ಥಾನಕ್ಕಾಗಿ ಕಾಯುತ್ತಿದ್ದಾರೆಂದು ಅವರು ಶಾಸ್ತ್ರವಚನಗಳಿಂದ ಅವನಿಗೆ ತೋರಿಸಿದರು. ಹೀಗಿರುವುದರಿಂದ ಅವರು ಯಾವುದೇ ಯಾತನೆಯನ್ನು ಅನುಭವಿಸುತ್ತಿಲ್ಲ ಅಥವಾ ವೇದನಾಮಯ ನರಕಾಗ್ನಿಯಲ್ಲಿ ನರಳುತ್ತಿಲ್ಲ. (ಕೀರ್ತನೆ 146:​3, 4; ಪ್ರಸಂಗಿ 9:​5, 10; ದಾನಿಯೇಲ 12:13; ಯೋಹಾನ 11:​11-14, 23-26) 45 ನಿಮಿಷಗಳ ವರೆಗೆ ನಡೆದ ಅವರ ಸಂಭಾಷಣೆಯ ಕೊನೆಯಲ್ಲಿ, ಆ ವ್ಯಕ್ತಿಯು ಜೋಅಲ್‌ ಮತ್ತು ಕಾರ್ಲ್‌ರಿಗೆ ತನ್ನ ವಿಳಾಸವನ್ನು ಕೊಟ್ಟನು ಮತ್ತು ಆ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ಒದಗಿಸುವಂತೆ ವಿನಂತಿಸಿದನು.

ನರಕದಲ್ಲಿ ಬೆಂಕಿಯಿದ್ದು, ಅದು ಯಾತನೆಯ ಸ್ಥಳವಾಗಿರುವಲ್ಲಿ, ಯಾರಾದರೂ ಅಲ್ಲಿಗೆ ಕಳುಹಿಸಲ್ಪಡುವಂತೆ ಕೇಳಿಕೊಳ್ಳುವರೋ? ಆದರೆ ಪೂರ್ವಜನಾದ ಯೋಬನು ಹಾಗೆ ಮಾಡಿದನು. ತನ್ನ ಕಷ್ಟದೆಸೆಯಿಂದ ತಪ್ಪಿಸಿಕೊಳ್ಳಲು ಬಯಸುತ್ತಾ ಅವನು ಬೇಡಿಕೊಂಡದ್ದು: “ನೀನು ನನ್ನನ್ನು ಪಾತಾಳದಲ್ಲಿ [“ನರಕದಲ್ಲಿ,” NW] ಬಚ್ಚಿಟ್ಟು ನಿನ್ನ ಕೋಪವು ಇಳಿಯುವ ಪರ್ಯಂತ ನನ್ನನ್ನು ಮರೆಮಾಡಿ ನನಗೆ ಅವಧಿಯನ್ನು ಗೊತ್ತುಮಾಡಿ [ಕಡೆಯಲ್ಲಿ] ನನ್ನನ್ನು ಜ್ಞಾಪಿಸಿಕೊಂಡರೆ ಎಷ್ಟೋ ಒಳ್ಳೇದು!” (ಯೋಬ 14:13) ನರಕವು, ಒಂದು ಯಾತನೆಯ ಸ್ಥಳವಾಗಿದೆ ಎಂಬ ಸಂಗತಿಯನ್ನು ಯೋಬನು ನಂಬಲಿಲ್ಲವೆಂಬುದು ಸ್ಪಷ್ಟ. ಅದಕ್ಕೆ ಬದಲು ಅವನು ಅಲ್ಲಿ ಸಂರಕ್ಷಣೆಯನ್ನು ಪಡೆಯಲು ಇಚ್ಛಿಸಿದನು. ಮರಣವು ಅಸ್ತಿತ್ವಹೀನ ಸ್ಥಿತಿಯಾಗಿದೆ, ಮತ್ತು ಬೈಬಲ್‌ನಲ್ಲಿ ತಿಳಿಸಲ್ಪಟ್ಟಿರುವಂಥ ನರಕವು, ಮಾನವಕುಲದ ಸಾಮಾನ್ಯ ಸಮಾಧಿಯಾಗಿದೆ. ನಾವು ಸತ್ತಾಗ ನಮಗೇನಾಗುತ್ತದೆ ಮತ್ತು ಅದರ ನಂತರ ಯಾವ ನಿರೀಕ್ಷೆಯಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿಯು ನಿಮಗೆ ಬೇಕಾಗಿರುವಲ್ಲಿ, ಕೆಳಗೆ ಕೊಡಲ್ಪಟ್ಟಿರುವ ಈ ಆಮಂತ್ರಣಕ್ಕೆ ಪ್ರತಿಕ್ರಿಯಿಸುವಂತೆ ನಿಮ್ಮನ್ನು ಉತ್ಸುಕತೆಯಿಂದ ಆಮಂತ್ರಿಸುತ್ತೇವೆ.