ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಧ್ಯ ಆಫ್ರಿಕದಲ್ಲಿ ದೈವಿಕ ನಾಮವು ಉಪಯೋಗಿಸಲ್ಪಡುತ್ತದೆ

ಮಧ್ಯ ಆಫ್ರಿಕದಲ್ಲಿ ದೈವಿಕ ನಾಮವು ಉಪಯೋಗಿಸಲ್ಪಡುತ್ತದೆ

ಮಧ್ಯ ಆಫ್ರಿಕದಲ್ಲಿ ದೈವಿಕ ನಾಮವು ಉಪಯೋಗಿಸಲ್ಪಡುತ್ತದೆ

ಮಧ್ಯ ಆಫ್ರಿಕದಲ್ಲಿರುವ ಅಧಿಕಾಂಶ ಜನರು ದೇವರಲ್ಲಿ ನಂಬಿಕೆಯನ್ನಿಟ್ಟಿದ್ದಾರೆ. ಸಮಸ್ತವನ್ನೂ ಸೃಷ್ಟಿಸಿದಾತನು ಆತನೇ ಎಂಬುದರಲ್ಲಿ ಅವರಿಗೆ ಯಾವುದೇ ಸಂದೇಹವಿಲ್ಲ. (ಪ್ರಕಟನೆ 4:11) ಆದರೂ, ಎಲ್ಲೆಡೆಯೂ ಇರುವ ಅನೇಕ ಜನರಂತೆಯೇ, ಅವರು ಅನೇಕ ಬಾರಿ ಯೆಹೋವ ಎಂಬ ಆತನ ವೈಯಕ್ತಿಕ ನಾಮವನ್ನು ಅಲಕ್ಷಿಸುತ್ತಾರೆ.

ಮಧ್ಯ ಆಫ್ರಿಕದಲ್ಲಿರುವ ಜನರು ಮಾತ್ರವಲ್ಲದೆ ಭೂಲೋಕದ ಬೇರೆ ಭಾಗಗಳಲ್ಲಿರುವ ಜನರು ಸಹ, “ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ” ಎಂದು ಕರ್ತನ ಪ್ರಾರ್ಥನೆಯಲ್ಲಿ ಅವರು ಹೇಳುವಾಗ, ದೇವರ ನಾಮವನ್ನೇ ಅವರು ಸೂಚಿಸುತ್ತಾರೆ. (ಮತ್ತಾಯ 6:10) ಆದರೆ ಬಹುಕಾಲದಿಂದಲೂ ಕೆಲವರಿಗೆ ಮಾತ್ರ ಆ ಹೆಸರು ಗೊತ್ತಿತ್ತು. ಆದರೆ ವರ್ಷಗಳ ಗತಿಸುವಿಕೆಯೊಂದಿಗೆ, ಯೆಹೋವನ ಸಾಕ್ಷಿಗಳ ಹುರುಪುಳ್ಳ ಪ್ರಚಾರ ಕಾರ್ಯವು ಆ ದೈವಿಕ ನಾಮದ ಉಪಯೋಗದ ವಿಷಯದಲ್ಲಿ ಜನರ ಮನೋಭಾವವನ್ನು ಬದಲಾಯಿಸಿದೆ. ಇಂದು, ಸೂಲು (ಯುಜೆಹೋವ), ಯೆರಬ (ಜೆಹೋಫ), ಕ್ಸೋಸ (ಯುಯೆಹೋವ) ಮತ್ತು ಸ್ವಾಹೀಲಿ (ಯೆಹೋವ) ಎಂಬ ಆಫ್ರಿಕದ ಅನೇಕ ಭಾಷೆಗಳಲ್ಲಿ ಆ ದೈವಿಕ ನಾಮವು ಹೆಚ್ಚು ಪ್ರಖ್ಯಾತವಾಗಿದೆ ಮತ್ತು ಅಂಗೀಕರಿಸಲ್ಪಟ್ಟಿದೆ. ಆದರೂ, ಈ ಭಾಷೆಗಳಲ್ಲಿರುವ ಅನೇಕ ಬೈಬಲ್‌ ಭಾಷಾಂತರಗಳು, ಈ ದೈವಿಕ ನಾಮವನ್ನು ಈಗಲೂ ಉಪಯೋಗಿಸುವುದಿಲ್ಲ.

ದೈವಿಕ ನಾಮವನ್ನು ಉಪಯೋಗಿಸುವ ಒಂದು ಉತ್ತಮವಾದ ಭಾಷಾಂತರವು ಪಾಸಂಡೀ ಭಾಷೆಯ ಬೈಬಲಾಗಿದೆ. ಈ ಭಾಷೆಯು ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌ನ ಕೆಲವು ಭಾಗಗಳಲ್ಲಿ, ಸುಡಾನ್‌ನಲ್ಲಿ ಮತ್ತು ಡೆಮೊಕ್ರ್ಯಾಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊದಲ್ಲಿ ಮಾತಾಡಲ್ಪಡುತ್ತದೆ. ಭೂಲೋಕದ ಆ ಭಾಗದಲ್ಲಿ, ತಮ್ಮ ಮಾತೃಭಾಷೆಯಲ್ಲಿ ಯೆಕೋವ ಎಂಬ ಅಕ್ಷರ ಜೋಡಣೆಯನ್ನು ಕೊಡುತ್ತಾ, ಜನರು ದೇವರ ನಾಮವನ್ನು ಉಪಯೋಗಿಸುತ್ತಾರೆ. ದೇಶೀಯ ಭಾಷೆಯಲ್ಲಿ ದೇವರ ಹೆಸರು ಹೇಗೆ ಉಚ್ಚರಿಸಲ್ಪಡುತ್ತದೆ ಎಂಬುದರ ಕುರಿತು ಚಿಂತಿಸುವ ಬದಲಿಗೆ, ಅದನ್ನು ಉಪಯೋಗಿಸುವುದು ಪ್ರಾಮುಖ್ಯವಾದದ್ದಾಗಿದೆ. ಏಕೆ? ಏಕೆಂದರೆ, “[ಯೆಹೋವನ] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆ”ಯಾಗುವುದು.​—ರೋಮಾಪುರ 10:13.

[ಪುಟ 32ರಲ್ಲಿರುವ ಭೂಪಟ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸುಡಾನ್‌

ಸೆಂಟ್ರಲ್‌ ಆಫ್ರಿಕನ್‌ ರಿಪಬ್ಲಿಕ್‌

ಡೆಮೊಕ್ರ್ಯಾಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊ

[Credit Line]

The Complete Encyclopedia of Illustration/J. G. Heck