ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನ ಆಶೀರ್ವಾದವು ಐಶ್ವರ್ಯದಾಯಕ’

‘ಯೆಹೋವನ ಆಶೀರ್ವಾದವು ಐಶ್ವರ್ಯದಾಯಕ’

‘ಯೆಹೋವನ ಆಶೀರ್ವಾದವು ಐಶ್ವರ್ಯದಾಯಕ’

ನಾವೆಲ್ಲರೂ ಆಶೀರ್ವದಿಸಲ್ಪಡಲು ಬಯಸುತ್ತೇವೆ. ದಿ ಅಮೆರಿಕನ್‌ ಹೆರಿಟೇಜ್‌ ಕಾಲೇಜ್‌ ಡಿಕ್ಷನೆರಿ ಹೇಳುವುದೇನಂದರೆ, ಆಶೀರ್ವಾದಗಳು “ಸಂತೋಷ, ಸುಕ್ಷೇಮ ಅಥವಾ ಸಮೃದ್ಧಿಯನ್ನು” ಪ್ರವರ್ಧಿಸುತ್ತವೆ. ಯೆಹೋವನಿಂದಲೇ “ಎಲ್ಲಾ ಒಳ್ಳೇ ದಾನಗಳೂ ಕುಂದಿಲ್ಲದ ಎಲ್ಲಾ ವರಗಳೂ” ಬರುತ್ತವಾದ್ದರಿಂದ, ನಿಜವಾದ, ಬಾಳುವ ಎಲ್ಲ ಆಶೀರ್ವಾದದ ಮೂಲನು ನಮ್ಮ ಪ್ರಿಯ ಸೃಷ್ಟಿಕರ್ತನೇ ಆಗಿದ್ದಾನೆ. (ಯಾಕೋಬ 1:17) ಆತನು ಸಕಲ ಮಾನವರ ಮೇಲೆ, ಆತನನ್ನು ತಿಳಿಯದವರ ಮೇಲೆ ಸಹ ಆಶೀರ್ವಾದದ ಮಳೆಗರೆಯುತ್ತಾನೆ. ಯೇಸು ತನ್ನ ತಂದೆಯ ಕುರಿತು ಅಂದದ್ದು: “ಆತನು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತನ್ನ ಸೂರ್ಯನು ಮೂಡುವಂತೆ ಮಾಡುತ್ತಾನೆ; ನೀತಿವಂತರ ಮೇಲೆಯೂ ಅನೀತಿವಂತರ ಮೇಲೆಯೂ ಮಳೆಸುರಿಸುತ್ತಾನೆ.” (ಮತ್ತಾಯ 5:45) ಆದರೂ, ತನ್ನನ್ನು ಪ್ರೀತಿಸುವವರಿಗಾಗಿ ಯೆಹೋವನು ವಿಶೇಷ ಚಿಂತೆಯನ್ನು ತೋರಿಸುತ್ತಾನೆ.​—ಧರ್ಮೋಪದೇಶಕಾಂಡ 28:1-14; ಯೋಬ 1:1; 42:12.

ಕೀರ್ತನೆಗಾರನು ಬರೆದದ್ದು: “ಯೆಹೋವದೇವರು . . . ಸದ್ಭಕ್ತರಿಗೆ ಯಾವ ಶುಭವನ್ನು ದಯಪಾಲಿಸದೆ ಇದ್ದಾನು?” (ಕೀರ್ತನೆ 84:11) ಹೌದು, ಯಾರು ಯೆಹೋವನನ್ನು ಸೇವಿಸುತ್ತಾರೋ ಅವರಿಗೆ ಐಶ್ವರ್ಯದಾಯಕವೂ ಉದ್ದೇಶಭರಿತವೂ ಆದ ಜೀವಿತವಿದೆ. “ಯೆಹೋವನ ಆಶೀರ್ವಾದವು ಭಾಗ್ಯದಾಯಕವು [“ಐಶ್ವರ್ಯದಾಯಕ,” NW]; ಅದು ವ್ಯಸನವನ್ನು ಸೇರಿಸದು” ಎಂದು ಅವರಿಗೆ ತಿಳಿದದೆ. “ಯೆಹೋವನ ಆಶೀರ್ವಾದವು ಯಾರಿಗಿರುವದೋ ಅವರು ದೇಶವನ್ನು ಅನುಭವಿಸುವರು” ಎಂದೂ ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 10:22; ಕೀರ್ತನೆ 37:22, 29) ಅದೆಂಥ ಮಹಾ ಆಶೀರ್ವಾದವಾಗಿರುವುದು!

ಯೆಹೋವನ ಆಶೀರ್ವಾದವು ನಮಗೆ ಹೇಗೆ ಪ್ರಾಪ್ತವಾಗಬಲ್ಲದು? ಆತನಿಗೆ ಮೆಚ್ಚಿಕೆಯಾಗಿರುವ ಗುಣಗಳನ್ನು ನಾವು ಬೆಳೆಸಿಕೊಳ್ಳುವ ಮೂಲಕವೇ. (ಧರ್ಮೋಪದೇಶಕಾಂಡ 30:16, 19, 20; ಮೀಕ 6:8) ಪುರಾತನ ಕಾಲದ ಯೆಹೋವನ ಮೂರು ಮಂದಿ ಸೇವಕರ ಮಾದರಿಯಲ್ಲಿ ನಾವಿದನ್ನು ಕಾಣಸಾಧ್ಯವಿದೆ.

ಯೆಹೋವನು ತನ್ನ ಸೇವಕರನ್ನು ಆಶೀರ್ವದಿಸುತ್ತಾನೆ

ನೋಹನು ದೇವರ ಒಬ್ಬ ಎದ್ದುಕಾಣುವ ಸೇವಕನಾಗಿದ್ದನು. ಆದಿಕಾಂಡ 6:8ರಲ್ಲಿ ನಾವು ಓದುವುದು: “ನೋಹನಿಗೆ ಯೆಹೋವನ ದಯವು ದೊರಕಿತು.” ಏಕೆ? ಏಕೆಂದರೆ ನೋಹನು ವಿಧೇಯನಾಗಿದ್ದನು. “ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು” ಎಂದು ವೃತ್ತಾಂತವು ಹೇಳುತ್ತದೆ. ನೋಹನು ಯೆಹೋವನ ನೀತಿಯ ಮೂಲತತ್ತ್ವಗಳನ್ನು ಪಾಲಿಸುತ್ತಾ ಆತನ ಆಜ್ಞೆಗಳಿಗೆ ವಿಧೇಯನಾದನು. ಲೋಕವು ಹಿಂಸಾಚಾರ ಮತ್ತು ನೀತಿಭ್ರಷ್ಟತೆಯಲ್ಲಿ ಮುಳುಗಿ ಹೋಗಿದ್ದ ಒಂದು ಕಾಲದಲ್ಲಿ, ನೋಹನಾದರೋ ‘ದೇವರು ಅಪ್ಪಣೆಕೊಟ್ಟ ಪ್ರಕಾರವೇ ಮಾಡಿದನು.’ (ಆದಿಕಾಂಡ 6:​9, 22) ಪರಿಣಾಮವಾಗಿ, ‘ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಲು’ ಯೆಹೋವನು ನೋಹನಿಗೆ ನಿರ್ದೇಶನವನ್ನು ಕೊಟ್ಟನು. (ಇಬ್ರಿಯ 11:7) ಈ ರೀತಿಯಲ್ಲಿ ನೋಹನೂ ಅವನ ಕುಟುಂಬವೂ ಆ ಸಂತತಿಯ ನಾಶನವನ್ನು ಪಾರಾಗಿ ಉಳಿಯಿತು. ಅವನ ಮೂಲಕ ಮಾನವಜಾತಿಯು ಪಾರಾಗಿ ಉಳಿಯಿತು. ಮತ್ತು ನಿತ್ಯಜೀವದ ಪ್ರತೀಕ್ಷೆಯುಳ್ಳವನಾಗಿ ಪರದೈಸ ಭೂಮಿಯಲ್ಲಿ ಪುನರುತ್ಥಾನವಾಗುವ ನಿರೀಕ್ಷೆಯೊಂದಿಗೆ ನೋಹನು ಮೃತನಾದನು. ಎಂಥ ಮಹತ್ತರವಾದ ಆಶೀರ್ವಾದಗಳನ್ನು ಅವನು ಹೊಂದಿದನು!

ಅಬ್ರಹಾಮನಲ್ಲೂ ದೇವರಿಗೆ ಮೆಚ್ಚಿಗೆಯಾದಂಥ ಗುಣಗಳಿದ್ದವು. ಇವುಗಳಲ್ಲಿ ನಂಬಿಕೆಯು ಪ್ರಧಾನವಾಗಿತ್ತು. (ಇಬ್ರಿಯ 11:8-10) ಅಬ್ರಹಾಮನು ಊರ್‌ ದೇಶದಲ್ಲಿ ಮತ್ತು ಅನಂತರ ಖಾರಾನಿನಲ್ಲಿದ್ದ ಆರಾಮಕರವಾದ ಜೀವನವನ್ನು ಬಿಟ್ಟು ಹೊರಟಿದ್ದು, ಅವನಿಗೆ ಯೆಹೋವನ ವಾಗ್ದಾನದಲ್ಲಿ ನಂಬಿಕೆಯಿದ್ದದ್ದರಿಂದಲೇ. ಅವನ ಸಂತಾನವು ಬಹಳವಾಗಿ ಹೆಚ್ಚುವುದು ಮತ್ತು ಸಕಲ ಮಾನವರಿಗೆ ಆಶೀರ್ವಾದವನ್ನು ತರುವದೆಂಬುದೇ ದೇವರ ವಾಗ್ದಾನವಾಗಿತ್ತು. (ಆದಿಕಾಂಡ 12:2, 3) ಅನೇಕ ವರ್ಷಗಳ ತನಕ ಕಾಯಬೇಕಾಗಿದ್ದರೂ, ಕೊನೆಯಲ್ಲಿ ಮಗನಾದ ಇಸಾಕನು ಜನಿಸಿದಾಗ ಅವನ ನಂಬಿಕೆಗೆ ಬಹುಮಾನ ದೊರಕಿತು. ಇಸಾಕನ ಮೂಲಕ ಅಬ್ರಹಾಮನು ದೇವರಾದುಕೊಂಡ ಜನರಾದ ಇಸ್ರಾಯೇಲ್‌ ಮತ್ತು ಕಟ್ಟಕಡೆಗೆ ಮೆಸ್ಸೀಯನ ಮೂಲಪಿತನಾದನು. (ರೋಮಾಪುರ 4:19-21) ಅಷ್ಟಲ್ಲದೆ, ಅವನು “ನಂಬುವವರೆಲ್ಲರಿಗೂ . . . ಮೂಲತಂದೆಯಾದನು” ಮತ್ತು “ದೇವರ ಸ್ನೇಹಿತ”ನೆಂದೂ ಕರೆಯಲ್ಪಟ್ಟನು. (ರೋಮಾಪುರ 4:11; ಯಾಕೋಬ 2:23; ಗಲಾತ್ಯ 3:7, 29) ಎಂಥ ಉದ್ದೇಶಭರಿತ ಜೀವನವನ್ನು ಅವನು ನಡೆಸಿದನು ಮತ್ತು ಅವನಿಗೆ ದೊರೆತ ಆಶೀರ್ವಾದವೆಷ್ಟು ಅಪಾರ!

ನಂಬಿಗಸ್ತ ಪುರುಷನಾಗಿದ್ದ ಮೋಶೆಯನ್ನೂ ಗಮನಿಸಿರಿ. ಅವನಲ್ಲಿದ್ದ ಎದ್ದುಕಾಣುವ ಗುಣಗಳಲ್ಲಿ ಆತ್ಮಿಕ ವಿಷಯಗಳಿಗಾಗಿ ಗಣ್ಯತೆಯು ಒಂದಾಗಿತ್ತು. ಐಗುಪ್ತದ ಸಕಲ ಐಶ್ವರ್ಯ ಭೋಗಗಳನ್ನು ಅವನು ತಿರಸ್ಕರಿಸಿ, “ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು.” (ಇಬ್ರಿಯ 11:27) ಮಿದ್ಯಾನಿನಲ್ಲಿ 40 ವರ್ಷಗಳನ್ನು ಕಳೆದ ನಂತರ ಅವನು ಒಬ್ಬ ವೃದ್ಧ ಮನುಷ್ಯನಾಗಿ ಐಗುಪ್ತಕ್ಕೆ ಹಿಂದಿರುಗಿ, ಆಗಿನ ಮಹಾ ಲೋಕ ಶಕ್ತಿಯಾಗಿದ್ದ ಐಗುಪ್ತದ ಫರೋಹನ ಮುಂದೆ ನಿಂತು ತನ್ನ ಸಹೋದರರ ಬಿಡುಗಡೆಗಾಗಿ ಯಾಚಿಸಿದನು. (ವಿಮೋಚನಕಾಂಡ 7:1-7) ಅವನು ಹತ್ತು ಬಾಧೆಗಳನ್ನು, ಕೆಂಪು ಸಮುದ್ರವು ಇಬ್ಭಾಗವಾಗುವುದನ್ನು ಮತ್ತು ಫರೋಹನ ಸೈನ್ಯದ ನಾಶನವನ್ನು ಕಣ್ಣಾರೆ ಕಂಡ ಸಾಕ್ಷಿಯಾಗಿದ್ದನು. ಅವನ ಮೂಲಕವಾಗಿ ಯೆಹೋವನು ಇಸ್ರಾಯೇಲ್ಯರಿಗೆ ನಿಯಮಶಾಸ್ತ್ರವನ್ನು ಕೊಟ್ಟನು. ಮತ್ತು ಆ ಹೊಸ ಜನಾಂಗದೊಂದಿಗೆ ದೇವರು ಮಾಡಿಕೊಂಡ ಒಡಂಬಡಿಕೆಗೆ ಅವನು ಮಧ್ಯಸ್ಥನಾದನು. 40 ವರ್ಷಗಳ ವರೆಗೆ ಮೋಶೆಯು ಇಸ್ರಾಯೇಲ್ಯರನ್ನು ಅರಣ್ಯಮಾರ್ಗವಾಗಿ ನಡೆಸಿಕೊಂಡುಹೋದನು. ಅವನ ಜೀವಿತಕ್ಕೆ ನಿಜ ಉದ್ದೇಶವು ಇತ್ತು. ಮತ್ತು ಅವನು ತನ್ನ ಅಮೂಲ್ಯ ನೇಮಕಗಳ ಹೇರಳವಾದ ಅದ್ಭುತಕರ ಆಶೀರ್ವಾದಗಳಲ್ಲಿ ಆನಂದಿಸಿದನು.

ಸದ್ಯದ ದಿನದ ಆಶೀರ್ವಾದಗಳು

ದೇವರನ್ನು ಸೇವಿಸುವ ಜನರ ಜೀವಿತಗಳು ನಿಜವಾಗಿಯೂ ಉದ್ದೇಶಭರಿತ ಜೀವಿತಗಳೆಂದು ಮೇಲಿನ ವೃತ್ತಾಂತಗಳು ತೋರಿಸುತ್ತವೆ. ವಿಧೇಯತೆ, ನಂಬಿಕೆ ಮತ್ತು ಆತ್ಮಿಕ ವಿಷಯಗಳಿಗಾಗಿ ಗಣ್ಯತೆ ಎಂಬಂಥ ಗುಣಗಳನ್ನು ಯೆಹೋವನ ಜನರು ಬೆಳೆಸಿಕೊಳ್ಳುವಾಗ, ಅವರಿಗೆ ಹೇರಳವಾದ ಆಶೀರ್ವಾದಗಳು ದೊರಕುತ್ತವೆ.

ನಾವು ಹೇಗೆ ಆಶೀರ್ವದಿಸಲ್ಪಡುತ್ತೇವೆ? ಕ್ರೈಸ್ತಪ್ರಪಂಚದ ಕೋಟ್ಯಂತರ ಜನರು ಆತ್ಮಿಕ ಕ್ಷಾಮದಿಂದ ಬಳಲುತ್ತಿರುವಾಗ, ನಾವಾದರೋ “ಯೆಹೋವನು ಅನುಗ್ರಹಿಸುವ ಎಲ್ಲಾ ಮೇಲುಗಳನ್ನು” ಉಲ್ಲಾಸದಿಂದ ಅನುಭವಿಸುತ್ತಿದ್ದೇವೆ. (ಯೆರೆಮೀಯ 31:12) ಯೇಸು ಕ್ರಿಸ್ತನ ಮೂಲಕವಾಗಿ ಮತ್ತು ‘ನಂಬಿಗಸ್ತನೂ ವಿವೇಕಿಯೂ ಆದ ಆಳಿನ’ ಮೂಲಕವಾಗಿ ಯೆಹೋವನು ನಮಗೆ ಯಥೇಷ್ಟವಾದ ಆತ್ಮಿಕ ಆಹಾರವನ್ನು ದಯಪಾಲಿಸಿದ್ದಾನೆ. ಅದು ನಮ್ಮನ್ನು ‘ನಿತ್ಯಜೀವಕ್ಕೆ ಹೋಗುವ ದಾರಿಯಲ್ಲಿ’ ಇರಿಸಲು ಸಹಾಯಮಾಡುತ್ತದೆ. (ಮತ್ತಾಯ 7:13, 14; 24:45; ಯೋಹಾನ 17:3) ನಮ್ಮ ಕ್ರೈಸ್ತ ಸಹೋದರತ್ವದೊಂದಿಗಿನ ಸಹವಾಸವು ಇನ್ನೊಂದು ಮಹಾ ಆಶೀರ್ವಾದವಾಗಿದೆ. ಕೂಟಗಳಲ್ಲಿ ಮತ್ತು ಇತರ ಸಂದರ್ಭಗಳಲ್ಲಿ, ಪ್ರೀತಿಯನ್ನು ತೋರಿಸುವವರೂ “ನೂತನಸ್ವಭಾವವನ್ನು” ಧರಿಸಿಕೊಳ್ಳಲು ಯಥಾರ್ಥವಾಗಿ ಪ್ರಯತ್ನಿಸುವವರೂ ಆಗಿರುವ ಜೊತೆ ಆರಾಧಕರೊಂದಿಗೆ ಇರುವುದು ಮಹಾ ಸಂತೋಷದ ಮೂಲವಾಗಿರುತ್ತದೆ. (ಕೊಲೊಸ್ಸೆ 3:8-10; ಕೀರ್ತನೆ 133:1) ಆದರೂ, ನಮ್ಮ ಅತಿ ಮಹಾನ್‌ ಆಶೀರ್ವಾದವು, ಯೆಹೋವ ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಹೊಂದುವ ಮತ್ತು ಆತನ ಕುಮಾರನಾದ ಯೇಸು ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯುವ ಅಮೂಲ್ಯವಾದ ಸುಯೋಗವಾಗಿದೆ.​—ರೋಮಾಪುರ 5:1, 8; ಫಿಲಿಪ್ಪಿ 3:8.

ಅಂಥ ಆಶೀರ್ವಾದಗಳ ಕುರಿತು ಪುನರಾಲೋಚಿಸುವಾಗ, ದೇವರಿಗೆ ಸೇವೆಸಲ್ಲಿಸುವ ನಮ್ಮ ಸುಯೋಗವು ಅದೆಷ್ಟು ಅಮೂಲ್ಯವಾದುದೆಂದು ನಾವು ಗ್ರಹಿಸಬಲ್ಲೆವು. ಉತ್ತಮವಾದ ಮುತ್ತುಗಳಿಗಾಗಿ ಹುಡುಕುತ್ತಿದ್ದ ಒಬ್ಬ ವ್ಯಾಪಾರಸ್ಥನ ಕುರಿತಾದ ಯೇಸುವಿನ ಸಾಮ್ಯದ ಕುರಿತು ನಾವು ಯೋಚಿಸಬಹುದು. ಯೇಸು ಈ ಮನುಷ್ಯನ ಕುರಿತು ಹೇಳಿದ್ದು: “ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು ತನ್ನ ಬದುಕನ್ನೆಲ್ಲಾ ಮಾರಿ ಬಂದು ಅದನ್ನು ಕೊಂಡುಕೊಂಡನು.” (ಮತ್ತಾಯ 13:46) ದೇವರೊಂದಿಗಿನ ನಮ್ಮ ಸಂಬಂಧದ ಕುರಿತು, ಆತನನ್ನು ಸೇವಿಸುವ ನಮ್ಮ ಸುಯೋಗದ ಕುರಿತು, ನಮ್ಮ ಕ್ರೈಸ್ತ ಸಹವಾಸದ ಕುರಿತು, ನಮ್ಮ ಕ್ರಿಸ್ತೀಯ ನಿರೀಕ್ಷೆಯ ಕುರಿತು ಮತ್ತು ನಮ್ಮ ನಂಬಿಕೆಗೆ ಸಂಬಂಧಿಸಿದ ಬೇರೆಲ್ಲಾ ಆಶೀರ್ವಾದಗಳ ಕುರಿತು ನಮಗೂ ಹಾಗನಿಸುವುದಿಲ್ಲವೇ? ಖಂಡಿತವಾಗಿಯೂ ಹಾಗನಿಸುತ್ತದೆ. ನಮ್ಮ ಜೀವಿತಗಳಲ್ಲಿ ಅದಕ್ಕಿಂತಲೂ ಹೆಚ್ಚು ಅಮೂಲ್ಯವಾದದ್ದೇನೂ ಇಲ್ಲ.

ಯೆಹೋವನಿಗೆ ಹಿಂದಿರುಗಿ ಕೊಡಿರಿ

ಎಲ್ಲಾ ಒಳ್ಳೇ ದಾನಗಳ ದಾತನು ಯೆಹೋವನೇ ಎಂಬುದನ್ನು ನಾವು ಅಂಗೀಕರಿಸುವುದರಿಂದ, ಆ ಆಶೀರ್ವಾದಗಳಿಗಾಗಿ ಉಪಕಾರ ಹೇಳಲು ನಮ್ಮ ಹೃದಯಗಳು ಪ್ರೇರಿಸಲ್ಪಡುತ್ತವೆ. ನಾವು ಹೇಗೆ ಉಪಕಾರ ಹೇಳಬಲ್ಲೆವು? ಒಂದು ವಿಧಾನವು, ಇವೇ ಆಶೀರ್ವಾದಗಳನ್ನು ಇತರರೂ ಅನುಭವಿಸುವಂತೆ ಸಹಾಯಮಾಡುವುದೇ ಆಗಿದೆ. (ಮತ್ತಾಯ 28:19) ಇದನ್ನೇ ಮಾಡಲಿಕ್ಕಾಗಿ 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ತಮ್ಮ ನೆರೆಯವರನ್ನು ಭೇಟಿಮಾಡುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ. ಸಾಕ್ಷಿಗಳು ಹಾಗೆ ಮಾಡುವಾಗ, ಬೇರೆಯವರು “ಸತ್ಯದ ನಿಷ್ಕೃಷ್ಟ ಜ್ಞಾನ”ವನ್ನು ಪಡೆದುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ ಅವರು ತಮ್ಮ ಸೀಮಿತ ವೈಯಕ್ತಿಕ ಸಂಪತ್ತುಗಳಾದ ಸಮಯ, ಶಕ್ತಿ ಮತ್ತು ಭೌತಿಕ ಸೊತ್ತುಗಳನ್ನು ಬಳಸುತ್ತಾರೆ.​—1 ತಿಮೊಥೆಯ 2:​4, NW.

ಅಮೆರಿಕದ ಕ್ಯಾಲಿಫೋರ್ನಿಯದ ಗ್ಲೆಂಡೇಲ್‌ ಎಂಬ ಸ್ಥಳದಲ್ಲಿ ವಾಸಿಸುತ್ತಿರುವ ಪಯನೀಯರರನ್ನು ತೆಗೆದುಕೊಳ್ಳಿರಿ. ಒಂದು ಫೆಡರಲ್‌ ಸೆರೆಮನೆಯನ್ನು ಸಂದರ್ಶಿಸಲಿಕ್ಕಾಗಿ ಅವರು ಪ್ರತಿ ಶನಿವಾರ ಹೋಗಿಬರಲು 65 ಮೈಲುಗಳಷ್ಟು ಪ್ರಯಾಣಮಾಡುತ್ತಾರೆ. ಪ್ರತಿಯೊಂದು ಭೇಟಿಯಲ್ಲಿ ಸೆರೆವಾಸಿಗಳೊಂದಿಗೆ ಅವರು ಕೆಲವೇ ತಾಸುಗಳನ್ನು ಮಾತ್ರ ವ್ಯಯಿಸಶಕ್ತರಾದರೂ, ಅವರು ನಿರಾಶರಾಗುವುದಿಲ್ಲ. ಅವರಲ್ಲೊಬ್ಬರು ಹೇಳುವುದು: “ಈ ಅಸಾಮಾನ್ಯ ಟೆರಿಟೊರಿಯಲ್ಲಿ ಸೇವೆ ಮಾಡುವುದು ಬಹು ಪ್ರತಿಫಲದಾಯಕವಾಗಿದೆ. ನಾವಿದನ್ನು ಬಹಳ ಸಂತೋಷದಿಂದ ಮಾಡುತ್ತೇವೆ. ಎಷ್ಟು ಆಸಕ್ತ ಜನರು ಸಿಗುತ್ತಾರೆಂದರೆ, ಎಲ್ಲರೊಂದಿಗೆ ಸಂಪರ್ಕವಿಡುವುದು ಕಷ್ಟವೇ ಸರಿ. ಸದ್ಯಕ್ಕೆ ನಾವು ಐದು ಮಂದಿಯೊಂದಿಗೆ ಅಧ್ಯಯನಮಾಡುತ್ತಿದ್ದೇವೆ, ಮತ್ತು ಇನ್ನೂ ನಾಲ್ಕು ಮಂದಿ ಅಧ್ಯಯನಕ್ಕಾಗಿ ಕೇಳಿಕೊಂಡಿದ್ದಾರೆ.”

ಈ ಜೀವರಕ್ಷಕ ಕಾರ್ಯವನ್ನು ನಡೆಸಲಿಕ್ಕಾಗಿ ತಮ್ಮ ಸೇವೆಯನ್ನು ಉಚಿತವಾಗಿ ನೀಡಿಕೊಳ್ಳಲು ಹುರುಪಿನ ಕ್ರೈಸ್ತ ಶುಶ್ರೂಷಕರು ಸಂತೋಷಪಡುತ್ತಾರೆ. “ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ” ಎಂದು ಹೇಳಿದ ಯೇಸುವಿನ ಮಾದರಿಯನ್ನು ಅವರು ಅನುಸರಿಸುತ್ತಾರೆ. (ಮತ್ತಾಯ 10:8) ಭೂಸುತ್ತಲೂ ಲಕ್ಷಾಂತರ ಜನರು ಈ ರೀತಿಯ ನಿಸ್ವಾರ್ಥ ಸೇವೆಯಲ್ಲಿ ಭಾಗವಹಿಸುತ್ತಿದ್ದಾರೆ. ಮತ್ತು ಪರಿಣಾಮವಾಗಿ ಪ್ರಾಮಾಣಿಕ ವ್ಯಕ್ತಿಗಳ ಸಮೂಹಗಳು ಪ್ರತಿಕ್ರಿಯೆ ತೋರಿಸುತ್ತಾ ಶಿಷ್ಯರಾಗುತ್ತಿವೆ. ಕಳೆದ ಐದು ವರ್ಷಗಳಲ್ಲೇ ಸುಮಾರು 17 ಲಕ್ಷ ಜನರು ಯೆಹೋವನಿಗೆ ತಮ್ಮನ್ನು ಸಮರ್ಪಿಸಿಕೊಂಡರು. ಮುನ್ನಡೆಯುತ್ತಿರುವ ಈ ಅಭಿವೃದ್ಧಿಯ ಆವಶ್ಯಕತೆಗಳನ್ನು ನೋಡಿಕೊಳ್ಳಲು, ಬೈಬಲುಗಳೂ ಬೈಬಲಾಧಾರಿತ ಪ್ರಕಾಶನಗಳೂ ಬೇಕು ಹಾಗೂ ಹೊಸ ರಾಜ್ಯ ಸಭಾಗೃಹಗಳು ಮತ್ತು ಇತರ ಕೂಟದ ಸ್ಥಳಗಳು ಕಟ್ಟಲ್ಪಡಬೇಕು. ಇವುಗಳಿಗಾಗಿ ಹಣವೆಲ್ಲಿಂದ ಬರುತ್ತದೆ? ಸ್ವಯಂ ಪ್ರೇರಿತ ದಾನಗಳಿಂದಲೇ.

ಲೋಕದ ಕೆಲವು ಭಾಗಗಳಲ್ಲಿ ಆರ್ಥಿಕ ಪರಿಸ್ಥಿತಿಯು ಕೆಟ್ಟದ್ದಾಗಿರುವುದರಿಂದ, ಅನೇಕರಿಗೆ ತಮ್ಮ ಕುಟುಂಬದ ಜೀವನಾವಶ್ಯಕತೆಗಳನ್ನು ಪೂರೈಸಲು ಸಹ ಒದ್ದಾಡಬೇಕಾಗುತ್ತದೆ. ನ್ಯೂ ಸೈಯಂಟಿಸ್ಟ್‌ ಪತ್ರಿಕೆಗನುಸಾರವಾಗಿ, 100 ಕೋಟಿ ಜನರು ತಮ್ಮ ಮನೆವಾರ್ತೆಯ ಆದಾಯದಲ್ಲಿ ಕಡಿಮೆ ಪಕ್ಷ 70 ಪ್ರತಿಶತವನ್ನು ಆಹಾರಕ್ಕಾಗಿ ಉಪಯೋಗಿಸುತ್ತಾರೆ. ನಮ್ಮ ಹೆಚ್ಚಿನ ಸಹೋದರ ಸಹೋದರಿಯರು ಕೂಡ ಅಂಥ ಪರಿಸ್ಥಿತಿಯಲ್ಲಿದ್ದಾರೆ. ಜೊತೆ ವಿಶ್ವಾಸಿಗಳ ಸಹಾಯವಿಲ್ಲದೆ, ಕ್ರೈಸ್ತ ಪ್ರಕಾಶನಗಳನ್ನು ಅಥವಾ ಸೂಕ್ತವಾದ ರಾಜ್ಯ ಸಭಾಗೃಹಗಳಂಥ ವಿಷಯಗಳನ್ನು ಹೊಂದಲು ಅವರಿಗೆ ಶಕ್ಯವೇ ಇಲ್ಲ.

ಆದರೂ ತಮ್ಮ ಹೊರೆಯನ್ನು ಇತರರು ಹೊತ್ತುಕೊಳ್ಳುವಂತೆ ಬಿಡುವುದರಲ್ಲಿ ಅವರು ತೃಪ್ತರಾಗಿದ್ದಾರೆ ಎಂದಿದರ ಅರ್ಥವಲ್ಲ. ಆದರೆ ಅವರಿಗೆ ಸಹಾಯಬೇಕು. ಯೆಹೋವನು ಕೊಟ್ಟ ಆಶೀರ್ವಾದಗಳಿಗಾಗಿ ಉಪಕಾರದ ರೂಪದಲ್ಲಿ ಕಾಣಿಕೆಗಳನ್ನು ತರುವಂತೆ ಮೋಶೆ ಇಸ್ರಾಯೇಲ್ಯರನ್ನು ಪ್ರೋತ್ಸಾಹಿಸಿದಾಗ ಹೇಳಿದ್ದು: “ಪ್ರತಿಯೊಬ್ಬನು ತನಗೆ ಯೆಹೋವನು ಅನುಗ್ರಹಿಸಿದ ಆದಾಯದ ಮೇರೆಗೆ ತನ್ನ ಶಕ್ತ್ಯನುಸಾರ ಕೊಡಬೇಕು.” (ಧರ್ಮೋಪದೇಶಕಾಂಡ 16:17) ಆದುದರಿಂದಲೇ, ಒಬ್ಬ ಬಡ ವಿಧವೆಯು ಬಂದು “ಎರಡು ಕಾಸುಗಳನ್ನು ಹಾಕಲು,” ಯೇಸು ಅದನ್ನು ನೋಡಿ ತನ್ನ ಶಿಷ್ಯರ ಮುಂದೆ ಅವಳನ್ನು ಹೊಗಳಿದನು. ಅವಳು ತನ್ನಿಂದ ಸಾಧ್ಯವಾದದ್ದೆಲ್ಲವನ್ನೂ ಕೊಟ್ಟಿದ್ದಳು. (ಲೂಕ 21:2, 3) ತದ್ರೀತಿಯಲ್ಲಿ, ಬಡ ಪರಿಸ್ಥಿತಿಗಳಲ್ಲಿರುವ ಕ್ರೈಸ್ತರು ಸಹ ತಮ್ಮಿಂದಾಗುವಷ್ಟನ್ನು ಮಾಡುತ್ತಾರೆ. ಒಂದುವೇಳೆ ಕೊರತೆಯಿರುವಲ್ಲಿ, ಭೌತಿಕವಾಗಿ ಅಷ್ಟು ಬಡವರಲ್ಲದ ಜೊತೆ ಕ್ರೈಸ್ತರ ಕಾಣಿಕೆಗಳಿಂದ ಪರಿಹಾರ ನೀಡಲಾಗುತ್ತದೆ.​—2 ಕೊರಿಂಥ 8:13-15.

ಈ ರೀತಿಯಲ್ಲಿ ನಾವು ದೇವರಿಗೆ ಹಿಂದಿರುಗಿ ಕೊಡುವಾಗ, ನಮಗೆ ಯೋಗ್ಯ ಉದ್ದೇಶವಿರುವುದು ಪ್ರಾಮುಖ್ಯ. (2 ಕೊರಿಂಥ 8:12) ಪೌಲನು ಅಂದದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 9:7) ಉದಾರ ಹೃದಯದಿಂದ ಕೊಡುವ ಮೂಲಕ, ಈಗ ಸಂಭವಿಸುತ್ತಿರುವ ದೇವಪ್ರಭುತ್ವ ಅಭಿವೃದ್ಧಿಗೆ ನಾವು ಬೆಂಬಲಕೊಡುತ್ತೇವೆ ಮಾತ್ರವಲ್ಲ ನಮ್ಮ ಸ್ವಂತ ಸಂತೋಷವನ್ನೂ ಹೆಚ್ಚಿಸಿಕೊಳ್ಳುತ್ತೇವೆ.​—ಅ. ಕೃತ್ಯಗಳು 20:35.

ಸಾರುವ ಕಾರ್ಯದಲ್ಲಿ ಭಾಗವಹಿಸುವುದು ಮತ್ತು ಸ್ವಯಂ ಪ್ರೇರಿತ ಕಾಣಿಕೆಗಳನ್ನು ಕೊಡುವುದು, ಯೆಹೋವನು ಕೊಟ್ಟ ಆಶೀರ್ವಾದಗಳಿಗಾಗಿ ನಾವು ಆತನಿಗೆ ಹಿಂದಿರುಗಿ ಕೊಡಬಹುದಾದ ಎರಡು ವಿಧಗಳಾಗಿವೆ. ಮತ್ತು ಈಗ ಆತನನ್ನು ತಿಳಿಯದೆ ಇದ್ದಿರಬಹುದಾದ ಅನೇಕಾನೇಕ ಪ್ರಾಮಾಣಿಕ ಜನರನ್ನು ಆತನು ಆಶೀರ್ವದಿಸಲು ಬಯಸುತ್ತಾನೆಂಬುದನ್ನು ತಿಳಿದುಕೊಂಡಿರುವುದು ಅದೆಷ್ಟು ಪ್ರೋತ್ಸಾಹನೀಯ! (2 ಪೇತ್ರ 3:9) ಆದುದರಿಂದ, ನಾವು ಪ್ರಾಮಾಣಿಕ ಹೃದಯದ ಜನರನ್ನು ಕಂಡುಕೊಳ್ಳಲು ಮತ್ತು ಅವರಲ್ಲಿ ವಿಧೇಯತೆ, ನಂಬಿಕೆ ಮತ್ತು ಕೃತಜ್ಞತೆಯೆಂಬ ಗುಣಗಳನ್ನು ಬೆಳೆಸಲು ಸಹಾಯಮಾಡುವುದಕ್ಕೆ ನಮ್ಮಲ್ಲಿರುವ ಸಂಪತ್ತು ಸಾಧನಗಳನ್ನು ಉಪಯೋಗಿಸುತ್ತಾ ಮುಂದುವರಿಯೋಣ. ಆ ರೀತಿಯಲ್ಲಿ ಅವರು “ಯೆಹೋವನು ಸರ್ವೋತ್ತಮನೆಂದು ಅನುಭವ ಸವಿದು” ನೋಡುವಂತೆ ನೆರವಾಗುವ ಸಂತೋಷವು ನಮ್ಮದಾಗುವುದು.​—ಕೀರ್ತನೆ 34:8.

ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳನ್ನು ಕೊಡಲು ಕೆಲವರು ಆಯ್ಕೆಮಾಡುವ ವಿಧಗಳು

ಅನೇಕರು, “ಲೋಕವ್ಯಾಪಕ ಕೆಲಸಕ್ಕಾಗಿ ಕಾಣಿಕೆಗಳು​—ಮತ್ತಾಯ 24:14” ಎಂದು ಗುರುತುಮಾಡಲ್ಪಟ್ಟ ಕಾಣಿಕೆ ಪೆಟ್ಟಿಗೆಗಳಲ್ಲಿ ಹಾಕಲು ಬಯಸುವ ಹಣದ ಮೊತ್ತವನ್ನು ಬದಿಗಿರಿಸುತ್ತಾರೆ ಅಥವಾ ಬಜೆಟ್‌ ಮಾಡುತ್ತಾರೆ.

ಪ್ರತಿ ತಿಂಗಳು ಸಭೆಗಳು ಈ ಹಣವನ್ನು ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯಕ್ಕೆ ಇಲ್ಲವೇ ಸ್ಥಳಿಕ ಬ್ರಾಂಚ್‌ ಆಫೀಸಿಗೆ ಕಳುಹಿಸುತ್ತವೆ. ಸ್ವಯಂಪ್ರೇರಿತ ಹಣದ ದಾನಗಳನ್ನು ನೇರವಾಗಿ, The Watch Tower Bible and Tract Society of India, G-37, South Avenue, Santacruz, Mumbai 400 054, ಇಲ್ಲವೇ ನಿಮ್ಮ ದೇಶದ ಬ್ರಾಂಚ್‌ ಆಫೀಸಿಗೆ ಕಳುಹಿಸಬಹುದು. ಆಭರಣಗಳು ಅಥವಾ ಇತರ ಬೆಲೆಬಾಳುವ ವಸ್ತುಗಳನ್ನೂ ದಾನವಾಗಿ ಕೊಡಬಹುದು. ಈ ಕಾಣಿಕೆಗಳೊಂದಿಗೆ, ಇದು ನೇರವಾಗಿ ಕೊಟ್ಟಿರುವ ಕೊಡುಗೆ ಎಂದು ಹೇಳುವ ಸಂಕ್ಷಿಪ್ತ ಪತ್ರವು ಜೊತೆಗೂಡಿರಬೇಕು.

ಯೋಜಿತ ಕೊಡುಗೆ

ನೇರವಾದ ಹಣದ ಕೊಡುಗೆಗಳು ಮತ್ತು ಷರತ್ತುಗಳೊಂದಿಗಿನ ಹಣದ ದಾನಗಳಿಗೆ ಕೂಡಿಸಿ, ಲೋಕವ್ಯಾಪಕವಾದ ರಾಜ್ಯ ಸೇವೆಯ ಪ್ರಯೋಜನಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸಹಾಯಮಾಡಬಹುದಾದ ವಿಧಾನಗಳಿವೆ. ಇವು ಕೆಳಗಿನವುಗಳನ್ನು ಒಳಗೂಡುತ್ತವೆ:

ವಿಮೆ: ವಾಚ್‌ ಟವರ್‌ ಸೊಸೈಟಿಯನ್ನು ಒಂದು ಜೀವ ವಿಮಾ ಪಾಲಿಸಿ ಇಲ್ಲವೇ ರಿಟೈರ್‌ಮೆಂಟ್‌/ನಿವೃತ್ತಿ ವೇತನ ಯೋಜನೆಯ ಫಲಾನುಭವಿಯಾಗಿ ಹೆಸರಿಸಬಹುದು.

ಬ್ಯಾಂಕ್‌ ಖಾತೆಗಳು: ಬ್ಯಾಂಕ್‌ ಖಾತೆಗಳು, ಠೇವಣಾತಿ ಸರ್ಟಿಫಿಕೇಟುಗಳು ಅಥವಾ ವೈಯಕ್ತಿಕ ನಿವೃತ್ತಿ ಖಾತೆಗಳನ್ನು, ಸ್ಥಳಿಕ ಬ್ಯಾಂಕ್‌ ಆವಶ್ಯಕತೆಗಳಿಗೆ ಹೊಂದಿಕೆಯಲ್ಲಿ, ವಾಚ್‌ ಟವರ್‌ ಸೊಸೈಟಿಗೆ ಟ್ರಸ್ಟಿನಲ್ಲಿ ಇಟ್ಟುಕೊಳ್ಳುವಂತೆ ಅಥವಾ ದಾನಿಯು ಮರಣಹೊಂದುವಲ್ಲಿ ಸೊಸೈಟಿಗೆ ಸಲ್ಲುವಂತೆ ಏರ್ಪಡಿಸಬಹುದು.

ಸ್ಟಾಕ್‌ಗಳು ಮತ್ತು ಬಾಂಡ್‌ಗಳು: ಸ್ಟಾಕ್‌ಗಳು ಹಾಗೂ ಬಾಂಡ್‌ಗಳನ್ನು ನೇರವಾದ ಕೊಡುಗೆಯಾಗಿ ವಾಚ್‌ ಟವರ್‌ ಸೊಸೈಟಿಗೆ ದಾನಮಾಡಬಹುದು.

ಸ್ಥಿರಾಸ್ತಿ: ವಿಕ್ರಯಯೋಗ್ಯ ಸ್ಥಿರಾಸ್ತಿಯನ್ನು ನೇರವಾದ ಒಂದು ಕೊಡುಗೆಯಾಗಿ, ಇಲ್ಲವೇ ದಾನಿಯು ಅವನ ಅಥವಾ ಅವಳ ಜೀವಮಾನಕಾಲದಲ್ಲಿ ಅದರಲ್ಲಿ ಜೀವಿಸುತ್ತಾ ಇರಬಲ್ಲ ಏರ್ಪಾಡಿನೊಂದಿಗೆ ಜೀವಾವಧಿ ಅನುಭೋಗಕ್ಕೆ ಕಾದಿರಿಸಿದ ಆಸ್ತಿಯಾಗಿ ವಾಚ್‌ ಟವರ್‌ ಸೊಸೈಟಿಗೆ ದಾನಮಾಡಬಹುದು. ಯಾವುದೇ ಸ್ಥಿರಾಸ್ತಿಯನ್ನು ಸೊಸೈಟಿಗೆ ಕರಾರುಪತ್ರಮಾಡುವ ಮೊದಲು ನಿಮ್ಮ ದೇಶದಲ್ಲಿರುವ ಬ್ರಾಂಚ್‌ ಆಫೀಸನ್ನು ಸಂಪರ್ಕಿಸಿರಿ.

ಉಯಿಲುಗಳು ಮತ್ತು ಟ್ರಸ್ಟ್‌ಗಳು: ಆಸ್ತಿ ಅಥವಾ ಹಣವನ್ನು ಕಾನೂನುಬದ್ಧವಾಗಿ ನಿರ್ವಹಿಸಿದ ಇಚ್ಛಾಪತ್ರದ ಮೂಲಕ, ವಾಚ್‌ ಟವರ್‌ ಸೊಸೈಟಿಗೆ ಬಿಟ್ಟುಹೋಗಬಹುದು. ಅಥವಾ ವಾಚ್‌ ಟವರ್‌ ಸೊಸೈಟಿಯನ್ನು ಒಂದು ಟ್ರಸ್ಟ್‌ ಒಪ್ಪಿಗೆ ಪತ್ರದ ಫಲಾನುಭವಿಯಾಗಿ ಹೆಸರಿಸಬಹುದು.

ಸೊಸೈಟಿಯನ್ನು ಫಲಾನುಭವಿಯಾಗಿ ಹೆಸರಿಸಿ ಉಯಿಲನ್ನು ಬರೆಯುವಾಗ, ಇಂಡಿಯನ್‌ ಸಕ್ಸೆಷನ್‌ ಆ್ಯಕ್ಟ್‌, 1925ರ ಸೆಕ್ಷನ್‌ 118ರಲ್ಲಿ ಕಂಡುಬರುವ ಈ ವಿಷಯವನ್ನು ದಯವಿಟ್ಟು ಗಮನಿಸಿರಿ. ಅದು ಹೇಳುವುದು: “ಸೋದರಳಿಯ ಅಥವಾ ಸೋದರ ಸೊಸೆ ಅಥವಾ ಹತ್ತಿರದ ಸಂಬಂಧಿಗಳಿರುವ ಯಾವ ವ್ಯಕ್ತಿಗೂ ತನ್ನ ಮರಣಕ್ಕೆ ಹನ್ನೆರಡು ತಿಂಗಳುಗಳಿಗಿಂತ ಕಡಿಮೆಯಾಗಿರದ ಕಾಲದಲ್ಲಿ ಮೃತ್ಯುಪತ್ರವನ್ನು ಸಪ್ರಮಾಣಿಸಿ, ಅಂದಿನಿಂದ ಅದರ ಕಾರ್ಯನಿರ್ವಹಣೆ ನಡೆಯುವುದಕ್ಕೆ ಆರು ತಿಂಗಳುಗಳೊಳಗೆ ಜೀವಂತ ವ್ಯಕ್ತಿಗಳ ಮೃತ್ಯುಪತ್ರಗಳನ್ನು ಕಾನೂನು ಒದಗಿಸುವ ಸ್ಥಳದಲ್ಲಿ ಭದ್ರವಾಗಿರಿಸಿದ ಹೊರತು, ಯಾವುದೇ ಆಸ್ತಿಯನ್ನು ಧಾರ್ಮಿಕ ಅಥವಾ ಧರ್ಮಕಾರ್ಯಗಳಿಗೆ ಬಿಟ್ಟುಹೋಗುವ ಅಧಿಕಾರವಿಲ್ಲ.”

ನಿಮ್ಮ ಉಯಿಲಿನಲ್ಲಿ ನೀವು ವಾಚ್‌ ಟವರ್‌ ಸೊಸೈಟಿಯನ್ನು ಫಲಾನುಭವಿಯಾಗಿ ಹೆಸರಿಸಲು ಬಯಸುವಲ್ಲಿ, ಅದರಲ್ಲಿ ಬರೆಯಲಿಕ್ಕಾಗಿ, ಸೊಸೈಟಿಯ ಪೂರ್ಣ ಹೆಸರು ಮತ್ತು ವಿಳಾಸವನ್ನು ದಯವಿಟ್ಟು ಗಮನಿಸಿರಿ:

The Watch Tower Bible and Tract Society of India

G-37, South Avenue,

Santa Cruz,

Mumbai - 400 054.