ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆಚ್ಚಿನ ಯುವ ಜನರು ಆಸಕ್ತಿ ತೋರಿಸದಂತಹ ಒಂದು ಪುಸ್ತಕ

ಹೆಚ್ಚಿನ ಯುವ ಜನರು ಆಸಕ್ತಿ ತೋರಿಸದಂತಹ ಒಂದು ಪುಸ್ತಕ

ಹೆಚ್ಚಿನ ಯುವ ಜನರು ಆಸಕ್ತಿ ತೋರಿಸದಂತಹ ಒಂದು ಪುಸ್ತಕ

“ಬೈಬಲ್‌ ನಿಜವಾಗಿಯೂ ದೇವರ ವಾಕ್ಯವಾಗಿದೆಯೋ ಇಲ್ಲವೋ ಎಂದು ನನಗೆ ಹೇಗೆ ಗೊತ್ತು? ಆ ಪುಸ್ತಕದಲ್ಲಿ ನನಗೆ ಆಸಕ್ತಿಯೇ ಇಲ್ಲ” ಎಂದು ಬಿಆಟ ಎಂಬ ಹೆಸರಿನ ಒಬ್ಬ ಯುವತಿಯು ಹೇಳಿದಳು.

ಬಿಆಟಳು ಎಲ್ಲಿ ಜೀವಿಸುತ್ತಿದ್ದಾಳೊ ಆ ಜರ್ಮನಿಯಲ್ಲಿನ ಅಧಿಕಾಂಶ ಯುವ ಜನರಿಗೆ ಅವಳಂತಹದ್ದೇ ಅನಿಸಿಕೆಗಳಿವೆ. ಆದುದರಿಂದ, ಬೈಬಲನ್ನು ಓದುವುದು ತುಂಬ ಪ್ರಾಮುಖ್ಯವಾಗಿದೆ ಎಂದು ಅವರು ನೆನಸುವುದಿಲ್ಲ. ಇತ್ತೀಚಿನ ಸಮೀಕ್ಷೆಯೊಂದು ಪ್ರಕಟಪಡಿಸಿದ್ದೇನೆಂದರೆ, ಯುವ ಜನರಲ್ಲಿ ಹೆಚ್ಚುಕಡಿಮೆ 1 ಪ್ರತಿಶತ ಮಂದಿ ಆಗಿಂದಾಗ್ಗೆ ಬೈಬಲನ್ನು ಓದುತ್ತಾರೆ, 2 ಪ್ರತಿಶತ ಮಂದಿ ಕೆಲವೊಮ್ಮೆ ಮಾತ್ರ ಓದುತ್ತಾರೆ, 19 ಪ್ರತಿಶತ ಮಂದಿ ತುಂಬ ಅಪರೂಪವಾಗಿ ಓದುತ್ತಾರೆ, ಮತ್ತು ಸುಮಾರು 80 ಪ್ರತಿಶತ ಮಂದಿ ಅದನ್ನು ಎಂದೂ ಓದುವುದೇ ಇಲ್ಲ. ಬೇರೆ ದೇಶಗಳಲ್ಲಿ, ಬಹುಶಃ ನೀವು ಜೀವಿಸುತ್ತಿರುವ ದೇಶದಲ್ಲೂ ಇದೇ ರೀತಿಯ ಸಂಖ್ಯಾಸಂಗ್ರಹಣಗಳು ಇರಬಹುದು. ಬೈಬಲ್‌, ಅಧಿಕಾಂಶ ಯುವ ಜನರು ಆಸಕ್ತಿ ತೋರಿಸದಂತಹ ಒಂದು ಪುಸ್ತಕವಾಗಿದೆ ಎಂಬುದಂತೂ ಸ್ಪಷ್ಟ.

ಹೀಗಿರುವುದರಿಂದ ಒಟ್ಟಿನಲ್ಲಿ ಹೇಳುವುದಾದರೆ, ಇಂದಿನ ಯುವ ಪೀಳಿಗೆಗೆ ಬೈಬಲಿನ ಕುರಿತು ಏನೂ ತಿಳಿದಿಲ್ಲ ಎಂಬುದರಲ್ಲಿ ಆಶ್ಚರ್ಯವೇನಿಲ್ಲ! ಎಷ್ಟು ಜನರಿಗೆ ದಶಾಜ್ಞೆಗಳು ಚಿರಪರಿಚಿತವಾಗಿದ್ದವು ಮತ್ತು ಎಷ್ಟು ಜನರು ಅವುಗಳನ್ನು ತಮ್ಮ ಜೀವಿತದಲ್ಲಿ ಮಾರ್ಗದರ್ಶಕವಾಗಿ ಉಪಯೋಗಿಸಿದರು ಎಂಬುದನ್ನು ಬಯಲುಪಡಿಸಿದಂತಹ ಒಂದು ಸಮೀಕ್ಷೆಯ ಕುರಿತು, 2000 ಇಸವಿಯ ಆರಂಭದಲ್ಲಿ ಲೌಸಿಟ್ಸ ರುಂಟ್‌ಷೌ ಎಂಬ ವಾರ್ತಾಪತ್ರಿಕೆಯು ವರದಿಸಿತು. 60ಕ್ಕಿಂತಲೂ ಹೆಚ್ಚಿನ ಪ್ರಾಯದ ಜನರಲ್ಲಿ 67 ಪ್ರತಿಶತ ಮಂದಿಗೆ ದಶಾಜ್ಞೆಗಳು ಗೊತ್ತಿದ್ದವು ಮತ್ತು ಅವರು ಅವುಗಳಿಂದ ಮಾರ್ಗದರ್ಶಿಸಲ್ಪಟ್ಟಿದ್ದರು; 30ಕ್ಕಿಂತ ಕಡಿಮೆ ಪ್ರಾಯದ ಜನರಲ್ಲಿ ಕೇವಲ 28 ಪ್ರತಿಶತ ಮಂದಿಗೆ ಮಾತ್ರ ದಶಾಜ್ಞೆಗಳು ಗೊತ್ತಿದ್ದವು. ಖಂಡಿತವಾಗಿಯೂ ಅನೇಕ ಯುವ ಜನರಿಗೆ ದೇವರ ವಾಕ್ಯವು ಅಪರಿಚಿತವಾದ ಜ್ಞಾನ ಕ್ಷೇತ್ರವಾಗಿದೆ.

ಕೆಲವರಿಗೆ ಭಿನ್ನವಾದ ನೋಟವಿದೆ

ಇನ್ನೊಂದು ಕಡೆಯಲ್ಲಿ, ಲೋಕದಾದ್ಯಂತ ದೇವರ ವಾಕ್ಯವು ಅತ್ಯಂತ ಅಮೂಲ್ಯವಾಗಿದೆ ಎಂದು ಕಂಡುಕೊಂಡಿರುವಂತಹ ಲಕ್ಷಾಂತರ ಯುವ ಜನರಿದ್ದಾರೆ. ಉದಾಹರಣೆಗೆ, ಅಲೆಕ್ಸಾಂಡರ್‌ 19 ವರ್ಷ ಪ್ರಾಯದವನಾಗಿದ್ದು, ಪ್ರತಿ ದಿನ ಬೆಳಗ್ಗೆ ಕೆಲಸಕ್ಕೆ ಹೋಗುವ ಮೊದಲು ಬೈಬಲನ್ನು ಓದುತ್ತಾನೆ. “ನನಗಾದರೋ, ದಿನವನ್ನು ಅತ್ಯುತ್ತಮವಾಗಿ ಆರಂಭಿಸುವ ವಿಧವು ಇದೇ ಆಗಿದೆ” ಎಂದು ಅವನು ಹೇಳುತ್ತಾನೆ. ಸ್ಯಾಂಡ್ರಳು ಪ್ರತಿ ದಿನ ಸಾಯಂಕಾಲ ಬೈಬಲಿನ ಒಂದು ಭಾಗವನ್ನು ಓದುವ ರೂಢಿಯನ್ನು ಮಾಡಿಕೊಂಡಿದ್ದಾಳೆ. “ಇದು ನನ್ನ ದಿನಚರಿಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ” ಎಂದು ಅವಳು ವಿವರಿಸುತ್ತಾಳೆ. ಮತ್ತು 13 ವರ್ಷ ಪ್ರಾಯದ ಯೂಲ್ಯಾ, ರಾತ್ರಿ ಮಲಗುವುದಕ್ಕೆ ಮೊದಲು ಬೈಬಲಿನಿಂದ ಕಡಿಮೆಪಕ್ಷ ಒಂದು ಅಧ್ಯಾಯವನ್ನಾದರೂ ಓದುವ ರೂಢಿಯನ್ನು ಬೆಳೆಸಿಕೊಂಡಿದ್ದಾಳೆ. “ನಿಜವಾಗಿಯೂ ನಾನು ಇದರಲ್ಲಿ ಆನಂದಿಸುತ್ತೇನೆ, ಮತ್ತು ಮುಂದೆಯೂ ಇದೇ ರೂಢಿಯನ್ನು ಮುಂದುವರಿಸಿಕೊಂಡು ಹೋಗಲು ಬಯಸುತ್ತೇನೆ.”

ಯಾರ ದೃಷ್ಟಿಕೋನವು ಸರಿಯಾದದ್ದು ಮತ್ತು ವಿವೇಕಯುತವಾದದ್ದಾಗಿದೆ? ನಿಜವಾಗಿಯೂ ಬೈಬಲು ಓದಲು ಅರ್ಹವಾದದ್ದಾಗಿದೆಯೋ? ಯುವ ಪೀಳಿಗೆಗೆ ಇದು ಅಮೂಲ್ಯವೂ ಪ್ರಾಮುಖ್ಯವೂ ಆದದ್ದಾಗಿದೆಯೋ? ನಿಮ್ಮ ಅಭಿಪ್ರಾಯವೇನು?