ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದುಕಾಲದಲ್ಲಿ ತೋಳಗಳಾಗಿದ್ದೆವು, ಆದರೆ ಈಗ ಕುರಿಗಳಾಗಿದ್ದೇವೆ!

ಒಂದುಕಾಲದಲ್ಲಿ ತೋಳಗಳಾಗಿದ್ದೆವು, ಆದರೆ ಈಗ ಕುರಿಗಳಾಗಿದ್ದೇವೆ!

ಒಂದುಕಾಲದಲ್ಲಿ ತೋಳಗಳಾಗಿದ್ದೆವು, ಆದರೆ ಈಗ ಕುರಿಗಳಾಗಿದ್ದೇವೆ!

ಬಾಲ್ಯದಲ್ಲಿ ಸಕೀನ ಮತ್ತು ನಾನು ನೆರೆಯವರಾಗಿದ್ದೆವು. ಸಕೀನ ಗಟ್ಟಿಮುಟ್ಟಾದ ಎತ್ತರ ಮೈಕಟ್ಟಿನವಳು, ಆದರೆ ನಾನು ತೆಳ್ಳಗಾದ ಕುಳ್ಳು ಮೈಕಟ್ಟಿನವಳಾಗಿದ್ದೆ. ನಾವು ಯಾವಾಗಲೂ ಕಚ್ಚಾಡುತ್ತಿರುತ್ತಿದ್ದೆವು. ಆದರೆ ಒಮ್ಮೆ ನಮ್ಮಿಬ್ಬರ ನಡುವೆ ಒಂದು ದೊಡ್ಡ ಜಗಳವಾಯಿತು. ಆ ದಿನದಿಂದ ಹಿಡಿದು, ನಾವು ಒಬ್ಬರಿನ್ನೊಬ್ಬರೊಂದಿಗೆ ಮಾತಾಡುತ್ತಿರಲೂ ಇಲ್ಲ, ಮತ್ತು ವಂದಿಸುತ್ತಿರಲೂ ಇಲ್ಲ. ಕ್ರಮೇಣವಾಗಿ ನಾವಿಬ್ಬರೂ ಬೇರೆ ಬೇರೆ ಸ್ಥಳಗಳಿಗೆ ಹೋದೆವು ಮತ್ತು ಹೀಗೆ ನಾನೆಲ್ಲಿದ್ದೇನೆಂದು ಅವಳಿಗೆ ಗೊತ್ತಿರಲಿಲ್ಲ ಹಾಗೂ ಅವಳು ಎಲ್ಲಿದ್ದಾಳೆಂಬುದು ನನಗೆ ಗೊತ್ತಿರಲಿಲ್ಲ.

ನಾನು 1994ರಲ್ಲಿ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಭ್ಯಾಸಮಾಡುವುದನ್ನು ಆರಂಭಿಸಿದೆ, ಮತ್ತು ಸ್ವಲ್ಪಸ್ವಲ್ಪವಾಗಿ ನನ್ನ ವ್ಯಕ್ತಿತ್ವವು ಬದಲಾಗತೊಡಗಿತು. ನಾಲ್ಕು ವರ್ಷಗಳ ನಂತರ, ನಾನು ಬುರುಂಡಿಯ ಬೂಜಂಬೂರದಲ್ಲಿ ನಮ್ಮ ವಿಶೇಷ ಸಮ್ಮೇಳನ ದಿನವನ್ನು ಹಾಜರಾಗುತ್ತಿದ್ದಾಗ ಅಲ್ಲಿ ಸಕೀನಳನ್ನು ನೋಡಿ ಚಕಿತಳಾದೆ. ಅವಳು ಅಲ್ಲಿದ್ದದ್ದನ್ನು ನೋಡಿ ನನಗೆ ತುಂಬ ಸಂತೋಷವಾಯಿತಾದರೂ, ನಾವು ಪರಸ್ಪರರನ್ನು ತುಂಬ ಉತ್ಸಾಹದಿಂದ ವಂದಿಸಲಿಲ್ಲ. ಅನಂತರ ಅದೇ ದಿನದಂದು ಅವಳು ದೀಕ್ಷಾಸ್ನಾನದ ಅಭ್ಯರ್ಥಿಗಳ ನಡುವೆಯಿರುವುದನ್ನು ನೋಡಿದಾಗ ನಾನು ದಂಗಾದೆ! ಅವಳು ಸಹ ತುಂಬ ಬದಲಾಗಿಬಿಟ್ಟಿದ್ದಳು. ಅವಳೀಗ ನಾನು ಎಷ್ಟೋ ಸಾರಿ ಕಚ್ಚಾಡಿದ್ದಂಥ, ಜಗಳಗಂಟಿ ಸ್ವಭಾವದ ವ್ಯಕ್ತಿಯಾಗಿರಲಿಲ್ಲ. ಅವಳು ದೇವರಿಗೆ ಸಮರ್ಪಣೆ ಮಾಡಿದ್ದಾಳೆಂಬುದನ್ನು, ನೀರಿನ ದೀಕ್ಷಾಸ್ನಾನದ ಮೂಲಕ ಬಹಿರಂಗವಾಗಿ ರುಜುಪಡಿಸುವುದನ್ನು ನೋಡುವುದು ಎಷ್ಟು ಸಂತೋಷಕರ ಸಂಗತಿಯಾಗಿತ್ತು!

ಅವಳು ನೀರಿನಿಂದ ಹೊರಬಂದ ನಂತರ ನಾನು ಅವಳ ಬಳಿ ಓಡಿ, ಅವಳನ್ನು ಅಪ್ಪಿಕೊಂಡು, “ನಾವು ಎಷ್ಟೊಂದು ಜಗಳಾಡುತ್ತಿದ್ದೆವೆಂಬುದು ನಿನಗೆ ನೆನಪಿದೆಯಾ?” ಎಂದು ಅವಳ ಕಿವಿಗಳಲ್ಲಿ ಪಿಸುಗುಟ್ಟಿದೆ. “ಹೌದು, ನನಗೆ ನೆನಪಿದೆ, ಆದರೆ ಅದು ಈಗ ಹಳೆಯ ಕಥೆ. ನಾನೀಗ ಒಬ್ಬ ಹೊಸ ವ್ಯಕ್ತಿಯಾಗಿದ್ದೇನೆ” ಎಂದು ಹೇಳಿದಳು.

ಜನರನ್ನು ಐಕ್ಯಗೊಳಿಸುವ ಬೈಬಲ್‌ ಸತ್ಯವನ್ನು ಕಂಡುಹಿಡಿದು, ನಮಗಿದ್ದ ತೋಳಗಳಂಥ ವ್ಯಕ್ತಿತ್ವಗಳನ್ನು, ಮಹಾ ಕುರುಬನಾಗಿರುವ ಯೆಹೋವ ದೇವರಿಗೆ ಸೇರಿರುವ ಕುರಿಗಳ ವ್ಯಕ್ತಿತ್ವಗಳಾಗಿ ಬದಲಾಯಿಸಿಕೊಂಡದ್ದಕ್ಕಾಗಿ ನಾವಿಬ್ಬರೂ ಸಂತೋಷಿತರಾಗಿದ್ದೇವೆ. ನಿಜವಾಗಿಯೂ ಬೈಬಲ್‌ ಸತ್ಯವು ಜನರ ಜೀವಿತಗಳನ್ನು ಬದಲಾಯಿಸುತ್ತದೆ.