ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ನಿಮಗೆ ನೆನಪಿದೆಯೇ?

ಕಾವಲಿನಬುರುಜು ಪತ್ರಿಕೆಯ ಇತ್ತೀಚಿನ ಸಂಚಿಕೆಗಳನ್ನು ನೀವು ಓದಿ ಗಣ್ಯಮಾಡಿದ್ದೀರೋ? ಹಾಗಾದರೆ, ಈ ಮುಂದಿನ ಪ್ರಶ್ನೆಗಳಿಗೆ ನೀವು ಉತ್ತರವನ್ನು ನೀಡಲು ಶಕ್ತರಾಗಿದ್ದೀರೋ ಎಂದು ನೋಡಿ:

ಯೋಬ 38ರಲ್ಲಿ ಎಬ್ಬಿಸಲ್ಪಟ್ಟ ಪ್ರಶ್ನೆಗಳು ಏಕೆ ಇಂದು ಕೂಡ ಪರಿಗಣನೆಗೆ ಯೋಗ್ಯವಾಗಿವೆ?

ದೇವರು ಗಮನವನ್ನು ನಿರ್ದೇಶಿಸಿದಂಥ ಅನೇಕ ಅದ್ಭುತಕಾರ್ಯಗಳು, ಆಧುನಿಕ ವಿಜ್ಞಾನಿಗಳಿಂದ ಕೂಡ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಅಸಾಧ್ಯವಾಗಿವೆ. ಅವುಗಳಲ್ಲಿ, ಗುರುತ್ವಾಕರ್ಷಣೆಯು ಹೇಗೆ ಭೂಮಿಯನ್ನು ಅದರ ಕಕ್ಷೆಯಲ್ಲಿಡುತ್ತದೆ, ವಾಸ್ತವದಲ್ಲಿ ಬೆಳಕು ಏನಾಗಿದೆ, ಹಿಮದ ಹರಳುಗಳಲ್ಲಿ ಅಪರಿಮಿತವಾದ ವೈವಿಧ್ಯತೆಯೇಕೆ, ಮಳೆಹನಿಗಳು ಹೇಗೆ ಉಂಟಾಗುತ್ತವೆ, ಮತ್ತು ಸಿಡಿಲುಮಳೆಗಳಲ್ಲಿ ಹೇಗೆ ಶಕ್ತಿಯು ಒಳಗೂಡಿದೆ ಎಂಬ ವಿಷಯಗಳು ಸೇರಿವೆ.​—4/15, ಪುಟಗಳು 4-11.

ನಿರುತ್ಸಾಹದ ಭಾವನೆಗಳೊಂದಿಗೆ ಹೋರಾಡಲು ನಮಗೆ ಯಾವ ಬೈಬಲ್‌ ಉದಾಹರಣೆಗಳು ಸಹಾಯಮಾಡಬಲ್ಲವು?

ಆಸಾಫ, ಬಾರೂಕ ಮತ್ತು ನೊವೊಮಿಯರು ನಿರುತ್ತೇಜನದ ಅಥವಾ ಇನ್ನಿತರ ನಿರುತ್ಸಾಹದ ಭಾವನೆಗಳನ್ನು ಎದುರಿಸಿದರು. ಇಂತಹ ಸನ್ನಿವೇಶಗಳಲ್ಲಿ ಅವರು ಯಶಸ್ವಿಕರವಾಗಿ ಹೋರಾಡಿದ ಶಾಸ್ತ್ರೀಯ ದಾಖಲೆಯು ನಮಗೆ ಸಹಾಯಮಾಡಬಲ್ಲದು.​—4/15, ಪುಟಗಳು 22-4.

ಕ್ರೈಸ್ತ ವಿಧವೆಯರಿಗೆ ಸಹಾಯಮಾಡಬಹುದಾದ ಕೆಲವು ವಿಧಗಳಾವುವು?

ಸ್ನೇಹಿತರು ದಯೆಯಿಂದ ಮತ್ತು ಸ್ಪಷ್ಟವಾದ ರೀತಿಯಲ್ಲಿ ಸಹಾಯವನ್ನು ನೀಡಲು ಮುಂದುವರಿಯಸಾಧ್ಯವಿದೆ. ಕುಟುಂಬದ ಸದಸ್ಯರು ಅಥವಾ ಇತರರು, ಯಥಾರ್ಥವಾದ ಅಗತ್ಯವಿರುವಲ್ಲಿ ಹಣಕಾಸಿನ ಅಥವಾ ಐಹಿಕ ಸಹಾಯವನ್ನು ನೀಡುವ ಸ್ಥಾನದಲ್ಲಿರಬಹುದು. ಜೊತೆ ಕ್ರೈಸ್ತರು ಕೂಡ, ಆತ್ಮಿಕ ಬೆಂಬಲ ಮತ್ತು ಸಾಂತ್ವನವನ್ನು ಒದಗಿಸಿ, ತಮ್ಮ ಸ್ನೇಹ ಹಸ್ತವನ್ನು ಚಾಚುವ ಮೂಲಕ ಸಹಾಯಮಾಡಬಹುದು.​—5/1, ಪುಟಗಳು 5-7.

ಒಂದನೇ ಕೊರಿಂಥ 7:39ನೇ (NW) ವಚನವು ಬುದ್ಧಿವಾದ ನೀಡುವ ಪ್ರಕಾರ, “ಕರ್ತನಲ್ಲಿ ಮಾತ್ರ” ವಿವಾಹವಾಗುವುದು ಏಕೆ ಪ್ರಾಮುಖ್ಯವಾಗಿದೆ?

ಹೆಚ್ಚಿನ ಸಂದರ್ಭಗಳಲ್ಲಿ ಅವಿಶ್ವಾಸಿಗಳೊಂದಿಗೆ ನಡೆದಿರುವ ವಿವಾಹಗಳು ವಿಪತ್ಕಾರಕವಾಗಿ ಪರಿಣಮಿಸಿವೆ. ಮಾತ್ರವಲ್ಲದೆ, ಈ ದೈವಿಕ ಬುದ್ಧಿವಾದವನ್ನು ಅನುಸರಿಸುವುದು, ಯೆಹೋವನಿಗೆ ನಾವು ತೋರಿಸುವ ನಿಷ್ಠೆಯ ಸಂಗತಿಯಾಗಿದೆ. ನಾವು ದೇವರ ವಾಕ್ಯಕ್ಕನುಗುಣವಾಗಿ ನಡೆಯುವಾಗ, ನಮ್ಮ ಹೃದಯಗಳು ನಮ್ಮನ್ನು ದೂಷಿಸುವುದಿಲ್ಲ. (1 ಯೋಹಾನ 3:21, 22)​—5/15, ಪುಟಗಳು 20-1.

ನಮ್ಮ ಪಾಪಗಳನ್ನು ಯೆಹೋವನು ಕ್ಷಮಿಸಶಕ್ತನಾಗಿರುವುದರಿಂದ, ಕ್ರೈಸ್ತರು ಘೋರ ಪಾಪಗಳನ್ನು ಸಭೆಯಲ್ಲಿರುವ ಹಿರಿಯರಿಗೆ ಏಕೆ ನಿವೇದಿಸಿಕೊಳ್ಳುತ್ತಾರೆ?

ಒಬ್ಬ ಕ್ರೈಸ್ತನು ಗಂಭೀರವಾದ ಪಾಪಗಳಿಗಾಗಿ ಯೆಹೋವನ ಕ್ಷಮಾಪಣೆಯನ್ನು ಕೋರುವ ಆವಶ್ಯಕತೆಯಿದೆ ಎಂಬುದು ನಿಜವೇ. (2 ಸಮುವೇಲ 12:13) ಆದರೆ, ಪ್ರವಾದಿಯಾದ ನಾತಾನನು ಹೇಗೆ ದಾವೀದನಿಗೆ ಸಹಾಯವನ್ನು ಒದಗಿಸಿದನೋ, ಹಾಗೆಯೇ ಪಶ್ಚಾತ್ತಾಪ ತೋರಿಸುವ ಪಾಪಿಗಳಿಗೆ ಸಭೆಯಲ್ಲಿರುವ ಪ್ರೌಢ ಹಿರಿಯರು ಸಹಾಯವನ್ನು ನೀಡಬಲ್ಲರು. ಹಿರಿಯರ ಬಳಿ ಹೋಗುವುದು, ಯಾಕೋಬ 5:14, 15ರಲ್ಲಿ ಕೊಡಲ್ಪಟ್ಟಿರುವ ಮಾರ್ಗದರ್ಶನೆಗೆ ಅನುಗುಣವಾಗಿದೆ.​—6/1, ಪುಟ 31.

ನಾವು ಅಗತ್ಯದಲ್ಲಿರುವ ಅನಾಥರು ಮತ್ತು ವಿಧವೆಯರನ್ನು ಪರಾಮರಿಸಬೇಕು ಎಂಬುದಕ್ಕೆ ಯಾವ ಆಧಾರವಿದೆ?

ಈ ರೀತಿಯ ಪರಾಮರಿಕೆಯನ್ನು ಒದಗಿಸುವುದು ಪುರಾತನ ಇಬ್ರಿಯರ ಮತ್ತು ಆದಿ ಕ್ರೈಸ್ತರ ಸತ್ಯಾರಾಧನೆಯನ್ನು ಗುರುತಿಸಿತು ಎಂಬುದನ್ನು ಐತಿಹಾಸಿಕ ದಾಖಲೆಯು ತೋರಿಸುತ್ತದೆ. (ವಿಮೋಚನಕಾಂಡ 22:22, 23; ಗಲಾತ್ಯ 2:9, 10; ಯಾಕೋಬ 1:27) ಅಗತ್ಯದಲ್ಲಿರುವ ವಿಧವೆಯರನ್ನು ಪರಾಮರಿಸಬೇಕು ಎಂಬುದರ ಕುರಿತಾದ ಸ್ಪಷ್ಟವಾದ ಮಾಹಿತಿಯನ್ನು ಶಾಸ್ತ್ರವಚನಗಳಲ್ಲಿ ಅಪೊಸ್ತಲ ಪೌಲನು ಕ್ರೈಸ್ತರಿಗೆ ಒದಗಿಸಿದನು. (1 ತಿಮೊಥೆಯ 5:3-16)​—6/15, ಪುಟಗಳು 9-11.

ಸಂತೋಷಭರಿತ ಹಾಗೂ ಅರ್ಥಭರಿತ ಜೀವನಕ್ಕೆ ಬೇಕಾಗಿರುವ ಕೀಲಿ ಕೈ ಯಾವುದು?

ನಮ್ಮ ಸೃಷ್ಟಿಕರ್ತನೂ ಸ್ವರ್ಗೀಯ ತಂದೆಯೂ ಆಗಿರುವ ಯೆಹೋವನೊಂದಿಗೆ ನಾವು ಯೋಗ್ಯವಾದ ಸಂಬಂಧವನ್ನು ಹೊಂದಿರಬೇಕು. ನಾವು ಇದನ್ನು ಮಾಡಲು ಬೈಬಲನ್ನು ಅಭ್ಯಾಸಿಸುವುದು ಒಂದು ಪ್ರಾಮುಖ್ಯ ಸಹಾಯಕವಾಗಿದೆ.​—7/1, ಪುಟಗಳು 4-5.

ಮರಣವನ್ನು ಪಾರಾಗಿ ಉಳಿಯುವ ಅಮರ ಆತ್ಮವು ಪ್ರತಿಯೊಬ್ಬ ಮನುಷ್ಯನಲ್ಲಿದೆಯೋ?

ಪ್ರಾಣವಲ್ಲ ಬದಲಾಗಿ ಆತ್ಮವು ಅಮರವಾಗಿದೆ ಎಂದು ಕೆಲವರು ನಂಬುವುದಾದರೂ, ಬೈಬಲ್‌ ಈ ವಿಚಾರವನ್ನು ಸಮ್ಮತಿಸುವುದಿಲ್ಲ. ಒಬ್ಬ ಮನುಷ್ಯನು ಸತ್ತಾಗ ಅವನು ಮಣ್ಣಿಗೆ ಹಿಂದಿರುಗುತ್ತಾನೆ ಮತ್ತು ಅಸ್ತಿತ್ವಹೀನನಾಗುತ್ತಾನೆ ಎಂಬುದನ್ನು ಅದು ತೋರಿಸುತ್ತದೆ. ಆದರೆ, ದೇವರು ಅವನನ್ನು ಪುನಃ ಹಿಂದೆ ತರುವ ಸಾಮರ್ಥ್ಯವುಳ್ಳವನಾಗಿದ್ದಾನೆ. ಆದುದರಿಂದ, ಪುನರುತ್ಥಾನದ ಮೂಲಕ, ಭವಿಷ್ಯತ್ತಿನ ಜೀವನದ ಯಾವುದೇ ನಿರೀಕ್ಷೆಯು ದೇವರ ಕೈಯಲ್ಲಿದೆ. (ಪ್ರಸಂಗಿ 12:7)​—7/15, ಪುಟಗಳು 3-6.

ಮೂವರು ಇಬ್ರಿಯ ಯುವಕರು ದೂರಾ ಎಂಬ ಬಯಲಿನಲ್ಲಿ ಪರೀಕ್ಷಿಸಲ್ಪಟ್ಟಾಗ, ದಾನಿಯೇಲನು ಎಲ್ಲಿದ್ದನು?

ಬೈಬಲ್‌ ಇದರ ಕುರಿತಾಗಿ ಹೇಳುವುದಿಲ್ಲ. ದಾನಿಯೇಲನಿಗಿದ್ದ ಪದವಿಯ ಕಾರಣ ಅವನು ಅಲ್ಲಿ ಬರಬೇಕಾದ ಆವಶ್ಯಕತೆ ಇಲ್ಲದಿದ್ದಿರಬಹುದು ಅಥವಾ ಅವನು ಒಂದು ಅಧಿಕೃತ ಕೆಲಸದ ನಿಮಿತ್ತ ಎಲ್ಲಿಯೋ ಹೋಗಿರಬಹುದು. ಆದರೆ ಅವನು ಯೆಹೋವನ ಕಡೆಗಿನ ತನ್ನ ನಂಬಿಗಸ್ತಿಕೆಯನ್ನು ರಾಜಿಮಾಡಿಕೊಳ್ಳಲಿಲ್ಲ ಎಂಬುದರ ಕುರಿತು ನಾವು ಭರವಸೆಯಿಂದಿರಸಾಧ್ಯವಿದೆ.​—8/1, ಪುಟ 31.