ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

“ಸರ್ವವು ಆತನ ಮುಖಾಂತರವಾಗಿಯೂ ಆತನಿಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು” ಎಂದು, ಕೊಲೊಸ್ಸೆ 1:​16ನೆಯ ವಚನವು ದೇವರ ಮಗನ ಕುರಿತಾಗಿ ಹೇಳುತ್ತದೆ. ಯಾವ ಅರ್ಥದಲ್ಲಿ ಸರ್ವವು “ಆತನಿಗೋಸ್ಕರವಾಗಿ” ಅಂದರೆ ದೇವರ ಮಗನಾದ ಯೇಸುವಿಗಾಗಿ ಸೃಷ್ಟಿಸಲ್ಪಟ್ಟಿತು?

ಸ್ವತಃ ಯೇಸುವನ್ನು ಬಿಟ್ಟು, ಸರ್ವವನ್ನೂ ಸೃಷ್ಟಿಸಲಿಕ್ಕಾಗಿ ಯೆಹೋವನು ತನ್ನ ಏಕಜಾತ ಪುತ್ರನನ್ನು ಕುಶಲಕರ್ಮಿಯೋಪಾದಿ ಉಪಯೋಗಿಸಿದನು. (ಜ್ಞಾನೋಕ್ತಿ 8:27-30, NW; ಯೋಹಾನ 1:3) ಸೂಕ್ತವಾಗಿಯೇ, ಈ ಕಾರ್ಯಗಳಿಂದ ಮಗನು ಆನಂದವನ್ನು ಕಂಡುಕೊಳ್ಳುತ್ತಾನೆ, ಮತ್ತು ಈ ಅರ್ಥದಲ್ಲಿ ಅವು “ಆತನಿಗೋಸ್ಕರವಾಗಿ” ಮಾಡಲ್ಪಟ್ಟಿವೆ.

ಮಾನವ ಹೆತ್ತವರು ತಾವು ಏನನ್ನು ಉತ್ಪಾದಿಸುತ್ತಾರೋ ಅದರಿಂದ, ಅಂದರೆ ತಮ್ಮ ಗಂಡುಹೆಣ್ಣುಮಕ್ಕಳಿಂದ ಆನಂದವನ್ನು ಕಂಡುಕೊಳ್ಳಲು ಬಯಸುತ್ತಾರೆ ಮತ್ತು ಅನೇಕವೇಳೆ ಅದನ್ನು ಕಂಡುಕೊಳ್ಳುತ್ತಾರೆ. ಆದುದರಿಂದ, ‘ತನ್ನ ಮಗನಲ್ಲಿ ಆನಂದವನ್ನು ಕಂಡುಕೊಳ್ಳುವ ತಂದೆಯ ಕುರಿತಾಗಿ’ ಒಂದು ಬೈಬಲ್‌ ಜ್ಞಾನೋಕ್ತಿಯು ತಿಳಿಸುತ್ತದೆ. (ಜ್ಞಾನೋಕ್ತಿ 3:​12, NW; 29:17) ತದ್ರೀತಿಯಲ್ಲಿ, ತನ್ನ ಜನರಾದ ಇಸ್ರಾಯೇಲ್ಯರು ನಂಬಿಗಸ್ತರಾಗಿದ್ದಾಗ ಯೆಹೋವನು ಅವರಲ್ಲಿ ಸಂತೋಷವನ್ನು ಕಂಡುಕೊಂಡನು. (ಕೀರ್ತನೆ 44:3; 119:108; 147:11) ಈಗ ನಮ್ಮ ಕಾಲದ ನಿಷ್ಠಾವಂತರ ನಂಬಿಗಸ್ತಿಕೆಯಿಂದಲೂ ಆತನು ಸಂತೋಷವನ್ನು ಕಂಡುಕೊಳ್ಳುತ್ತಾನೆ.​—ಜ್ಞಾನೋಕ್ತಿ 12:22; ಇಬ್ರಿಯ 10:38.

ಆದುದರಿಂದ, ದೇವರು ತನ್ನ ಜೊತೆಕೆಲಸಗಾರನಾದ ಯೇಸು ತನ್ನ ಸಾಧನೆಗಳಿಂದ ಆನಂದವನ್ನು ಕಂಡುಕೊಳ್ಳುವಂತೆ ಬಿಡುವುದು ಸೂಕ್ತವಾದದ್ದಾಗಿತ್ತು. ವಾಸ್ತವದಲ್ಲಿ, ಜ್ಞಾನೋಕ್ತಿ 8:​31ನೆಯ ವಚನವು, ಮಗನು ‘ಭೂಲೋಕದಲ್ಲಿ ಉಲ್ಲಾಸಿಸುತ್ತಾ ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದನು’ ಎಂದು ಹೇಳುತ್ತದೆ. ಆದುದರಿಂದ, ಈ ಅರ್ಥದಲ್ಲಿ ಕೊಲೊಸ್ಸೆ 1:​16, “ಸರ್ವವು ಆತನ ಮುಖಾಂತರವಾಗಿಯೂ ಆತನಿಗೋಸ್ಕರವಾಗಿಯೂ ಸೃಷ್ಟಿಸಲ್ಪಟ್ಟಿತು” ಎಂದು ಹೇಳುತ್ತದೆ.​—ಓರೆ ಅಕ್ಷರಗಳು ನಮ್ಮವು.