ಉತ್ಕೃಷ್ಟತೆಯ ಅರ್ಹತಾಪತ್ರ
ಉತ್ಕೃಷ್ಟತೆಯ ಅರ್ಹತಾಪತ್ರ
ಇದನ್ನೇ, ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊದ ಬೆಳವಣಿಗೆಗಾಗಿರುವ ಕಾಂಗಲೀಸ್ ಮತ್ತು ಆಫ್ರಿಕನ್ ಪತ್ರಕಾರರ ಸಂಘಟನೆಯು (ಏಜೆಓಸಿಏಡಿ), “ಕಾಂಗೊದ ಬೆಳವಣಿಗೆಗೆ ವಿಶಿಷ್ಟ ರೀತಿಯಲ್ಲಿ ನೆರವು ನೀಡಿರುವ ವ್ಯಕ್ತಿಗಳು ಅಥವಾ ಸಾಮಾಜಿಕ ಸಂಸ್ಥೆಗಳನ್ನು ಸನ್ಮಾನಿಸಲಿಕ್ಕಾಗಿ” ಬಹುಮಾನವಾಗಿ ಕೊಡುತ್ತದೆ.
ಇಸವಿ 2000ದ ನವೆಂಬರ್ 17ರಂದು, ಉತ್ಕೃಷ್ಟತೆಯ ಆ ಅರ್ಹತಾಪತ್ರವು ಯೆಹೋವನ ಸಾಕ್ಷಿಗಳಿಗೆ ನೀಡಲ್ಪಟ್ಟಿತು. “ಕಾಂಗೊ ನಾಡಿಗರ ಬೆಳವಣಿಗೆಗಾಗಿ ತಮ್ಮ ಪ್ರಕಾಶನಗಳ [ಮೂಲಕ] ಶಿಕ್ಷಣ ಮತ್ತು ಬೋಧನೆಯನ್ನು ಒದಗಿಸಿದ್ದಕ್ಕಾಗಿ” ಅವರಿಗೆ ಈ ಪ್ರಶಸ್ತಿಯು ಕೊಡಲ್ಪಟ್ಟಿತು.
ಈ ಪ್ರಶಸ್ತಿಯ ಕುರಿತಾಗಿ ಹೇಳಿಕೆಯನ್ನು ನೀಡುತ್ತಾ, ಕಿನ್‌ಶಾಸದ ವಾರ್ತಾಪತ್ರಿಕೆಯಾದ ಲ ಫಾರ್ ಹೇಳಿದ್ದು: “ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಡುವ ಪತ್ರಿಕೆಗಳಾದ ವಾಚ್‌ಟವರ್ ಮತ್ತು ಅವೇಕ್! ಅಥವಾ ಬೇರೆ ಪ್ರಕಾಶನಗಳನ್ನು ಕೈಗಳಲ್ಲಿ ಹಿಡಿಯದಿರುವ ಕಾಂಗೊ ನಾಡಿಗನನ್ನು ಕಂಡುಹಿಡಿಯುವುದು ಕಷ್ಟಕರ. ಈ ಪತ್ರಿಕೆಗಳು ಜೀವನದ ಎಲ್ಲ ಕ್ಷೇತ್ರಗಳ ಕುರಿತು [ಚರ್ಚಿಸುತ್ತವೆ].” ಆ ಲೇಖನವು ಕೂಡಿಸಿ ಹೇಳಿದ್ದೇನೆಂದರೆ, ಈ ಪ್ರಕಾಶನಗಳು “ಇಂದಿನ ಸಮಸ್ಯೆಗಳನ್ನು ಹೇಗೆ ನಿಭಾಯಿಸುವುದೆಂದು” ತೋರಿಸುತ್ತವೆ ಮತ್ತು “ಪ್ರಚಲಿತ ಘಟನೆಗಳ ಹಿಂದಿರುವ ನಿಜಾರ್ಥದೆಡೆಗೆ” ಕೈತೋರಿಸುತ್ತವೆ. ಅವೇಕ್! ಪತ್ರಿಕೆಯ ಪ್ರತಿಯೊಂದು ಸಂಚಿಕೆಯು “ರಾಜಕೀಯವಾಗಿ ಯಾವಾಗಲೂ ತಟಸ್ಥವಾಗಿದ್ದು, ಒಂದು ಕುಲವನ್ನು ಇನ್ನೊಂದಕ್ಕಿಂತ ಮೇಲಕ್ಕೇರಿಸುವುದಿಲ್ಲ.” ಮಾತ್ರವಲ್ಲದೆ, ಆ ಪ್ರಕಾಶನಗಳು “ಸದ್ಯದ ದುಷ್ಟ, ನ್ಯಾಯರಹಿತ ವಿಷಯಗಳ ವ್ಯವಸ್ಥೆಯನ್ನು ಇನ್ನೇನು ಸ್ಥಾನಾಂತರಿಸಲಿಕ್ಕಿರುವ, ಶಾಂತಿಯ ಮತ್ತು ಭದ್ರ ನೂತನ ಲೋಕವೊಂದರ ನಿರ್ಮಾಣಿಕನ ವಾಗ್ದಾನದಲ್ಲಿ ಭರವಸೆಯನ್ನು” ಮೂಡಿಸುತ್ತವೆ.
ಏಜೆಓಸಿಏಡಿಯಿಂದ ಗಮನಿಸಲ್ಪಟ್ಟಂತೆ, ಯೆಹೋವನ ಸಾಕ್ಷಿಗಳ ಪ್ರಕಾಶನಗಳು ಕಾಂಗಲೀಸ್ ಜನಸಂಖ್ಯೆಯಲ್ಲಿ ಹೆಚ್ಚಿನವರಿಗೆ ಪ್ರಯೋಜನದಾಯಕವಾಗಿ ಪರಿಣಮಿಸಿವೆ. ನೂರಾರು ಭಾಷೆಗಳಲ್ಲಿ ಲಭ್ಯವಿರುವುದರಿಂದ, ಅವುಗಳ ನಂಬಿಕೆ ಹುಟ್ಟಿಸುವಂಥ ಸಂದೇಶವು ನಿಮಗೂ ಪ್ರಯೋಜನದಾಯಕವಾಗಿರಸಾಧ್ಯವಿದೆ.
ನೀವು ಇವುಗಳಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಲಿಕ್ಕಾಗಿ ಕೆಳಗಿರುವ ವಿಷಯವನ್ನು ದಯವಿಟ್ಟು ಓದಿ.