ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೃತಜ್ಞರಾಗಿರಿ ಮತ್ತು ಸಂತೋಷಪಡಿರಿ

ಕೃತಜ್ಞರಾಗಿರಿ ಮತ್ತು ಸಂತೋಷಪಡಿರಿ

ಕೃತಜ್ಞರಾಗಿರಿ ಮತ್ತು ಸಂತೋಷಪಡಿರಿ

“ಕೃತಜ್ಞತೆಯೆಂಬ ಪ್ರಚೋದನೆಯು ಮಾನವನ ಮೂಲಭೂತ ಅನುಭವವಾಗಿದೆ” ಎಂದು ಕೆನಡದ ವಾರ್ತಾಪತ್ರಿಕೆಯಾದ ಕ್ಯಾಲ್‌ಗರೀ ಹೆರಲ್ಡ್‌ ಹೇಳಿತು. ಒಂಬತ್ತು ವರ್ಷ ಪ್ರಾಯದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಅವರು ಯಾವೆಲ್ಲಾ ವಿಷಯಗಳಿಗಾಗಿ ಕೃತಜ್ಞತೆಯನ್ನು ತೋರಿಸಲು ಬಯಸುವರು ಎಂಬುದನ್ನು ಬರೆಯುವಂತೆ ಶಿಕ್ಷಕರಿಂದ ಕೇಳಲ್ಪಟ್ಟದ್ದರ ಕುರಿತು ಹೆರಲ್ಡ್‌ ಉಲ್ಲೇಖಿಸಿತು. ತನ್ನ ಕುಟುಂಬಕ್ಕೆ ಕೃತಜ್ಞನಾಗಿರುವೆನು, ‘ಏಕೆಂದರೆ ಅವರು ಅವನ ಆರೈಕೆ ಮಾಡಿದ್ದಾರೆ’ ಎಂದು ಒಬ್ಬ ಹುಡುಗನು ಹೇಳಿದನು. ಒಬ್ಬ ಚಿಕ್ಕ ಹುಡುಗಿಯು ಕೂಡ ತನ್ನ ಕುಟುಂಬಕ್ಕೆ ಕೃತಜ್ಞಳಾಗಿದ್ದಳು. ಅವಳು ಹೇಳಿದ್ದು: “ಅವರು ನನಗೆ ಭದ್ರತೆ ನೀಡುತ್ತಾರೆ, ನನ್ನನ್ನು ಆರೋಗ್ಯವಾಗಿಟ್ಟಿದ್ದಾರೆ, ನನ್ನನ್ನು ಅಕ್ಕರೆಯಿಂದ ನೋಡಿಕೊಳ್ಳುತ್ತಾರೆ, ನನ್ನನ್ನು ಪ್ರೀತಿಸುತ್ತಾರೆ, ಪೋಷಿಸುತ್ತಾರೆ, ಮತ್ತು ನನ್ನ ಹೆತ್ತವರು ಇಲ್ಲದಿರುತ್ತಿದ್ದಲ್ಲಿ ನಾನು ಈ ಭೂಮಿಯಲ್ಲೇ ಇರುತ್ತಿರಲಿಲ್ಲ.”

ಕೃತಘ್ನತೆಯು ತೀವ್ರವಾದ ಆಶಾಭಂಗಕ್ಕೆ ನಡೆಸುತ್ತದೆ. ತತ್ತ್ವಜ್ಞಾನಿ-ದೇವತಾಶಾಸ್ತ್ರಜ್ಞರಾದ ಜೆ. ಐ. ಪಾಕರ್‌ಗನುಸಾರ, “ನಾವು ದೇವರ ಮೇಲೆಮತ್ತು ಪರಸ್ಪರ ಒಬ್ಬೊಬ್ಬರ ಮೇಲೆ ಅವಲಂಬಿಸಿ ಜೀವಿಸುವಂಥ ರೀತಿಯಲ್ಲಿ ಸೃಷ್ಟಿಸಲ್ಪಟ್ಟಿದ್ದೇವೆ.” ಇದು ಶತಕಗಳ ಮುಂಚೆ ನೀಡಲ್ಪಟ್ಟ ಬೈಬಲಿನ ವಿವೇಕಯುತ ಬುದ್ಧಿವಾದವನ್ನು ನೆನಪಿಗೆ ತರುತ್ತದೆ. ಅದು ಹೇಳುವದು: “ಕೃತಜ್ಞತೆಯುಳ್ಳವರಾಗಿರ್ರಿ.” (ಕೊಲೊಸ್ಸೆ 3:15) ಬೇರೆಯವರ ಕಡೆಗಿನ ಉಪಕಾರ ಸ್ಮರಣೆಯ ಮತ್ತು ಹೃತ್ಪೂರ್ವಕ ಕೃತಜ್ಞತೆಯ ಅಭಿವ್ಯಕ್ತಿಗಳು, ಪ್ರೀತಿಪರ ಸಂಬಂಧಗಳನ್ನು ಬೆಳೆಸಿಕೊಳ್ಳಲು ಸಹಾಯಮಾಡುವವು.

ಅಷ್ಟುಮಾತ್ರವಲ್ಲದೆ, ಕೃತಜ್ಞತೆ ತೋರಿಸುವ ಮೂಲಕ ಮತ್ತು ಒಬ್ಬರನ್ನೊಬ್ಬರು ಅಮೂಲ್ಯವಾಗಿ ಪರಿಗಣಿಸುವ ಮೂಲಕ, ನಾವು ಯೆಹೋವನಿಗೂ ಕೃತಜ್ಞತೆಯನ್ನು ತೋರಿಸುತ್ತೇವೆ ಮತ್ತು ಆತನು ಇದನ್ನು ಗಮನಿಸುತ್ತಾನೆ. ಬೈಬಲ್‌ ಹೇಳುವುದು: “ಯೆಹೋವನು ಭೂಲೋಕದ ಎಲ್ಲಾ ಕಡೆಗಳಲ್ಲಿಯೂ ದೃಷ್ಟಿಯನ್ನು ಪ್ರಸರಿಸುತ್ತಾ ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು ತೋರ್ಪಡಿಸುತ್ತಾನೆ.” (2 ಪೂರ್ವಕಾಲವೃತ್ತಾಂತ 16:9) ತನ್ನ ನಾಮಕ್ಕೆ ಮಾನವರು ತೋರಿಸುವಂಥ ಪ್ರೀತಿಯನ್ನು ತಾನು ಜ್ಞಾಪಕದಲ್ಲಿಟ್ಟುಕೊಳ್ಳುತ್ತೇನೆ ಮತ್ತು ಗಣ್ಯಮಾಡುತ್ತೇನೆ ಎಂಬ ಆಶ್ವಾಸನೆಯನ್ನು ದೇವರೇ ಕೊಡುತ್ತಾನೆ. (ಇಬ್ರಿಯ 6:10) ಹೌದು, ಈ ದೈವಿಕ ಸದ್ಗುಣಕ್ಕಾಗಿ ನಾವು ಕೃತಜ್ಞತೆಯನ್ನು ತೋರಿಸಲು ಸಕಾರಣವಿದೆ. ಮತ್ತು ಇದನ್ನು ಪ್ರತಿನಿತ್ಯ ವ್ಯಕ್ತಪಡಿಸುವಾಗ, ಇದು ಯೆಹೋವನಿಗೆ ಸಂತೋಷವನ್ನು ಉಂಟುಮಾಡುತ್ತದೆ ಹಾಗೂ ನಮ್ಮ ಸಂತೋಷವನ್ನೂ ಹೆಚ್ಚಿಸುತ್ತದೆ. ಇದು ಜ್ಞಾನೋಕ್ತಿ 15:13 ಹೇಳುವಂತೆಯೇ ಇದೆ: “ಹರ್ಷಹೃದಯದಿಂದ ಹಸನ್ಮುಖ.”