ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಡರಲ್‌ ಕಾನ್‌ಸ್ಟಿಟ್ಯೂಷನಲ್‌ ಕೋರ್ಟ್‌ನಲ್ಲಿ ವಿಜಯ

ಫೆಡರಲ್‌ ಕಾನ್‌ಸ್ಟಿಟ್ಯೂಷನಲ್‌ ಕೋರ್ಟ್‌ನಲ್ಲಿ ವಿಜಯ

ಫೆಡರಲ್‌ ಕಾನ್‌ಸ್ಟಿಟ್ಯೂಷನಲ್‌ ಕೋರ್ಟ್‌ನಲ್ಲಿ ವಿಜಯ

ಜರ್ಮನಿಯಲ್ಲಿರುವ ಯೆಹೋವನ ಸಾಕ್ಷಿಗಳು, ಕಾರ್ಲ್ಸ್‌ರೂಅದಲ್ಲಿರುವ ಫೆಡರಲ್‌ ಕಾನ್‌ಸ್ಟಿಟ್ಯೂಷನಲ್‌ ಕೋರ್ಟ್‌ನಲ್ಲಿ ಒಂದು ಮಹತ್ವದ ವಿಜಯವನ್ನು ಗಳಿಸಿದರು. ಹೀಗೆ, ಒಂದು ಸಂಘಟನೆಯೋಪಾದಿ ಅಂಗೀಕರಿಸಲ್ಪಡುವುದರ ಸಂಬಂಧದಲ್ಲಿ ಒಂದು ಮುಖ್ಯವಾದ ಹೆಜ್ಜೆಯನ್ನು ಅವರು ತೆಗೆದುಕೊಂಡರು.

ಜರ್ಮನಿಯಲ್ಲಿರುವ ಯೆಹೋವನ ಸಾಕ್ಷಿಗಳು, ಕಳೆದ 100ಕ್ಕಿಂತಲೂ ಹೆಚ್ಚು ವರ್ಷಗಳಿಂದ ತಮ್ಮ ಸಾರುವ ಚಟುವಟಿಕೆಯಲ್ಲಿ ಕಾರ್ಯನಿರತರಾಗಿದ್ದಾರೆ. 20ನೇ ಶತಮಾನದ ರಾಷ್ಟ್ರೀಯ ಸಮಾಜವಾದಿಗಳು ಮತ್ತು ಕಮ್ಯೂನಿಸ್ಟರು ಎಂಬ ಎರಡು ಸರ್ವಾಧಿಕಾರಿ ಸರ್ಕಾರಗಳ ಘೋರ ಹಿಂಸೆಯಿಂದ ಅವರು ಪಾರಾಗಿ ಉಳಿದಿದ್ದಾರೆ. ಸಾರ್ವಜನಿಕ ಕಾನೂನಿನ ಸಂಘಟನೆಯಾಗಿ ಕಾನೂನುಬದ್ಧ ಅಂಗೀಕಾರವನ್ನು ಪಡೆದುಕೊಳ್ಳಲು ಸಾಕ್ಷಿಗಳು 1990ರಿಂದ ಪ್ರಯತ್ನಿಸುತ್ತಿದ್ದರು. ಕೋರ್ಟ್‌ನ ಎರಡು ಅನುಕೂಲಕರ ತೀರ್ಮಾನಗಳು ಮತ್ತು ಒಂದು ರದ್ದುಗೊಳಿಸುವಿಕೆಯನ್ನು ಅನುಸರಿಸಿ, ಸಾಕ್ಷಿಗಳು ಫೆಡರಲ್‌ ಕಾನ್‌ಸ್ಟಿಟ್ಯೂಷನಲ್‌ ಕೋರ್ಟ್‌ಗೆ ಮನವಿಮಾಡಿದರು. ಈ ಕೋರ್ಟು ಇಸವಿ 2000, ಡಿಸೆಂಬರ್‌ 19ನೇ ತಾರೀಖಿಗೆ ತನ್ನ ತೀರ್ಪನ್ನು ನೀಡಿತು.

ಯೆಹೋವನ ಸಾಕ್ಷಿಗಳ ಪರವಾಗಿ ಸರ್ವಾನುಮತದ ನಿರ್ಣಯ

ಕೋರ್ಟ್‌ನ ಎಲ್ಲ ಏಳು ಮಂದಿ ನ್ಯಾಯಾಧೀಶರು ಯೆಹೋವನ ಸಾಕ್ಷಿಗಳ ಪರವಾಗಿ ತೀರ್ಮಾನ ಕೊಟ್ಟರು. 1997ರಲ್ಲಿ ಫೆಡರಲ್‌ ಅಡ್‌ಮಿನಿಸ್ಟ್ರೇಟಿವ್‌ ಕೋರ್ಟ್‌ನಿಂದ ಮಾಡಲ್ಪಟ್ಟ ಒಂದು ತೀರ್ಮಾನವನ್ನು ಈ ನ್ಯಾಯಾಧೀಶರು ರದ್ದುಗೊಳಿಸಿದರು ಮತ್ತು ಆ ಕೋರ್ಟ್‌ ಸಾಕ್ಷಿಗಳ ಮನವಿಯನ್ನು ಪುನಃ ಪರಿಶೀಲಿಸುವಂತೆ ಸಲಹೆ ನೀಡಿದರು.

ಫೆಡರಲ್‌ ಕಾನ್‌ಸ್ಟಿಟ್ಯೂಷನಲ್‌ ಕೋರ್ಟ್‌, ದೇಶದ ಮತ್ತು ಧಾರ್ಮಿಕ ಗುಂಪುಗಳ ಮಧ್ಯೆಯಿರುವ ಮೂಲಭೂತ ಸಂಬಂಧದ ಕುರಿತಾಗಿ ಹೇಳಿಕೆಯನ್ನು ನೀಡಲು ಈ ಸಂದರ್ಭವನ್ನು ಉಪಯೋಗಿಸಿಕೊಂಡಿತು. ಪ್ರಧಾನವಾಗಿ, ಒಂದು ಧರ್ಮದ ಸ್ಥಾನಮಾನ, “ಅದರ ನಂಬಿಕೆಗಳಿಂದಲ್ಲ, ಬದಲಾಗಿ ಅದರ ನಡತೆಯಿಂದ ನಿರ್ಧರಿಸಲ್ಪಡುತ್ತದೆ.”

ಸಾಕ್ಷಿಗಳು “ಕ್ರೈಸ್ತ ತಾಟಸ್ಥ್ಯ”ವನ್ನು ಪಾಲಿಸುತ್ತಿರುವಾಗ, ಅವರು “ಪ್ರಜಾಪ್ರಭುತ್ವದ ಮೂಲತತ್ತ್ವಗಳ ಮೇಲೆ ಆಕ್ರಮಣಮಾಡುವುದಿಲ್ಲ” ಮತ್ತು “ಪ್ರಜಾಪ್ರಭುತ್ವವನ್ನು ಮತ್ತೊಂದು ರೀತಿಯ ಸರ್ಕಾರದಿಂದ ಸ್ಥಾನಪಲ್ಲಟಮಾಡಲು ಬಯಸುವುದಿಲ್ಲ” ಎಂಬುದನ್ನು ಸಹ ಕೋರ್ಟ್‌ ಹೇಳಿತು. ಆದುದರಿಂದ, ರಾಜಕೀಯ ಚುನಾವಣೆಗಳಲ್ಲಿ ಅವರು ಭಾಗವಹಿಸದೇ ಇರುವುದನ್ನು, ಕಾನೂನುಬದ್ಧ ಅಂಗೀಕಾರಕ್ಕಾಗಿರುವ ಸಾಕ್ಷಿಗಳ ಕೋರಿಕೆಯ ವಿರುದ್ಧವಾದ ಸಾಕ್ಷ್ಯವಾಗಿ ಉಪಯೋಗಿಸಬಾರದು.​—ಯೋಹಾನ 18:36; ರೋಮಾಪುರ 13:1.

ಆ ಕೋರ್ಟ್‌ ಇನ್ನೂ ತಿಳಿಸಿದ್ದೇನೆಂದರೆ, ಒಬ್ಬ ವಿಶ್ವಾಸಿಯು​—ಸಾಕ್ಷಿಯಾಗಿರಲಿ ಅಥವಾ ಬೇರೆ ಧರ್ಮದವನಾಗಿರಲಿ​—ದೇಶದ ವಿಧಿಗಳು ಮತ್ತು ತನ್ನ ನಂಬಿಕೆಯ ಆವಶ್ಯಕತೆಗಳು ಪರಸ್ಪರ ವಿರೋಧಿಸುವಂಥ ಸನ್ನಿವೇಶದಲ್ಲಿ ಕೆಲವೊಮ್ಮೆ ಸಿಕ್ಕಿಕೊಂಡಿರುವುದನ್ನು ಕಂಡುಕೊಳ್ಳಬಹುದು. ಆ ವ್ಯಕ್ತಿಯು ತನ್ನ ಮನಸ್ಸಾಕ್ಷಿಯನ್ನು ಹಿಂಬಾಲಿಸುತ್ತಾ, “ಕಾನೂನಿಗಿಂತ ಹೆಚ್ಚಾಗಿ ಧಾರ್ಮಿಕ ನಂಬಿಕೆಗಳಿಗೆ ವಿಧೇಯನಾಗುವುದಾದರೆ,” ದೇಶವು ಇದನ್ನು ನ್ಯಾಯಸಮ್ಮತವೆಂದು ತೆಗೆದುಕೊಂಡು, ಇದು ಧಾರ್ಮಿಕ ಸ್ವಾತಂತ್ರ್ಯದ ಮೇರೆಯೊಳಗೇ ಇದೆ ಎಂದು ಪರಿಗಣಿಸಬಹುದು.​—ಅ. ಕೃತ್ಯಗಳು 5:29.

ಕೋರ್ಟಿನ ಈ ತೀರ್ಮಾನವು ವಾರ್ತಾಮಾಧ್ಯಮಗಳ ಮುಖ್ಯಾಂಶವಾಯಿತು. ಜರ್ಮನಿಯ ವಾರ್ತಾಪತ್ರಿಕೆಗಳಲ್ಲಿ, ಈ ಮೊಕದ್ದಮೆಯ ಕುರಿತಾದ ವರದಿ ಇಲ್ಲದಿದ್ದ ಒಂದೇ ಒಂದು ವಾರ್ತಾಪತ್ರಿಕೆಯನ್ನು ನೋಡುವುದು ಕಷ್ಟಕರವಾಗಿತ್ತು. ಎಲ್ಲ ಪ್ರಧಾನ ಟೆಲಿವಿಷನ್‌ ಮತ್ತು ರೇಡಿಯೋ ಕೇಂದ್ರಗಳು, ವರದಿಗಳನ್ನು ಅಥವಾ ಸಂದರ್ಶನಗಳನ್ನು ಪ್ರಸಾರಮಾಡಿದವು. ಜರ್ಮನಿಯಲ್ಲಿ ಯೆಹೋವನ ನಾಮಕ್ಕೆ ಈ ರೀತಿಯ ವಿಸ್ತಾರವಾದ ಪ್ರಚಾರವು ಹಿಂದೆಂದೂ ಸಿಕ್ಕಿರಲಿಲ್ಲ.

[ಪುಟ 8ರಲ್ಲಿರುವ ಚಿತ್ರ ಕೃಪೆ]

AP Photo/Daniel Maurer